news18-kannada Updated:December 11, 2020, 9:13 PM IST
ಸಂಜನಾ ಗಲ್ರಾನಿ.
ಬೆಂಗಳೂರು (ಡಿ. 11): ನಟಿ ಸಂಜನಾ ಗಲ್ರಾನಿ ಜೈಲು ವಾಸದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಜೈಲುವಾಸಕ್ಕೆ ಗುರಿಯಾಗಿದ್ದ ಅವರು, ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದ್ದಾರೆ. ಅವರ ಆರೋಗ್ಯ ಹದಗೆಡುತ್ತಿರುವ ಹಿನ್ನಲೆ ನ್ಯಾಯಾಲಯ ಇಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಹೈ ಕೋರ್ಟ್ ಆದೇಶದ ಮೇಲೆ ಜೈಲಿನಿಂದ ಇಂದೇ ಅವರು ಬಿಡುಗಡೆಯಾಗಿದ್ದಾರೆ. ಮಧ್ಯಾಹ್ನ ಆದೇಶ ನೀಡುತ್ತಿದ್ದಂತೆ ಕೆಲವು ಪ್ರಕ್ರಿಯೆಗಳನ್ನು ಮುಗಿಸಿ ಜೈಲಾಧಿಕಾರಿಗಳು ನಟಿ ಸಂಜನಾ ಅವರನ್ನು ಸಂಜೆ ಬಿಡುಗಡೆ ಮಾಡಿದೆ. ಆದರೆ, ಸಂಜನಾ ಮಾತ್ರ ಜೈಲು ಬಿಟ್ಟು ಹೊರಗೆ ಕಾಲಿಡುತ್ತಿಲ್ಲ. ಕಾರಣ ಕ್ಯಾಮೆರಾ ಕಣ್ಣುಗಳು.
ತಿಂಗಳುಗಳ ಕಾಲ ಜೈಲಿನಲ್ಲಿರುವ ನಟಿಗಾಗಿ ಮಾಧ್ಯಮ ಸೇರಿದಂತೆ ಅನೇಕರು ಅವರಿಗಾಗಿ ಕಾದು ಕುಳಿತಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸಂಜಾ ಜೈಲಿನಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ತಡವಾಗಿ ಜೈಲಿನಿಂದ ಹೊರ ಹೋಗುವುದಾಗಿ
ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ತಡವಾಗಿ ಜೈಲಿನಿಂದ ಹೊರ ಹೋದರೆ ಮಾಧ್ಯಮದವರು ಹೊರಟು ಹೋಗುತ್ತಾರೆ. ಆಗ ಜೈಲಿನಿಂದ ಹೊರಹೋಗಬಹುದು ಎನ್ನುವ ಚಿಂತನೆ ನಡೆಸಿದ್ದಾರೆ ಎಂದು ಜೈಲು ಮೂಲಗಳು ಮಾಹಿತಿ ನೀಡಿದೆ.
ಇದನ್ನು ಓದಿ: ಚೈತನ್ಯ ಜೊತೆಯಲ್ಲಿನ ರೋಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡ ನಿಹಾರಿಕಾ
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿ ಸಂಜನಾ ಗಲ್ರಾನಿ ಅವರಿಗೆ . ಮೂರು ಲಕ್ಷದ ವೈಯಕ್ತಿಕ ಬಾಂಡ್ ಜೊತೆಗೆ ತಿಂಗಳಲ್ಲಿ ಎರಡು ಬಾರಿ ತನಿಖಾಧಿಕಾರಿ ಎದುರು ಸಂಜನಾ ಹಾಜರಾಗಿ ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಲಾಗಿದೆ. 84 ದಿನಗಳ ಕಾಲ ಜೈಲಿನಲ್ಲಿ ಕಳೆದ ನಂತರ ಸಂಜನಾ ಅವರಿಗೆ ಈಗ ಜಾಮೀನು ಸಿಕ್ಕಿದೆ.
ಜೈಲಿನಲ್ಲಿರುವ ಸಂಜನಾ ಅವರಿಗೆ ಆರೋಗ್ಯ ಸರಿಯಲ್ಲದ ಕಾರಣದಿಂದಾಗಿ ಜಾಮೀನು ನೀಡಬೇಕೆಂದು ಕೆಲವೇ ದಿನಗಳ ಹಿಂದೆಯಷ್ಟೆ ನಟಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ, ಸಂಜನಾ ಅವರ ಆರೋಗ್ಯ ತಪಾಸಣೆಗೆ ಅನುಮತಿ ನೀಡಿ, ಅದರ ವರದಿಯನ್ನು ಡಿ.10ರ ಒಳಗೆ ಸಲ್ಲಿಸುವಂತೆ ಸೂಚನೆ ನೀಡಿತ್ತು. ಅದರಂತೆ ಸಂಜನಾ ಅವರನ್ನು ನಗರದ ವಾನಿ ವಿಲಾಸ್ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆ ಮಾಡಿಸಲಾಗಿತ್ತು.
Published by:
Seema R
First published:
December 11, 2020, 9:12 PM IST