HOME » NEWS » Entertainment » SANDALWOOD DRUG SCANDAL SANJJANA GALRANI AND RAGINI DWIVEDIS BAIL APPLICATION HEARING IS POSTPONED TO SEPTEMBER 21 AE

ಇನ್ನೂ ಜೈಲಿನಲ್ಲೇ ಇರಬೇಕು ರಾಗಿಣಿ-ಸಂಜನಾ: ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ

Sandalwood Drug Scandal: ಇಂದು 33ನೇ ಸೆಷನ್ಸ್ ನ್ಯಾಯಾಲಯದಲ್ಲಿ ರಾಗಿಣಿ, ಸಂಜನಾ, ರಾಹುಲ್​ ಸೇರಿದಂತೆ ಇತರೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಇತ್ತು. ಅರ್ಜಿಯ ವಿಚಾರಣೆ ಕೈಗೆತ್ತಿಗೊಂಡ ನ್ಯಾಯಾಲಯ ಅದನ್ನು ಮತ್ತೆ ಮುಂದೂಡಿದೆ.

Anitha E | news18-kannada
Updated:September 19, 2020, 12:18 PM IST
ಇನ್ನೂ ಜೈಲಿನಲ್ಲೇ ಇರಬೇಕು ರಾಗಿಣಿ-ಸಂಜನಾ: ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ
ರಾಗಿಣಿ ಹಾಗೂ ಸಂಜನಾ
  • Share this:
ಮಾದಕ ವಸ್ತು ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಯಾವಾಗ ಜಾಮೀನು ಸಿಗುತ್ತದೆ ಎಂದು ಕಾಯುತ್ತಿದ್ದಾರೆ. ಅಲ್ಲದೆ ದಿನಕ್ಕೊಂದು ಬೇಡಿಕೆ ಇಡುತ್ತಾ ಈ ನಟಿಯರು ಜೈಲಾಧಿಕಾರಿಗಳಿಗೆ ದೊಡ್ಡ ತಲೆನೋವಾಗಿದ್ದಾರಂತೆ. ಇನ್ನು ಜೈಲಿನಲ್ಲಿ ಕೊಡುತ್ತಿರುವ ಊಟವನ್ನು ಮಾಡದೆ, ಮಾಂಸಾಹಾರ ಕೊಡುವಂತೆ ಹಠ ಹಿಡಿದಿದ್ದಾರಂತೆ. ಇನ್ನು ನಿನ್ನೆಯಷ್ಟೆ ಸಂಜನಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಇವತ್ತಿಗೆ ಮುಂದೂಡಿತ್ತು. ಜೊತೆಗೆ ಸಂಜನಾ ಅವರ ನ್ಯಾಯಾಂಗ ಬಂಧವನ್ನು ಸೆ.30ರ ವರೆಗೆ ವಿಸ್ತರಿಸಿದೆ. ಆದರೆ ಇಂದು ಸಂಜನಾ ಹಾಗೂ ರಾಗಿಣಿ ಅವರ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಅರ್ಜಿಯ ವಿಚಾರಣೆಯನ್ನು ಮತ್ತೆ ಮುಂದೂಡಿದೆ. ಇದರಿಂದಾಗಿ ಜಾಮೀನು ಸಿಗುವ ಆಸೆಯಲ್ಲಿದ್ದ ರಾಗಿಣಿ ಹಾಗೂ ಸಂಜನಾ ಈಗ ಇನ್ನೂ ಕೆಲದಿನಗಳು ಜೈಲಿನಲ್ಲೇ ಇರಬೇಕಾಗಿದೆ.  

ಇಂದು 33ನೇ ಸೆಷನ್ಸ್ ನ್ಯಾಯಾಲಯದಲ್ಲಿ ರಾಗಿಣಿ, ಸಂಜನಾ, ರಾಹುಲ್​ ಸೇರಿದಂತೆ ಇತರೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಇತ್ತು. ಅರ್ಜಿಯ ವಿಚಾರಣೆ ಕೈಗೆತ್ತಿಗೊಂಡ ನ್ಯಾಯಾಲಯ ಅದನ್ನು ಸೋಮವಾರ ಅಂದರೆ ಸೆ. 21ಕ್ಕೆ ಮುಂದೂಡಿದೆ.

Ragini Dwivedi
ರಾಗಿಣಿ ದ್ವಿವೇದಿ


ಕೇಂದ್ರ ಕಾರಾಗೃಹದಲ್ಲಿ ಸೊಳ್ಳೆ ಕಾಟದಿಂದ ನಿದ್ದೆ ಮಾಡಲಾಗುತ್ತಿಲ್ಲ ಎಂದು ರಾಗಿಣಿ ಹಾಗೂ ಸಂಜನಾ ದೂರುತ್ತಿದ್ದಾರಂತೆ. ಬೇಕಂತಲೇ ತಮ್ಮನ್ನ ಟಾರ್ಗೆಟ್​ ಮಾಡಿ ಜೈಲಿಗಟ್ಟಲಾಗಿದೆ ಎಂದು ಜೈಲು ಸಿಬ್ಬಂದಿಗಳ ಬಳಿ ಕಣ್ಣೀರಿಡುತ್ತಿದ್ದಾರಂತೆ ಈ ನಟಿಯರು. ಇಂದು ಈ ಇಬ್ಬರು ನಟಿಯರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಇಂದು ಜಾಮೀನು ಸಿಕ್ಕರೆ ಸಂಜನಾ ಹಾಗೂ ರಾಗಿಣಿ ನೆಮ್ಮದಿಯಾಗಿ ಮನೆ ಸೇರುತ್ತಾರೆ. ಇಲ್ಲವಾದರೆ ಮತ್ತೆ ಜೈಲಿನಲ್ಲೇ ಇರಬೇಕು.

ಇದನ್ನೂ ಓದಿ: ತೆಲುಗು ಸಿನಿಮಾದಲ್ಲಿ ಉಪೇಂದ್ರ: ಮೆಗಾ ಕುಟುಂಬದ ಕುಡಿಯ ಜೊತೆ ನಟಿಸಲಿರುವ ರಿಯಲ್​ ಸ್ಟಾರ್​..!

ಸಂಜನಾ ಜೊತೆಗೆ ರಾಗಿಣಿ ಸಹ ಮಾಂಸಾಹಾರಕ್ಕಾಗಿ ಬೇಡಿಕೆ ಇಟ್ಟಿದ್ದರು. ನಿನ್ನೆ ಜೈಲಿನಲ್ಲಿ ಮಾಂಸಾಹಾರದ ಊಟ. ಪ್ರತಿ ಶುಕ್ರವಾರ ಅಲ್ಲಿನ ಮೆನ್ಯು ಪ್ರಕಾರ ಚಿಕನ್​ ಸಾಂಬಾರು, ಮುದ್ದೆ ಹಾಗೂ ಅನ್ನ ನೀಡಲಾಗುತ್ತದೆಯಂತೆ. ಇದರಿಂದಾಗಿ ರಾಗಿಣಿ ಹಾಗೂ ಸಂಜನಾಗೆ ಕೊಂಚ ನೆಮ್ಮದಿಯಾಗಿದೆ. ನಿನ್ನೆ ಈ ಇಬ್ಬರು ನಟಿಯರು ಚಿಕನ್ ಸಾಂಬಾರ್ ಹಾಗೂ ಅನ್ನವನ್ನು ಸೇವಿಸಿದ್ದಾರೆ. ಈ ಹಿಂದೆ ಒಂದೇ ಕೋಣೆಯಲ್ಲಿರಲು ಒಪ್ಪದ ಸಂಜನಾ ಹಾಗೂ ರಾಗಿಣಿ ಈಗ ಬೇಲ್​ ಅರ್ಜಿಯ ಬಗ್ಗೆ ಚರ್ಚಿಸುವಷ್ಟು ಕ್ಲೋಸ್​ ಆಗಿದ್ದಾರಂತೆ. ಇನ್ನು ಆರೋಪಿಗಳಾದ ಸಂಜನಾ ಹಾಗೂ ರಾಗಿಣಿ ಅವರ ಕುಟುಂಬದವರು ಆಗಾಗ ಜೈಲಿಗೆ ಭೇಟಿ ನೀಡುತ್ತಿರುತ್ತಾರೆ.

ccb police, Diganth Manchale, Drugs Case, Drugs Mafia in Sandalwood, Aindrita Ray, Sheik Fazil, Aindritra Rey, Sandalwood,
ದಿಗಂತ್​ ಹಾಗೂ ಐಂದ್ರಿತಾ ರೇ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾರಾ ದಂಪತಿಗಳಾದ ದಿಂಗತ್​-ಐಂದ್ರಿತಾ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇದರ ಬೆನ್ನಲ್ಲೇ ಇಂದು ಮತ್ತೆ ಮೂವರಿಗೆ ಸಿಸಿಬಿ ನೋಟಿಸ್​ ನೀಡಿದೆ. ಖ್ಯಾತ ಟಿವಿ ನಿರೂಪಕ ಅಕುಲ್​ ಬಾಲಾಜಿ, ನಟ ಸಂತೋಷ್​ ​, ಮಾಜಿ ಕಾಂಗ್ರೆಸ್​ ಶಾಸಕ ಆರ್​ ವಿ ದೇವರಾಜ್​ ಮಗ ಯುವರಾಜ್​ಗೆ ಸಿಸಿಬಿ ನೋಟಿಸ್​ ಜಾರಿ ಮಾಡಿದೆ. ಈ ಮೂವರನ್ನು ನಾಳೆ ಬೆಳಗ್ಗೆ ವಿಚಾರಣೆಗೆ ಹಾಜರಾಗಲು ತಿಳಿಸಿದೆ. ಇವರ ವಿಚಾರಣೆ ನಡೆಸುವ ಮೂಲಕ ಮತ್ತಷ್ಟು ಮಾಹಿತಿ ಪಡೆಯಲಿದ್ದಾರೆ. ಇದರಿಂದಾಗಿ ಮತ್ತಷ್ಟು ನಟ-ನಟಿಯರು, ರಾಜಕಾರಣಿಗಳ ಹೆಸರುಗಳು ಹೊರಬರುವ ಸಾಧ್ಯತೆ ಎನ್ನಲಾಗಿದೆ.

Sandalwood Drug Mafia: CCB Police issue the notice to anchor akul balaji and two others
ಅಕುಲ್​ ಬಾಲಾಜಿ-ಸಂತೋಷ್​


ಇನ್ನು ಇಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕುಲ್​ ಬಾಲಾಜಿ, ನಟ ಸಂತೋಷ್​ ಸಹ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಅಲ್ಲದೆ ವಿಚಾರಣೆಗೆ ಸಂಪುರ್ಣವಾಗಿ ಸಹಕರಿಸುವುದಾಗಿಯೂ ತಿಳಿಸಿದ್ದಾರೆ. ಅಕುಲ್​ ಬಾಲಾಜಿ ಅವರ ರೆಸಾರ್ಟ್​ ಹಾಗೂ ಸಂತೋಷ್ ಅವರ ವಿಲ್ಲಾದಲ್ಲಿ ಪಾರ್ಟಿಗಳು ನಡೆದಿದ್ದು, ಅಲ್ಲಿ ಡ್ರಗ್ಸ್ ಮಾರಾಟ ನಡೆದಿತ್ತಾ ಎನ್ನುವುದರ ಕುರಿತಾಗಿ ವಿಚಾರಣೆ ನಡೆಸಲಾಗುತ್ತಿದೆ.
Published by: Anitha E
First published: September 19, 2020, 12:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories