news18-kannada Updated:September 4, 2020, 2:30 PM IST
ಸಿಸಿಬಿ
ಸ್ಯಾಂಡಲ್ವುಡ್ನಲ್ಲಿ ಸದ್ಯ ಡ್ರಗ್ ವಿಚಾರ ಭಾರಿ ಚರ್ಚೆ ಆಗುತ್ತಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಎರಡು ಬಾರಿ ಸಿಸಿಬಿ ಪೊಲೀಸರ ಬಳಿ ತೆರಳಿ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಅವರು 15 ಸ್ಯಾಂಡಲ್ವುಡ್ ಹೀರೋ-ಹೀರೋಯಿನ್ಗಳ ಹೆಸರನ್ನು ನೀಡಿದ್ದಾರೆ ಎನ್ನಲಾಗಿದೆ. ಅಚ್ಚರಿ ಎಂದರೆ, ಇಂದ್ರಜಿತ್ ಲಂಕೇಶ್ ಹೇಳಿಕೆಗೂ ಮುನ್ನವೇ ಸಿಸಿಬಿ ಬಳಿ ಇತ್ತು 15 ಜನ ಸೆಲಬ್ರೆಟಿಗಳ ಲಿಸ್ಟ್ ಇತ್ತು ಎನ್ನಲಾಗಿದೆ. ಸ್ಯಾಂಡಲವುಡ್ ಡ್ರಗ್ಸ್ ದಂಧೆ ಎರಡು ವರ್ಷಗಳ ಹಿಂದೆಯೇ ಬಯಲಾಗಿತ್ತು ಎನ್ನಲಾಗಿದೆ. ವಿಶೇಷ ಎಂದರೆ, ಈಗ ಸಿಸಿಬಿ ತನಿಖೆ ಆರಂಭಿಸಿರುವುದು ಅದೇ ಎಫ್ಐಆರ್ ಅಧಾರದ ಮೇಲೆ . ಹೀಗಾಗಿ, ಇಂದ್ರಜಿತ್ ಲಂಕೇಶ್ ಹೇಳಿಕೆಗೂ ಮುನ್ನವೇ ಅಂದು ನಡೆಸಿದ ತನಿಖೆ ಆಧಾರದಮೇಲೆ ಸಿಸಿಬಿ ಬಳಿ 15 ಜನ ಸ್ಯಾಂಡಲ್ವುಡ್ ನಟ-ನಟಿಯರ ಹೆಸರನ್ನು ಕಲೆ ಹಾಕಿದ್ದರು.
ರಾಗಿಣಿ ಹಾಗೂ ರವಿಶಂಕರ್ ಹೆಸರು ಈಗ ಹೊರ ಬಂದಿರುವುದಲ್ಲ. 2018ರಲ್ಲಿ ಇಬ್ಬರು ನೈಜಿರಿಯನ್ ಪ್ರಜೆಗಳು ಹಾಗೂ ಪ್ರತೀಕ್ ಶೆಟ್ಟಿ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಒಂದು ಕೋಟಿ ಎಪ್ಪತ್ತು ಲಕ್ಷ ಮೌಲ್ಯದ ಡ್ರಗ್ಸ್ ಅನ್ನು ಆಗ ಸಿಸಿಬಿ ವಶಪಡಿಸಿಕೊಂಡಿತ್ತು. ನವೆಂಬರ್ 2ರಂದು ಎಫ್ಐಆರ್ ಕೂಡ ದಾಖಲಾಗಿತ್ತು. ತನಿಖೆ ವೇಳೆ ಸಾಫ್ಟ್ವೇರ್ ಇಂಜಿನಿಯರ್ ಪ್ರತೀಕ್ ಶೆಟ್ಟಿ, ರಾಗಿಣಿ ಹಾಗೂ ರವಿಶಂಕರ್ ಸೇರಿ ಸ್ಯಾಂಡಲವುಡ್ನ 15 ಜನರ ಹೆಸರನ್ನ ಬಾಯ್ಬಿಟ್ಟಿದ್ದ.
ಆಗ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್, ಎಸಿಪಿ ಮೋಹನ್ ಕುಮಾರ್ ತನಿಖೆ ಮಾಡಿದ್ದರು. ಆದರೆ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಸಿಸಿಬಿ ಯಾರಿಗೂ ನೋಟೀಸ್ ನೀಡಿರಲಿಲ್ಲ.
ಈಗ ಅದೇ ಎಫ್ ಐ ಆರ್ ಅಧಾರದಲ್ಲಿ ಸಿಸಿಬಿ ತನಿಖೆಗೆ ಮುಂದಾಗಿದೆ. ಹೀಗಾಗಿ, ರವಿಶಂಕರ್ ಬಂಧನ, ರಾಗಿಣಿ ಮನೆ ಮೇಲಿನ ದಾಳಿ ಎಲ್ಲವೂ 2018 ರ ಮುಂದುವರೆದ ಭಾಗ ಎನ್ನಲಾಗುತ್ತಿದೆ.
Published by:
Rajesh Duggumane
First published:
September 4, 2020, 1:22 PM IST