HOME » NEWS » Entertainment » SANDALWOOD DRUG SCANDAL CCB POLICE LIKELY TO SEND NOTICE TO INDRAJITH LANKESH ON SANDALWOOD ALLEGED DRUG CASE SNVS

Sandalwood Drug Scandal: ಸ್ಯಾಂಡಲ್​ವುಡ್ ಡ್ರಗ್ಸ್ ಕಳಂಕ; ಸಿಸಿಬಿ ತನಿಖೆ ಚುರುಕು; ಇಂದ್ರಜಿತ್​ಗೆ ಮತ್ತೆ ನೋಟೀಸ್ ಸಾಧ್ಯತೆ

Indrajit Lankesh: ಮೊನ್ನೆ ವಿಚಾರಣೆಗೆ ಹಾಜರಾಗಿ 15 ಮಂದಿಯ ಹೆಸರು ದಾಖಲಿಸಿದ್ದ ನಿರ್ದೇಶಕ ಇಂದ್ರಜಿತ್, ಚಂದನವನದ ಡ್ರಗ್ಸ್ ಜಾಲದ ಬಗ್ಗೆ ಕೆಲ ದಾಖಲೆ ನೀಡಿ ಹೆಸರು ಹೇಳಿದ್ದರು. ಇಂದ್ರಜಿತ್ ಲಂಕೇಶ್ ನೀಡಿರುವ ಕೆಲ ದಾಖಲೆಗಳನ್ನು ಇಟ್ಟುಕೊಂಡು ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

news18-kannada
Updated:September 2, 2020, 8:12 AM IST
Sandalwood Drug Scandal: ಸ್ಯಾಂಡಲ್​ವುಡ್ ಡ್ರಗ್ಸ್ ಕಳಂಕ; ಸಿಸಿಬಿ ತನಿಖೆ ಚುರುಕು; ಇಂದ್ರಜಿತ್​ಗೆ ಮತ್ತೆ ನೋಟೀಸ್ ಸಾಧ್ಯತೆ
ಇಂದ್ರಜಿತ್​ ಲಂಕೇಶ್​.
  • Share this:
Sandalwood Drug Scandal: ಬೆಂಗಳೂರು(ಸೆ. 02): ಸ್ಯಾಂಡಲ್ ವುಡ್ ನಲ್ಲಿ ಕೆಲ ನಟ ನಟಿಯರು ಡ್ರಗ್ಸ್ ಸೇವನೆ ಆರೋಪದ ಹಿನ್ನಲೆ ಸಿಸಿಬಿ ಅಧಿಕಾರಿಗಳು ತನಿಖೆಯನ್ನ ಚುರುಕುಗೊಳಿಸಿದ್ದಾರೆ.. ಈ ನಡುವೆ ಇಂದ್ರಜಿತ್ ವಿಚಾರಣೆ ವೇಳೆ ಕೊಟ್ಟ ದಾಖಲೆಗಳು ಮತ್ತು 15 ಮಂದಿ ನಟ ನಟಿಯರ ಪೂರ್ವಾಪರ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ಸಿಸಿಬಿಯಿಂದ ಆ 15 ಮಂದಿ ನಟನಟಿಯರಿಗೆ ನೋಟೀಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೆಯೇ, ಸ್ಪಷ್ಟ ಪುರಾವೆಗಳನ್ನ ಒದಗಿಸುವಂತೆ ಕೋರಿ ಇಂದ್ರಜಿತ್ ಲೋಕೇಶ್ ಅವರಿಗೂ ಸಿಸಿಬಿ ಪೊಲೀಸರು ಮತ್ತೊಮ್ಮೆ ನೋಟೀಸ್ ನೀಡಲು ನಿರ್ಧರಿಸಿದ್ದಾರೆನ್ನಲಾಗಿದೆ.

ಮೊನ್ನೆ ವಿಚಾರಣೆಗೆ ಹಾಜರಾಗಿ 15 ಮಂದಿಯ ಹೆಸರು ದಾಖಲಿಸಿದ್ದ ನಿರ್ದೇಶಕ ಇಂದ್ರಜಿತ್, ಚಂದನವನದ ಡ್ರಗ್ಸ್ ಜಾಲದ ಬಗ್ಗೆ ಕೆಲ‌ ದಾಖಲೆ‌ ನೀಡಿ ಹೆಸರು ಹೇಳಿದ್ದರು. ಇಂದ್ರಜಿತ್ ಲಂಕೇಶ್ ನೀಡಿರುವ ಕೆಲ ದಾಖಲೆಗಳನ್ನು ಇಟ್ಟುಕೊಂಡು ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಮೊನ್ನೆಯಷ್ಟೇ ಇಂದ್ರಜಿತ್ ವಿಚಾರಣೆ ಬಳಿಕ, ಡಿಸಿಪಿ, ಎಸಿಪಿ, ಇನ್ಸ್ ಪೆಕ್ಟರ್​ಗಳ ಜೊತೆ ಸಭೆ ನಡೆಸಿದ್ದ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಮತ್ತೆ ಚರ್ಚೆ ನಡೆಸಿದ್ದಾರೆ.

ಡಿಸಿಪಿ ರವಿಕುಮಾರ್, ಎಸಿಪಿ ಗೌತಮ್ ಮತ್ತು ಪ್ರಕರಣದ ತನಿಖಾಧಿಕಾರಿ ಬೊಳೇತ್ತಿನ್ ಸಭೆಯಲ್ಲಿ ಭಾಗಿಯಾಗಿದ್ದು, ತನಿಖೆ ಆಯಾಮದ ಬಗ್ಗೆ ಚರ್ಚಿಸಲಾಗಿದೆ. ಇಂದ್ರಜಿತ್ ಲಂಕೇಶ್ ನೀಡಿರುವ ಆ ಹದಿನೈದು ಮಂದಿ ನಟ ನಟಿಯರಿಗೆ ಸಂಬಂಧಿಸಿದ ಸಾಕ್ಷಿ ಪ್ರಮುಖವಾಗಿರುತ್ತದೆ. ಜೊತೆಗೆ ಹದಿನೈದು ಮಂದಿಗೂ ನೊಟೀಸ್ ನೀಡುವ ಬಗ್ಗೆ ಮೀಟಿಂಗ್ ನಲ್ಲಿ ಚರ್ಚೆಯಾಗಿದೆ. ಪ್ರಕರಣ ತನಿಖೆಯ ಆಯಾಮ ಮತ್ತು ಎನ್​ಸಿಬಿ ಬಳಿ ಮಾಹಿತಿ ಪಡೆಯುವ ಕುರಿತು ಚರ್ಚಿಸಿದ್ದು, ಪ್ರಕರಣ ಸಂಬಂಧ ವಿಶೇಷ ತಂಡ ರಚಿಸಿ, ಸಾಕ್ಷಿಗಳನ್ನ ಪರಿಶೀಲನೆ ತನಿಖೆ ಮುಂದುವರೆಸುವ ಕುರಿತಾಗಿ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ಕೊರೋನಾದಿಂದಾಗಿ ನಷ್ಟ ಅನುಭವಿಸಿದ್ದ ರೈತರಿಗೆ ಘೋಷಿಸಲಾದ ಪರಿಹಾರದ ಹಣ ಎಲ್ಲಿ..?

ಇದಲ್ಲದೆ ಸಿಸಿಬಿ ಪೊಲೀಸರ ಬಳಿ ದಾಖಲೆ ಸಲ್ಲಿಸುವ ವೇಳೆ ಇಂದ್ರಜಿತ್ ತಮ್ಮನ್ನು ಯಾವುದೇ ರೀತಿಯಲ್ಲಿ ಸಾಕ್ಷಿದಾರನನ್ನಾಗಿಸದಂತೆ ಮನವಿ ಮಾಡಿದ್ದಾರೆನ್ನಲಾಗಿದೆ. ನಾನು ಕೇವಲ ಮಾಹಿತಿ ಹಂಚಿಕೆದಾರ ಅಷ್ಟೆ, ನಾನು ಸಾಕ್ಷಿದಾರನಲ್ಲ. ನನ್ನ ಬಳಿ ಇರುವ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ನೀವು ಈ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಬಹುದು. ನನ್ನನ್ನು ಸಾಕ್ಷಿದಾರನನ್ನಾಗಿಸದಿರಿ ಎಂದು ಇಂದ್ರಜಿತ್ ಲಂಕೇಶ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗಿದೆ. ಬೆಂಗಳೂರು ಕಮೀಷನರ್ ಕಮಲ್ ಪಂಥ್ ನೇತೃತ್ವದಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ ಡ್ರಗ್ಸ್ ಕಂಟ್ರೋಲ್​ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ. ಈಗಾಗಲೇ ಸರ್ಕಾರದಿಂದ ಡ್ರಗ್ಸ್ ನಿರ್ಮೂಲನೆಗೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಇದೇ ಪ್ರಮುಖ ವಿಚಾರವಾಗಿ ಚರ್ಚೆ ನಡೆದಿದೆ. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದು, ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ‌‌.

ಇದನ್ನೂ ಓದಿ: ಅಪಾಯದ‌ ಅಂಚಿನಲ್ಲಿದೆ ಪಣಜಿ - ಕೊಚ್ಚಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರ ಕಿರು‌ಸೇತುವೆಇನ್ನು, ನಿನ್ನೆ ಸಿಸಿಬಿ ಕಚೇರಿಯಲ್ಲಿ ಇಂದ್ರಜಿತ್ ಲಂಕೇಶ್ ನೀಡಿರುವ ಮಾಹಿತಿಯ ಬಗ್ಗೆಯೂ ಚರ್ಚೆ ನಡೆದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹಿನ್ನೆಲೆಯಲ್ಲಿ ತನಿಖೆಯ ವರದಿಯನ್ನ ಕಮಲ್ ಪಂಥ್ ಅವರಿಗೆ ಸಭೆಯಲ್ಲಿ ನೀಡಿದ್ದಾರೆ. ಒಟ್ಟಿನಲ್ಲಿ  ದಿನಕ್ಕೊಂದು ಆಯಾಮ ಪಡೆದುಕೊಳ್ತಿದ್ದು, ತನಿಖೆಯ ಬಳಿಕ ಸ್ಪಷ್ಟತೆ ಸಿಗಲಿದೆ.

ವರದಿ: ಗಂಗಾಧರ ವಾಗಟ
Published by: Vijayasarthy SN
First published: September 2, 2020, 8:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories