Sandalwood Drug Case: ರಾಗಿಣಿ-ಸಂಜನಾಗೆ ಸಿಗುತ್ತಾ ಜಾಮೀನು? ಸಾಕ್ಷಿಗಳಾಗ್ತಾರಾ ಐಂದ್ರಿತಾ-ದಿಗಂತ್?

Sanjjana And Ragini: ಒಬ್ಬರ ಜೊತೆ ಒಬ್ಬರು ಒಂದೇ ಕೊಠಡಿಯಲ್ಲಿ ಇರಲು ಸಾಧ್ಯವಿಲ್ಲ ಎನ್ನುತ್ತಿದ್ದ ಸಂಜನಾ ಹಾಗೂ ರಾಗಿಣಿ ಈಗ ಒಟ್ಟಿಗೆ ತಿಂಡಿ ಮತ್ತು ಊಟ ಮಾಡಿ ಆರಾಮಾಗಿ ಮಾತನಾಡುತ್ತ ಇದ್ದಾರಂತೆ.  ಜೈಲಿನ ಮಹಿಳಾ ಸಿಬ್ಬಂದಿಯಿಂದ ಇವರಿಬ್ಬರು ಆರೋಪಿಗಳಿಗೂ ಊಟ ಕಳುಹಿಸಿ ಕೊಡಲಾಗುತ್ತಿದೆ.

news18-kannada
Updated:September 18, 2020, 12:39 PM IST
Sandalwood Drug Case: ರಾಗಿಣಿ-ಸಂಜನಾಗೆ ಸಿಗುತ್ತಾ ಜಾಮೀನು? ಸಾಕ್ಷಿಗಳಾಗ್ತಾರಾ ಐಂದ್ರಿತಾ-ದಿಗಂತ್?
ಸಂಜನಾ, ರಾಗಿಣಿ
  • Share this:
ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳಾಗಿರುವ ರಾಗಿಣಿ ದ್ವಿವೇದಿ ಮತ್ತು ಸಂಜನಾ ಸಿಸಿಬಿ ಕಸ್ಟಡಿಯಲ್ಲಿದ್ದಾಗ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಜೊತೆಯಲ್ಲಿರಲು ಸಾಧ್ಯವಿಲ್ಲ ಎಂದಿದ್ದರು. ಇದೇ ಕಾರಣದಿಂದಾಗಿ ಈ ನಟಿಯರ ಜೊತೆಗೆ ಮೂರು ಮಂದಿ ಮಹಿಳಾ ಪೊಲೀಸರನ್ನೂ ಇರಿಸಲಾಗಿತ್ತು. ಆದರೆ ಈಗ, ಈ ನಟಿಮಣಿಯರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಯೂ ಒಂದೇ ಕೊಠಡಿಯಲ್ಲಿ ಇಡೀ ದಿನ ಕಳೆದಿದ್ದಾರೆ. ಆದರೆ ಈಗ ಇಬ್ಬರಿಗೂ ಸಹ ಅವರ ಜಾಮೀನಿನ ಚಿಂತೆ ಕಾಡ ತೊಡಗಿದೆ. ಅಡ್ಮಿನಿಸ್ಟ್ರೇಷನ್ ಬ್ಲಾಕ್​ನ ಮಹಿಳಾ ಬ್ಯಾರಕ್​ನಲ್ಲಿರುವ ನೆಲಮಹಡಿಯ ಕೊಠಡಿಯಲ್ಲಿ ಇಬ್ಬರಿಗೂ ಒಂದೇ ಕಡೆ ವ್ಯವಸ್ಥೆ ಮಾಡಿಕೊಡಲಾಗಿದೆ. ಮೂರು ದಿನಗಳಿಂದ ಜೈಲು ವಾಸದಲ್ಲಿರುವ ರಾಗಿಣಿಗೆ ಇದೀಗ ನಟಿ ಸಂಜನಾ ಜೊತೆಯಾರೆ. ರಾಗಿಣಿ ಹಾಗೂ ಸಂಜನಾ ಇಬ್ಬರೂ ರಾತ್ರಿ‌ ಸೊಳ್ಳೆ ಕಾಟದಿಂದ ಪರದಾಡಿದ್ದಾರಂತೆ. ಸದ್ಯಕ್ಕೆ ಸಂಜನಾ ಯೋಗದ ಮೊರೆ ಹೋದರೆ, ನಟಿ ರಾಗಿಣಿ ಪುಸ್ತಕ ಓದುವ ಮೂಲಕ ಒತ್ತಡದಿಂದ ಮುಕ್ತರಾಗಲು ಪ್ರಯತ್ನಿಸಿದ್ದಾರಂತೆ.

ಒಬ್ಬರ ಜೊತೆ ಒಬ್ಬರು ಒಂದೇ ಕೊಠಡಿಯಲ್ಲಿ ಇರಲು ಸಾಧ್ಯವಿಲ್ಲ ಎನ್ನುತ್ತಿದ್ದ ಸಂಜನಾ ಹಾಗೂ ರಾಗಿಣಿ ಈಗ ಒಟ್ಟಿಗೆ ತಿಂಡಿ ಮತ್ತು ಊಟ ಮಾಡಿ ಆರಾಮಾಗಿ ಮಾತನಾಡುತ್ತ ಇದ್ದಾರಂತೆ.  ಜೈಲಿನ ಮಹಿಳಾ ಸಿಬ್ಬಂದಿಯಿಂದ ಇವರಿಬ್ಬರು ಆರೋಪಿಗಳಿಗೂ ಊಟ ಕಳುಹಿಸಿ ಕೊಡಲಾಗುತ್ತಿದೆ.

Drug Mafia in sandalwood, Shruti Hariharan, Parul Yadav, Ragini Dwivedi, Sanjjana Galrani, Drug case, CCB, FSL, drugs mafia in sandalwood,
ರಾಗಿಣಿ ಹಾಗೂ ಸಂಜನಾ


ಇನ್ನು ನಿನ್ನೆ ರಾಗಿಣಿಗೆ ಜೈಲಿನ ಅಧಿಕಾರಿಗಳು ಜೈಲಿನಲ್ಲಿ ಇರುವ ಬೂತ್ ಫೋನ್ ನಿಂದ ತಮ್ಮ ಕುಟುಂಬದವರಿಗೆ ಕರೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು, ನಂತರ ವಕೀಲರ ಜೊತೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಾರಂತೆ. ಇಂದು ಸಂಜನಾ ಅವರ ಜಾಮೀನು ಅರ್ಜಿ ವಿಚಾರಣೆ ಇದ್ದು, ಅವರಿಗೆ ಬೇಲ್​ ಸಿಗಲಿದೆಯಾ ಎಂದು ಇಂದು ಮಧ್ಯಾಹ್ನದ ಹೊತ್ತಿಗೆ ತಿಳಿಯಲಿದೆ.

ಇದನ್ನೂ ಓದಿ: ವಿಷ್ಣುವರ್ಧನ್​ ಹುಟ್ಟುಹಬ್ಬ: ಸಾಮಾಜಿಕ ಜಾಲತಾಣದ ಡಿಪಿ ಬದಲಿಸಿದ ಸೆಲೆಬ್ರಿಟಿಗಳು..!

ನಿನ್ನೆ ಮಧ್ಯಾಹ್ನದ ಹೊತ್ತಿಗೆ ಸಂಜನಾ ಅವರ ಪೋಷಕರು ಮಗಳನ್ನು ಕಾಣಲು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರು. ಜೊತೆಗೆ ಮಗಳಿಗಾಗಿ ಊಟ, ಚಿಪ್ಸ್, ಚಾಕೊಲೇಟ್, ಜ್ಯೂಸ್ ಹಾಗೂ ಬಟ್ಟೆಗಳನ್ನು ಮಗಳಿಗಾಗಿ ತಂದಿದ್ದರು. ಆದರೆ, ಜೈಲಿನ ಅಧಿಕಾರಿಗಳು ಊಟ ಮತ್ತು ಜ್ಯೂಸ್​ ಅನ್ನು ವಾಪಸ್ ಕಳಿಸಿದ್ದು, ಇನ್ನುಳಿದ ಬಟ್ಟೆ ಮತ್ತು ಇತರೆ ವಸ್ತುಗಳನ್ನು ಮೂರು ದಿನ ಕ್ವಾರಂಟೈನ್​ನಲ್ಲಿ ಇಟ್ಟಿದ್ದಾರಂತೆ. ಇದನ್ನು ಮೂರು ದಿನಗಳ ನಂತರ ಸಂಜನಾ ಅವರಿಗೆ ನೀಡಲಾಗುತ್ತದೆಯಂತೆ.
ನಾಳೆ ರಾಗಿಣಿ ಅವರ ಜಾಮೀನು‌ ಅರ್ಜಿ ವಿಚಾರಣೆ ಇದ್ದು, ಜೈಲಿನಿಂದಲೆ ನ್ಯಾಯಾಧೀಶರ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವ‌ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂದು ಸಂಜನಾ ಅವರ ಬೇಲ್ ವಿಚಾರಣೆ ಇದ್ದು, ಅದೂ ಸಹ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆಯುವ ಸಾಧ್ಯತೆ ಹೆಚ್ಚಾಗಿದೆಯಂತೆ.

ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಅಭಿನಯದ ನಿಶ್ಯಬ್ಧಂ ಸಿನಿಮಾದ ಒಟಿಟಿ ರಿಲೀಸ್ ದಿನಾಂಕ ಫಿಕ್ಸ್​..!

ಸ್ಟಾರ್ ದಂಪತಿ ದಿಗಂತ್​ ಹಾಗೂ ಐಂದ್ರಿತಾಗೂ ಸಿಸಿಬಿ ಬಲೆ ಬೀಸಿದ್ದು, ಈಗಾಗಲೇ ವಿಚಾರಣೆ ನಡೆಸಲಾಗಿದೆ. ಇದೀಗ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ದಿಗಂತ್ ಮತ್ತು ಐಂದ್ರಿತಾ ರೇ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿಗಳಾಗಲು ಒಪ್ಪಿದ್ದಾರಂತೆ. ಇದರಿಂದ ರಾಗಿಣಿ, ಸಂಜನಾಗೆ ಮುಳುವಾಗುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಸ್ಟಾರ್​ ದಂಪತಿ ಸಾಕ್ಷಿಗಳಾಗಿ ಬದಲಾದರೆ, ಸೇಫ್ ಆಗುವ ಸಾಧ್ಯತೆ ಇದೆ. ಐಂದ್ರಿತಾ ಹಾಗೂ ದಿಗಂತ್​ ಅವರ ಮೊಬೈಲ್​ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ಅದರಿಂದ ಡೇಟಾ ರಿಟ್ರೀವ್​ ಮಾಡುತ್ತಿದ್ದಾರೆ. ಇದರಲ್ಲಿ ಏನಾದರೂ ಬಂಧಿತ ನಟಿಯರ ವಿರುದ್ಧ ಸಾಕ್ಷ್ಯಗಳು ದೊರೆತರೆ, ರಾಗಿಣಿ ಹಾಗೂ ಸಂಜನಾ ಮತ್ತಷ್ಟು ಕಷ್ಟಕ್ಕೆ ಸಿಲುಕಲಿದ್ದಾರೆ. 
Published by: Anitha E
First published: September 18, 2020, 9:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading