ಜೈಲಾಧಿಕಾರಿಗಳಿಗೆ ತಲೆನೋವಾಗಿದ್ದಾರಾ ಸಂಜನಾ-ರಾಗಿಣಿ : ಇಂದು ನಟಿಯರ ಜಾಮೀನು ಅರ್ಜಿ ವಿಚಾರಣೆ..!

ನಿನ್ನೆ ಸಂಜನಾ ಅವರ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು, ಬೇಲ್​ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ನಟಿಗೆ ನ್ಯಾಯಾಲಯ ಶಾಕ್ ನೀಡಿತ್ತು. ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. ಜೊತೆಗೆ ಸಂಜನಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ ಸೆ. 30ರವರೆಗೆ ವಿಸ್ತರಿಸಿತ್ತು. ಇಂದು ಸಿಸಿಬಿ ಪೊಲೀಸರು ಸಂಜನಾ ಅವರನ್ನು ನ್ಯಾಯಾಂಗ ಬಂಧನಲ್ಲೇ ಇಡುವಂತೆ ಮತ್ತೆ ಆಕ್ಷೇಪಣಾ ಅರ್ಜಿ ಸಲ್ಲಿಸಲಿದ್ದಾರೆ. ಈ ಅರ್ಜಿಯ ವಿಚಾರಣೆ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆಯಲಿದೆ. 

news18-kannada
Updated:September 19, 2020, 12:05 PM IST
ಜೈಲಾಧಿಕಾರಿಗಳಿಗೆ ತಲೆನೋವಾಗಿದ್ದಾರಾ ಸಂಜನಾ-ರಾಗಿಣಿ : ಇಂದು ನಟಿಯರ ಜಾಮೀನು ಅರ್ಜಿ ವಿಚಾರಣೆ..!
ರಾಗಿಣಿ ಹಾಗೂ ಸಂಜನಾ
  • Share this:
ಮಾದಕ ವಸ್ತು ಪ್ರಕರಣದಲ್ಲಿ ಈಗಾಗಲೇ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಅವರಿಗೆ ಸದ್ಯಕ್ಕೆ ಬುದ್ದಿ ಬಂದಂತೆ ಕಾಣುತ್ತಿಲ್ಲ. ಜೈಲಿನಲ್ಲಿ ನಿತ್ಯ ಒಂದಿಲ್ಲೊಂದು ಬೇಡಿಕೆ ಇಡುತ್ತಾ ಜೈಲಾಧಿಕಾರಿಗಳಿಗೆ ತಲೆನೋವಾಗಿದ್ದಾರಂತೆ ಈ ನಟಿಮಣಿಯರು. ಮಲಗಲು ಮಂಚ, ಊಟಕ್ಕೆ ಮಾಂಸಾಹಾರ ಹೀಗೆ ದಿನಕ್ಕೊಂದು ಹೊಸ ಬೇಡಿಕೆ ಇಡುತ್ತಿದ್ದಾರಂತೆ. ಜೈಲಿನಲ್ಲಿ ಕೊಡುವ ಊಟವನ್ನೂ ಸರಿಯಾಗಿ ಮಾಡುತ್ತಿಲ್ಲವಂತೆ. ಇನ್ನು ಸೊಳ್ಳೆ ಕಾಟದಿಂದ ನಿದ್ದೆ ಮಾಡಲಾಗುತ್ತಿಲ್ಲ ಎಂದು ದೂರುತ್ತಿದ್ದಾರಂತೆ. ಬೇಕಂತಲೇ ತಮ್ಮನ್ನ ಟಾರ್ಗೆಟ್​ ಮಾಡಿ ಜೈಲಿಗಟ್ಟಲಾಗಿದೆ ಎಂದು ಜೈಲು ಸಿಬ್ಬಂದಿಗಳ ಬಳಿ ಕಣ್ಣೀರಿಡುತ್ತಿದ್ದಾರಂತೆ ಈ ನಟಿಯರು. ಇಂದು ಈ ಇಬ್ಬರು ನಟಿಯರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಇಂದು ಜಾಮೀನು ಸಿಕ್ಕರೆ ಸಂಜನಾ ಹಾಗೂ ರಾಗಿಣಿ ನೆಮ್ಮದಿಯಾಗಿ ಮನೆ ಸೇರುತ್ತಾರೆ. ಇಲ್ಲವಾದರೆ ಮತ್ತೆ ಜೈಲಿನಲ್ಲೇ ಇರಬೇಕು.

ನಿನ್ನೆ ಸಂಜನಾ ಅವರ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು, ಬೇಲ್​ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ನಟಿಗೆ ನ್ಯಾಯಾಲಯ ಶಾಕ್ ನಿಡಿತ್ತು. ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. ಜೊತೆಗೆ ಸಂಜನಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ ಸೆ. 30ರವರೆಗೆ ವಿಸ್ತರಿಸಿತ್ತು. ಇಂದು ಸಿಸಿಬಿ ಪೊಲೀಸರು ಸಂಜನಾ ಅವರನ್ನು ನ್ಯಾಯಾಂಗ ಬಂಧನಲ್ಲೇ ಇಡುವಂತೆ ಮತ್ತೆ ಆಕ್ಷೇಪಣಾ ಅರ್ಜಿ ಸಲ್ಲಿಸಲಿದ್ದಾರೆ. ಈ ಅರ್ಜಿಯ ವಿಚಾರಣೆ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆಯಲಿದೆ.

Sandalwood Drug Mafia, Central Jail, Aindrita, Diganth, Sanjjana And Ragini sharing same room in central jail
ಸಂಜನಾ, ರಾಗಿಣಿ


ಸಂಜನಾ ಜೊತೆಗೆ ರಾಗಿಣಿ ಸಹ ಮಾಂಸಾಹಾರಕ್ಕಾಗಿ ಬೇಡಿಕೆ ಇಟ್ಟಿದ್ದರು. ನಿನ್ನೆ ಜೈಲಿನಲ್ಲಿ ಮಾಂಸಾಹಾರದ ಊಟ. ಪ್ರತಿ ಶುಕ್ರವಾರ ಅಲ್ಲಿನ ಮೆನ್ಯು ಪ್ರಕಾರ ಚಿಕನ್​ ಸಾಂಬಾರು, ಮುದ್ದೆ ಹಾಗೂ ಅನ್ನ ನೀಡಲಾಗುತ್ತದೆಯಂತೆ. ಇದರಿಂದಾಗಿ ರಾಗಿಣಿ ಹಾಗೂ ಸಂಜನಾಗೆ ಕೊಂಚ ನೆಮ್ಮದಿಯಾಗಿದೆ. ನಿನ್ನೆ ಈ ಇಬ್ಬರು ನಟಿಯರು ಚಿಕನ್ ಸಾಂಬಾರ್ ಹಾಗೂ ಅನ್ನವನ್ನು ಸೇವಿಸಿದ್ದಾರೆ. ಈ ಹಿಂದೆ ಒಂದೇ ಕೋಣೆಯಲ್ಲಿರಲು ಒಪ್ಪದ ಸಂಜನಾ ಹಾಗೂ ರಾಗಿಣಿ ಈಗ ಬೇಲ್​ ಅರ್ಜಿಯ ಬಗ್ಗೆ ಚರ್ಚಿಸುವಷ್ಟು ಕ್ಲೋಸ್​ ಆಗಿದ್ದಾರಂತೆ. ಇನ್ನು ಆರೋಪಿಗಳಾದ ಸಂಜನಾ ಹಾಗೂ ರಾಗಿಣಿ ಅವರ ಕುಟುಂಬದವರು ಆಗಾಗ ಜೈಲಿಗೆ ಭೇಟಿ ನೀಡುತ್ತಿರುತ್ತಾರೆ.

Sandalwood Drug Mafia: CCB Police issue the notice to anchor akul balaji and two others
ಅಕುಲ್​ ಬಾಲಾಜಿ-ಸಂತೋಷ್​


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾರಾ ದಂಪತಿಗಳಾದ ದಿಂಗತ್​-ಐಂದ್ರಿತಾ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇದರ ಬೆನ್ನಲ್ಲೇ ಇಂದು ಮತ್ತೆ ಮೂವರಿಗೆ ಸಿಸಿಬಿ ನೋಟಿಸ್​ ನೀಡಿದೆ. ಖ್ಯಾತ ಟಿವಿ ನಿರೂಪಕ ಅಕುಲ್​ ಬಾಲಾಜಿ, ನಟ ಸಂತೋಷ್​ ​, ಮಾಜಿ ಕಾಂಗ್ರೆಸ್​ ಶಾಸಕ ಆರ್​ ವಿ ದೇವರಾಜ್​ ಮಗ ಯುವರಾಜ್​ಗೆ ಸಿಸಿಬಿ ನೋಟಿಸ್​ ಜಾರಿ ಮಾಡಿದೆ. ಈ ಮೂವರನ್ನು ನಾಳೆ ಬೆಳಗ್ಗೆ ವಿಚಾರಣೆಗೆ ಹಾಜರಾಗಲು ತಿಳಿಸಿದೆ. ಇವರ ವಿಚಾರಣೆ ನಡೆಸುವ ಮೂಲಕ ಮತ್ತಷ್ಟು ಮಾಹಿತಿ ಪಡೆಯಲಿದ್ದಾರೆ. ಇದರಿಂದಾಗಿ ಮತ್ತಷ್ಟು ನಟ-ನಟಿಯರು, ರಾಜಕಾರಣಿಗಳ ಹೆಸರುಗಳು ಹೊರಬರುವ ಸಾಧ್ಯತೆ ಎನ್ನಲಾಗಿದೆ.

ಇದನ್ನೂ ಓದಿ: Anushka Shetty: ನಿಶ್ಯಬ್ಧಂ ಸಿನಿಮಾ ಕುರಿತಾಗಿ ಸಿಹಿ ಸುದ್ದಿ ಕೊಟ್ಟ ಅನುಷ್ಕಾ ಶೆಟ್ಟಿ..!ರಿಯಾಲಿಟಿ ಶೋಗಳ ಮೂಲಕ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಮಾತಿನ ಮಲ್ಲ ಎಂದೇ ಗುರುತಿಸಿಕೊಂಡಿರುವ ಅಕುಲ್​ ಬಾಲಾಜಿ ಹೆಸರು ತನಿಖೆ ವೇಳೆ ಕೇಳಿ ಬಂದ ಹಿನ್ನೆಲೆ ಅವರಿಗೆ ನೋಟಿಸ್​​ ನೀಡಲಾಗಿದೆ. ನೋಟಿಸ್​ಗೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಅಕುಲ್​ ಬಾಲಾಜಿ, ವಾಟ್ಸ್​ಆ್ಯಪ್​ ಮೂಲಕ ನನಗೆ ನೋಟಿಸ್​ ಸಿಕ್ಕಿದೆ. ಸದ್ಯ ನಾನು ಹೈದರಾಬಾದಿನಲ್ಲಿದ್ದು, ನಾಳೆಯೇ ವಿಚಾರಣೆಗೆ ಹಾಜರಾಗುವುದಾಗಿ ಸಿಸಿಬಿ ಪೊಲೀಸರಿಗೆ ಉತ್ತರಿಸಿದ್ದೇನೆ ಎಂದು ನಿನ್ನೆ ನ್ಯೂಸ್​ 18 ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.
Published by: Anitha E
First published: September 19, 2020, 8:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading