HOME » NEWS » Entertainment » SANDALWOOD DRUG CASE RAGINI DWIVEDI AND SANJJANAA GALRANI BAIL PLEA HEARING TODAY IN DRUG CASE SCT

ಸ್ಯಾಂಡಲ್​ವುಡ್​ ಡ್ರಗ್ ಕೇಸ್; ಇಂದು ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ

Sandalwood Drug Case: ಸ್ಯಾಂಡಲ್​ವುಡ್​ ಡ್ರಗ್ ಕೇಸ್​ನಲ್ಲಿ ಜಾಮೀನು ಅರ್ಜಿ ವಿಚಾರಣೆ ಮುಗಿಯದ ಹಿನ್ನೆಲೆ ನಟಿ ರಾಗಿಣಿ ಹಾಗೂ ಸಂಜನಾ ಅವರಿಗೆ ಇಂದು ಜಾಮೀನು ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

news18-kannada
Updated:September 24, 2020, 10:24 AM IST
ಸ್ಯಾಂಡಲ್​ವುಡ್​ ಡ್ರಗ್ ಕೇಸ್; ಇಂದು ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ
ಸಂಜನಾ, ರಾಗಿಣಿ
  • Share this:
ಬೆಂಗಳೂರು (ಸೆ. 24): ಸ್ಯಾಂಡಲ್​ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಇಂದು NDPS ವಿಶೇಷ ಕೋರ್ಟ್​ನಲ್ಲಿ ಇಬ್ಬರೂ ನಟಿಯರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಮೂಲಗಳ ಪ್ರಕಾರ ನಟಿ ರಾಗಿಣಿ ಹಾಗೂ ಸಂಜನಾ ಅವರಿಗೆ ಇಂದು ಜಾಮೀನು ಸಿಗೋದು ಅನುಮಾನ. ಜಾಮೀನು ಅರ್ಜಿ ವಿಚಾರಣೆ ಮುಗಿಯದ ಹಿನ್ನೆಲೆ ಇಂದು ಜಾಮೀನು ಆದೇಶ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಕಳೆದ ಬಾರಿ ವಿಚಾರಣೆ ವೇಳೆ ಸಿಸಿಬಿ ಪರ ವಕೀಲರು ರಾಗಿಣಿಗೆ ಜಾಮೀನು ನೀಡದಂತೆ ಕೋರ್ಟ್​ಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದರು. ರಾಗಿಣಿ ಪರ ವಕೀಲರು ಜಾಮೀನು ನೀಡುವಂತೆ ಕೋರ್ಟ್​ನಲ್ಲಿ ವಾದ ಮಂಡಿಸಿದ್ದರು. ಇಂದು ಸಿಸಿಬಿ ಪರ ವಕೀಲರು ಆಕ್ಷೇಪಣೆ ಮೇಲೆ ರಾಗಿಣಿಗೆ ಜಾಮೀನು ನೀಡದಂತೆ ಕೋರ್ಟ್​ನಲ್ಲಿ ವಾದ ಮಂಡನೆ ಮಾಡಲಿದ್ದಾರೆ. ಈ ಪ್ರಕರಣದ ಉಳಿದ ಆರೋಪಿಗಳ ಜಾಮೀನು ಅರ್ಜಿಗಳ ವಿಚಾರಣೆ ಕೂಡ ಇಂದು ನಡೆಯುವ ಸಾಧ್ಯತೆಯಿದೆ. ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಡ್ರಗ್ ಪೆಡ್ಲರ್​ಗಳು ನೀಡಿದ ಮಾಹಿತಿಯನ್ನು ಆಧರಿಸಿ ನಟಿ ರಾಗಿಣಿ ದ್ವಿವೇದಿಯನ್ನು ಮೊದಲು ಬಂಧಿಸಲಾಗಿತ್ತು. ಬಳಿಕ ಈ ಪ್ರಕರಣದಲ್ಲಿ ನಟಿ ಸಂಜನಾ ಹೆಸರು ಕೂಡ ಕೇಳಿಬಂದಿತ್ತು. ಸಂಜನಾ ಮನೆ ಮೇಲೆ ದಾಳಿ ನಡೆಸಿದ್ದ ಪೊಲೀಸರು ಆಕೆಯನ್ನು ಬಂಧಿಸಿದ್ದರು.

ಸ್ಯಾಂಡಲ್​ವುಡ್ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ. 21ರಂದು ರಾಗಿಣಿ, ಸಂಜನಾ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಎನ್​ಡಿಪಿಎಸ್ ವಿಶೇಷ ಕೋರ್ಟ್ ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. ರಾಗಿಣಿ ಮತ್ತು ಸಂಜನಾರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ಎನ್ ಡಿಪಿಎಸ್ ಕೋರ್ಟ್ ಮುಂದು ಹಾಜರುಪಡಿಸಲಾಗಿತ್ತು.
ರಾಗಿಣಿ ಜಾಮೀನು ಅರ್ಜಿಗೆ ಸರ್ಕಾರದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಕಳೆದ 5 ವರ್ಷಗಳಿಂದ ಆಕೆಗೆ ಹಲವರ ಪರಿಚಯವಿದ್ದು, ಜಾಮೀನು ಪಡೆದು ಹೊರಬಂದಲ್ಲಿ ಅವರನ್ನೆಲ್ಲ ಎಚ್ಚರಿಸುವ ಸಾಧ್ಯತೆಯಿದೆ. ಆಕೆ ಪಾಲ್ಗೊಂಡಿದ್ದ ಪಾರ್ಟಿಗಳಿಗೆ ಗೋವಾ, ಪಂಜಾಬ್, ಆಂಧ್ರಪ್ರದೇಶ, ಮುಂಬೈ ಮುಂತಾದ ಕಡೆಗಳಿಂದ ಡ್ರಗ್ ಪೂರೈಕೆ ಆಗಿತ್ತು. ಹೀಗಾಗಿ, ಅವರು ಸಾಕ್ಷ್ಯ ನಾಶಪಡಿಸುವ ಸಾಧ್ಯತೆಗಳಿರುವುದರಿಂದ ಜಾಮೀನು ನೀಡಬಾರದು ಎಂದಿದ್ದರು.

Published by: Sushma Chakre
First published: September 24, 2020, 10:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading