Pruthvi Ambaar: ದಿಯಾ ಖ್ಯಾತಿಯ ಪೃಥ್ವಿ ಅಂಬರ್‌ಗೆ ಮಾತೃ ವಿಯೋಗ, ಸುಜಾತಾ ಅಂಬರ್ ನಿಧನ

ಸ್ಯಾಂಡಲ್​ವುಡ್​ನ (Sandalwood) ಖ್ಯಾತ ಯುವ ನಟ ದಿಯಾ ಖ್ಯಾತಿಯ ಪೃಥ್ವಿ ಅಂಬರ್ (Pruthvi Ambaar)​ ಅವರಿಗೆ ಮಾತೃವಿಯೋಗವಾಗಿದೆ. ಹೌದು, ಪೃಥ್ವಿ ಅಂಬರ್​ ಅವರ ತಾಯಿ ಸುಜಾತಾ ವೀರಪ್ಪ ಅಂಬರ್ (Sujatha Ambaar)​ ಅವರು ವಿಧಿವಶರಾಗಿದ್ದಾರೆ.

ಪ್ರಥ್ವಿ ಅಂಬರ್ ಮತ್ತು ತಾಯಿ ಸುಜಾತಾ ಅಂಬರ್

ಪ್ರಥ್ವಿ ಅಂಬರ್ ಮತ್ತು ತಾಯಿ ಸುಜಾತಾ ಅಂಬರ್

  • Share this:
ಸ್ಯಾಂಡಲ್​ವುಡ್​ನ (Sandalwood) ಖ್ಯಾತ ಯುವ ನಟ ದಿಯಾ ಖ್ಯಾತಿಯ ಪೃಥ್ವಿ ಅಂಬರ್ (Pruthvi Ambaar)​ ಅವರಿಗೆ ಮಾತೃವಿಯೋಗವಾಗಿದೆ. ಹೌದು, ಪೃಥ್ವಿ ಅಂಬರ್​ ಅವರ ತಾಯಿ ಸುಜಾತಾ ವೀರಪ್ಪ ಅಂಬರ್ (Sujatha Ambaar)​ ಅವರು ವಿಧಿವಶರಾಗಿದ್ದಾರೆ. ಇನ್ನು, ಸುಜಾತಾ ಅಂಬರ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಕಳೆದ ರಾತ್ರಿ ಅವರು ಮಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ (Death) ಎಂದು ತಿಳಿದುಬಂದಿದೆ. ಸುಜಾತ ಅಂಬರ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನೇತಾರರಾದ ವೀರಪ್ಪ ಅಂಬರ್ (Veerappa Ambaar) ಅವರ ಧರ್ಮಪತ್ನಿಯಾಗಿದ್ದರು. ಸುಜಾತಾ ಅಂಬರ್ ಅವರ ಅಂತ್ಯಕ್ರಿಯೆ ಇಂದು ಮಂಗಳೂರಿನ (Mangaluru) ಅವರ ಸ್ವಗೃಹದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

ಪೃಥ್ವಿ ಅಂಬರ್ ತಾಯಿ ಸುಜಾತಾ ಅಂಬರ್ ನಿಧನ:

ಸ್ಯಾಂಡಲ್​ವುಡ್​ನಲ್ಲಿ ಖ್ಯಾತಿ ಗಳಿಸುತ್ತಿರುವ ಯುವ ನಟ ಪೃಥ್ವಿ ಅಂಬರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅವರ ನಟನೆಯ ಬೈರಾಗಿ ಮತ್ತು ಶುಗರ್ ಲೆಸ್ ಚಿತ್ರಗಳು ತೆರೆಕಂಡು ಯಶಸ್ಸಿ ಪ್ರದರ್ಶನ ಕಾಣುತ್ತಿವೆ. ಇದರ ನಡುವೆ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ.

ಪೃಥ್ವಿ ಅಂಬರ್ ತಾಯಿ ಸುಜಾತಾ ಅಂಬರ್ ಅವರು ಮಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ. ಇನ್ನು, ಸುಜಾತಾ ಅಂಬರ್ ಅವರು ದುರ್ಗಾಪರಮೇಶ್ವರಿ ಮಹಿಳಾ ಸಂಘದ ಕಾರ್ಯದರ್ಶಿಯಾಗಿದ್ದು, ಹಲವು ರೀತಿಯ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕಾಗಿ ದುಡಿಯುತ್ತಿದ್ದರು. ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: Gargi Movie Review: ಹೇಗಿದೆ ಸಾಯಿ ಪಲ್ಲವಿ ‘ಗಾರ್ಗಿ‘ ಸಿನಿಮಾ, ವರ್ಕೌಟ್​ ಆಯ್ತಾ ಕೋರ್ಟ್​ ಡ್ರಾಮಾ?

ಸೀರಿಯಲ್ ಮೂಲಕ ಬಣ್ಣದ ಲೋಕ್ಕಕೆ ಕಾಲಿಟ್ಟ ಪ್ರಥ್ವಿ:

ನಟ ಪ್ರಥ್ವಿ ಅಂಬರ್ ಮೊದಲಿಗೆ ಕನ್ನಡದ ಧಾರಾವಾಹಿಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರು 2008ರಲ್ಲಿ ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ಕಲ್ಯಾಣ‘ ಸೀರಿಯಲ್​ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಇದಾದ ಬಳಿಕ ‘ಜೊತೆ ಜೊತೆಯಲಿ‘ ಸೀರಿಯಲ್ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದರು. ಇದಾದ ಬಳಿಕ 2020ರಲ್ಲಿ ತೆರೆಕಂಡ ಕನ್ನಡದ ಸೂಪರ್ ಹಿಟ್ ಸಿನಿಮಾ ‘ದಿಯಾ‘ ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ಅವರ ನಟನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಸಾಲು ಸಾಲು ಸಿನಿಮಾಗಳ ಆಫರ್​ ಬಂದವು.

ಇದನ್ನೂ ಓದಿ: Chandramukhi 2: ಮತ್ತೆ ಬರ್ತಿದ್ದಾಳೆ ಚಂದ್ರಮುಖಿ, ಸೂಪರ್ ಸ್ಟಾರ್ Rajinikanth ಆಶೀರ್ವಾದದೊಂದಿಗೆ! ಈ ಚಿತ್ರದಲ್ಲಿ ಯಾರೆಲ್ಲಾಇದ್ದಾರೆ ನೋಡಿ

ದಿಯಾ ಹಿಂದಿ ರಿಮೇಕ್​ನಲ್ಲಿಯೂ ಪೃಥ್ವಿ ನಟನೆ:

ಪೃಥ್ವಿ ಈಗ ಬಾಲಿವುಡ್​ಗೂ ಕಾಲಿಟ್ಟಿದ್ದಾರೆ. ಹೌದು, ಈಗಾಗಲೇ ಪೃಥ್ವಿ ಅಭಿನಯಿಸುತ್ತಿರುವ ಹಿಂದಿ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಕನ್ನಡದ ದಿಯಾ ಚಿತ್ರದ ಹಿಂದಿ ರಿಮೇಕ್​ ಸಿದ್ಧಗೊಳ್ಳುತ್ತಿದೆ. ಈ ಚಿತ್ರದಲ್ಲಿ ನಾಯಕನಾಗಿ ಅಂದರೆ ಅದೇ ಆದಿ ಪಾತ್ರದಲ್ಲಿ ಪೃಥ್ವಿ ಅಂಬರ್ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಲಕ್ನೋದಲ್ಲಿ ಆರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಪೃಥ್ವಿ ಲಕ್ನೋದಲ್ಲೇ ಇದ್ದಾರೆ. ಪವಿತ್ರಾ ಲೋಕೇಶ್​ ನಿರ್ವಹಿಸಿದ್ದ ಆದಿ ತಾಯಿಯ ಪಾತ್ರವನ್ನು ಹಿಂದಿಯಲ್ಲಿ ಮೃನಾಲ್​ ಕುಲಕರ್ಣಿ ಮಾಡುತ್ತಿದ್ದಾರೆ. ನಾಯಕಿಯಾಗಿ ಅಂದರೆ ದಿಯಾ ಪಾತ್ರದಲ್ಲಿ ಹೊಸ ಪ್ರತಿಭೆ ಮಾಧುರಿ ಎಂಬುವರು ಕಾಣಿಸಿಕೊಳ್ಳುತ್ತಿದ್ದಾರೆ.
Published by:shrikrishna bhat
First published: