Say No To Social Media Harassment: ರಶ್ಮಿಕಾ ಬೆಂಬಲಕ್ಕೆ ನಿಂತ ಸ್ಯಾಂಡಲ್​ವುಡ್​ ನಿರ್ಮಾಪಕ-ನಿರ್ದೇಶಕರು..!

Rashmika Mandanna: ರಶ್ಮಿಕಾರ ಬಾಲ್ಯದ ಚಿತ್ರಗಳನ್ನು ಬಳಸಿಕೊಂಡು ಅದಕ್ಕೆ ಕೆಟ್ಟ ಪದವನ್ನು ಬಳಸುವ ಮೂಲಕ ಟ್ರಾಲ್​ ಮಾಡಲಾಗುತ್ತಿದೆ. ಈ ವಿಷಯವಾಗಿ ಸ್ಯಾಂಡಲ್​ವುಡ್​ನ ನಿರ್ದೇಶಕರು ಹಾಗೂ ನಿರ್ಮಾಪಕರು ಈಗ ಕಿರಿಕ್​ ಹುಡುಗಿ ರಶ್ಮಿಕಾರ ಬೆಂಬಲಕ್ಕೆ ನಿಂತಿದ್ದಾರೆ. 

Anitha E | news18-kannada
Updated:November 8, 2019, 2:47 PM IST
Say No To Social Media Harassment: ರಶ್ಮಿಕಾ ಬೆಂಬಲಕ್ಕೆ ನಿಂತ ಸ್ಯಾಂಡಲ್​ವುಡ್​ ನಿರ್ಮಾಪಕ-ನಿರ್ದೇಶಕರು..!
ರಶ್ಮಿಕಾರ ಬೆಂಬಲಕ್ಕೆ ನಿಂತ ನಿರ್ದೇಶಕ ಕವಿರಾಜ್​ ಹಾಗೂ ಕಾರ್ತಿಕ್​ ಗೌಡ
  • Share this:
ಸಣ್ಣ ಪುಟ್ಟ ವಿಷಯಗಳಿಗೆ ಸಾಮಾಜಿಕ ಜಾಲತಾಣದಲ್ಲಿ ನಟಿ ರಶ್ಮಿಕಾರನ್ನು ಟ್ರಾಲ್​ ಮಾಡುವುದು ಹೊಸ ಸಂಗತಿಯೇನಲ್ಲ. ಆದರೆ ಕಳೆದ ಕೆಲ ದಿನಗಳಿಂದ ರಶ್ಮಿಕಾರ ಬಗ್ಗೆ ತೀರಾ ಕೆಟ್ಟದಾಗಿ ಟ್ರಾಲ್​ ಮಾಡುತ್ತಿದ್ದು, ಅದರ ಬಗ್ಗೆ ಕೊಡಗಿನ ಬೆಡಗಿ ಸಾಮಾಜಿಕ ಜಾಲತಾಣದಲ್ಲಿ ಟ್ರಾಲ್​ ಮಾಡುವವರಿಗೆ ಬಿಸಿ ಮುಟ್ಟಿಸಿದ್ದರು.

'ಸಿನಿಮಾ ವಿಚಾರವಾಗಿ ಏನು ಬೇಕಾದರೂ ಟೀಕಿಸಿ ಹಾಗೂ ಕಮೆಂಟ್​ ಮಾಡಿ. ಆದರೆ ಸ್ಟಾರ್​ಗಳ ವೈಯಕ್ತಿಕ ವಿಷಯಗಳು ಹಾಗೂ ಕುಟುಂಬದ ಕುರಿತಾಗಿ ಮಾತನಾಡಲು ನಿಮಗೆ ಯಾವುದೇ ಹಕ್ಕಿಲ್ಲ ಎಂದು ಖಾರವಾಗಿಯೇ' ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು.

Rashmika hits back to trolls
ಟ್ರಾಲ್​ ಮಾಡಿದವರನ್ನು ತರಾಟೆಗೆ ತೆಗೆದುಕೊಂಡ ರಶ್ಮಿಕಾ


ರಶ್ಮಿಕಾರ ಬಾಲ್ಯದ ಚಿತ್ರಗಳನ್ನು ಬಳಸಿಕೊಂಡು ಅದಕ್ಕೆ ಕೆಟ್ಟ ಪದವನ್ನು ಬಳಸುವ ಮೂಲಕ ಟ್ರಾಲ್​ ಮಾಡಲಾಗುತ್ತಿದೆ. ಈ ವಿಷಯವಾಗಿ ಸ್ಯಾಂಡಲ್​ವುಡ್​ನ ನಿರ್ದೇಶಕರು ಹಾಗೂ ನಿರ್ಮಾಪಕರು ಈಗ ಕಿರಿಕ್​ ಹುಡುಗಿ ರಶ್ಮಿಕಾರ ಬೆಂಬಲಕ್ಕೆ ನಿಂತಿದ್ದಾರೆ.'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾದ ನಿರ್ದೇಶಕ ಕವಿರಾಜ್​ ಕೆಟ್ಟದಾಗಿ ಟ್ರಾಲ್​ ಮಾಡುವವರ ವಿರುದ್ಧ ಒಂದು ಪೋಸ್ಟ್​ ಮಾಡಿದ್ದಾರೆ. 'ಕೇವಲ ರಶ್ಮಿಕಾ ಮಾತ್ರವಲ್ಲ... ಟಿಕ್​ಟಾಕ್​ ಮಾಡುವ ಹುಡುಗಿಯರು ಸೇರಿದಂತೆ ಯಾರನ್ನೇ ಆದರೂ ಕೀಳು ಅಭಿರುಚಿಯಿಂದ ಟ್ರಾಲ್​ ಮಾಡುವ ಎಲ್ಲರ ವಿರುದ್ಧವೂ ಕ್ರಮಕೈಗೊಳ್ಳಬೇಕು' ಎಂದು ಕವಿರಾಜ್​ ಆಗ್ರಹಿಸಿದ್ದಾರೆ.

 '777 ಚಾರ್ಲಿ' ಸಿನಿಮಾದ ನಿರ್ದೇಶಕ ಕಿರಣ್​ ರಾಜ್​ ಸಹ ರಶ್ಮಿಕಾಗೆ ಬೆಂಬಲ ಸೂಚಿಸಿದ್ದಾರೆ. 'ಕೆಲವು ಟ್ರಾಲ್ ಪೇಜ್ ಗಳು ಎಷ್ಟು ಕೀಳು ಮಟ್ಟಕ್ಕೆ ಇಳಿದಿವೆ ಅಂತ ಈ ಪೋಸ್ಟ್ ನೋಡಿದ್ರೆ ಗೊತ್ತಾಗುತ್ತೆ. ನಿಮ್ಮ ಅಭಿಪ್ರಾಯಗಳು ಏನೇ ಇದ್ದರೂ ಅವರ ಸಿನಿಮಾಗಳಿಗೆ ಸೀಮಿತವಾಗಿರಲಿ. ಅದನ್ನು ಬಿಟ್ಟು ಅವರ ವೈಯುಕ್ತಿಕ ಜೀವನವನ್ನು ನಿಂದಿಸುವ, ಅಸಹ್ಯವಾಗಿ ಟ್ರಾಲ್​ ಮಾಡೋ ಹಕ್ಕು ಯಾರಿಗೂ ಇಲ್ಲ. ಕನಿಷ್ಠ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ' ಎಂದು ಬರೆದಿದ್ದಾರೆ.

 ಇದನ್ನೂ ಓದಿ: Odeya Hey Odeya Song: ದೇಹಿ ಅನ್ನೋರ ಕಾಯುವವನೇ ಈ ಒಡೆಯ: ಟೈಟಲ್​ ಟ್ರ್ಯಾಕ್​​ ಸಿಕ್ಕಿದೆ ಭರ್ಜರಿ ರೆಸ್ಪಾನ್ಸ್​..!

'ಕೆ.ಜಿ.ಎಫ್​' ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಸಹ ರಶ್ಮಿಕಾ ಪರವಾಗಿ ಟ್ವೀಟ್​ ಮಾಡಿದ್ದಾರೆ. 'ತಮಾಷೆ ಮಾಡುವುದು ಓಕೆ... ಆದರೆ ಒಬ್ಬರನ್ನು ಟಾರ್ಗೆಟ್​ ಮಾಡಿ ಕಿರುಕುಳ ನೀಡುವುದು ಕೀಳು ಅಭಿರುಚಿ. ಟ್ರಾಲ್ ಮಾಡುವವರು ತಮ್ಮ ಲಿಮಿಟ್​ ಅನ್ನು ಅರಿತು ನಡೆದುಕೊಳ್ಳಬೇಕು' ಎಂದು ಕಾರ್ತಿಕ್​ ಟ್ವೀಟ್​ ಮಾಡಿದ್ದಾರೆ.ಸಿನಿ ತಾರೆಯರನ್ನು ಟ್ರಾಲ್ ಮಾಡುವುದು, ಅವರ ಬಗ್ಗೆ ಕೀಳಾಗಿ ಹಾಗೂ ಕೆಟ್ಟದಾಗಿ ಪೋಸ್ಟ್​ ಮಾಡುವುದು ಹೊಸದೇನಲ್ಲ. ಆದರೆ ಸಾರ್ವಜನಿಕ ಜೀವನದಲ್ಲಿರುವವರನ್ನು ಟೀಕಿಸುವವರು ಒಂದು ಮಿತಿಯಲ್ಲಿದ್ದರೆ ಒಳ್ಳೆಯದು. ಅದರಲ್ಲೂ ಯಾರೇ ಆದರೂ ವೈಯಕ್ತಿಕವಾಗಿ ಕೀಳು ಮಟ್ಟಕ್ಕೆ ಇಳಿದು ಟ್ರಾಲ್​ ಮಾಡುವುದ ವಿರುದ್ಧ ಕ್ರಮ ಜರುಗಿಸಬೇಕು ಎಂಬುದು ಬಹಳ ಹಿಂದಿನಿಂದಲೂ ಇರುವ ಆಗ್ರಹ.

 

Katrina Kaif: ಮೊದಲ ಬಾರಿಗೆ ಸಿಕ್ಕಾಪಟ್ಟೆ ಹಾಟ್​ ಆಗಿ ಫೋಟೋಶೂಟ್​ಗೆ ಪೋಸ್ ಕೊಟ್ಟ ರಿಸ್ಕ್​ ಟೇಕರ್​ ಕತ್ರಿನಾ ಕೈಫ್ ​​..!

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading