Ghost Movie: ಘೋಸ್ಟ್ ಚಿತ್ರದಲ್ಲಿ ಬೀರ್​ಬಲ್-2! ಶ್ರೀನಿ ಹೇಳಿದ್ರು ಹೊಸ ಕಥೆ

ಬೀರ್​ಬಲ್​ ಮೀಟ್ಸ್ ಮಿಸ್ಟರ್ ಘೋಸ್ಟ್!

ಬೀರ್​ಬಲ್​ ಮೀಟ್ಸ್ ಮಿಸ್ಟರ್ ಘೋಸ್ಟ್!

ನಮ್ಮ ಘೋಸ್ಟ್​ ಚಿತ್ರದಲ್ಲಿ ಬೀರ್​​ಬಲ್ ಸಿನಿಮಾದ ಪಾತ್ರ ತರುತ್ತಿದ್ದೇವೆ. ಈ ಒಂದು ಪ್ರಯತ್ನದಲ್ಲಿ ಇತರ ಪಾತ್ರಗಳು ಇಲ್ಲಿ ಬರುತ್ತಿವೆ. ಇದಲ್ಲದೇ ಚಿತ್ರದಲ್ಲಿ ಬೀರ್​ಬಲ್​ ಚಿತ್ರದ ಪಾರ್ಟ್​-2 ಹಿಂಟ್ ಕೂಡ ಬಿಟ್ಟುಕೊಡಲಿದ್ದೇವೆ ಎಂದು ಡೈರೆಕ್ಟರ್ ಶ್ರೀನಿ, ನ್ಯೂಸ್​-18 ಕನ್ನಡ ಡಿಜಿಟಲ್​ಗೆ ತಿಳಿಸಿದ್ದಾರೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​ವುಡ್ ಯುವ ಡೈರೆಕ್ಟರ್ ಎಂ. ಜಿ. ಶ್ರೀನಿವಾಸ್ (Ghost Movie) ಹೊಸ ಹೊಸ ಪ್ರಯೋಗ ಮಾಡ್ತಾನೆ ಬಂದಿದ್ದಾರೆ. ತಮ್ಮ ಈ ಹಿಂದಿನ ಚಿತ್ರದಲ್ಲೂ ಒಂದಷ್ಟು ಹೊಸ ರೀತಿಯ ಟೆಕ್ನಿಕ್ ಬಳಸಿಕೊಂಡು ಸಕ್ಸಸ್ ಕಂಡಿದ್ದಾರೆ. ಅಪಾರ ಸಿನಿಮಾ ಪ್ರೀತಿ (Director Srini) ಹೊಂದಿದ ಡೈರೆಕ್ಟರ್ ಶ್ರೀನಿ, ಘೋಸ್ಟ್ (Kannada Ghost Cinema) ಚಿತ್ರದಲ್ಲಿ ಹಾಲಿವುಡ್​​ನ ಸಿನಿಮ್ಯಾಟಿಕ್ ಯುನಿವರ್ಸ್​ ಟೆಕ್ನಿಕ್ ಬಳಸುತ್ತಿದ್ದಾರೆ. ಬಾಲಿವುಡ್​ ಮಂದಿಗೆ ಈ ಒಂದು ಟೆಕ್ನಿಕ್​ ಹೊಸದೇನೂ ಅಲ್ಲ. ಆದರೆ ಕನ್ನಡಿಗರಿಗೆ ಈ ಮೂಲಕ ಹೊಸದೊಂದು (Sandalwood Cinema) ವಿಷಯ ತಿಳಿಸೋಕೆ ಡೈರೆಕ್ಟರ್ ಮುಂದಾಗಿದ್ದಾರೆ. ತಮ್ಮದೇ ಚಿತ್ರದ ಒಂದು ಪಾತ್ರವನ್ನ ಘೋಸ್ಟ್​ ಚಿತ್ರದಲ್ಲಿ ತರೋಕೆ ಪ್ಲಾನ್ ಕೂಡ ಮಾಡಿದ್ದಾರೆ.


ತಮ್ಮ ಈ ಹೊಸ ಪ್ರಯೋಗದ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್​ ಜೊತೆಗೆ ಒಂದಷ್ಟು ವಿಷಯಗಳನ್ನ ಹಂಚಿಕೊಡಿದ್ದಾರೆ. ಅದರ ಚಿತ್ರಣ ಇಲ್ಲಿದೆ ಓದಿ.


Sandalwood Director Srini Talk About Ghost New Movie New Concept
ಘೋಸ್ಟ್ ಚಿತ್ರದಲ್ಲಿ ಹಲವು ವಿಶೇಷ ಪಾತ್ರಗಳ ಪರಿಚಯ


ಕನ್ನಡ ಡೈರೆಕ್ಟರ್ ಇಂಗ್ಲೀಷ್ ಟೆಕ್ನಿಕ್-ಸೂಪರ್ ಘೋಸ್ಟ್!
ಡೈರೆಕ್ಟರ್ ಶ್ರೀನಿ ಇಂಗ್ಲೀಷ್​ ಸಿನಿಮಾಗಳಿಂದ ಪ್ರಭಾವಿತರಾಗಿದ್ದಾರೆ. ಅದನ್ನ ಅವರ ಸಿನಿಮಾಗಳಲ್ಲೂ ನೋಡಬಹುದು. ಹಾಲಿವುಡ್​ ಚಿತ್ರಗಳಲ್ಲಿ ಕಾಣುವ ರೂಪ ಇಲ್ಲಿ ಕಂಗೊಳಿಸುತ್ತಲೇ ಇರುತ್ತದೆ.




ಸ್ಪೂರ್ತಿ ಪಡೆದು ಹೊಸ ರೀತಿ ಚಿತ್ರ ಮಾಡೋದು ತಪ್ಪಿಲ್ಲ ಬಿಡಿ. ಯಥಾವತ್ತು ಕಾಪಿ ಮಾಡಿದ್ರೇನೆ ಕಾಮೆಂಟ್​​ಗಳ ಸುರಿ ಮಳೆ ಸುರಿಯುತ್ತದೆ. ಅದನ್ನ ಗಮನದಲ್ಲಿಟ್ಟುಕೊಂಡೇ ಡೈರೆಕ್ಟರ್ ಶ್ರೀನಿ ಈಗೊಂದು ಹೊಸ ಪ್ರಯೋಗ ಮಾಡುತ್ತಿದ್ದಾರೆ.


ಬೀರ್​ಬಲ್​ ಮೀಟ್ಸ್ ಮಿಸ್ಟರ್ ಘೋಸ್ಟ್!
ತಮ್ಮದೇ ನಿರ್ದೇಶನದ ಬೀರ್​ಬಲ್​ ಚಿತ್ರದ ವಕೀಲನ ಪಾತ್ರವನ್ನ ಘೋಸ್ಟ್ ಚಿತ್ರದಲ್ಲಿ ತರುತ್ತಿದ್ದಾರೆ. ಕೇವಲ ಬೀರ್​ಬಲ್ ಅಷ್ಟೇ ಈ ಚಿತ್ರದಲ್ಲಿ ಬರೋದಿಲ್ಲ. ಚಿತ್ರದ ಇತರ ಪಾತ್ರಗಳು ಇಲ್ಲಿ ಬರ್ತಾ ಇವೆ.


ಘೋಸ್ಟ್ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಅಭಿನಯಿಸಿದ್ದಾರೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ಇದೇ ತಿಂಗಳ ಮುಂದಿನ ಚಿತ್ರೀಕರಣ ಆರಂಭಿಸೋದಾಗಿಯೂ ಸುದ್ದಿ ಇದೆ.


ಕನ್ನಡದ ಘೋಸ್ಟ್ ಸಿನಿಮಾದಲ್ಲಿ ವಿನೂತನ ಪ್ರಯೋಗ
ಅದರ ಮಧ್ಯ ಸಿನಿಮ್ಯಾಟಿಕ್ ಯುನಿವರ್ಸ್​ ಟೆಕ್ನಿಕ್​ನ ಸುದ್ದಿ ಹೊರ ಬಿತ್ತು. ಈ ಒಂದು ಟೆಕ್ನಿಕ್​ಲ್ಲಿಯೇ ಘೋಸ್ಟ್ ಚಿತ್ರದಲ್ಲಿ ಬೀರ್​​ಬಲ್​ ಪಾತ್ರವನ್ನ ತರುತ್ತಿದ್ದೇವೆ ಎಂದು ಸ್ವತಃ ಶ್ರೀನಿ ವಿವರಿಸಿದ್ದಾರೆ.


ನಮ್ಮ ಘೋಸ್ಟ್​ ಚಿತ್ರದಲ್ಲಿ ಬೀರ್​ಬಲ್ ಸಿನಿಮಾದ ಪಾತ್ರ ತರುತ್ತಿದ್ದೇವೆ. ಈ ಒಂದು ಪ್ರಯತ್ನದಲ್ಲಿ ಇತರ ಪಾತ್ರಗಳು ಇಲ್ಲಿ ಬರುತ್ತಿವೆ. ಇದಲ್ಲದೇ ಚಿತ್ರದಲ್ಲಿ ಬೀರ್​ಬಲ್​ ಚಿತ್ರದ ಪಾರ್ಟ್​-2 ಹಿಂಟ್ ಕೂಡ ಬಿಟ್ಟುಕೊಡಲಿದ್ದೇವೆ ಎಂದು ಡೈರೆಕ್ಟರ್ ಶ್ರೀನಿ, ನ್ಯೂಸ್​-18 ಕನ್ನಡ ಡಿಜಿಟಲ್​ಗೆ ತಿಳಿಸಿದ್ದಾರೆ.


ಘೋಸ್ಟ್​ ಚಿತ್ರದ ಆದ್ಮೇಲೆ ಬೀರ್​ಬಲ್​-2 ಸಿನಿಮಾ ಶುರು ಆಗುತ್ತಿದೆ. ಇದಾದ್ಮೇಲೆ ಮತ್ತೊಂದಷ್ಟು ಸಿನಿಮಾಗಳು ಮಾಡೋ ಪ್ಲಾನ್ ಕೂಡ ಇದೆ.


ಘೋಸ್ಟ್ ಚಿತ್ರದಲ್ಲಿ ಶಿವಣ್ಣ-ಬೀರ್​ಬಲ್ ಮುಖಾ-ಮುಖಿ!
ಆಯಾ ಚಿತ್ರಗಳ ಬಗ್ಗೆ ಹಂತ ಹಂತವಾಗಿಯೇ ಮಾಹಿತಿ ಕೊಡ್ತಾ ಹೋಗುತ್ತವೆ. ಸದ್ಯಕ್ಕೆ ಘೋಸ್ಟ್ ಚಿತ್ರದಲ್ಲಿ ಬೀರ್​ಬಲ್ ಪಾತ್ರವನ್ನ ತರುತ್ತಿದ್ದೇವೆ ಎಂದು ಡೈರೆಕ್ಟರ ಶ್ರೀನಿ ಹೇಳುತ್ತಾರೆ.


Sandalwood Director Srini Talk About Ghost New Movie New Concept
ಘೋಸ್ಟ್ ಚಿತ್ರದಲ್ಲಿ ಶಿವಣ್ಣ-ಬೀರ್​ಬಲ್ ಮುಖಾ-ಮುಖಿ!


ಘೋಸ್ಟ್ ಚಿತ್ರದ ಮೊದಲ ಮತ್ತು ಎರಡನೇ ಹಂತದ ಚಿತ್ರೀಕರಣವನ್ನ ಬೆಂಗಳೂರು ಮತ್ತು ಮೈಸೂರಿನಲ್ಲಿ ಈಗಾಗಲೇ ಪೂರ್ಣ ಮಾಡಿದ್ದಾರೆ. ಮೂರನೇಯ ಮತ್ತು ಕೊನೆಯ ಹಂತದ ಚಿತ್ರೀಕರಣದಲ್ಲಿ ಡೈರೆಕ್ಟರ್ ಶ್ರೀನಿ ಬ್ಯುಸಿ ಆಗಿದ್ದಾರೆ.


ಘೋಸ್ಟ್ ಚಿತ್ರದಲ್ಲಿ ಹಲವು ವಿಶೇಷ ಪಾತ್ರಗಳ ಪರಿಚಯ
ಚಿತ್ರದಲ್ಲಿ ಬಾಲಿವುಡ್​​ ನಟ ಅನುಪಮ್ ಖೇರ್ ಅಭಿನಯಿಸುತ್ತಿದ್ದಾರೆ. ಪ್ರಮುಖ ಪಾತ್ರದ ಮೂಲಕ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಕೆಜಿಎಫ್​ ಚಿತ್ರದಲ್ಲಿ ಅಮ್ಮನ ಪಾತ್ರ ಮಾಡಿದ್ದ ಅರ್ಚನಾ ಕೂಡ ಇಲ್ಲಿ ವಿಶೇಷ ರೋಲ್​ ಮಾಡಿದ್ದಾರೆ.


ಇದನ್ನೂ ಓದಿ: Love in the Cinema: ಬೆಳ್ಳಿ ಪರದೆಯ ಪ್ರೇಮದ ಕಥೆಗಳು-ಕ್ಲಾಸಿಕ್ ಚಿತ್ರದಲ್ಲೂ ಒಲವೇ ಜೀವನ ಸಾಕ್ಷಾತ್ಕಾರ!


ಮಾಲಿವುಡ್​ ನಟ ಜಯರಾಮ್ ಕೂಡ ಈ ಮೂಲಕವೇ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಘೋಸ್ಟ್ ಸಿನಿಮಾ ಹೊಸ ಹೊಸ ಪ್ರಯೋಗಕ್ಕೆ ಕನ್ನಡದಲ್ಲಿ ಚಾಲನೆ ಕೊಟ್ಟಿದ್ದು ಈಗಲೇ ಭಾರೀ ಭರವಸೆಯನ್ನ ಕೂಡ ಈ ಚಿತ್ರ ಮೂಡಿಸುತ್ತಿದೆ.

First published: