news18-kannada Updated:June 10, 2020, 12:07 PM IST
ರಾಜೇಂದ್ರ ಸಿಂಗ್ ಬಾಬು, ತೆಲುಗು ನಿರ್ದೇಶಕ ರಾಜಮೌಳಿ
ಕೊರೋನಾ ಹಾಗೂ ಲಾಕ್ಡೌನ್ನಿಂದಾಗಿ ಕಳೆದ ಎರಡೂವರೆ ತಿಂಗಳಿನಿಂದ ಎಲ್ಲ ಕ್ಷೇತ್ರಗಳೂ ಬಂದ್ ಆಗಿವೆ. ಸಿನಿಮಾರಂಗವೂ ಅದರಿಂದ ಹೊರತಾಗಿಲ್ಲ. ಈಗಾಗಲೇ ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ಶೂಟಿಂಗ್ ಕೂಡ ಪ್ರಾರಂಭವಾಗುವ ನಿರೀಕ್ಷೆಯಿದೆ. ಆದರೆ ಈ ಲಾಕ್ಡೌನ್ ಸಮಯದಲ್ಲೇ ಇಬ್ಬರು ದಿಗ್ಗಜ ನಿರ್ದೇಶಕರು ಮುಖಾಮುಖಿಯಾಗಿದ್ದಾರೆ. ಒಂದೇ ಇಂಡಸ್ಟ್ರಿಯ ಇಬ್ಬರು ನಿರ್ದೇಶಕರು ವಾಗ್ವಾದ ನಡೆಸಿಕೊಳ್ಳೋದು ಕಾಮನ್. ಆದರೆ, ಟಾಲಿವುಡ್ನ ಸ್ಟಾರ್ ಡೈರೆಕ್ಟರ್ಗೆ ಸ್ಯಾಂಡಲ್ವುಡ್ನ ಲೆಜೆಂಡರಿ ಡೈರೆಕ್ಟರ್ ಪಾಠ ಮಾಡಿದ್ದಾರೆ.
ಹೌದು, ಕನ್ನಡದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ತೆಲುಗು ನಿರ್ದೇಶಕ ರಾಜಮೌಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ, ನೀವು ಸ್ವಾರ್ಥಿ, ಅವಕಾಶವಾದಿ ಎಂದು ಸಿಂಗ್ ಬಾಬು ಎಂದು ಮಾತಿನ ಪೆಟ್ಟು ನೀಡಿದ್ದಾರೆ.
“ಕೊರೋನಾ ಸಮಯದಲ್ಲೂ ಕರ್ನಾಟಕದ ಜನರಿಗೆ ನೀವು ಸಹಾಯ ಮಾಡಿಲ್ಲ. ಸಿನಿಮಾ ರಿಲೀಸ್ ಆದ ವೇಳೆ ಪ್ರತಿಭಟನೆ ನಡೆದಾಗ ಮಾತ್ರ ನಾನು ಕರ್ನಾಟಕದವನು, ರಾಯಚೂರಿನವನು ಅಂತ ನಾಟಕ ಮಾಡುತ್ತೀರಾ. ಅಳಿದ ಉಳಿದ ಕನ್ನಡ, ತೆಲುಗಿನಲ್ಲಿ ಮಾತನಾಡಿ ತಪ್ಪಿಸಿಕೊಳ್ಳುತ್ತೀರಾ. ಡಾ. ರಾಜ್ಕುಮಾರ್ ಅವರ ಸಿನಿಮಾಗಳಿಂದ ಕಥೆಯನ್ನು ನೀವು ಕದ್ದೀದ್ದೀರಿ. ರಾಜ ನನ್ನ ರಾಜ, ಮಯೂರ ಚಿತ್ರಗಳು ಹಾಗೂ ಕನ್ನಡ ಕಾದಂಬರಿ ಕಥೆಗಳನ್ನೂ ಕದ್ದಿದ್ದೀರಿ. ದರ್ಶನ್ ಅವರ ರಾಜವೀರ ಮದಕರಿ ನಾಯಕ ಚಿತ್ರದ ಸಿದ್ಧತೆ ವೇಳೆ ನೀವು ಕನ್ನಡ ಕಾದಂಬರಿಗಳಿಂದ ಕಥೆ ಕದ್ದಿರುವುದು ನನಗೆ ಗೊತ್ತಾಗಿದೆ,” ಎಂದಿದ್ದಾರೆ ರಾಜೇಂದ್ರ ಸಿಂಗ್ ಬಾಬು.
“ಇಷ್ಟೆಲ್ಲ ಆದರೂ ಕರ್ನಾಟಕದ ಜನರ ಕಷ್ಟಗಳಿಗೆ ನೀವು ಸ್ಪಂದಿಸಿಲ್ಲ. ಬೇರೆ ಬೇರೆ ರಾಜ್ಯಗಳಿಗೆ ಹೋದಂತೆ ಬೇರೆ ಬೇರೆ ಬಣ್ಣ ಬದಲಿಸುತ್ತೀರಿ. ಎಲ್ಲಿಗೇ ಹೋದರೂ ನೀವು ಬದುಕುತ್ತಿರುವುದು ಕನ್ನಡದವರಿಂದ. ಡಾ. ರಾಜ್ಕುಮಾರ್ ಹಾಗೂ ತಾರಾಸು ಅವರಿಗೆ ನೀ ಕೃತಜ್ಞರಾರಬೇಕು,” ಎಂದೆಲ್ಲಾ ಸಿಂಗ್ ಬಾಬು ರಾಜಮೌಳಿಗೆ ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಹೀಗೆ ಸಿಂಗ್ ಬಾಬು ಇಷ್ಟೊಂದು ಸಿಟ್ಟಾಗಲು ಮತ್ತೊಂದು ಕಾರಣವೂ ಇದೆ. ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿರುವಾಗ ಒಂದು ದಿನದ ಸೆಮಿನಾರ್ಗೆ ಮುಖ್ಯ ಅತಿಥಿಯಾಗಿ ಬಂದು ಮಾತನಾಡಲು ರಾಜಮೌಳಿಗೆ ಕರೆ ಮಾಡಿದ್ದರಂತೆ. ಜತೆಗೆ ಬೇರೆ ಬೇರೆ ಸೆಲೆಬ್ರಿಟಿಗಳ ಮೂಲಕವೂ ಅವರನ್ನು ಸಂಪರ್ಕಿಸಲು ಶತಪ್ರಯತ್ನ ಮಾಡಿದ್ದರಂತೆ. ಆದರೆ ರಾಜಮೌಳಿ ಯಾವುದಕ್ಕೂ ಕೇರ್ ಮಾಡಿರಲಿಲ್ಲವಂತೆ.ಮಣಿರತ್ನಂ, ಸಂಜಯ್ ಲೀಲಾ ಬನ್ಸಾಲಿ, ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರಂತಹ ನಿರ್ದೇಶಕರೇ ಸೆಮಿನಾರ್ಗೆ ಬಂದಿದ್ದರು. ಕಾರ್ಯಕ್ರಮವೂ ಸುಲಲಿತವಾಗಿ ನಡೆದಿತ್ತು. ಆದರೆ ರಾಜಮೌಳಿ ಮಾತ್ರ ಬಂದಿರಲಿಲ್ಲ.
ಆಂಧ್ರ ಪ್ರದೇಶ ಸರ್ಕಾರ ಶೂಟಿಂಗ್ಗೆ ಅನುಮತಿ ನೀಡಿರುವ ಹಾಗೂ ಥಿಯೇಟರ್ಗಳಿಗೆ ವಿದ್ಯುತ್ ಬಿಲ್ ರಿಲೀಫ್ ನೀಡಿರುವ ಬಗ್ಗೆ ರಾಜಮೌಳಿ ಫೇಸ್ಬುಕ್ನಲ್ಲಿಲ್ಲಿ ಧನ್ಯವಾದ ಹೇಳಿದ್ದಾರೆ. ಕೊರೊನಾ ಕಾಲದಲ್ಲಿ ಸಂಕಷ್ಟದಲ್ಲಿರುವ ಜನ ಹಾಗೂ ರಾಜಧಾನಿ ಬದಲಾವಣೆ ಸಂಬಂಧ ಅಮರಾವತಿ ರೈತರು ನಡೆಸುತ್ತಿರುವ ಹೋರಾಟಗಳ ಬಗ್ಗೆ ರಾಜಮೌಳಿ ಮೌನವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಂಧ್ರ ಹಾಗೂ ತೆಲಂಗಾಣದ ಜನ ಸಹ ರಾಜಮೌಳಿಯ ಈ ಫೇಸ್ಬುಕ್ ಪೋಸ್ಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
First published:
June 10, 2020, 12:06 PM IST