ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆಯಾದ ಕಂಬಳದ ಕುರಿತು ಸ್ಯಾಂಡಲ್ ವುಡ್ ನಲ್ಲಿ (Sandalwood) ಚಿತ್ರವೊಂದು ಸಿದ್ಧವಾಗುತ್ತಿದೆ. ಕನ್ನಡದ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು (Director Rajendra Sing Babu) ನಿರ್ದೇಶನದಲ್ಲಿ ‘ವೀರ ಕಂಬಳ‘ (Veera Kambala) ಎಂಬ ಚಿತ್ರ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಅರುಣ್ ರೈ ತೋಡಾರ್ ಬಂಡವಾಳ ಹೂಡಿದ್ದಾರೆ. ಇನ್ನು, ಈ ಚಿತ್ರವನ್ನು ಕ್ನನಡದ ಸೇರಿದಂತೆ ಅನೇಕ ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ದೇಶಕರು ಈಗಾಗಲೇ ಹೇಳಿಕೊಂಡಿದ್ದಾರೆ. ಅಲ್ಲದೇ ತುಳು ಭಾಷೆಯಲ್ಲೂ (Tulu Language) ಚಿತ್ರ ಬಿಡುಗಡೆ ಆಗಲಿದ್ದು, 'ಬರ್ದೆದ್ ಕಂಬಳ' ಎಂದು ಹೆಸರಿಟ್ಟಿದ್ದಾರೆ. ಇದರರ್ಥ ಬಿರುಸಿನ ಕಂಬಳ ಎಂದಾಗಿದೆ. ಈ ಚಿತ್ರ ಕುರಿತು ಇಂದು ಮಾಧ್ಯಮ ಸುದ್ಧಿಗೋಷ್ಟಿ ಏರ್ಪಡಿಸಿತ್ತು. ಈ ವೇಳೆ ಚಿತ್ರತಂಡ ಪಾಲ್ಗೊಂಡು ಸಿನಿಮಾದ ಕುರಿತು ಅನೇಕ ಮಾಹಿತಿಗಳನ್ನೂ ಹಂಚಿಕೊಂಡಿದ್ದಾರೆ.
ಕಂಬಳದ ಮೇಲಿನ ಆಸಕ್ತಿಯೇ ಇದೀಗ ಚಿತ್ರವಾಗುತ್ತಿದೆ:
ಇನ್ನು, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ‘ಕಂಬಳದ ಕುರಿತ ಆಸ್ತಿಕಯೇ ಇದೀಗ ಚಿತ್ರವಾಗುವುದಕ್ಕೆ ಕಾರಣವಾಗಿದೆ. ಮೊದಲಿನಿಂದಲೂ ಕಂಬಳದ ಕುರಿತು ಬರುತ್ತಿದ್ದ ಬರಹಗಳನ್ನು ಓದುತ್ತಿದ್ದೆ. ನಂತರ ಇದರ ಮೇಳಿನ ಆಸಕ್ತಿ ಹೆಚ್ಚಾಗಿ ಇದರ ಕುರಿತು ಸಿನಿಮಾ ಮಾಡಬೇಕೆಂದು ನಿರ್ಧಾರ ಮಾಡಿದೆ. ನಂತರ ತುಳು ನಟ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ಬಳಿ ಕಂಬಳದ ಬಗ್ಗೆ ಮಾಹಿತಿ ಪಡೆದು ಇದೀಗ ಚಿತ್ರ ಸಿದ್ಧಗೊಳ್ಳುತ್ತಿದೆ.
ಈ ಚಿತ್ರ ಸಂಪೂರ್ನ ಕರಾವಳಿಯ ಜಾನಪದ ಕಲೆ ಕಂಬಳದ ಕುರಿತಾಗಿರದ್ದು, ಚಿತ್ರೀಕರಣದ ವೇಳೆ ಸುಮಾರು 20 ಜೊತೆ ಕೋಣ ಹಾಗೂ 500ಕ್ಕೂ ಹೆಚ್ಚಿನ ಕಲಾವಿದರೊಂದಿಗೆ ಚಿತ್ರೀಕರಣ ಮಾಡಿದ್ದೇವೆ. ಅಲ್ಲದೇ ಒಂದು ಸಲ ಕೋಣದ ಓಟದ ಶಾಟ್ ತೆಗೆದರೆ, ನಂತರ ಒಂದು ಗಂಟೆ ವಿಶ್ರಾಂತಿ ನೀಡಬೇಕಿತ್ತು. ಒಟ್ಟಿನಲ್ಲಿ ಹೇಳಬೇಕಾದರೆ ಈ ಚಿತ್ರಕ್ಕೆ ಕಥೆಯೇ ಹೀರೋ ಎಂದು ಹೇಳಬಹುದು ಎಂದಿದ್ದು, ಚಿತ್ರವನ್ನು ಅಕ್ಟೋಬರ್ ವೇಳೆಗೆ ರಿಲೀಸ್ ಮಾಡುವ ಆಲೋಚನೆ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: Prashanth Neel: ಪ್ರಶಾಂತ್ ನೀಲ್ ಚಿತ್ರದಲ್ಲಿ ಕಮಲ್ ಹಾಸನ್? NTR ಗೆ ವಿಲನ್ ಆಗ್ತಾರಾ ಬಹುಭಾಷಾ ನಟ
ಸಿನಿಮಾದಲ್ಲಿ ತುಳು ಕಲಾವಿದರುಗಳು ಭಾಗಿ:
ಚಿತ್ರವು ಸಂಪೂರ್ಣವಾಗಿ ಕಂಬಳದ ಕುರಿತಾಗಿರುವುದರಿಂದ ಸ್ಥಳೀಯ ತುಳು ಕಲಾವಿದರುಗಳನ್ನು ಚಿತ್ರದಲ್ಲಿಸ ಆಕಷ್ಟು ಬಳಸಿಕೊಳ್ಳಲಾಗಿದೆ. ಕೋಣಗಳನ್ನು ಓಡಿಸುವುದರಲ್ಲಿ ಪ್ರಸಿದ್ಧರಾಗಿರುವ ಶ್ರೀನಿವಾಸ ಗೌಡ ಹಾಗೂ ಸ್ವರಾಜ್ ಶೆಟ್ಟಿ ಕಂಬಳ ಓಡಿಸುವವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಚಿತ್ರದ್ಲಲಿ ಬರುವ ಒಂದು ವಿಶೇಷ ಪಾತ್ರದಲ್ಲಿ ನಟ ಆದಿತ್ಯ ಅಭಿನಯಿಸಿದ್ದಾರೆ. ಜೊತೆಗೆ ಇದೇ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ನಟಿ ರಾಧಿಕಾ ಚೇತನ್ ಅಭಿನಯಿಸಿದ್ದಾರೆ ಎಂದು ತಿಳಸಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರನ ಮುಗಿದಿದ್ದು, ಸ್ವಲ್ಪ ಭಾಗವಷ್ಟೇ ಉಳಿದಿದೆ ಎಂದು ನಿರ್ದೇಶಕರು ತಿಳಸಿದ್ದಾರೆ.
ಇದನ್ನೂ ಓದಿ: Vikrant Rona: ವಿಕ್ರಾಂತ್ ರೋಣ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ RGV, ಮತ್ತೊಂದು ದೊಡ್ಡ ಚಿತ್ರ ಬರ್ತಿದೆ ಎಂದ ವರ್ಮಾ
ದೊಡ್ಡ ತಾರಾಬಳದ ಚಿತ್ರ ವೀರ ಕಂಬಳ:
ಇನ್ನು, ಚಿತ್ರದಲ್ಲಿ ತುಳು ಕಲಾವಿದರಾದ ಶ್ರೀನಿವಾಸ ಗೌಡ ಹಾಗೂ ಸ್ವರಾಜ್ ಶೆಟ್ಟಿ ಸೇರಿದಂತೆ ಅನೇಕ ಕಾಲವಿದರುಗಳು ಅಭಿನಯಿಸಿದ್ದಾರೆ. ಇವರುಗಳಲ್ಲದೇ ವಿಶೇಷ ಪಾತ್ರದಲ್ಲಿ ನಟ ಆದಿತ್ಯ, ಪೊಲೀಸ್ ಆಗಿ ನಟಿ ರಾಧಿಕಾ ಚೇತನ್ ನಟಿಸಿದ್ದಾರೆ. ಉಳಿದಂತೆ ಗೋಪಿನಾಥ್ ಭಟ್, ಭೋಜರಾಜ್ ವಾಮಾಂಜುರು, ನವೀನ್ ಪಡೀಲ್, ರಾಜಶೇಖರ ಕೋಟ್ಯಾನ್, ವೀಣಾ ಪೊನ್ನಪ್ಪ ಸೇರಿದಂತೆ ದೊಡ್ಡ ತಾರಾಬಳಗವನ್ನೇ ಚಿತ್ರದಲ್ಲಿ ಹಾಕಲಾಗಿದೆ. ಇನ್ನು, ಚಿತ್ರಕ್ಕೆ ಸ್ಥಳಿಯ ಸೊಗಡಿನ ಸಂಗೀತದ ಅವಶ್ಯಕತೆ ಇದ್ದುದ್ದರಿಂದ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ