ರಾಕಿಂಗ್ ಸ್ಟಾರ್ ಯಶ್ (Yash) ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್ ನ ಕೆಜಿಎಫ್ 2 (KGF 2) ಚಿತ್ರ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಸಖತ್ ಕಲೇಕ್ಷನ್ ಮಾಡಿ ಎಲ್ಲಾ ದಾಖಲೆಗಳನ್ನೂ ಅಳಿಸಿ ಹಾಕಿದೆ. ಕೆಜಿಎಫ್ 2 ಚಿತ್ರದಿಂದ ಇಡೀ ಭಾರತೀಯ ಚಿತ್ರರಂಗವೇ ಒಮ್ಮೆ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ಸ್ಟಾರ್ ಡೈರೆಕ್ಟರ್ ನೀಲ್ ಇದಿಗ ಕೆಜಿಎಫ್ 2 ಗೆಲುವಿನ ಅಲೆಯಲ್ಲಿದ್ದಾರೆ. ಇದರ ಜೊತೆಗೆ ತೆಲುಗಿನ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಜೊತೆ ಸಲಾರ್ (Salaar) ಚಿತ್ರವನ್ನೂ ಮಾಡುತ್ತಿದ್ದು, ಅದರ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ. ಅದರ ಜೊತೆ ಮೊನ್ನೆಯಷ್ಟೇ ತೆಲುಗಿನ ಜೂನಿಯರ್ ಎನ್ಟಿಆರ್ (Jr, NTR) ಜೊತೆ ಹೊಸ ಚಿತ್ರದ ಅನೌನ್ಸ್ ಸಹ ಮಾಡಿದ್ದಾರೆ. ಇದರ ನಡುವೆ ಅಭಿಮಾನಿಗಳ ತಲೆಗೆ ಹುಳ ಬೀಡುವ ಒಂದು ಫೋಟೋವನ್ನು ನೀಲ್ ಹಂಚಿಕೊಂಡಿದ್ದಾರೆ.
3 ಚಿತ್ರಗಳ ಪೋಸ್ಟರ್ ಅನ್ನು ಹಂಚಿಕೊಂಡ ನೀಲ್:
ಹೌದು, ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದಾರೆ. ಇದರ ನಡುವೆ ಅವರು ತಮ್ಮ ಫೇಸ್ಬುಕ್ ಮತ್ತು ಟ್ವಿಟರ್ ನಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಹೌದು, ನೀಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ 2, ಸಲಾರ್ ಮತ್ತು ಎನ್ಟಿಆರ್31 ಚಿತ್ರಗಳ 3 ಪೋಸ್ಟರ್ ಅನ್ನು ಜೋಡಿಸಿ ಹಂಚಿಕೊಂಡಿದ್ದಾರೆ. ಈ ಫೋಸ್ಟರ್ ಅನ್ನು ನೋಡಿದ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿದೆ.
ಮೂರು ಚಿತ್ರಗಳಿಗೆ ಕನೇಕ್ಟ್ ಇದೆಯಾ?:
ಪ್ರಶಾಂತ್ ನೀಲ್ ಈ ಪೋಟೋ ಅವನ್ನು ಶೇರ್ ಮಾಡಿಕೊಂಡ ನಂತರ ಇದೀಗ ಸಿನಿ ಪ್ರೇಮಿಗಳಲ್ಲಿ ಹೊಸದೊಂದು ಅನುಮಾನ ಹುಟ್ಟಿದ್ದು, ಈ ಮೂರು ಚಿತ್ರಗಳಿಗೂ ಏನಾದರೂ ಕನೆಕ್ಟ್ ಇದೆಯಾ ಎಂದು ಅನುಂಆನಿಸುತ್ತಿದ್ದಾರೆ. ಅದಲ್ಲದೇ ಕೆಜಿಎಫ್ 2 ಅಂತ್ಯದಲ್ಲಿ ಕೆಜಿಎಫ್ 3 ಚಿತ್ರ ಬರಲಿದೆ ಎಂಬ ಸುಳಿವನ್ನು ನೀಡಿದ್ದರ ಜೊತೆಗೆ ಇದೀಗ ಹೊಸ ಫೋಸ್ಟರ್ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ. ಅಲ್ಲದೇ ಕೆಲ ದಿನಗಳ ಹಿಂದೆ ಸಲಾರ್ ಕೆಜಿಎಫ್ 3 ಮುಂದಿನ ಭಾಗವಾಗಲಿದೆಯಾ ಎಂಬ ಮಾತುಗಳೂ ಕೇಳಿಬರುತ್ತಿತ್ತು.
ಇದನ್ನೂ ಓದಿ: 5 ವಾರಗಳಲ್ಲಿ KGF 2 ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? ಬಾಲಿವುಡ್ನಲ್ಲಿ ಅಬ್ಬರಿಸಿದ ಸೌತ್ ಸಿನಿಮಾಗಳಿವು
ಕೆಜಿಎಫ್ 3 ಅಂದ್ರೆ ಸಲಾರ್ ಸಿನಿಮಾನಾ?:
ಹೌದು, ಇಂಥದ್ದೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಹಾಲಿವುಡ್ನ ಮಾರ್ವೆಲ್ಸ್ ರೀತಿಯಲ್ಲಿ, ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಹಾಲಿವುಡ್ ಮಾರ್ವೆಲ್ಸ್ ಸಿನಿಮಾಗಳಲ್ಲಿ ಒಂದು ಸಿನಿಮಾದಲ್ಲಿ ಮತ್ತೊಂದು ಸಿನಿಮಾದ ಲಿಂಕ್ ಇರಲಿದೆ. ಇದನ್ನೇ ಇಲ್ಲಿ ಕನ್ದನಡದಲ್ಲಿ ಪ್ರಶಾಂತ್ ನೀಲ್ ಮಾಡುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಇದೀಗ ಕೆಜಿಎಫ್ ಚಾಪ್ಟರ್ 3 ಅಂದ್ರೆ ಪ್ರಭಾಸ್ ನಟನೆಯ ಸಲಾರ್ ಸಿನಿಮಾನಾ ಅನ್ನೋ ಅನುಮಾನ ಶುರುವಾಗಿದ್ದು, ಅದಕ್ಕೆ ಮತ್ತೊಮ್ಮೆ ಪುಷ್ಠಿ ನೀಡುವಂತೆ ನೀಲ್ ಹೊಸ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.
ಇದನ್ನೂ ಓದಿ: Dhanush: ಧನುಷ್ ತಮ್ಮ ಮಗ ಎಂದ ಮಧುರೈ ಮೂಲದ ದಂಪತಿಗೆ ಲೀಗಲ್ ನೋಟಿಸ್ ನೀಡಿದ ನಟ
ಬಘೀರ ಚಿತ್ರಕ್ಕೂ ನೀಲ್ ಕಥೆ:
ಗಾಂಧಿ ನಗರದಲ್ಲಿ ಇದೀಗ ಹೊಸ ಚರ್ಚೆಯೊಂದು ಹುಟ್ಟಿಕೊಂಡಿದೆ. ಹವದು, ಕಳೆದ 2 ದಿನಗಳ ಹಿಂದೆಯಷ್ಟೇ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಮುಂದಿನ ‘ಬಘೀರ‘ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಿತು. ಆದರೆ ಈ ಚಿತ್ರಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಕಥೆ ಮಾಡಿಕೊಟ್ಟಿದ್ದಾರೆ. ಹೀಗಾಗಿ ಬಘೀರ ಚಿತ್ರ ಸಹ ಕೆಜಿಎಫ್ 3 ನಲ್ಲಿ ಒಂದಾಗಲಿದೆಯಾ ಎಂಬ ಮಾತುಗಳು ಜೋರು ಕೇಳಿಬರುತ್ತಿದ್ದು, ಆದರೆ ಈ ಎಲ್ಲಾ ಪ್ರಶ್ನೇಗಳಿಗೆ ನೀಲ್ ಉತ್ತರಿಸಬೇಕಿದೆ. ಒಟ್ಟಿನಲ್ಲಿ ನೀಲ್ ಅವರ ಹೊಸ ಪೋಸ್ಟರ್ ಅನ್ನು ನೋಡಿದ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ