Prashanth Neel Birthday: ಪ್ರಶಾಂತ್ ನೀಲ್‌ ಬರ್ತಡೇ ಪಾರ್ಟಿಯಲ್ಲಿ ಕಾಣಿಸಿಕೊಂಡ ಯಶ್, ಪ್ರಭಾಸ್; 50ನೇ ದಿನದ ಸಂಭ್ರಮದಲ್ಲಿ KGF 2 ತಂಡ

ಪ್ರಶಾಂತ್ ನೀಲ್ ಹುಟ್ಟುಹಬ್ಬವನ್ನು ಅಚರಿಸಿಕೊಂಡಿದ್ದು, ಬರ್ತಡೇ ಪಾರ್ಟಿಯಲ್ಲಿ ಯಶ್ (Yash), ಪ್ರಭಾಸ್ (Prabhas) ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಶಾಂತ್ ನೀಲ್ ಬರ್ತಡೇ ಪಾರ್ಟಿ

ಪ್ರಶಾಂತ್ ನೀಲ್ ಬರ್ತಡೇ ಪಾರ್ಟಿ

  • Share this:
ಕನ್ನಡ ಚಿತ್ರರಂಗವನ್ನು ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದ ಕನ್ನಡದ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್‌ಗೆ (Prashanth Neel) ಇಂದು ಜನ್ಮದಿನದ (Birthday) ಸಂಭ್ರಮ. ಉಗ್ರಂ ಮೂಲಕ ತಮ್ಮ ಸಿನಿ ಜರ್ನಿಯನ್ನು ಆರಂಭಿಸಿದ ನೀಲ್, ತಮ್ಮ ಮೊದಲ ಸಿನಿಮಾದಲ್ಲಿಯೇ ತಾನೆಂತಹ ಡೈರೆಕ್ಟರ್ ಎಂಬುದನ್ನು ಪರಿಚಯಿಸಿದರು. ಅದಾದ ನಂತರ ನಿರ್ದೇಶಿಸಿದ ಕೆಜಿಎಫ್ (KGF) 1 ಮತ್ತು 2ನೇ ಭಾಗಗಳು ದೇಶದಾದ್ಯಂತ ಬ್ಲಾಕ್ ಬಸ್ಟರ್ ಹಿಟ್ ಆಗಿರುವುದು ಇದಿಗ ಎಲ್ಲರಿಗೂ ತಿಳಿಸಿದರುವ ವಿಚಾರ. ಇಂತಹ ಸ್ಟಾರ್ ನಿರ್ದೇಶಕ ನೀಲ್ ಅವರು ಇಂದು 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿ ಸೇರಿದಂತೆ ಗಣ್ಯಾತಿಗಣ್ಯರು ಅವರ ಹುಟ್ಟುಹಬ್ಬಕ್ಕೆ ಶುಭಕೋರುತ್ತಿದ್ದಾರೆ. ಅಲ್ಲದೇ ನೀಲ್ ಹುಟ್ಟುಹಬ್ಬವನ್ನು ಅಚರಿಸಿಕೊಂಡಿದ್ದು, ಬರ್ತಡೇ ಪಾರ್ಟಿಯಲ್ಲಿ ಯಶ್ (Yash), ಪ್ರಭಾಸ್ (Prabhas) ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ನೀಲ್ ಬರ್ತಡೇ ಪಾರ್ಟಿಯಲ್ಲಿ ಸಿನಿ ತಾರೆಯರ ದಂಡು:

ಇನ್ನು, ನಿರ್ದೇಶಕ ಪ್ರಶಾಂತ್ ನೀಲ್ ಅವರ ಬರ್ತಡೇ ಪಾರ್ಟಿಯಲ್ಲಿ ಅನೇಕ ಸಿನಿತಾರೆಯರು ಪಾಲ್ಗೊಂಡಿದ್ದರು. ಹೌದು, ಇದೀಗ ನೀಲ್ ತೆಲುಗು ಭಾಷೆಯ ಸ್ಟಾರ್ ನಟರಿಗೆ ಡೈರೆಕ್ಷನ್ ಮಾಡುತ್ತಿರುವುದರಿಂದ ಅನೇಕ ಗಣ್ಯರು ಬರ್ತಡೇಯಲ್ಲಿ ಸೇರಿಕೊಂಡಿದ್ದರು. ಪ್ರಶಾಂತ್ ಹುಟ್ಟು ಹಬ್ಬದಲ್ಲಿ ಕೆಜಿಎಫ್ ಟೀಂ ಕಾಣಿಸಿಕೊಂಡಿದ್ದು, ನಿರ್ಮಾಪಕ ವಿಜಯ್ ಕಿರಗಂದೂರು, ರಾಕಿಂಗ್ ಸ್ಟಾರ್ ಯಶ್, ಡಾರ್ಲಿಂಗ್ ಪ್ರಭಾಸ್ ಸೇರಿದಂತೆ ಅನೇಕರು ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು.

ಈ ವರ್ಷದ ಹುಟ್ಟುಹಬ್ಬ ಪ್ರಶಾಂತ್​ಗೆ ಸ್ಪೆಷಲ್:

ಹೌದು, ಸಾಲು ಸಾಲು ಯಶಸ್ಸಿನಲ್ಲಿರು ನೀಲ್ ಅವರಿಗೆ ಈ ಬಾರಿ ಹುಟ್ಟುಹಬ್ಬ ತುಂಬಾ ವಿಶೇಷವಾಗಿದೆ, ಹೌದು ಕೆಜಿಎಫ್ 2 ಚಿತ್ರ ಯಶಸ್ವಿಯಾಗಿ 50 ದಿನ ಪೂರೈಸಿದ್ದು, ಇದರ ಜೊತೆಗೆ ಚಿತ್ರವು 1000 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ. ಹೀಗಾಗಿ ವಿಶೇಷವಾದ ಕೇಕ್‌ಗಳನ್ನು ಕಟ್ ಮಾಡಿ ಸಂಭ್ರಮಿಸಲಾಗಿದೆ. ಕೆಜಿಎಫ್ ಮತ್ತು ಹೊಂಬಾಳೆ ಫಿಲ್ಮ್ಸ್ ಚಿಹ್ನೆಯಲ್ಲಿ ವಿ‍ಷೇಶವಾದ ಕೇಕ್ ತಯಾರಿಸಿ ಹುಟ್ಟುಹಬ್ಬದ ಜೊತೆಗೆ ಕೆಜಿಎಫ್ 2 ಚಿತ್ರದ 50ನೇ ದಿನದ ಸಂಭ್ರಮವನ್ನೂ ಕೂಡ ಆಚರಿಸಿದ್ದಾರೆ.

42ನೇ ವಸಂತಕ್ಕೆ ಕಾಲಿಟ್ಟ ಪ್ರಶಾಂತ್ ನೀಲ್:

ಪ್ರಶಾಂತ್ ನೀಲಕಂಠಪುರಂ ಅವರು 4 ಜೂನ್ 1980ರಲ್ಲಿ ಸುಭಾಷ್ ಮತ್ತು ಭಾರತಿ ದಂಪತಿಗಳಿಗೆ ಜನಿಸಿದರು. ಇವರು ಮೂಲತಃ ಆಂಧ್ರಪ್ರದೇಶದ ಮಡಕಸಿರಾ ಬಳಿಯ ನೀಲಕಂಠಪುರಂ ಗ್ರಾಮದವರು. ನಂತರ ಬೆಂಗಳೂರಿಗೆ ಬಂದು ಇಲ್ಲಿಯೇ ನೆಸಿದರು. ಆದರೆ ಇದೀಗ ಕನ್ನಡವೇ ಮೆಚ್ಚುವಂತಹ ನಿರ್ದೇಶಕರಾಗಿದ್ದಾರೆ. ಇನ್ನು, ಪ್ರಶಾಂತ್ ನೀಲ್ 2010 ರಲ್ಲಿ ಲಿಖಿತಾರನ್ನು ವಿವಾಹವಾದರು. ನೀಲ್​ಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ನೀಲ್​ ಸಹೋದರಿಯನ್ನು ಸ್ಯಾಂಡಲ್‌ವುಡ್​ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಗೆ ಕೊಟ್ಟು ವಿವಾಹ ಮಾಡಿದ್ದಾರೆ.

ಇದನ್ನೂ ಓದಿ: Happy Birthday Prashanth Neel: ಸ್ಯಾಂಡಲ್​ವುಡ್​ನ ಸ್ಟಾರ್​ ಡೈರೆಕ್ಟರ್​ ಪ್ರಶಾಂತ್​ ನೀಲ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ನೀಲ್ ಚೊಚ್ಚಲ ನಿರ್ದೇಶನ ಮಾಡಿದ್ದು, ಶ್ರೀಮುರುಳಿಗೆ. ಮೊದಲ ನಿರ್ದೇಶನ 'ಉಗ್ರಂ' ಚಿತ್ರದ ಮೂಲಕ ತಮ್ಮ ನಿರ್ದೇಶನದ ಜರ್ನಿಯನ್ನು ಆರಂಭಿಸಿದ್ದಾರೆ. ಈ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮೊದಲ ಚಿತ್ರದ ಮೂಲಕವೇ ಎಲ್ಲರೂ ತಿರುಗಿ ನೋಡುವಂತೆ ಮಾಡಿದರು. ನಂತರ ಇವರು ನಡೆದದ್ದು ಕೇವಲ ಚಿನ್ನದ ಹಾದಿಯಲ್ಲಿ.
Published by:shrikrishna bhat
First published: