ಕೆಜಿಎಫ್ (KGF) ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಮತ್ತು ಜ್ಯೂನಿಯರ್ ಎನ್ ಟಿಆರ್ (Jr NTR) ಹೊಸ ಚಿತ್ರ ಘೋಷಣೆ ಬೆನ್ನಲ್ಲೇ ಮತ್ತೊಂದು ಬಿಗ್ ಅನೌನ್ಸ್ ಮೆಂಟ್ ಆಗಿದೆ. ಹೌದು, ಬಹುಭಾಷ ಕಲಾವಿದ ಕಮಲ್ ಹಾಸನ್ (Kamal Haasan) ಈ ಚಿತ್ರದಲ್ಲಿ ನಟಿಸಿದ್ದಾರೆ ಎಂಬ ಸುದ್ದಿಯೊಂದು ಎಲ್ಲಡೆ ಹರಿದಾಡುತ್ತಿದೆ. ಅದರಲ್ಲಿಯೂ ಎನ್ಟಿಆರ್ ಗೆ ವಿಲನ್ ಆಗಿ ನಟ ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯೊಂದು ಹರಿದಾಡುತ್ತಿದ್ದು, ಇದ್ನನು ಕೇಳಿದ ಸನಿಪ್ರೇಮಿಗಳು ಹಾಗೂ ಟಾಲಿವುಡ್ ಅಂಗಳ ಒಮ್ಮೆ ಪ್ರಶಾಂತ್ ನೀಲ್ ಅತ್ತ ತೀರುಗಿ ನೋಡುತ್ತಿದೆ. ಏಕೆಂದರೆ ಕೆಜಿಎಫ್ 2 (KGF 2) ಚಿತ್ರದಲ್ಲಿ ಯಶ್ ಗೆ ವಿಲನ್ ಆಗಿ ಹಿಂದಿಯ ಸಂಜಯ್ ಧತ್ ನಟಿಸಿದ್ದರು.
ಹೀಗಾಗಿ ನೀಲ್ ಸಿನಿಮಾಗಳಲ್ಲಿ ನಟರಿಗಷ್ಟೇ ಅಲ್ಲದೇ ವಿಲನ್ ಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡುವುದಕ್ಕೆ ಈ ಮಾಹಿತಿ ಸತ್ಯವೆಂಬ ಮಾತುಗಳು ಸಹ ಕೇಳಿಬರುತ್ತಿದೆ. ಆದರೆ ಈ ಕುರಿತು ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿಯನ್ನು ಈವರೆಗೂ ಬಿಟ್ಟುಕೊಟ್ಟಿಲ್ಲ.
NTR ಗೆ ವಿಲನ್ ಆಗಲಿದ್ದಾರಾ ಕಮಲ್ ಹಾಸನ್?:
ಹೀಗೊಂದು ಚರ್ಚೆ ಸದ್ಯ ಎಲ್ಲಡೆ ಹರಡಿದ್ದು, ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಹೌದು, ಈಗಾಗಲೇ ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್ಟಿಆರ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಬರುತ್ತಿರುವುದು ಖಚಿತವಾಗಿದೆ. ಆದರೆ ಇದೊಂದು ಪಕ್ಕಾ ಮಾಸ್ ಚಿತ್ರವಾಗಿರಲಿದೆ ಎಂದು ಈಗಾಗಲೇ ಬಿಡುಗಡೆಯಾಗಿರುವ ಫೊಸ್ಟರ್ ಹೇಳುತ್ತಿದ್ದು, ಹೀಗಾಗಿ ಎನ್ಟಿಆರ್ ಗೆ ಚಿತ್ರದಲ್ಲಿ ಖಡಕ್ ವಿಲನ್ ನೀಡುವ ಸಲುವಾಗಿ ನೀಲ್ ಮಕಲ್ ಹಾಸನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Prashanth Neel: ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಪ್ರಶಾಂತ್ ನೀಲ್, 3 ಚಿತ್ರಗಳ ಫೋಟೋ ಹಂಚಿಕೊಂಡ ಸ್ಟಾರ್ ಡೈರೆಕ್ಟರ್
ಇದಲ್ಲದೇ ಈಗಾಗಲೇ ಚಿತ್ರದ ಕಥೆ ಕೇಳಿರುವ ಕಮಲ್ ಹಾಸನ್, ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿದ್ದು, ಈ ಕುರಿತ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಇನ್ನಷ್ಟೇ ತೀಳಿಸಬೇಕಿದೆ.
ಸಲಾರ್ ಶೂಟಿಂಗ್ ನಲ್ಲಿ ನೀಲ್ ಬ್ಯೂಸಿ:
ಇನ್ನು, ಸದ್ಯ ನಿರ್ದೇಶಕ ಪ್ರಶಾಂತ್ ನೀಲ್ ಪ್ರಭಾಸ್ ಜೊತೆಗಿನ ಸಲಾರ್ ಚಿತ್ರದಲ್ಲಿ ಬ್ಯೂಸಿ ಆಗಿದ್ದಾರೆ. ಹೀಗಾಗಿ ಈ ಚಿತ್ರದ ಶೂಟಿಂಗ್ ಮುಗಿದ ನಂತರವಷ್ಟೇ ಎನ್ ಟಿಆರ್ ಜೊತೆಗಿನ ಚಿತ್ರ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಹೀಗಾಗಿ ಈ ಚಿತ್ರದ ಕುರಿತ ಹೆಚ್ಚಿನ ಮಾಹಿತಿ ಲಭ್ಯವಾಗುವುದು ಇನ್ನಷ್ಟು ತಡವಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: NTR ಅಭಿಮಾನಿಗಳಿಗೆ ಡಬಲ್ ಧಮಾಕ, ಪ್ರಶಾಂತ್ ನೀಲ್ ಜೊತೆಗಿನ ಹೊಸ ಚಿತ್ರದ ಪೋಸ್ಟರ್ ರಿಲೀಸ್
NTR31 ಪೋಸ್ಟರ್ ಬಿಡುಗಡೆ:
NTR31 ಚಿತ್ರದ ಪೋಸ್ಟರ್ ಅನ್ನು ಮೈತ್ರಿ ಮೂವಿಸ್ ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ‘ರಕ್ತದಲ್ಲಿ ತೋಯ್ದ ಮಣ್ಣು ನೆನಪಿನಲ್ಲಿ ಉಳಿಯುತ್ತದೆ. ಅವನ ಮಣ್ಣು, ಅವನ ಆಳ್ವಿಕೆ.. ಆದರೆ ರಕ್ತ ಮಾತ್ರ ಅವನದ್ದಲ್ಲ‘ಎಂಬ ಪವರ್ ಪುಲ್ ಕ್ಯಾಪ್ಷನ್ ನೀಡಲಾಗಿದೆ. ಅಲ್ಲದೇ N ಅಕ್ಷರವು ರಕ್ತದಿಂದ ಕೂಡಿದಂತೆ ಕೆಂಪು ಬಣ್ಣದಲ್ಲಿ ನಿರ್ಮಿಸಲಾಗಿದೆ. ಒಟ್ಟಿನಲ್ಲಿ ತಾರಕ್ ಗೆ ಈ ಚಿತ್ರ ಮತ್ತೊಂದು ದೊಡ್ಡ ಬ್ರೇಕ್ ನೀಡಲಿದೆ ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ.
ಅಭಿಮಾನಿಗಳ ತಲೆಗೆ ಹುಳ ಬಿಟ್ಟ ನೀಲ್:
ಹೌದು, ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದಾರೆ. ಇದರ ನಡುವೆ ಅವರು ತಮ್ಮ ಫೇಸ್ಬುಕ್ ಮತ್ತು ಟ್ವಿಟರ್ ನಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಹೌದು, ನೀಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ 2, ಸಲಾರ್ ಮತ್ತು ಎನ್ಟಿಆರ್31 ಚಿತ್ರಗಳ 3 ಪೋಸ್ಟರ್ ಅನ್ನು ಜೋಡಿಸಿ ಹಂಚಿಕೊಂಡಿದ್ದಾರೆ. ಈ ಫೋಸ್ಟರ್ ಅನ್ನು ನೋಡಿದ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ