news18-kannada Updated:August 31, 2020, 6:23 PM IST
ನಿರ್ದೇಶಕ ಆಸ್ಕರ್ ಕೃಷ್ಣ
ಸ್ಯಾಂಡಲ್ವುಡ್ಗೆ ಅಂಟಿರುವ ನಶೆಯ ನಂಟಿನ ಬಗ್ಗೆ ಚಿತ್ರೋದ್ಯಮದ ಅನೇಕ ನಟ-ನಟಿಯರು ಮಾತನಾಡಿದ್ದಾರೆ. ಕೆಲವರು ಡ್ರಗ್ಸ್ ಇದೆ ಅಂದರೆ? ಇನ್ಮು ಕೆಲವರು ಆ ರೀತಿಯ ಅನುಭವ ನಮಗಾಗಿಲ್ಲ ಎಂದು ಹೇಳುತ್ತಿದ್ದಾರೆ. ಇದೀಗ ‘ಮಿಸ್ ಮಲ್ಲಿಗೆ’ ಸಿನಿಮಾ ಮಾಡಿರುವ ನಿರ್ದೇಶಕ ಆಸ್ಕರ್ ಕೃಷ್ಣ ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾದ ಬಗ್ಗೆ ಮಾತನಾಡಿದ್ದಾರೆ.
ಎಲ್ಲಾ ಉದ್ಯಮಗಳಲ್ಲಿ ಇರೋ ತರ ಚಿತ್ರೋದ್ಯಮದಲ್ಲೂ ಡ್ರಗ್ಸ್ ಸೇವನೆ ಇದೆ. ಕೆಲವರು ಏನನ್ನೂ ಸಾಧಿಸಲಾರದ ಕೀಳರಿಮೆಯಲ್ಲಿ ಇಂತಹ ದುಶ್ಚಟಗಳಿಗೆ ದಾಸರಾಗುತ್ತಾರೆ. ಇನ್ನೂ ಕೆಲವರು ದೊಡ್ಡವರ ಮಕ್ಕಳು ದುಡ್ಡಿರುವವರು ಇನ್ನೇನೋ ಖುಷಿಯನ್ನ ಹುಡುಕುವಾಗ ಡ್ರಗ್ಸ್ ಮೊರೆ ಹೋಗುತ್ತಾರೆ.
ಹಾಗೆಯೇ ರೇವ್ ಪಾರ್ಟಿ ಆಥವಾ ಇನ್ಯಾವುದೇ ಪಾರ್ಟಿಗೆ ಹೋದರೆ ಅಲ್ಲಿ ದೊಡ್ಡ ದೊಡ್ಡವರ ಜೊತೆ ಮಿಂಗಲ್ ಆದರೆ ಆಫರ್ ಸಿಗುತ್ತೆ ಅಂತ ಮಿಸ್ ಗೈಡ್ ಆಗುತ್ತದೆ. ಹೀಗಾಗಿ ಕೆಲವು ಹೊಸಬರು ಆ ರೀತಿ ಪಾರ್ಟಿಗಳಿಗೆ ಹೋಗುತ್ತಿರುತ್ತಾರೆ.
ಆದರೆ ಯಾರು ನಿಜವಾಗಿಯೂ ಸಾಧನೆ ಮಾಡಿದ್ದಾರೋ ಅವರೆಲ್ಲಾ ಸರಿಯಾದ ಮಾರ್ಗದಿಂದಲೇ ಬಂದಿರುತ್ತಾರೆ. ರಾತ್ರೋ ರಾತ್ರಿ ಏನನ್ನೋ ಸಾಧಿಸಬೇಕು ಎನ್ನುವರಷ್ಟೇ ಇಂತಹ ಹಾದಿ ಹಿಡಿಯೋದು.
ನಾಳೆ ಹೆಸರುಗಳು ರಿವೀಲ್ ಆದರೂ ಯಾರೋ ಸಣ್ಣವರಷ್ಟೇ ಇರುತ್ತಾರೆ. ಯಾಕೆಂದರೆ ದೊಡ್ಡ ದೊಡ್ಡವರಿಗೆ ತಾವು ಮಾಡೋ ಕೆಲಸಗಳೇ ವೀಕ್ನೆಸ್ ಎಂದು ನಿರ್ದೇಶಕ ಆಸ್ಕರ್ ಕೃಷ್ಣ ಹೇಳಿದ್ದಾರೆ.
Published by:
Harshith AS
First published:
August 31, 2020, 6:22 PM IST