ಸ್ಯಾಂಡಲ್ವುಡ್ನ (Sandalwood) ಕಿಚ್ಚ ಸುದೀಪ್ (Kiccha Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ (Vikrant Rona) ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಚಿತ್ರಕ್ಕೆ ಪೈರಸಿ (Piracy) ಕಾಟ ಎದುರಾಗಿತ್ತು. ಆದರೂ ಕಿಚ್ಚನ ಅಬ್ಬರಕ್ಕೆ ಯಾವುದೇ ಕೊರತೆ ಆಗಲಿಲ್ಲ. ಅಲ್ಲದೇ ಚಿತ್ರವನ್ನು ನೋಡಿದ ಗಣ್ಯರೂ ಸಹ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ವಿಕ್ರಾಂತ್ ರೋಣ ಸಿನಿಮಾದ ಕುರಿತು ಕನ್ನಡದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekhar) ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಉತ್ತಮಾಂಶಗಳನ್ನು ಪಟ್ಟಿ ಮಾಡಿ ಟ್ವೀಟ್ ಮಾಡಿದ್ದಾರೆ.
ವಿಕ್ರಾಂತ್ ರೋಣ ಚಿತ್ರದ ಉತ್ತಮಾಂಶಗಳನ್ನು ಪಟ್ಟಿ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್:
ಹೌದು, ವಿಕ್ರಾಂತ್ ರೋಣ ಚಿತ್ರವನ್ನು ನೋಡಿದ ಪ್ರತಿಯೊಬ್ಬರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಹೊಸತನದಿಂದ ಕೂಡಿದೆ ಎಂದು ಹೇಳುತ್ತಿದ್ದಾರೆ. ಇದರ ನಡುವೆ ಕನ್ನಡದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಹ ಚಿತ್ರವನ್ನು ವೀಕ್ಷಿಸಿದ್ದು, ಚಿತ್ರದ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಅಲ್ಲದೇ ಈ ಕುರಿತು ಟ್ವೀಟ್ ಮಾಡಿದ್ದು, ‘ವಿಕ್ರಾಂತ್ ರೋಣನ ಉತ್ತಮಾಂಶಗಳನ್ನು ಒಬ್ಬ ಪ್ರೇಕ್ಷಕನಾಗಿ ಪಟ್ಟಿ ಮಾಡಬಯಸುವೆ. ನಮ್ಮ ಅಪ್ಪಟ ಪ್ರಾದೇಶಿಕತೆ ಕಲೆ/ ಛಾಯಾಗ್ರಹಣ/ ಸಂಗೀತ/ಶಬ್ದವಿನ್ಯಾಸ ಇವು ಮೇಲುದರ್ಜೆಯಲ್ಲಿರುವುದು. ಸುದೀಪ್ ತೊಡಗಿಸಿಕೊಂಡಿರುವ ಶೈಲಿ, ರಾಜಿಯಾಗದ ಶ್ರೀಮಂತ ನಿರ್ಮಾಣ. ಕನ್ನಡ ಪ್ರೇಕ್ಷಕ ಸಿನಿಕನಾಗದೆ ಭಿನ್ನ ಬಗೆಯ ಇಂಥ ಪ್ರಯೋಗಗಳ ಬಗ್ಗೆ ನಿಜಕ್ಕೂ ಹೆಮ್ಮೆಪಡಬೇಕು‘ ಎಂದು ಬರೆದುಕೊಂಡಿದ್ದಾರೆ.
‘ವಿಕ್ರಾಂತ್ ರೋಣ’ನ ಉತ್ತಮಾಂಶಗಳನ್ನು ಒಬ್ಬ ಪ್ರೇಕ್ಷಕನಾಗಿ ಪಟ್ಟಿ ಮಾಡಬಯಸುವೆ. ನಮ್ಮ ಅಪ್ಪಟ ಪ್ರಾದೇಶಿಕತೆ;ಕಲೆ/ಛಾಯಾಗ್ರಹಣ/ಸಂಗೀತ/ಶಬ್ದವಿನ್ಯಾಸ- ಇವು ಮೇಲುದರ್ಜೆಯಲ್ಲಿರುವುದು; ಸುದೀಪ್ ತೊಡಗಿಸಿಕೊಂಡಿರುವ ಶೈಲಿ;ರಾಜಿಯಾಗದ ಶ್ರೀಮಂತ ನಿರ್ಮಾಣ. ಕನ್ನಡ ಪ್ರೇಕ್ಷಕ ಸಿನಿಕನಾಗದೆ ಭಿನ್ನ ಬಗೆಯ ಇಂಥ ಪ್ರಯೋಗಗಳ ಬಗ್ಗೆ ನಿಜಕ್ಕೂ ಹೆಮ್ಮೆಪಡಬೇಕು. pic.twitter.com/WEEGF7LfNh
— Nagathihalli Chandrashekhar (@NomadChandru) August 4, 2022
🙏🏼🙏🏼🙏🏼 https://t.co/jiAQrxb7s7
— Kichcha Sudeepa (@KicchaSudeep) August 4, 2022
ವಿಕ್ರಾಂತ್ ರೋಣ ಸಿನಿಮಾ ಜುಲೈ 28 ರಂದು ರಿಲೀಸ್ ಆಗಿದ್ದು, ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಆರನೇ ದಿನ ವಿಕ್ರಾಂತ್ ರೋಣ ಅಂದಾಜು 6 ಕೋಟಿ ಕಲೆಕ್ಷನ್ ಮಾಡಿದೆ. ಚಿತ್ರವು ತನ್ನ ಕಲೆಕ್ಷನ್‌ಗಳಲ್ಲಿ ಕುಸಿತ ಕಂಡರೂ, ಇದು ಇನ್ನೂ ಶಂಶೇರಾ ಮತ್ತು ಏಕ್ ವಿಲನ್ ರಿಟರ್ನ್ಸ್‌ಗಳನ್ನು ಮೀರಿಸಿದೆ. ವಿಕ್ರಾಂತ್ ರೋಣ ಈ ವಾರ ಬಾಕ್ಸ್ ಆಫೀಸ್ ನಲ್ಲಿ 150 ಕೋಟಿ ದಾಟಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Vikrant Rona: ವಿಕ್ರಾಂತ್ ರೋಣ ಕುರಿತು ಅಪಸ್ವರ ಎತ್ತಿದ ಚೇತನ್, ಸ್ಯಾಂಡಲ್ವುಡ್ನಲ್ಲಿ ಬಿರುಗಾಳಿ ಎಬ್ಬಿಸಿದ ನಟ
ಹಿಂದಿ ನಿರೂಪಕಿಗೆ ಕಿಚ್ಚನ ಕನ್ನಡ ಪಾಠ:
ಈ ಚಿತ್ರದ ಪ್ರಚಾರಕ್ಕಾಗಿ ಹೊರರಾಜ್ಯಗಳಿಗೆ ಸುದೀಪ್ ಪ್ರಯಾಣ ಬೆಳೆಸಿ ಸಂದರ್ಶನ ನೀಡಿದ್ದಾರೆ. ಸಿನಿಮಾ ರಿಲೀಸ್ ಆದಮೇಲೂ ಹಲವಾರು ಸಂದರ್ಶನಗಳಲ್ಲಿ ಕಿಚ್ಚ ಸುದೀಪ್ ಬ್ಯೂಸಿ ಇದ್ದಾರೆ. ಇದೀಗ ಕಿಚ್ಚ ಸುದೀಪ್ ಅವರ ಬೇರೆ ಭಾಷೆಯ ಸಂದರ್ಶನ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕನ್ನಡವನ್ನು ತಪ್ಪಾಗಿ ಉಚ್ಛರಿಸಿದ ನಿರೂಪಕಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಹಿಂದೆ ವಿಕ್ರಾಂತ್ ರೋಣ ಪ್ರಚಾರದ ವೇಳೆ ಕಿಚ್ಚ ಸುದೀಪ್ ಹಲವರಿಗೆ ಇದೇ ವಿಚಾರವಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೀಗ ಹಿಂದಿ ನಿರೂಪಕಿಯೊಬ್ಬರಿಗೆ ಕನ್ನಡ ಪಾಠ ಮಾಡಿದ್ದಾರೆ ಕಿಚ್ಚ ಸುದೀಪ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ