• Home
  • »
  • News
  • »
  • entertainment
  • »
  • Murali Krishna: ಸ್ಯಾಂಡಲ್​​ವುಡ್ ನಿರ್ದೇಶಕ ಮುರಳಿ ಕೃಷ್ಣ ಇನ್ನಿಲ್ಲ

Murali Krishna: ಸ್ಯಾಂಡಲ್​​ವುಡ್ ನಿರ್ದೇಶಕ ಮುರಳಿ ಕೃಷ್ಣ ಇನ್ನಿಲ್ಲ

ಮುರಳಿ ಕೃಷ್ಣ

ಮುರಳಿ ಕೃಷ್ಣ

ಸ್ಯಾಂಡಲ್​​ವುಡ್ ನಿರ್ದೇಶಕ ಮುರಳಿ ಕೃಷ್ಣ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ನಿರ್ಮಾಪಕರಾಗಿಯೂ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಿರ್ದೇಶಕ (Director) ಹಾಗೂ ನಿರ್ಮಾಪಕರಾಗಿ (Producer) ಕೆಲಸ ಮಾಡಿದ್ದ ಮುರಳಿ ಕೃಷ್ಣ ಅವರು ನಿಧನರಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ (Sandalwood) ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಕೆಲಸ ಮಾಡಿದ್ದ, ಉತ್ತಮ ಸಿನಿಮಾಗಳನ್ನು ಕೊಟ್ಟಿದ್ದ ಮುರಳಿ ಕೃಷ್ಣ (Murali Krishna) ಸಾವಿನ ಸುದ್ದಿ ಸಿನಿಪ್ರಿಯರಿಗೆ ಆಘಾತ ಕೊಟ್ಟಿದೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಬ್ರೈನ್ ಟ್ಯೂಮರ್​​ನಿಂದ ಬಳಲುತ್ತಿದ್ದ ಮುರಳಿ ಕೃಷ್ಣ ಅವರಿಗೆ ಚಿಕಿತ್ಸೆ (Treatment) ಕೂಡಾ ಕೊಡಿಸಲಾಗಿತ್ತು. ಆದರೆ ಮುರಳಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ (Death). ಇವರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.  ಸಣ್ಣ ಸತ್ಯ, ಗರ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ ಮುರಳಿ ಕೃಷ್ಣ. ಬಾಳನೌಕೆ, ಕರ್ಣನ ಸಂಪತ್ತು, ಹೃದಯ ಸಾಮ್ರಾಜ್ಯ, ಮರಳಿ ಗೂಡಿಗೆ ಮುಂತಾದ ಸಿನಿಮಾಗಳಿಗೆ ಅವರು ಬಂಡವಾಳ ಹೂಡಿದ್ದಾರೆ.


ಚಿಕಿತ್ಸೆ ಪಡೆಯುತ್ತಿದ್ದರು ಮುರಳಿ


ಮುರಳಿ ಕೃಷ್ಣ ಅವರು ಬ್ರೈನ್ ಟ್ಯೂಮರ್​​ನಿಂದ ಬಳಲುತ್ತಿದ್ದರು. ಬ್ರೈನ್ ಟ್ಯೂಮರ್‌ ಸಮಸ್ಯೆ ಇದ್ದರೂ ಅದು ಬಹಳ ತಡವಾಗಿ ಬೆಳಕಿಗೆ ಬಂದಿತ್ತು. ಸಿಟಿ ಸ್ಕ್ಯಾನ್ ಮಾಡಿದ ಬಳಿದ ಅವರಿಗೆ ಬ್ರೈನ್ ಟ್ಯೂಮರ್‌ ಇರುವುದು ಪತ್ತೆಯಾಗಿತ್ತು. ಅವರನ್ನು ತಕ್ಷಣವೇ ಲಾಲ್ ಬಾಗ್ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು.


ಆದರೆ ಚಿಕಿತ್ಸೆ ಫಲಕಾರಿಯಾದರೂ ಮುರಳಿ ಕೃಷ್ಣ ನವೆಂಬರ್ 14ರಂದು ಸಂಜೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮುರಳಿ ಕೃಷ್ಣ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಮಧ್ಯಾಹ್ನ 12.30ಕ್ಕೆ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.


ಬಾಲಿವುಡ್ ಕಾಮೆಡಿಯನ್​ ಕನ್ನಡದಲ್ಲಿ


'ಗರ' ಚಿತ್ರಕ್ಕಾಗಿ ಬಾಲಿವುಡ್‌ ನಟ ಜಾನಿ ಲಿವರ್ ಅವರನ್ನು ಕನ್ನಡಕ್ಕೆ ಕರೆತಂದಿದ್ದು ಕೂಡಾ ಇವರೇ. ಆ ಚಿತ್ರದಲ್ಲಿ ಜಾನಿ ಲಿವರ್ ಮತ್ತು ಸಾಧು ಕೋಕಿಲ ಅವರ ಕಾಂಬಿನೇಷನ್‌ ಸಖತ್ ಫೇಮಸ್ ಆಗಿತ್ತು.


ಇದನ್ನೂ ಓದಿ: Mahesh Babu’s Father Krishna Death: ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ: ಅಮ್ಮನ ಸಾವಿನ ಬೆನ್ನಲ್ಲೇ ನಟನಿಗೆ ಶಾಕ್


ವಕೀಲರಾಗಿದ್ದ ಮುರಳಿ ಅವರು ಗುರುತಿಸಿಕೊಂಡಿದ್ದು ಸಿನಿಮಾ ಜೊತೆ


ಮುರಳಿ ಕೃಷ್ಣ ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ಆದರೆ ಅವರ ಸಿನಿಮಾ ಒಲವಿನಿಂದಾಗಿ ಚಿತ್ರರಂಗದಲ್ಲಿಯೇ ಗುರುತಿಸಲ್ಪಟ್ಟರು. ಸಿನಿಮಾವನ್ನು ಪ್ರವೃತ್ತಿಯಾಗಿಸಿಕೊಂಡಿದ್ದ ಮುರಳಿ ಅವರು ಸಿನಿಮಾಗಳ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು.

Published by:Divya D
First published: