ಕನ್ನಡ ಸಿನಿಮಾರಂಗದಲ್ಲಿ (Kannada Cinema) ಒಳ್ಳೆ ಸಿನಿಮಾಗಳಿಗೆ ಕೊರತೆ ಇಲ್ವೇ ಇಲ್ಲ. ಕಂಟೆಂಟ್ ಬೇಸ್ ಚಿತ್ರಗಳಿಗೆ ಕಮರ್ಷಿಯಲ್ ಟಚ್ ಕೊಟ್ಟು ಚಿತ್ರಗಳನ್ನ ತೆರೆಗೆ ತರ್ತಾನೆ ಇದ್ದಾರೆ. ಇವುಗಳ ಮಧ್ಯದಲ್ಲಿ ಬ್ರಿಡ್ಜ್ ಸಿನಿಮಾಗಳು ತಯಾರಾಗುತ್ತವೆ. ಅವುಗಳಂತೂ ಮಲ್ಟಿಪ್ಲೆಕ್ಸ್ಗೆ ಸೀಮಿತ ಅನ್ನೋ ಹಾಗೆ ಆಗಿದೆ. ಸಿಂಗಲ್ ಥಿಯೇಟರ್ (Cinema Theater) ಕಡೆಗೆ ಇಂತಹ ಸಿನಿಮಾಗಳು ಸುಳಿಯೋದಿಲ್ಲ ಬಿಡಿ. ಆದರೆ ಈ ಒಂದು ವ್ಯವಸ್ಥೆಯಲ್ಲಿ ಆ್ಯಕ್ಟ್ 1978 ಚಿತ್ರ ಕೊಟ್ಟ ಡೈರೆಕ್ಟರ್ ಮಂಸೋರೆ (Director Mansore) ಅವರ ಚಿತ್ರವೂ ಅದ್ಭುತ ಕಂಟೆಂಟ್ ಇಟ್ಟಕೊಂಡು ಬರುತ್ತವೆ. ಇವರ ಇನ್ನೂ ಒಂದು ಸಿನಿಮಾ ಈಗ (Movie Release Date) ರಿಲೀಸ್ಗೆ ರೆಡಿ ಆಗಿದೆ. ಇದರ ಬಗ್ಗೆ ಮಾಹಿತಿಯನ್ನ ಡೈರೆಕ್ಟರ್ ಮಂಸೋರೆ, ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.
ಮಂಸೋರೆ ಅವರ ಸಿನಿಮಾ ಜರ್ನಿ ಸೂಪರ್ ಆಗಿದೆ. ಇವರ ಕಲ್ಪನೆಯ ಸಿನಿಮಾಗಳು ಆಳವಾದ ವಿಷಯಗಳನ್ನ ಹೊಂದಿರುತ್ತವೆ. ಒಂದು ರೀತಿ ವಿಷಯಾಧಾರಿತ ಚಿತ್ರಗಳೇ ಆಗಿರುತ್ತವೆ.
ಆ್ಯಕ್ಟ್-1978 ಬಳಿಕ 19.20.21 ಸಿನಿಮಾ
ಇವರ ಈ ಹಿಂದಿನ ಸಿನಿಮಾಗಳಿಗೆ ಪ್ರಶಸ್ತಿ ಬಂದಿವೆ. ಇವರ ನಿರ್ದೇಶನದ ಆ್ಯಕ್ಟ್-1978 ಚಿತ್ರವೂ ಪ್ರಶಂಸಿಸಲ್ಪಟ್ಟಿದೆ. ಇದರ ನಂತರ ಮಂಸೋರೆ ಮತ್ತೊಂದು ಸಿನಿಮಾ ಮಾಡಿದ್ದಾರೆ.
ಇದರ ಹೆಸರು ವಿಶೇಷವಾಗಿಯೇ ಇದೆ. ನೈಜ ಘಟನೆಯನ್ನ ಆಧರಿಸಿಯೇ ಈ ಚಿತ್ರವನ್ನ ಡೈರೆಕ್ಟರ್ ಮಂಸೋರೆ ತಯಾರಿಸಿದ್ದಾರೆ. 19.20.21 ಅನ್ನುವುದು ಈ ಚಿತ್ರದ ಶೀರ್ಷಿಕೆ ಆಗಿದೆ.
ಮಂಸೋರೆ ಚಿತ್ರದಲ್ಲಿ ಮತ್ತೊಂದು ನೈಜ ಕಥೆ!
ಮೇಲ್ನೋಟಕ್ಕೆ ಇದು ಡೇಟ್ ರೀತಿಯೇ ಕಾಣುತ್ತದೆ. ಆದರೆ ಇದು ಮಾನವ ಹಕ್ಕು ಉಲ್ಲಂಘನೆ ಆದಲ್ಲಿ ಬಳಸುವ ಅಸ್ತ್ರ ಆಗಿದೆ. ಗಾಯಕಿ-ನಟಿ ಎಂ.ಡಿ.ಪಲ್ಲವಿ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ.
ರಾಜೇಶ್ ನಟರಂಗ, ಅವಿನಾಶ್, ಶೃಂಗ ಬಿ.ವಿ. ಹೀಗೆ ಅನೇಕ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಈ ಚಿತ್ರಕ್ಕೆ ಎ ಪ್ರಮಾಣ ಪತ್ರವನ್ನ ಪ್ರಾದೇಶಿಕ ಸೆನ್ಸಾರ್ ಮಂಡಳಿ ಕೊಟ್ಟಿದೆ.
19.20.21 ಚಿತ್ರ ಮಾರ್ಚ್-03ಕ್ಕೆ ರಿಲೀಸ್ ಅಂತೇ ಹೌದೇ?
ನೈಜ ಘಟನೆಯನ್ನ ಆಧರಿಸಿದ ಈ ಚಿತ್ರ ಮಾರ್ಚ್-3 ರಂದು ರಿಲೀಸ್ ಆಗುತ್ತದೆ ಅನ್ನುವ ಮಾಹಿತಿ ಇದೆ. ಇದರ ಬಗ್ಗೆ ಡೈರೆಕ್ಟರ್ ಮಂಸೋರೆ ಸ್ವತಃ ಒಂದಷ್ಟು ವಿಷಯಗಳನ್ನ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ.
ನಮ್ಮ ಚಿತ್ರವನ್ನ ಮಾರ್ಚ್-3 ರಂದು ತೆರೆಗೆ ತರಬೇಕು ಅಂದುಕೊಂಡಿದ್ದೇವೆ. ಆದರೆ ಇನ್ನೂ ಯಾವುದು ಫೈನಲ್ ಆಗಿಲ್ಲ. ಚಿತ್ರದ ಟ್ರೈಲರ್ ರಿಲೀಸ್ ವೇಳೆ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತೇವೆ.
ಡೈರೆಕ್ಟರ್ ಮಂಸೋರೆ ಸಿನಿಮಾ ಯಾವಾಗ ರಿಲೀಸ್
ಈ ವಿಚಾರವಾಗಿಯೇ ಚಿತ್ರ ವಿತರಕರ ಜೊತೆಗೆ ಮಾತುಕತೆ ನಡೆಸಿದ್ದೇವೆ. ಈ ಹಿನ್ನೆಲೆಯಲ್ಲಿ ಈಗಲೇ ಏನೂ ಹೇಳೋಕೆ ಆಗೋದಿಲ್ಲ. ಆದರೆ ನಾವು ಮಾರ್ಚ್-03 ರಂದು ಬರಬೇಕು ಅಂತಲೇ ಅಂದುಕೊಡಿದ್ದೇವೆ ಅಂತ ಮಂಸೋರೆ ವಿವರಿಸುತ್ತಾರೆ.
19.20.21 ಸಿನಿಮಾವನ್ನ ರಾಜ್ಯಾದ್ಯಂತ ರಿಲೀಸ್ ಮಾಡುತ್ತಿದ್ದೇವೆ. ಮಲ್ಟಿಪ್ಲೆಕ್ಸ್ ನಲ್ಲಿ ಕುಳಿತು ಈ ಚಿತ್ರವನ್ನ ಎಲ್ಲ ಕಡೆಯ ಜನ ಕೂಡ ನೋಡಬಹುದು. ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿ ಹೀಗೆ ನಮ್ಮ ಸಿನಿಮಾ ಇಲ್ಲಿಯ ಮಲ್ಟಿಪ್ಲೆಕ್ಸ್ನಲ್ಲಿ ತೆರೆಗೆ ಬರುತ್ತಿದೆ ಅಂತಲೇ ಮಂಸೋರೆ ಹೇಳುತ್ತಾರೆ.
ಡೈರೆಕ್ಟರ್ ಮಂಸೋರೆ ಚಿತ್ರಕ್ಕೂ ಕಮರ್ಷಿಯಲ್ ಟಚ್
ಮಂಸೋರೆ ಅವರ ಸಿನಿಮಾದಲ್ಲಿ ವಿಷಯ ಇದ್ದೇ ಇರುತ್ತದೆ. ಇವರ ಸಿನಿಮಾಗಳನ್ನ ನೋಡೋಕೆ ಹೋದ್ರೆ, ಅಲ್ಲಿ ಎಲ್ಲವೂ ಇರುತ್ತದೆ. ನೈಜ ಘಟನೆಯ ಸಿನಿಮ್ಯಾಟಿಕ ಚಿತ್ರಣವೂ ದೊರೆಯುತ್ತದೆ.
ಇದನ್ನೂ ಓದಿ: PM Narendra Modi-Yash: ಪ್ರಧಾನಿ ನರೇಂದ್ರ ಮೋದಿಗೆ ರಾಕಿ ಭಾಯ್ ಸ್ಪೆಷಲ್ ಡಿಮ್ಯಾಂಡ್! ನಟ ಯಶ್ ಬೇಡಿಕೆ ಏನು?
19.20.21 ಚಿತ್ರವೂ ಅದೇ ಸಾಲಿನ ಅಸಲಿ ಕಥೆಯನ್ನ ಹೇಳೋಕೆ ಬರುತ್ತಿದೆ. ಚಿತ್ರ ಬರುವ ಮುನ್ನ ಟ್ರೈಲರ್ ರಿಲೀಸ್ ಆಗಿ ಚಿತ್ರದ ಇನ್ನಷ್ಟು ಝಲಕ್ ಕೊಡಲಿದೆ ಅಂತ ಈಗ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ