ಸ್ಯಾಂಡಲ್ವುಡ್ ನಟ ಹಾಗೂ ನಿರ್ದೇಶಕ ಗುರುಪ್ರಸಾದ್ (Guruprasad arrest) ಅವರನ್ನು ಬೆಂಗಳೂರು ಪೊಲೀಸರು (Bengaluru police) ಅರೆಸ್ಟ್ ಮಾಡಿದ್ದಾರೆ. ಕನ್ನಡ ಸಿನಿಮಾ ಮಠ ಖ್ಯಾತಿಯ ಗುರುಪ್ರಸಾದ್ ಅವರನ್ನು ಬೆಂಗಳೂರು ದಕ್ಷಿಣದ ಗಿರಿನಗರದ ಪೊಲೀಸರು (Police) ಅರೆಸ್ಟ್ ಮಾಡಿದ್ದಾರೆ. ಚೆಕ್ ಬೌನ್ಸ್ (Cheque Bounce) ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಪ್ರಸಾದ್ ಅರೆಸ್ಟ್ ನಡೆದಿದೆ. ನಟನನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಯಾಂಡಲ್ ವುಡ್ ನಿರ್ದೇಶಕ ಗುರು ಪ್ರಸಾದ್ ಬಂಧನವಾಗಿದ್ದು ಚೆಕ್ ಬೌನ್ಸ್ ಪ್ರಕರಣದಲ್ಲಿ ನಟನನ್ನು ಬಂಧಿಸಲಾಗಿದೆ. ಮಠ ಸಿನಿಮಾದಿಂದಲೇ ಗುರು ಪ್ರಸಾದ್ ನಿರ್ದೇಶಕರಾಗಿ ಖ್ಯಾತಿ ಪಡೆದಿದ್ದರು.
ಶ್ರೀನಿವಾಸ್ ಅನ್ನೋ ವ್ಯಕ್ತಿಗೆ ಹಣ ಕೊಡೋ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಕೋರ್ಟ್ಗೆ ಹಾಜರಾಗದ ಹಿನ್ನಲೆ ಎನ್ಬಿಡಬ್ಲೂ ಜಾರಿಯಾಗಿತ್ತು.
ಎನ್ ಬಿಡಬ್ಲೂ ಜಾರಿ ಹಿನ್ನಲೆ ಸದ್ಯ ಗಿರಿ ನಗರ ಪೊಲೀಸರು ಗುರುಪ್ರಸಾದ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ವಂಚನೆ ಹಾಗು ಮೋಸ ಮಾಡಿರೋ ಆರೋಪ ಹಿನ್ನಲೆ ಕೇಸ್ ದಾಖಲಾಗಿತ್ತು. ಸದ್ಯ ವಿಚಾರಣೆ ನಿರ್ದೇಶಕರನ್ನು ಮಾಡುತ್ತಿದ್ದು ಬಳಿಕ ಪೊಲೀಸರು ಕೋರ್ಟ್ ಮುಂದೆ ಹಾಜರು ಪಡಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ