ಸ್ಯಾಂಡಲ್‌ವುಡ್‌ನಲ್ಲಿ ಡೇರ್ (Daredevil Musthafa Movie) ಡೆವಿಲ್ ಮುಸ್ತಾಫಾ ಸಿನಿಮಾ ವಿಶೇಷವಾಗಿಯೇ ಗಮನ ಸೆಳೆಯುತ್ತಿದೆ. ಈ ಚಿತ್ರದ ಕಥೆ ವಿಶೇಷವಾಗಿಯೆ ಇದೆ. ಇದರ ನಿರ್ಮಾಪಕರೂ ಸ್ಪೆಷಲ್ ಆಗಿದ್ದಾರೆ. ಇದೇ (Director D Satya Prakash) ವಾರ ಈ ಚಿತ್ರ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಈ ಚಿತ್ರ ನೋಡಿರೋ ರಾಮಾ ರಾಮಾ ರೇ ಡೈರೆಕ್ಟರ್ ಸತ್ಯಪ್ರಕಾಶ್ ಸಿನಿಮಾ ಕುರಿತು ಮಾತನಾಡಿದ್ದಾರೆ. ತಮ್ಮದೇ (Daredevil Musthafa Latest News) ರೀತಿಯಲ್ಲಿ ಈ ಚಿತ್ರಕ್ಕೆ ವಿಶ್ ಕೂಡ ಮಾಡಿದ್ದಾರೆ. ಸಿನಿಮಾ ಪ್ರೇಮಿಗಳು ಈ ಚಿತ್ರವನ್ನ ಒಪ್ಪಿಕೊಳ್ಳುವ ಭರವಸೆ ಜಾಸ್ತಿ ಇದೆ. ಈ ಚಿತ್ರದಲ್ಲಿರೋ ಕಥೆ ತುಂಬಾನೆ ಸ್ಪೆಷಲ್ ಆಗಿದೆ. ಇದರಲ್ಲಿರೋ ಕಂಟೆಂಟ್‌ನಲ್ಲಿ ಫನ್ ಕೂಡ ಇದೆ.
ಇದನ್ನ ಬೆಳ್ಳಿ ತೆರೆ ಮೇಲೆ ನೋಡೋದೇ (Sandalwood Film Latest Update) ಚಂದ ಅಂತಲೇ ಈ ಸಿನಿಮಾ ಮಾಡಲಾಗಿದೆ.
ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ಸ್ಪೆಷಲ್ ಕಥೆಯನ್ನ ಹೊಂದಿದೆ. ಈ ಸಿನಿಮಾದ ಸ್ಪೆಷಾಲಿಟಿ ಏನು ಗೊತ್ತೆ? ಹೌದು, ಇದು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆಯನ್ನ ಆಧರಿಸಿದಿದೆ. ಅಬಚೂರಿನ ಪೋಸ್ಟ್ ಆಫೀಸ್ ಪುಸ್ತಕದಲ್ಲಿ ಬರುವ ಒಂದು ಕಥೇನೆ ಇಲ್ಲಿ ಸಿನಿಮಾ ಆಗಿದೆ.
ಡೇರ್‌ಡೆವಿಲ್ ಮುಸ್ತಾಫಾ ಚಿತ್ರದ ಡೈರೆಕ್ಟರ್ ಯಾರು?
ಇದೇ ಕಥೆಯನ್ನೆ ಇಟ್ಟುಕೊಂಡು ಡೈರೆಕ್ಟರ್ ಶಶಾಂಕ್ ಸೋಗಲ್ ಸಿನಿಮಾ ಮಾಡಿದ್ದಾರೆ. ಇದಕ್ಕೂ ಹೆಚ್ಚಾಗಿ ಈ ಚಿತ್ರದ ನಿರ್ಮಾಪರ ಬಗ್ಗೆ ಹೇಳಲೇಬೇಕು. ನಿಜ, ಈ ಚಿತ್ರದ ನಿರ್ಮಾಪಕರು ಬೇರೆ ಯಾರೋ ಅಲ್ಲ. ಪೂರ್ಣಚಂದ್ರ ತೇಜಸ್ವಿ ಅವರ ಓದುಗರೇ ಆಗಿದ್ದಾರೆ.
ಓದುಗರೇ ನಿರ್ಮಿಸಿದ ಡೇರ್‌ಡೆವಿಲ್ ಸಿನಿಮಾ
ನೂರಕ್ಕು ಹೆಚ್ಚು ಓದುಗರೇ ಸೇರಿ ಡೇರ್‌ಡೆವಿಲ್ ಮುಸ್ತಾಫಾ ಚಿತ್ರವನ್ನ ನಿರ್ಮಿಸಿದ್ದಾರೆ. ಈ ಚಿತ್ರ ಇದೇ ವಾರ 19 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ವಿಶೇಷವಾಗಿ ಚಿತ್ರ ಎಲ್ಲರ ಮನಸನ್ನ ಕದಿಯೋದು ಗ್ಯಾರಂಟಿ ಅಂತಲೇ ಹೇಳಬಹುದು.
ಓದುಗರು ಇಷ್ಟಪಡೋ ಅದ್ಭುತ ಕನ್ನಡ ಸಿನಿಮಾ
ಅದರಲ್ಲೂ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಓದಿದವ್ರು ಈ ಸಿನಿಮಾ ನೋಡಿದ್ರೆ, ಇನ್ನಷ್ಟು ಖುಷಿಪಡ್ತಾರೆ ಅಂತಲೇ ಹೇಳಬಹುದು. ಹಾಗೆ ಕನ್ನಡದಲ್ಲಿ ರಾಮಾ ರಾಮಾ ರೇ ದಂತಹ ಸಿನಿಮಾ ಕೊಟ್ಟ ಡೈರೆಕ್ಟರ್ ಸತ್ಯ ಪ್ರಕಾಶ್ ಈ ಸಿನಿಮಾ ಬಗ್ಗೆ ಹೇಳಿದ್ದಾರೆ.
ಡೇರ್ ಡೆವಿಲ್ ಡೈರೆಕ್ಟರ್ ಹೊಗಳಿದ ಡೈರೆಕ್ಟರ್ ಸತ್ಯ ಪ್ರಕಾಶ್
ಡೇರ್ ಡೆವಿಲ್ ಮುಸ್ತಾಫಾ ಒಂದು ಅಪ್ಪಟ ಕನ್ನಡ ಚಿತ್ರ, ಶಶಾಂಕ್ ಸೋಗಲ್ ಅವರ ನಿರ್ದೇಶನ
ತುಂಬಾ ಗಟ್ಟಿಯಾಗಿದೆ. ಎಲ್ಲರೂ ನೋಡಲೆಬೇಕಾದ ಸಿನಿಮಾ. ಹಾಗೇ ದೊಡ್ಡ ಥ್ಯಾಂಕ್ಸ್ ನಮ್ಮ “ಪೂರ್ಣಚಂದ್ರ ತೇಜಸ್ವಿ” ಅವರಿಗೆ ಈ ತರ ಕ್ರಿಯೇಟಿವ್ ಮೈಂಡ್ಸ್‌ಗಳನ್ನ ನಿರಂತರವಾಗಿ ಇನ್ಸ್ಪೈರ್ ಮಾಡ್ತಾ ಇರೋದಕ್ಕೆ.
ಪೂರ್ಣಚಂದ್ರ ತೇಜಸ್ವಿ ಕಥೆನೇ ಈ ಚಿತ್ರಕ್ಕೆ ಆಧಾರ
ಪೂರ್ಣಚಂದ್ರ ತೇಜಸ್ವಿ ಅವರ ಕಥೆಗಳೇ ಹಾಗಿವೆ. ಯಾವುದನ್ನೇ ಓದಿದರೂ ಒಂದು ಹೊಸ ಅನುಭವ ಗ್ಯಾರಂಟಿನೇ. ಇದನ್ನ ಯಾರೂ ಅಲ್ಲಗಳೆಯಲು ಆಗೋದೇ ಇಲ್ಲ. ಅದೇ ರೀತಿ ಡೇರ್‌ಡೆವಿಲ್ ಮುಸ್ತಾಫಾ ಸಿನಿಮಾ ಕೂಡ ಸ್ಪೆಷಲ್ ಆಗಿಯೇ ಇದೆ.
ಇದನ್ನೂ ಓದಿ: Shiva Rajkumar: ಸ್ಯಾಂಡಲ್‌ವುಡ್‌ಗೆ ಶಿವಣ್ಣ ಯಾರನ್ನ ಇಂಟ್ರಡ್ಯೂಸ್ ಮಾಡ್ತಿದ್ದಾರೆ ಗೊತ್ತಾ?
ಡಾಲಿ ಧನಂಜಯ್ ಸಪೋರ್ಟ್ ಮಾಡಿರೋ ಸಿನಿಮಾ
ಇದರೊಟ್ಟಿಗೆ ಈ ಚಿತ್ರಕ್ಕೆ ಡಾಲಿ ಧನಂಜಯ್ ಕೂಡ ಸಪೋರ್ಟ್ ಮಾಡಿದ್ದಾರೆ. ಕಂಪ್ಲೀಟ್ ಹೊಸಬರೇ ಇರೋ ಈ ಚಿತ್ರದಲ್ಲಿ ತಾಜಾತನದ ಭಾವ ಇದೆ. ಹೊಸ ಹುರುಪಿನ ಹುಡುಗರ ಅದ್ಭತ ಅಭಿನಯದ ಭರವಸೆ ಕೂಡ ಇದೆ. ಒಟ್ಟಾರೆ ಒಂದು ಅದ್ಭುತ ಕಥೆ ಕನ್ನಡದ ಬೆಳ್ಳಿ ತೆರೆ ಮೇಲೆ ಬರ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ