Kannada Movie: ಹೆಸರು ಬದಲಿಸಿದ್ದೇಕೆ ಓಂ ಪ್ರಕಾಶ್ ಮಗಳು?

ಓಂ ಪ್ರಕಾಶ್ ಪುತ್ರಿ ಶ್ರಾವ್ಯ ರಾವ್ ಹೆಸರು ಬದಲಿಸಿದ್ದೇಕೆ?

ಓಂ ಪ್ರಕಾಶ್ ಪುತ್ರಿ ಶ್ರಾವ್ಯ ರಾವ್ ಹೆಸರು ಬದಲಿಸಿದ್ದೇಕೆ?

ಕನ್ನಡ ಡೈರೆಕ್ಟರ್ ಓಂ ಪ್ರಕಾಶ್ ರಾವ್ ಪುತ್ರಿ ಶ್ರಾವ್ಯ ರಾವ್ ಹೆಸರು ಬದಲಿಸಿಕೊಂಡಿದ್ದಾರೆ. ಅಥಿ ಹೆಸರಿನ ಚಿತ್ರದ ಮೂಲಕ ಸಾತ್ವಿಕಾ ಆಗಿಯೇ ಮರು ಪರಿಚಯ ಆಗುತ್ತಿದ್ದಾರೆ. ಈ ಚಿತ್ರದ ಒಂದಷ್ಟು ಇಂಟ್ರಸ್ಟಿಂಗ್ ಮ್ಯಾಟರ್ ಇಲ್ಲಿದೆ ಓದಿ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್‌ವುಡ್‌ನ ಹೆಸರಾಂತ ಚಿತ್ರ (Shravya Rao Movie Updates) ನಿರ್ದೇಶಕ ಓಂ ಪ್ರಕಾಶ್ ರಾವ್ ಮಗಳು ಮತ್ತೆ ಬಂದಿದ್ದಾರೆ. ಈ ಸಲ ತಮ್ಮ ಹೆಸರನ್ನ ಬದಲಸಿಕೊಂಡಿದ್ದಾರೆ. ಆರಂಭದಿಂದ ಹಿಡಿದು ರೋಜ್ ಸಿನಿಮಾದವರೆಗೂ (Kannada Movie Latest News) ಶ್ರಾವ್ಯ ರಾವ್ ಅಂತಲೇ ಇತ್ತು. ಆದರೆ ಇದೀಗ ಸಡನ್ ಆಗಿ ಶ್ರಾವ್ಯ ತಮ್ಮ ಹೆಸರನ್ನ ಬದಲಿಸಿಕೊಂಡಿದ್ದಾರೆ. ಆ ಹೊಸ ಹೆಸರಿನಿಂದಲೇ ಹೊಸ ಸಿನಿಮಾದಲ್ಲಿ ಪರಿಚಯ (Shravya Cinema Updates) ಆಗುತ್ತಿದ್ದಾರೆ. ಹಾಗೆ ಹೊಸ ಚಿತ್ರಕ್ಕೆ ಇಟ್ಟುಕೊಂಡ ಹೆಸರು ಸಾತ್ವಿಕ ಇದೆ. ಈ ಮೂಲಕ ಶ್ರಾವ್ಯ ರಾವ್ ಇನ್ಮುಂದೆ ಸಾತ್ವಿಕ ಅಂತಲೇ ಗುರುತಿಸಿಕೊಳ್ಳಲಿದ್ದಾರೆ. ಅಂದ್ಹಾಗೆ (Sandalwood Movie Updates) ಶ್ರಾವ್ಯ ಒಪ್ಪಿಕೊಂಡ ಆ ಚಿತ್ರದ ಹೆಸರು ಕೂಡ ಸ್ಪೆಷಲ್ ಆಗಿದೆ. ಅತಿಯಾಗಿದೆ ಅಂತಲೂ ಒಂದೊಮ್ಮೆ ಅನಿಸುತ್ತದೆ.


ಓಂ ಪ್ರಕಾಶ್ ಪುತ್ರಿ ಶ್ರಾವ್ಯ ರಾವ್ ಹೆಸರು ಬದಲಿಸಿದ್ದೇಕೆ?


ಓಂ ಪ್ರಕಾಶ್ ಪುತ್ರಿ ಸಾತ್ವಿಕ ಅಭಿನಯದ ಸಿನಿಮಾದ ಹೆಸರು ಅಥಿ ಅಂತಲೇ ಇದೆ. ಈ ಅಥಿ ಅಂದ್ರೇನೂ ಅನ್ನೋದು ರಿವೀಲ್ ಆಗಿಲ್ಲ. ಆದರೆ ಸಿನಿಮಾದ ಫೋಟೋ ಶೂಟ್ ಅಥಿಯಾಗಿಯೇ ಇದೆ. ಅಂದ್ರೆ ಸೂಪರ್ ಆಗಿಯೇ ಇದೆ ಅಂತಲೇ ಅರ್ಥ.


Sandalwood Director-Actor OM Prakash Rao Daughter Shravya Changed her Name
ಅಥಿ ಸಿನಿಮಾದ ಫೋಟೋ ಶೂಟ್ ಯಾಕೆ ಸ್ಪೆಷಲ್ ಗೊತ್ತೆ?


ಹೌದು, ಸಿನಿಮಾದ ನಿರ್ದೇಶಕರು ಅದ್ಭುತ ಐಡಿಯಾವನ್ನ ಫೋಟೋ ಶೂಟ್‌ಗಾಗಿ ಮಾಡಿದ್ದಾರೆ. ಎಲ್ಲರೂ ಸಿನಿಮಾ ಶುರು ಆಗೋ ಮುಂಚೆ ಫೋಟೋ ಶೂಟ್ ಮಾಡಿಸುತ್ತಾರೆ. ಆ ಫೋಟೋಗಳನ್ನೇ ಚಿತ್ರದ ಪ್ರಚಾರಕ್ಕೆ ಪೊಸ್ಟರ್ ರೂಪದಲ್ಲಿ ಬಳಸುತ್ತಾರೆ.




ಅಥಿ ಸಿನಿಮಾದ ಫೋಟೋ ಶೂಟ್ ಯಾಕೆ ಸ್ಪೆಷಲ್ ಗೊತ್ತೆ?


ಆದರೆ ಅಥಿ ಚಿತ್ರದ ನಿರ್ದೇಶಕ ಲೋಕೇಂದ್ರ ಸೂರ್ಯ ತಮ್ಮ ಚಿತ್ರದ ಫೋಟೋ ಶೂಟ್ ಅನ್ನ ಸ್ಪೆಷಲ್ ಆಗಿಯೇ ಪ್ಲಾನ್ ಮಾಡಿದ್ದಾರೆ. ಇದರ ಹಿಂದಿನ ಉದ್ದೇಶ ಕೂಡ ಸ್ಪೆಷಲ್ ಆಗಿದೆ. ಸಿನಿಮಾ ಪೋಸ್ಟರ್‌ನಲ್ಲಿ ಚಿತ್ರದ ಇಡೀ ಕಂಟೆಂಟ್ ಬರಲೇಬೇಕು ಅಂತ ಡೈರಕ್ಟರ್ ಲೋಕೇಂದ್ರ ಸೂರ್ಯ ಪ್ಲಾನ್ ಮಾಡಿದ್ದಾರೆ.


ಹಾಗಾಗಿಯೇ ಸಿನಿಮಾದ ಶೂಟಿಂಗ್ ಮುಗಿದ ಬಳಿಕವೇ ಚಿತ್ರದ ಫೋಟೋ ಶೂಟ್ ಮಾಡಲಾಗಿದೆ. ಚಿತ್ರದಲ್ಲಿ ಗಂಡ-ಹೆಂಡತಿ ಕಥೆ ಇದೆ. ಆದರೆ ಇಲ್ಲಿವರೆಗೂ ಇಂತಹ ಕಥೆ ಬಂದಿಲ್ಲ ಅನ್ನೋದು ಅಥಿ ಚಿತ್ರದ ನಾಯಕರೂ ಆಗಿರೋ ಡೈರೆಕ್ಟರ್ ಲೋಕೇಂದ್ರ ಸೂರ್ಯ ಅವರ ಮಾತಾಗಿದೆ.


ಅಥಿ ಸಿನಿಮಾದಲ್ಲಿ ಎಷ್ಟು ಪಾತ್ರಗಳಿವೆ ಗೊತ್ತೆ?


ಅಥಿ ಸಿನಿಮಾದಲ್ಲಿ ಒಂದೇ ರೂಮ್, ಎರಡು ಪಾತ್ರಗಳು ಇವೆ. ಇದನ್ನ ಅಷ್ಟೇ ಅದ್ಭುತವಾಗಿಯೇ ಹೇಳುವ ಕೆಲಸ ಇಲ್ಲಿ ಆಗಿದೆ ಅಂತ ಈಗ ಹೇಳಬಹುದು. ಸಿನಿಮಾದ ಪೋಟೋಗಳು ಆ ಒಂದು ಸತ್ಯದ ಝಲಕ್ ಅನ್ನ ಈಗ ಕೊಡ್ತಿವೆ ಅಂತ ಭಾವಿಸಬಹುದಾಗಿದೆ.


ಅಥಿ ಚಿತ್ರದಲ್ಲಿ ಇನ್ನೂ ಒಂದು ವಿಶೇಷ ಅಂದ್ರೆ, 10 ಕ್ಕೂ ಹೆಚ್ಚು ಸಿಂಗಲ್ ಶಾರ್ಟ್‌ಗಳು ಇವೆ. ಇದರಿಂದ ಈ ಚಿತ್ರದಲ್ಲಿ ಕಲಾವಿದರ ಅದ್ಭುತ ಪ್ರತಿಭೆಯನ್ನ ಕಾಣಬಹುದಾಗಿದೆ. ಚಿತ್ರದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಫಸ್ಟ್ ಲುಕ್ ಫೋಸ್ಟರ್ ರಿಲೀಸ್ ಮಾಡುವ ಪ್ಲಾನ್ ಕೂಡ ನಡೆಯುತ್ತಿದೆ.


ಅಥಿ ಐ ಲವ್ ಯು ಚಿತ್ರದ ಫಸ್ಟ್ ಲುಕ್ ಯಾವಾಗ?


ಅಥಿ ಐ ಲವ್ ಯು ಸಿನಿಮಾದ ಫಸ್ಟ್ ಲುಕ್ ಮೇ-13 ರಂದು ರಿಲೀಸ್ ಆಗುತ್ತದೆ. ಎಲೆಕ್ಷನ್ ಮುಗಿಯೋದನ್ನೆ ನಿರ್ದೇಶಕ ಲೋಕೇಂದ್ರ ಸೂರ್ಯ ಕಾಯುತ್ತಿದ್ದಾರೆ. ಚಿತ್ರದಲ್ಲಿ ಡೈರೆಕ್ಟರ್ ಲೋಕೇಂದ್ರ ಸೂರ್ಯ ಸಾಕಷ್ಟು ಹೊಣೆ ಹೊತ್ತಿದ್ದಾರೆ. ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಜೊತೆಗೆ ನಾಯಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.


Sandalwood Director-Actor OM Prakash Rao Daughter Shravya Changed her Name
ಅಥಿ ಸಿನಿಮಾದಲ್ಲಿ ಎಷ್ಟು ಪಾತ್ರಗಳಿವೆ ಗೊತ್ತೆ?


ಹೀಗೆ ಎಲ್ಲವನ್ನೂ ಒಬ್ರೇ ಮಾಡಿರೋ ಲೋಕೇಂದ್ರ ಸೂರ್ಯ, ಈ ಹಿಂದೆ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಸಿನಿಮಾ ಮಾಡಿದ್ದರು. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು, ಇಲ್ಲಿ ಎಲ್ಲವು ನಾಚ್ಯೂರಲ್‌ ಆಗಿಯೇ ಇತ್ತು. ಇದು ಚಲನ ಚಿತ್ರೋತ್ಸವದಲ್ಲೂ ಪ್ರದರ್ಶನ ಕಂಡು ಜನರ ಮೆಚ್ಚುಗೆ ಪಡೆದಿತ್ತು.


ಅಥಿ ಸಿನಿಮಾ ಲೋಕೇಂದ್ರ ಸೂರ್ಯ ಅವರ ಸ್ಪೆಷಲ್ ಸಿನಿಮಾ


ಲೋಕೇಂದ್ರ ಸೂರ್ಯ ಈಗಾಗಲೇ ಕುಗ್ರಾಮ ಅನ್ನುವ ಸಿನಿಮಾ ಮಾಡಿದ್ದಾರೆ. ಇದು ಕೂಡ ವಿಶೇಷವಾಗಿಯೇ ಇದೆ. ಇದು ಇನ್ನೇನು ರಿಲೀಸ್ ಕೂಡ ಆಗುತ್ತದೆ. ಇದರ ಮಧ್ಯೆ ಅಥಿ ಸಿನಿಮಾ ಮಾಡಿರೋ ಲೋಕೇಂದ್ರ ಸೂರ್ಯ ಈ ಮೂಲಕ ಮತ್ತೊಂದು ಭರವಸೆ ಮೂಡಿಸಿದ್ದಾರೆ.


ಇದನ್ನೂ ಓದಿ: Chaithra Achar: ಬ್ಲೌಸ್ ಇಲ್ಲದೇ ಸೀರೆ ಉಟ್ಟ ಚೈತ್ರಾ ಆಚಾರ್- ಓಲ್ಡ್​ ಫ್ಯಾಷನ್ ಫೋಟೋಸ್ ಸಖತ್ ವೈರಲ್


ಇನ್ನು ಈ ಚಿತ್ರಕ್ಕೆ ಅನಂತ್ ಆರ್ಯನ್ ಸಂಗೀತ ಕೊಟ್ಟಿದ್ದಾರೆ. ಸೆವನ್ ರಾಜ್ ಆರ್ಟ್ಸ್ ಈ ಚಿತ್ರವನ್ನ ನಿರ್ಮಿಸಿದೆ. ಇನ್ನುಳಿದಂತೆ ಸದ್ಯಕ್ಕೆ ಸಿನಿಮಾ ತಂಡ ಇಷ್ಟು ಮಾಹಿತಿಯನ್ನ ಹಂಚಿಕೊಂಡು ಗಮನ ಸೆಳೆಯುತ್ತಿದೆ. ಎಲೆಕ್ಷನ್ ಆದ್ಮೇಲೆ ಸಿನಿಮಾದ ಇತರ ಮಾಹಿತಿಗಳನ್ನಕೂಡ ಶೇರ್ ಮಾಡಿಕೊಳ್ಳಲಿದೆ.

top videos
    First published: