• Home
  • »
  • News
  • »
  • entertainment
  • »
  • Kantara AP Arjun Review: ಕಾಂತಾರ ಕರುನಾಡಿನ ಚಿತ್ರ ಚರಿತ್ರೆ! ಡೈರೆಕ್ಟರ್ ಎ.ಪಿ. ಅರ್ಜುನ್ ಬಣ್ಣನೆ

Kantara AP Arjun Review: ಕಾಂತಾರ ಕರುನಾಡಿನ ಚಿತ್ರ ಚರಿತ್ರೆ! ಡೈರೆಕ್ಟರ್ ಎ.ಪಿ. ಅರ್ಜುನ್ ಬಣ್ಣನೆ

ಕಾಂತಾರ ಕಂಡ ಡೈರೆಕ್ಟರ್ ಎ.ಪಿ.ಅರ್ಜುನ್ ಹೇಳಿದ್ದೇನು?

ಕಾಂತಾರ ಕಂಡ ಡೈರೆಕ್ಟರ್ ಎ.ಪಿ.ಅರ್ಜುನ್ ಹೇಳಿದ್ದೇನು?

ರಿಷಬ್ ಈ ಚಿತ್ರದಲ್ಲಿ ಮೊದಲ ಮತ್ತು ಕೊನೆಯ 20 ನಿಮಿಷ ಇಡೀ ಚಿತ್ರ ಮಂದಿರವನ್ನ ಆವರಿಸಿದ್ದಾರೆ. ಗುಳಿಗ ದೈವರೂಪಿಯಾಗಿ, ದೈವವನ್ನೆ ಮೈಮೇಲೆ ತಂದುಕೊಂಡು ಅಭಿನಯಿಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara Film) ಸಿನಿಮಾ ಕನ್ನಡಿಗರ ದಿಲ್ ಕದ್ದಿದೆ. ಸಿನಿಪ್ರೇಮಿಗಳು ಸಿನಿಮಾ ನೋಡುವ ರೀತಿ ಬೇರೆ ಇರುತ್ತದೆ. ದುಡ್ಡು ಕೊಟ್ಟ ಪ್ರೇಕ್ಷಕ ಪೈಸಾ ವಸೂಲ್ ಆಯಿತೇ ಅಂತಲೇ ಥಿಂಕ್ ಮಾಡುತ್ತಾನೆ. ಚಿತ್ರ ವಿಮರ್ಶಕರು (Film Review) ಸಿನಿಮಾದ ಆಳ-ಅಗಲ ಮತ್ತು ಓಟ ಎಲ್ಲವನ್ನೂ ಇಂಚಿಂಚು ಅಳೆದು ತೂಗಿ ನೋಡ್ತಾರೆ. ಆದರೆ ಸಿನಿಮಾ ಮೇಕರ್ ಇಲ್ಲವೇ ಸಿನಿಮಾ ಡೈರೆಕ್ಟರ್ (Film Makers) ಚಿತ್ರವನ್ನ ಅಧ್ಯಯನದ ರೂಪದಲ್ಲಿಯೆ ನೋಡುತ್ತಾರೆ. ಚಿತ್ರದ ಪಾತ್ರಗಳ ಪೋಷಣೆ, ಚಿತ್ರದಲ್ಲಿ ಕಥೆ ಹೇಳಿದ ರೀತಿ, ಒಟ್ಟು ಚಿತ್ರಕ್ಕೆ ಕೊಟ್ಟ ಟ್ರೀಟ್​ಮೆಂಟ್ ಮತ್ತು ಬಜೆಟ್ (Budget) ಹೀಗೆ ಎಲ್ಲವನ್ನೂ ನೋಡ್ತಾನೆ. ಅದೇ ರೀತಿನೇ ಕನ್ನಡದ ಕಾಂತಾರ ಸಿನಿಮಾವನ್ನ ಈಗ ಕನ್ನಡದ ಯುವ ನಿರ್ದೇಶಕ ಎ.ಪಿ.ಅರ್ಜುನ್ ತಮ್ಮದೇ ರೀತಿಯಲ್ಲಿಯೇ ನೋಡಿದ್ದಾರೆ. ಹಾಗೆ ನೋಡಿದ ಚಿತ್ರವನ್ನ ವಿಮರ್ಶೆ ಕೂಡ ಮಾಡಿದ್ದಾರೆ.


ಕಾಂತಾರ ಕಂಡ ಡೈರೆಕ್ಟರ್ ಎ.ಪಿ.ಅರ್ಜುನ್ ಹೇಳಿದ್ದೇನು?
ಕನ್ನಡ ನಾಡಿನ ಕಾಂತಾರ ಒಂದು ಅದ್ಭುತ ಸಿನಿಮಾ. ಈ ಸಿನಿಮಾ ಕಂಡ ಪರ ಭಾಷೆಯ ಜನ ಅದ್ದೂರಿ ರೆಸ್ಪಾನ್ಸ್ ಕೊಟ್ಟಿದ್ದಾರೆ. ಸಿನಿಮಾ ಮೇಕರ್​ಗಳೂ ವಾವ್ ಅಂತಲೇ ಉದ್ಘಾರ ತೆಗೆದಿದ್ದಾರೆ.


ಕನ್ನಡದಲ್ಲಿ ಇಂತಹ ಸಿನಿಮಾ ಬಂದಿದೆ ಅನ್ನೋದು ಎಲ್ಲರಿಗೂ ಆಶ್ಚರ್ಯ ಹಾಗೂ ರೋಮಾಂಚನ ಆಗಿರೋದು ಅಷ್ಟೇ ಸತ್ಯ. ಇಂತಹ ಸಿನಿಮಾ ಕೊಟ್ಟ ನಟ-ನಿರ್ದೇಶಕ ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಹೀರೋನೇ ಆಗಿ ಬಿಟ್ಟಿದ್ದಾರೆ.


Sandalwood director A.P. Arjun Talk About Kannada Kantara Movie
ದೈವದ ರೂಪಕ್ಕೆ ಮರುಳಾದ ಡೈರೆಕ್ಟರ್ ಎ.ಪಿ.ಅರ್ಜುನ್


ರಿಷಬ್ ಶೆಟ್ಟಿ ಇಲ್ಲಿವರೆಗೂ ಕೇವಲ ತುಳುನಾಡು ಮತ್ತು ಕನ್ನಡ ನಾಡಿನ ಹೀರೋ ಆಗಿದ್ದರು. ಆದರೆ ರಿಷಬ್ ಈಗ ಪ್ಯಾನ್ ಇಂಡಿಯಾ ಹೀರೋ ಆಗಿ ಬಿಟ್ಟಿದ್ದಾರೆ. ಇದಕ್ಕೆ ಆ ಗುಳಿಗ ದೈವದ ಕೃಪೆ ಅನ್ನೋದು ಅಷ್ಟೇ ಸತ್ಯ.


ಗುಳಿಗ ದೈವದ ರೂಪಕ್ಕೆ ಮರುಳಾದ ಡೈರೆಕ್ಟರ್ ಎ.ಪಿ.ಅರ್ಜುನ್
ಡೈರೆಕ್ಟರ್ ಎ.ಪಿ.ಅರ್ಜುನ್ ಕೂಡ ಕಾಂತಾರ ಸಿನಿಮಾ ನೋಡಿದ್ದಾರೆ. ತಮ್ಮದೇ ರೀತಿಯಲ್ಲಿಯೆ ಚಿತ್ರವನ್ನ ವಿಶ್ಲೇಷಿಸಿದ್ದಾರೆ. ಕಾಂತಾರ ಚಿತ್ರದಲ್ಲಿ ಗುಳಿಗ ದೇವರ ರೂಪ ತಾಳಿದ ನಟ ರಿಷಬ್ ಅಭಿನಯವನ್ನ ಕೊಂಡಾಡಿದ್ದಾರೆ. ರಿಷಬ್ ಇಲ್ಲಿ ಅದ್ಭುತವಾಗಿಯೇ ಅಭಿನಯಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.


ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಅಭಿನಯ ಅದ್ಭುತ
ರಿಷಬ್ ಈ ಚಿತ್ರದಲ್ಲಿ ಮೊದಲ ಮತ್ತು ಕೊನೆಯ 20 ನಿಮಿಷ ಇಡೀ ಚಿತ್ರ ಮಂದಿರವನ್ನ ಆವರಿಸಿದ್ದಾರೆ. ಗುಳಿಗ ದೈವರೂಪಿಯಾಗಿ, ದೈವವನ್ನೆ ಮೈಮೇಲೆ ತಂದುಕೊಂಡು ಅಭಿನಯಿಸಿದ್ದಾರೆ.


ಇದನ್ನೂ ಓದಿ: Bigg Boss Rakesh-Amulya: ತನ್ನ ಫ್ಯೂಚರ್ ಲೈಫ್ ಕನಸನ್ನು ಅಮೂಲ್ಯ ರಾಕೇಶ್​ಗೆ ಹೇಳಿದ್ದೇಕೆ? ಹೊಸ ಲವ್ ಸ್ಟೋರಿ ಶುರು?


ಕಾಂತಾರ ಕರುನಾಡಿನ ಚಿತ್ರ ಚರಿತ್ರೆ ಎಂದ ಡೈರೆಕ್ಟರ್ ಎ.ಪಿ.ಅರ್ಜುನ್
ಇಂತಹ ಈ ಚಿತ್ರ ನಿಜಕ್ಕೂ ಕರುನಾಡಿನ ಚಿತ್ರ ಚರಿತ್ರೆನೆ ಆಗಿದೆ ಎಂದು ಬಣ್ಣಿಸಿದ್ದಾರೆ. ಕಾಂತಾರ ಒಂದು ಚಿತ್ರವಲ್ಲ. ಇದು ಗುಳಿಗ ಮತ್ತು ಪಂಜುರ್ಲಿ ದೇವರ ಅದ್ಭುತ ಅನಾವರಣವೆ ಆಗಿದೆ ಅಂತಲೂ ಹೇಳಿದ್ದಾರೆ.


ಚಿತ್ರದಲ್ಲಿ ಬರುವ ಪಾತ್ರಗಳು, ಹಸಿಯಾದ ಪ್ರೀತಿ, ಕಾಂತಾರದ ಕತ್ತಲೆ ಕಾಡು, ಸದಾ ಬೈಯುವ ಅಮ್ಮ, ಚಿತ್ರದ ಬರವಣಿಗೆ, ನಟಿ ಸಪ್ತಮಿ ಗೌಡ ನೈಜ ನಟನೆ ಎಲ್ಲವೂ ಮನಸ್ಸಿನಲ್ಲಿ ಇಳಿಯುತ್ತವೆ ಅಂತಲೂ ಎ.ಪಿ.ಅರ್ಜುನ್ ಅನುಭವ ಹಂಚಿಕೊಂಡಿದ್ದಾರೆ.


ಕಾಂತಾರ ಸಿನಿಮಾ ತಂಡಕ್ಕೆ Hats Off ಹೇಳಿದ ಡೈರೆಕ್ಟರ್
ಕಾಂತಾರ ಚಿತ್ರದ ಕ್ಯಾಮೆರಾ ವರ್ಕ್, ಕಾಂತಾರ ಚಿತ್ರದ ಸಂಗೀತ, ಸಾಹಸ ದೃಶ್ಯಗಳು ಚಿತ್ರಕ್ಕೆ ಇನ್ನೊಂದು ಬಲವೇ ಆಗಿವೆ. ಇಂತಹ ಚಿತ್ರ ಕೊಟ್ಟ ರಿಷಬ್ ಮತ್ತು ಅವರ ಟೀಮ್​ ಗೆ ಹಾಗೂ ಚಿತ್ರ ನಿರ್ಮಿಸಿದ ಹೊಂಬಾಳೆಗೆ Hats Off ಅಂತಲೂ ಡೈರೆಕ್ಟರ್ ಎ.ಪಿ.ಅರ್ಜುನ್ ಹೇಳಿದ್ದಾರೆ.


ಇದನ್ನೂ ಓದಿ: Actress Ashwini: ಕಾಂತಾರ ನಟಿಯನ್ನು ನೋಡಿ ಎರಡೂ ಕಡೆ ಮೂಗು ಚುಚ್ಚಿಸಿಕೊಂಡ ಗಟ್ಟಿಮೇಳ ನಟಿ


ಪ್ರೀತಿ-ಪ್ರೇಮ್ ಕಥೆಗಳನ್ನ, ಆ್ಯಕ್ಷನ್ ಸಿನಿಮಾವನ್ನ ಮಾಡಿರೋ ಎ.ಪಿ.ಅರ್ಜುನ್ , ಕಾಂತಾರ ಸಿನಿಮಾ ನೋಡಿ ಹೊಸ ಅನುಭವ ಪಡೆದಿದ್ದಾರೆ. ಅದನ್ನ ಬರಹದ ಮೂಲಕ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.

First published: