• Home
  • »
  • News
  • »
  • entertainment
  • »
  • Rachita Ram: 10 ವರ್ಷದ ಬಳಿಕ ಜೀ ಕುಟುಂಬಕ್ಕೆ ಮರಳಿದ ರಚ್ಚು, ಇದಕ್ಕೂ ಒಂದು ಬಲವಾದ ಕಾರಣ ಇದೆ!

Rachita Ram: 10 ವರ್ಷದ ಬಳಿಕ ಜೀ ಕುಟುಂಬಕ್ಕೆ ಮರಳಿದ ರಚ್ಚು, ಇದಕ್ಕೂ ಒಂದು ಬಲವಾದ ಕಾರಣ ಇದೆ!

ನಟಿ ರಚಿತಾ ರಾಮ್​

ನಟಿ ರಚಿತಾ ರಾಮ್​

ಹೌದು, ರಚಿತಾ ರಾಮ್​ ಜೀ ಕನ್ನಡಕ್ಕೆ ಬಂದಿದ್ದಾರೆ. ಅದಕ್ಕೂ ಒಂದು ಕಾರಣವಿದೆ. ಕಲರ್ಸ್ ವಾಹಿನಿಯ ಮಜಾ ಭಾರತ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಹಲವು ಸೀಸನ್ ಗಳನ್ನು ನಡೆಸಿಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್, ಇದೀಗ ಜೀ ಕನ್ನಡ ವಾಹಿನಿಗೆ ಬಂದಿದ್ದಾರೆ.

  • Share this:

ಸ್ಯಾಂಡಲ್‌ವುಡ್(Sandalwood)ನಲ್ಲಿ ಅತ್ಯಂತ ಬ್ಯುಸಿ(Busy)ಯಾಗಿರೋ ನಟಿಮಣಿ ಅಂದರೆ ರಚಿತಾ ರಾಮ್(Rachita Ram). ಅಜಯ್ ರಾವ್(Ajay Rao) ರಿಂದ ಆರಂಭಿಸಿ ಅಪ್ಪು(Appu) ತನಕ ಎಲ್ಲ ಸ್ಟಾರ್ ಗಳ ಜೊತೆ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚ್ತಿರೋ ಗುಳಿಕೆನ್ನೆಯ ಬೆಡಗಿ, ಈ ವರ್ಷ ಸಖತ್ ಹಾಟ್ ಹಾಡುಗಳಲ್ಲೂ ಕಾಣಿಸಿಕೊಳ್ಳೋ ಮೂಲಕ ಮತ್ತಷ್ಟು ಬೇಡಿಕೆ ಹೆಚ್ಚಿಸಿ ಕೊಂಡಿದ್ದಾರೆ. ಸ್ಯಾಂಡಲ್​ವುಡ್(Sandalwood)​ನಲ್ಲಿ ಡಿಂಪಲ್​ ಕ್ವೀನ್​ ರಚಿತಾ ರಾಮ್​(Dimple Queen Rachita Ram) ಅವರದ್ದೇ ಸುದ್ದಿ. ಸದ್ಯಕ್ಕೆ ರಚ್ಚು ಟಾಕ್​ ಆಫ್​ ದಿ ಟೌನ್​(Talk of The Town) ಆಗಿದ್ದಾರೆ.  ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ (Rachita Ram)  ಅಭಿಮಾನಿಗಳ ಮೆಚ್ಚಿನ ತಾರೆ. ಈ ಡಿಂಪಲ್ ಕ್ವೀನ್ ಹೋದಲ್ಲಿ ಬಂದಲ್ಲಿ ಎಲ್ಲಾ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ರಚಿತಾ ರಾಮ್​ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ರಚಿತಾ ಅಭಿನಯದ ‘ಏಕ್​ ಲವ್​ ಯಾ’(Ek Love Ya) ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಇದರ ಮಧ್ಯೆ ರಚ್ಚು ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ. ಯಾವದಪ್ಪ ಆ ವಿಚಾರ ಅಂತೀರಾ? ಮುಂದೆ ನೋಡಿ..


ಜೀ ಕನ್ನಡಕ್ಕೆ ಬಂದ ಡಿಂಪಲ್​ ಕ್ವೀನ್​ ರಚಿತಾ!


ಹೌದು, ರಚಿತಾ ರಾಮ್​ ಜೀ ಕನ್ನಡಕ್ಕೆ ಬಂದಿದ್ದಾರೆ. ಅದಕ್ಕೂ ಒಂದು ಕಾರಣವಿದೆ. ಕಲರ್ಸ್ ವಾಹಿನಿಯ ಮಜಾ ಭಾರತ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಹಲವು ಸೀಸನ್ ಗಳನ್ನು ನಡೆಸಿಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್, ಇದೀಗ ಜೀ ಕನ್ನಡ ವಾಹಿನಿಗೆ ಬಂದಿದ್ದಾರೆ. ಸದ್ಯದಲ್ಲೇ ಶುರುವಾಗಲಿರುವ ಡ್ರಾಮಾ ಜ್ಯೂನಿಯರ್ಸ್ ಸೀಸನ್ 4ರಲ್ಲಿ ರಚಿತಾ ಜಡ್ಜ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಸದ್ದಿಲ್ಲದೇ ರಚಿತಾ ರಾಮ್ ಅವರ ಪ್ರೋಮೋ ಶೂಟಿಂಗ್ ಕೂಡ ವಾಹಿನಿ ಮಾಡಿದೆ. ಈ ಹಿಂದೆ ರವಿಚಂದ್ರನ್​ ಅವರ ಪ್ರೋಮೋ ಸಖತ್​ ಸದ್ದು ಮಾಡಿತ್ತು.


ಇದನ್ನೂ ಓದಿ: ಫೇಸ್​ಬುಕ್​ ಹೊಸ ಅಕೌಂಟ್​ ತೆರೆದ ರಾಧಿಕಾ.. ಇನ್ಮುಂದೆ ಫ್ಯಾನ್ಸ್​ಗಳಿಗೆ ಅಲ್ಲೇ ಸಿಕ್ತಾರಂತೆ!


ಡ್ರಾಮಾ ಜೂನಿಯರ್ಸ್ 4ರಲ್ಲಿ ಜಡ್ಜ್​ಗಳು ಚೇಂಜ್​!


ಕಳೆದ ಮೂರು ಸೀಸನ್ ಗಳಲ್ಲಿ ಹಿರಿಯ ನಟಿ ಲಕ್ಷ್ಮೀ, ಮುಖ್ಯಮಂತ್ರಿ ಚಂದ್ರು ಹಾಗೂ ವಿಜಯ ರಾಘವೇಂದ್ರ ನಿರ್ಣಾಯಕರಾಗಿದ್ದರು. ಈ ಬಾರಿ ಈ ಮೂವರು ಜಡ್ಜ್ ಆಗಿ ಇರುವುದಿಲ್ಲ ಎನ್ನುವ ಸುದ್ದಿಯಿದೆ. ರವಿಚಂದ್ರನ್, ರಚಿತಾ ರಾಮ್ ಮತ್ತು ಇನ್ನೋರ್ವ ಖ್ಯಾತ ಕಲಾವಿದರು ಈ ಸ್ಥಾನವನ್ನು ತುಂಬಲಿದ್ದಾರೆ. ಈಗಾಗಲೇ ರವಿಚಂದ್ರನ್​ ಅವರನ್ನು ಅಧಿಕೃತವಾಗಿ ರಿವೀಲ್ ಮಾಡಲಾಗಿದೆ. ರವಿಚಂದ್ರನ್​ ಅವರನ್ನು ಕಿಡ್ನಾಪ್​ ಮಾಡುವ ರೀತಿಯಲ್ಲಿ ಪ್ರೋಮೋ ರಿಲೀಸ್​ ಆಗಿತ್ತು. ಈ ಪ್ರೋಮೋ ಸಖತ್​ ವೈರಲ್​ ಕೂಡ ಆಗಿತ್ತು.


ಇದನ್ನೂ ಓದಿ: ರಕ್ಷಿತ್​ ಶೆಟ್ಟಿ ಜೊತೆ ಇದೇ ಕಾರಣಕ್ಕೆ ಬ್ರೇಕಪ್​, 4 ವರ್ಷಗಳ ಬಳಿಕ ಸತ್ಯ ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ!


ಹೈದಾರಾಬಾದ್​​ನಲ್ಲಿ ರಚಿತಾ ರಾಮ್​  ಪ್ರೋಮೋ ಶೂಟ್​!


ರೋಮೋ ಚಿತ್ರಖ್ಯಾತಿಯ ಶೇಖರ್ ಹೈದರಾಬಾದ್ ವಿಮಾನ ನಿಲ್ದಾಣ, ರಾಮೋಜಿರಾವ್ ಫಿಲ್ಮಸಿಟಿಯಲ್ಲಿ ರಚಿತಾ ರಾಮ್ ಇರುವ ಪ್ರೋಮೋವನ್ನು ಚಿತ್ರೀಕರಿಸಿದ್ದಾರೆ.  ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಈ ಭಾಗದ ಚಿತ್ರೀಕರಣ ನಡೆದಿದೆ. ರಚಿತಾ ರಾಮ್ ಜೀ ಕನ್ನಡ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಇದೇ ಮೊದಲೇನೂ ಅಲ್ಲ. ಹತ್ತು ವರ್ಷಗಳ ಹಿಂದೆ ಪ್ರಸಾರವಾದ ‘ಅರಸಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಜೀ ಕುಟುಂಬದ ಮೂಲಕವೇ ಹೆಸರು ಮಾಡಿದ ರಚಿತಾ ಮತ್ತೆ ಮರಳಿ ಜೀ ಕನ್ನಡಕ್ಕೆ ಬಂದಿದ್ದಾರೆ. 10 ವರ್ಷಗಳ ಬಳಿಕ ಜೀ ಕನ್ನಡ ಕುಟುಂಬಕ್ಕೆ ಸೇರಿಕೊಂಡಿದ್ದಾರೆ.

Published by:Vasudeva M
First published: