ಚಾಲೆಂಜಿಂಗ್ ಸ್ಟಾರ್ ಇಂದು ಹುಟ್ಟುಹಬ್ಬದ ಸಂಭ್ರಮಲ್ಲಿದ್ದಾರೆ. 44ನೇ ವಸಂತಕ್ಕೆ ಕಾಲಿಟ್ಟಿರುವ ನಟಿನಿಗೆ ಸ್ಯಾಂಡಲ್ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಬರ್ತ್ ಡೇಗೆ ಶುಭ ಕೋರುತ್ತಿದ್ದಾರೆ. ಕನ್ನಡ ಸಿನಿರಂಗದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ನಟ ದರ್ಶನ್ ಎಂದರೆ ತಪ್ಪಾಗದು. ಪ್ರತಿ ವರ್ಷ ದರ್ಶನ್ಅವರ ಹುಟ್ಟುಹಬ್ಬಕ್ಕೆ ಕೆಲವು ದಿನಗಳು ಇರುವಾಗಲೇ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಡಿಬಾಸ್ ಹೆಸರಲ್ಲಿ ಸಂಭ್ರಮಿಸೋಕೆ ಆರಂಭಿಸುತ್ತಾರೆ. ಸತತವಾಗಿ ಹಲವಾರು ದಿನಗಳು ದರ್ಶನ್ ಅವರ ಹುಟ್ಟುಹಬ್ಬದ ವಿಷಯ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿರುತ್ತದೆ. ಇನ್ನು ಈ ಸಲ ದರ್ಶನ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಜೊತೆಗೆ ಅವರು ಬೆಂಗಳೂರಿನಲ್ಲಿ ಇರುವುದೂ ಇಲ್ಲ. ಈ ಹಬ್ಬೆ ಈ ಹಿಂದೆ ಫೇಸ್ಬುಕ್ ಲೈವ್ ಬಂದಾಗ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು,.
ಇನ್ನು ಇಂದು ದರ್ಶನ್ ಅವರ ಹುಟ್ಟುಹಬ್ಬ. ಬಾಸ್ ಪರ್ವ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಅದನ್ನು ಆಚರಿಸುತ್ತಿದ್ದಾರೆ. ಈಗಾಗಲೇ ಡಿಬಾಸ್ ದರ್ಶನ್ ಅವರ ಹುಟ್ಟುಹಬ್ಬದ ವಿಷಯ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದೆ.
ರಾಬರ್ಟ್ ಟೀಸರ್ ರಿಲೀಸ್
ಇಂದು ಬೆಳಿಗ್ಗೆ 10-05ಕ್ಕೆ ರಾಬರ್ಟ್ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ. ಮಾರ್ಚ್ 11ಕ್ಕೆ ರಾಬರ್ಟ್ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಆಗಲಿದ್ದು, ಟ್ರೇಲರ್ ಸಹ ಇಂದು ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
Thank you @harimonium sir 🙏🙏#ChallengingStar #BoxOfficeSulthan #DBoss 's #Roberrt Trailer from today 10:05 AM 💥#RoberrtTrailerRoarOnFeb16
https://t.co/IKwWnRKH9C @dasadarshan @TharunSudhir @UmapathyFilms @StarAshaBhat @ArjunJanyaMusic @umap30071 @Dcompany171 @harimonium https://t.co/nkNDRL0T1L
— aanandaaudio (@aanandaaudio) February 15, 2021
ಇದನ್ನೂ ಓದಿ: ರಾಜಕುಮಾರಿಯ ಲುಕ್ನಲ್ಲಿ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ
ವಿಶೇಷ ಹಾಡು ರಿಲೀಸ್
ದರ್ಶನ್ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳು ವಿಶೇಷ ಹಾಡೊಂದನ್ನು ಬಿಡುಗಡೆ ಮಾಡಿ ಅವರ ಅಭಿಮಾನ ಮೆರೆದಿದ್ದಾರೆ. ಬಾಕ್ಸ್ ಆಫೀಸ್ ಸುಲ್ತಾನ ಎಂಬ ಹೆಸರಿನ ಹಾಡನ್ನು ಅವರ ಅಭಿಮಾನಿ ಸುಪ್ರೀತ್ ಗಾಂಧಾರ ಹಾಡಿದ್ದಾರೆ. ನಟ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ ರಾಬರ್ಟ್ ಗಲ್ಲಾಪೆಟ್ಟಿಗೆಯಲ್ಲಿ ಧೂಳಿಪಟ ಮಾಡಲಿದೆ ಎಂದು ಹಾಡಿರುವ ಹಾಡು ಡಿ ಬಾಸ್ ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಕಾಮನ್ ಡಿಪಿ ಸಂಭ್ರಮ
ಇನ್ನು ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬಕ್ಕೆಂದು ವಿಶೇಷವಾಗಿ ವಿನ್ಯಾಸ ಮಾಡಿರುವ ಕಾಮನ್ ಡಿಪಿ ಈಗಾಗಲೇ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದಿದೆ. ದರ್ಶನ್ ಅವರ ವನ್ಯಜೀವಿ ಪ್ರೇಮ ಮೆರೆಯುವ ಈ ಡಿಪಿಗೆ ನಟ ದರ್ಶನ್ ಕೂಡ ಮನಸೋತಿದ್ದಾರೆ. ಈಗಾಗಲೇ ಈ ಕಾಮನ್ ಡಿಪಿ ಅವರ ಅಭಿಮಾನಿಗಳ ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ