ದಿಲ್ ಮೆ ರಹೇಗಾ ಹೈ ಡೇರ್‌ಡೆವಿಲ್ (Daredevil Musthafa Review) ಮುಸ್ತಾಫಾ. ಹೌದು, ಈ ಒಂದು ಅಭಿಪ್ರಾಯ ಡೇರ್‌ಡೆವಿಲ್ ಮುಸ್ತಾಫಾ ಚಿತ್ರ ನೋಡಿ ಹೊರ ಬಂದ ಪ್ರತಿಯೊಬ್ಬರಿಗೂ ಫೀಲ್ ಆಗುತ್ತದೆ. ನೋಡದೇ (Daredevil Musthafa Film Story) ಇರೋರಿಗೂ ಇದು ಒಂದು ರೀತಿ ಸ್ಪೂರ್ತಿ ಆಗುತ್ತದೆ. ಸಿನಿಮಾ ನೋಡಬೇಕು ಅನ್ನುವ ಭಾವನೆಯನ್ನ ಕೂಡ ಮೂಡಿಸುತ್ತಿದೆ. ಇದೇ ಚಿತ್ರವನ್ನ ಕಥೆಗಾರ ಪೂರ್ಣಚಂದ್ರ (Sandalwood Cinema Review) ತೇಜಸ್ವಿ ನೋಡಿದ್ರೆ, ನಿಜಕ್ಕೂ ತುಂಬಾ ಖುಷಿಪಡ್ತಾಯಿದ್ದರು. ಅವರಿಲ್ಲ ಅನ್ನೋ ಕಾರಣಕ್ಕೋ ಏನೋ, ಈ ಚಿತ್ರ ಓದುಗರಿಗೆ ಇನ್ನಷ್ಟು ಆಪ್ತವಾಗುತ್ತದೆ. ಚಿತ್ರದ ಡೈರೆಕ್ಟರ್ (Daredevil Musthafa Updates) ಶಶಾಂಕ್ ಸೋಗಲ್ ನಿಜಕ್ಕೂ ಒಂದು ಒಳ್ಳೆ ಸಿನಿಮಾ ಮಾಡಿದ್ದಾರೆ.
ದಿಲ್ ಮೆ ರಹೇಗಾ ಹೈ ಡೇರ್‌ಡೆವಿಲ್ ಮುಸ್ತಾಫಾ
ಪೂರ್ಣಚಂದ್ರ ತೇಜಸ್ವಿ ಬರೆದ ಕಥೆಯನ್ನ ಇಲ್ಲಿ ಸಿನಿಮಾ ಮಾಡಿರೋ ವಿಚಾರ ಎಲ್ಲರಿಗೂ ಗೊತ್ತಿದೆ. ಆ ಕಥೆಯನ್ನ ಓದಿ ಸಿನಿಮಾ ನೋಡಲು ಹೋದ್ರೆ, ನಿಮಗೆ ಕಥೆಯ ಅನುಭವ ಬೇರೆ ಮತ್ತು ಸಿನಿಮಾ ಅನುಭವವೇ ಬೇರೆ ಅನ್ನೋ ವ್ಯತ್ಯಾಸ ಗೊತ್ತಾಗುತ್ತದೆ.
ಒಂದೇ ಕಥೆಯನ್ನ ಎರಡು ರೀತಿಯಲ್ಲಿ ನೋಡಿದ ಖುಷಿ ನಿಮ್ಮದಾಗುತ್ತದೆ. ಒಂದು ವೇಳೆ ಕಥೆ ಓದದೇ ಇರೋರು ಈ ಚಿತ್ರ ನೋಡಿದ್ರೆ, ಇಲ್ಲಿ ಇವರಿಗೆ ಒಂದು ಒಳ್ಳೆ ಸಿನಿಮಾ ನೋಡಿದ ಅನುಭವ ಆಗುತ್ತದೆ.
ಮೋಹಕ ಮಲೆನಾಡಲ್ಲಿ ಮುಸ್ತಾಫಾ ಫೀಲ್ ಗುಡ್ ಕಥೆ
ಮಲೆನಾಡಿನ ಮೋಹಕ ಮತ್ತು ಅದ್ಭುತ ತಾಣಗಳಲ್ಲಿ ತೆಗೆದ ಡೇರ್‌ಡೆವಿಲ್ ಮುಸ್ತಾಫಾ ಫೀಲ್ ಗುಡ್ ಸಿನಿಮಾ ಆಗಿದೆ. ಇದನ್ನ ನೋಡ್ತಾ ನೋಡ್ತಾ ಹೋದಂತೆ ಅಬಚೂರಿನಲ್ಲಿಯೇ ಇದ್ದೇವೆ ಅನ್ನುವ ಭಾವನೆ ಮೂಡುತ್ತದೆ. ಎಲ್ಲೂ ನಿಮಗೆ ಈ ಕಾಲ ಘಟ್ಟದ ಛಾಯೆ ಕೂಡ ಸಿಗೋದಿಲ್ಲ. ಎಲ್ಲವೂ ತೇಜಸ್ವಿ ಕಂಡ ಆ ಅಬಚೂರು ಚಿತ್ರ ರೂಪದಲ್ಲಿ ದೊರೆಯುತ್ತದೆ.
ಡೇರ್‌ಡೆವಿಲ್ ಮುಸ್ತಾಫಾ ಒಂದು ಅದ್ಭುತ ಕಥೆಯ ಸಿನಿಮಾ ಅನ್ನೋದು ಅಷ್ಟೇ ಸತ್ಯ. ಇಲ್ಲಿ ಭಾವೈಕತೆಯ ಸಾರವೂ ಇದೆ. ಆದರೆ ಎಲ್ಲೂ ಇದೊಂದು ಹಿಂದೂ-ಮುಸ್ಲಿಂ ಕಥೆ ಅಂತ ಅನಿಸಿದೋದೇ ಇಲ್ಲ. ಅಷ್ಟು ಸೊಗಸಾಗಿಯೇ ಚಿತ್ರರೂಪದಲ್ಲಿ ಕಟ್ಟಿಕೊಡಲಾಗಿದೆ.
ಸುಂದರ ಅನುಭವ ಕೊಡುವ ಅದ್ಭುತ ಸಿನಿಮಾ
ಪೂರ್ಣಚಂದ್ರ ತೇಜಸ್ವಿ ಅವರೂ ಕೂಡ ಎಲ್ಲೂ ಆ ಒಂದು ವಿಷಯವನ್ನ ಹೈಲೈಟ್ ಮಾಡಿ ಬರೆದಿಲ್ಲ ಬಿಡಿ. ಅದನ್ನೆ ಡೈರೆಕ್ಟರ್ ಶಶಾಂಕ್ ಸೋಗಲ್ ಇಲ್ಲಿ ಒಂದು ಸುಂದರ ಸಿನಿಮಾವಾಗಿಸಿ ಜನರ ಮುಂದೆ ಇಟ್ಟಿದ್ದಾರೆ. ಇಲ್ಲಿ ಹೊಸಬರು ಹಳಬರು ಅನ್ನುವ ಭಾವನೆ ಬರೋದಿಲ್ಲ.
ಚಿತ್ರದಲ್ಲಿ ಅಭಿನಯಸಿರೋ ಎಲ್ಲ ಕಲಾವಿದರೆಲ್ಲ ಇಷ್ಟ ಆಗುತ್ತಾರೆ. ಕಾಲೇಜಿನ ಪ್ರಿನ್ಸಿಪಾಲ್ ಆಗಿ ರಮೇಶ್ ಭಟ್ ನಮ್ಮ-ನಿಮ್ಮ ಕಾಲೇಜಿನ ಪ್ರಿನ್ಸಿಪಾಲ್‌ರನ್ನ ನೆನಪಿಸುತ್ತಾರೆ. ಚರಿತ್ರೆ ಮೇಷ್ಟ್ರಾಗಿ ಹಾಸ್ಯ ನಟ ಉಮೇಶ್ ಹಾಸ್ಯದ ಕಚಗುಳಿ ಕೊಡ್ತಾನೆ ಇರ್ತಾರೆ. ನಾಗಭೂಷಣ್ ಕೂಡ ಮಜಾ ಕೊಡ್ತಾರೆ.
ಡೇರ್‌ಡೆವಿಲ್ ಪಿಟಿ ಮಾಸ್ಟರ್ ವಿಜಯ್ ಶೋಭರಾಜ್
ಡೇರ್‌ಡೆವಿಲ್ ಸಿನಿಮಾದಲ್ಲಿ ಪಿಟಿ ಮಾಸ್ಟರ್ ಆಗಿ ನಟ ವಿಜಯ್ ಶೋಭರಾಜ್ ತುಂಬಾ ಇಷ್ಟ ಆಗುತ್ತಾರೆ. ಕಥೆಯಲ್ಲಿ ಇವರ ಎಂಟ್ರಿ ಆದ್ಮೇಲೆ ಇಡೀ ಸಿನಿಮಾದ ಚಿತ್ರಣವೇ ಬೇರೆ ತಿರುವು ತೆಗೆದುಕೊಳ್ಳುತ್ತದೆ. ಇಲ್ಲಿಯ ಸರ್ಕಾರಿ ಜೂನಿಯರ್ ಕಾಲೇಜ್‌ನಲ್ಲಿ ಅಲ್ಲಿವರೆಗೂ ಇರೋ ಎಲ್ಲ ಸಿಸ್ಟಮ್ ಬದಲಾಗೋದೇ ಈ ಒಂದು ಪಾತ್ರದಿಂದಲೇ ಅಂತ ಹೇಳಬಹುದು.
ಡೇರ್‌ಡೆವಿಲ್ ಮುಸ್ತಾಫಾ ಸಿನಿಮಾದಲ್ಲಿ ಪೂರ್ಣಚಂದ್ರ ಮೈಸೂರು ತುಂಬಾ ಒಳ್ಳೆ ಪಾತ್ರವನ್ನೂ ಮಾಡಿದ್ದಾರೆ. ಈ ಒಂದು ಪಾತ್ರದ ಗತ್ತು ಇಲ್ಲಿ ಬೇರೆ ಫೀಲ್ ಕೊಡುತ್ತದೆ. ಸಿನಿಮಾದಲ್ಲಿ ಬರೋ ಆ ಒಂದು ಕ್ರಿಕೆಟ್ ಆಟ ಇಲ್ಲಿ ನಿಮ್ಮನ್ನ ಸೀಟಿನ ತುತ್ತ ತುದಿಗೆ ಕೊಂಡೊಯುತ್ತದೆ.
ಮಲೆಯಾಡಿನ ಮಡಿಲಲ್ಲಿ ಅರಳಿದ ನವೀರಾದ ಪ್ರೇಮ ಕಥೆ
ಈ ಮೂಲಕ ಇಲ್ಲಿ ಇನ್ನೂ ಒಂದು ಸತ್ಯ ಕೂಡ ಹೇಳಲಾಗಿದೆ. ನಾವೆಲ್ಲ ಒಂದೇ, ಇಲ್ಲೆ ಬೇರೆ ಏನೂ ಇಲ್ಲ ಅನ್ನೋದನ್ನ ಕೂಡ ಡೈರೆಕ್ಟರ್ ಶಶಾಂಕ್ ಸೋಗಲ್ ಇಲ್ಲಿ ಹೇಳಿದ್ದಾರೆ. ಕಾಲೇಜ್ ದಿನಗಳ ಪ್ರೇಮಕಥೆಯನ್ನ ಕೂಡ ಇಲ್ಲಿ ತುಂಬಾ ಸುಂದರವಾಗಿ ಹೇಳಲಾಗಿದೆ.
ಇದನ್ನೂ ಓದಿ: Rishab Shetty Daughter: ರಿಷಬ್ ಶೆಟ್ಟಿ ಮಗಳು ಕೂಡ RCB ಫ್ಯಾನ್! ಕೊಹ್ಲಿ ತಂಡಕ್ಕೆ ಜೈ ಎಂದ ಪುಟಾಣಿ ರಾಧ್ಯಾ
ಡೇರ್‌ಡೆವಿಲ್ ಸಿನಿಮಾ ನೋಡೇಬಲ್ ಸಿನಿಮಾ ಆಗಿದೆ. ಎಲ್ಲೂ ಬೋರ್ ಹೊಡೆಯೋದಿಲ್ಲ, ಒಮ್ಮೆ ನೋಡಿ ಎಂಜಾಯ್ ಮಾಡಬಹುದಾದ ಸಿನಿಮಾ ಇದಾಗಿದೆ. ಸಿನಿಮಾ ಚೆನ್ನಾಗಿದೆ, ಹೋಗಿ ನೋಡಿ ಅಂತ ಸಲಹೆ ಕೊಡುವಷ್ಟು ಉತ್ತಮವಾಗಿಯೇ ಈ ಸಿನಿಮಾ ಮೂಡಿ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ