Dhananjay: ಡಾಲಿ ಧನಂಜಯ್​ ಸಕ್ಸಸ್​ ಸಹಿಸಿಕೊಳ್ಳದವರಿಂದ ಕುತಂತ್ರ! ಕಾಣದ ಕೈಗಳಿಂದ ಕುಮ್ಮಕ್ಕು?

ಡಾಲಿ ಬಂಡವಾಳ ಹೂಡಿದ್ದ ಬಡವ ರಾಸ್ಕಲ್ ಸಿನಿಮಾ ಕೂಡ ಸೂಪರ್​​ ಹಿಟ್​ ಆಗಿತ್ತು. ಇದಾದ ಬಳಿಕ ಡಾಲಿ ಹೆಡ್​​ಬುಷ್​ ಸಿನಿಮಾ ಅನೌನ್ಸ್​​ ಮಾಡಿದ್ದರು. ಭೂಗತ ಲೋಕದ ದೊರೆ ಜಯರಾಜ್​ ಕುರಿತು ಬರುತ್ತಿರುವ ಸಿನಿಮಾ ಎಂದು ಹೇಳಲಾಗುತ್ತಿದೆ. ಇದೀಗ ಈ ಸಿನಿಮಾದ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಡಾಲಿ ಧನಂಜಯ್​

ಡಾಲಿ ಧನಂಜಯ್​

  • Share this:
2021 ಡಾಲಿ ಧನಂಜಯ್(Daali Dhananjay)​ಗೆ ಲಕ್ಕಿ(Lucky) ವರ್ಷ ಅಂದ್ರೆ ತಪ್ಪಾಗಲಾರದು. ಕಳೆದ ವರ್ಷದ ಆರಂಭದಲ್ಲೇ ಬಂದ ಆಕ್ಷನ್ ಫ್ರಿನ್ಸ್ ಅಭಿನಯದ ‘ಪೊಗರು’(Pogaru) ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ಧೂಳ್ ಎಬ್ಬಿಸಿತ್ತು. ಈ ಚಿತ್ರದಲ್ಲಿ ಡಾಲಿ ಕೂಡ ನಟಿಸಿದ್ರು ಅನ್ನೋದು ವಿಶೇಷ . ಅಲ್ಲದೆ ಕಳೆದ ವರ್ಷ ಏಪ್ರಿಲ್​ನಲ್ಲಿ ರಿಲೀಸ್ ಆದ ಅಪ್ಪು ಅಭಿನಯ ಪವರ್ ಫುಲ್​ ಸಿನಿಮಾ ‘ಯುವರತ್ನ’(Yuvarathna) ಕೂಡ ಹಿಟ್ ಲಿಸ್ಟ್ ಸೇರಿತ್ತು. ಇನ್ನು ಈ ಚಿತ್ರದಲ್ಲಿ ಕ್ಲಾಸ್ ವಿಲನ್ ಆಗಿ ಅಪ್ಪು ಎದುರು ಡಾಲಿ ಅಬ್ಬರಿಸಿದ್ದರು. ಇವಲ್ಲದೆ ಡಾಲಿ ಅಭಿನಯದ ‘ಸಲಗ’(Salaga), ‘ರತ್ನನ್ ಪ್ರಪಂಚ ’(Rathnan Parapancha) ಸಿನಿಮಾಗಳು ಕೂಡ ಡಾಲಿ ಕೈ ಹಿಡಿದಿದ್ದವು.

ಕೊನೆಗೂ ಸ್ಯಾಂಡಲ್​ವುಡ್​ನಲ್ಲಿ ನೆಲ ಕಂಡುಕೊಂಡ ಡಾಲಿ!

ಇದನ್ನು ಸೂಕ್ಷಮವಾಗಿ ಗಮನಿಸಿದ್ದ ಗಾಂಧಿನಗರ ಪಂಡಿತರು ನಟ ರಾಕ್ಷಸ ಡಾಲಿ ಧನಂಜಯ್ ಅವರಿಗೆ  2021 ಲಕ್ಕಿ ಇಯರ್ ಎಂದು ಡಿಸೈಡ್ ಮಾಡಿದ್ದರು. 2021ರಲ್ಲಿ ಡಾಲಿ ಮುಟ್ಟಿದೆಲ್ಲ ಚಿನ್ನ ಎಂಬುವಂತೆ  ಆಗಿತ್ತು. ಅದಕ್ಕೆ ಪೂರಕವಾಗಿ ಡಾಲಿ ಧನಂಜಯ್​ಗೆ 2021ರ ಕೊನೆಯಲ್ಲಿ ಕೊನೆಗೂ ನಾಯಕನಾಗಿ ಒಂದು ದೊಡ್ಡ ಸಕ್ಸಸ್ ಸಿಕ್ತು. ಡಾಲಿ ಬಂಡವಾಳ ಹೂಡಿದ್ದ ಬಡವ ರಾಸ್ಕಲ್ ಸಿನಿಮಾ ಕೂಡ ಸೂಪರ್​​ ಹಿಟ್​ ಆಗಿತ್ತು. ಇದಾದ ಬಳಿಕ ಡಾಲಿ ಹೆಡ್​​ಬುಷ್​ ಸಿನಿಮಾ ಅನೌನ್ಸ್​​ ಮಾಡಿದ್ದರು. ಭೂಗತ ಲೋಕದ ದೊರೆ ಜಯರಾಜ್​ ಕುರಿತು ಬರುತ್ತಿರುವ ಸಿನಿಮಾ ಎಂದು ಹೇಳಲಾಗುತ್ತಿದೆ.ಇದೀಗ ಈ ಸಿನಿಮಾದ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಡಾಲಿ ಯಶಸ್ಸು ಸಹಿಸದ ಮಂದಿಯಿಂದ ಕುತಂತ್ರ?

ಡಾಲಿ ಧನಂಜಯ್ ಅವರನ್ನು ತುಳಿಯಲು ಸ್ಯಾಂಡಲ್ ವುಡ್ ನಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆಯಾ? ಹಾಗಂತ ಸ್ವತಃ ಧನಂಜಯ್ ಅವರೇ ಮಾಧ್ಯಮವೊಂದಕ್ಕೆ ನೀಡಿದ ಆಡಿಯೋ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ‘ಹೆಡ್ ಬುಷ್’ ಸಿನಿಮಾಗೆ ಸಂಬಂಧಿಸಿದ ವಿವಾದವೊಂದರ ಕುರಿತು ಮಾತನಾಡಿರುವ ಅವರು ಕಾಣದ ಕೈಗಳು ಯಾಕೆ ಈ ರೀತಿ ಕೆಲಸ ಮಾಡುತ್ತಿವೆ ಎನ್ನುವುದು ನನಗೂ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಹೆಡ್​​ ಬುಷ್​ ಸಿನಿಮಾ ವಿರುದ್ಧ ಜಯರಾಜ್​ ಪುತ್ರ ಹೆಡ್ ಬುಷ್ ಸಿನಿಮಾದ ಟ್ರೇಲರ್​ನಲ್ಲಿ ಎಂ.ಪಿ.ಜಯರಾಜ್ ಅವರನ್ನು ಕೆಟ್ಟ ವ್ಯಕ್ತಿಯಂತೆ ಬಿಂಬಿಸಿದ್ದಾರೆ ಎಂದು ಅಜಿತ್ ಜಯರಾಜ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಡಾಲಿ ಧನಂಜಯ ಹೆಡ್ ಬುಷ್ ಸಿನಿಮಾ ಬಿಡುಗಡೆಯಾಗುತ್ತಾ ಇಲ್ವಾ?

ಸಿನಿಮಾ ರಿಲೀಸ್​ ಮಾಡದಂತೆ ಪತ್ರ ಬರೆದ ಅಜಿತ್​!

ಅಗ್ನಿ ಶ್ರೀಧರ್ ಅವರ ಪುಸ್ತಕವೊಂದನ್ನು ಆಧರಿಸಿ ಈ ಸಿನಿಮಾ ಬರುತ್ತಿದ್ದು, ಅದರಲ್ಲಿ ಬೆಂಗಳೂರಿನ ಅಂಡರ್ ವರ್ಲ್ಡ್ ಡಾನ್ ಎಂದೇ ಖ್ಯಾತರಾಗಿದ್ದ ಜಯರಾಜ್ ಅವರ ಪಾತ್ರವೂ ಇದೆ. ಈ ಪಾತ್ರದ ಕುರಿತಾಗಿ ಜಯರಾಜ್ ಪುತ್ರ ಅಜಿತ್ ಆಕ್ಷೇಪವನ್ನು ವ್ಯಕ್ಯ ಪಡಿಸಿದ್ದಾರೆ. ಹೆಡ್ ಬುಷ್ ಚಿತ್ರ ಬಿಡುಗಡೆಗೆ ಅವಕಾಶ ನೀಡದಂತೆ ಚಲನಚಿತ್ರ ವಾಣಿಜ್ಯಮಂಡಳಿ ಅಜಿತ್ ಜಯರಾಜ್ ಎಂಬುವವರು ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಹೊಸಬರ ಬೆನ್ನಿಗೆ ನಿಂತ ಸ್ಟಾರ್​ ನಟರು.. `ಮೈಕಲ್​ & ಮಾರ್ಕೊನಿ’ಗೆ ಸಾಥ್​ ಕೊಟ್ಟ ಡಾಲಿ-ಲೂಸ್​ ಮಾದ!

‘ನನಗೂ ಫಿಲ್ಮ್ ಚೇಂಬರ್ ನಿಂದ ಕರೆ ಬಂದಿತ್ತು. ನಾನು ಆಸ್ಪತ್ರೆಯಲ್ಲಿ ಇರುವ ಕಾರಣಕ್ಕಾಗಿ ಮೇ.13ರ ನಂತರ ಚೇಂಬರ್ ಗೆ ಬರುವುದಾಗಿ ತಿಳಿಸಿದ್ದೇನೆ. ಅಷ್ಟಕ್ಕೂ ನಾವು ಸಿನಿಮಾ ಮಾಡುವ ವಿಚಾರ ಅಜಿತ್ ಅವರಿಗೆ ಗೊತ್ತಿದೆ. ಅವರು ನನ್ನ ಒಳ್ಳೆಯ ಫ್ರೆಂಡ್. ಈ ಸಿನಿಮಾ ಮಾಡುವಾಗ ವಿಶ್ ಮಾಡಿದ್ದರು. ತಮ್ಮ ತಂದೆಯ ಪಾತ್ರವು ಹೇಗೆ ಬರುತ್ತಿದೆ ಎಂದು ಕೇಳುತ್ತಿದ್ದರು. ಆದರೆ, ದಿಢೀರ್ ಅಂತ ಹೀಗೆ ಕಂಪ್ಲೆಂಟ್ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಡಾಲಿ ಧನಂಜಯ್​ ಹೇಳಿದ್ದಾರೆ.
Published by:Vasudeva M
First published: