Dhananjay: 'ಹೊಯ್ಸಳ' ಮೂಲಕ ಮತ್ತೆ ಒಂದಾದ ಡಾಲಿ-ಅಮೃತಾ! ಖಡಕ್​ ಖಾಕಿ ತೊಟ್ಟು ಬರ್ತಿದ್ದಾರೆ ಧನಂಜಯ್​

'ಟಗರು' ಚಿತ್ರದಲ್ಲಿ ಡಾಲಿ ಪಾತ್ರ ಮಾಡಿದ್ದೇ ಮಾಡಿದ್ದು ನಟ ಧನಂಜಯ ಅವರ ವೃತ್ತಿ ಜೀವನಕ್ಕೆ ದೊಡ್ಡ ತಿರುವು ಸಿಕ್ಕಿಬಿಡ್ತು. ವಿಲನ್ ಪಾತ್ರದಿಂದ ಭಾರಿ ಮನ್ನಣೆ ಪಡೆದುಕೊಂಡರು. 

ಡಾಲಿ ಧನಂಜಯ್​

ಡಾಲಿ ಧನಂಜಯ್​

  • Share this:


'ಡಾಲಿ' ಧನಂಜಯ್ ನಾಯಕರಾಗಿರುವ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಕೆಜಿಎಫ್ (KGF 2) ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ಬ್ರ್ಯಾಂಡ್ ಕ್ರಿಯೆಟ್ ಮಾಡಿರೋ ಹೊಂಬಾಳೆ ಪ್ರೊಡಕ್ಷನ್ (Hombale Production) ಟೀಂ ಈಗ ಡಾಲಿ ಧನಂಜಯ್ (Dali Dhananjay) ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿದೆ. ಹೌದು, 'ರತ್ನನ್ ಪ್ರಪಂಚ' ನಂತರ ಕೆಆರ್‌ಜಿ ಸ್ಟುಡಿಯೋಸ್‌ನಲ್ಲಿ ಧನಂಜಯ್ ಮತ್ತೊಂದು ಸಿನಿಮಾ ಮಾಡಲಿದ್ದು, ಅದಕ್ಕೆ 'ಹೊಯ್ಸಳ' ಎಂದು ಹೆಸರಿಡಲಾಗಿದೆ ಎಂಬ ಮಾಹಿತಿ ಕೆಲ ದಿನಗಳ ಹಿಂದೆ ಬಹಿರಂಗಗೊಂಡಿತ್ತು. ಇದೀಗ ಆ ಸಿನಿಮಾಕ್ಕೆ ಮುಹೂರ್ತ ನೆರವೇರಿದೆ. ಏಪ್ರಿಲ್​ 22ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆದ 'ಹೊಯ್ಸಳ' ಚಿತ್ರದ ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡ ಭಾಗಿಯಾಗಿತ್ತು. ವಿಜಯ್ ಎನ್. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮೈಸೂರು, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ 75 ದಿನಗಳ ಚಿತ್ರೀಕರಣ ನಡೆಯಲಿದೆ.

ಮತ್ತೆ ಒಂದಾದ ಡಾಲಿ-ಅಮೃತಾ!

'ಪಾಪ್‌ಕಾರ್ನ್ ಮಂಕಿ ಟೈಗರ್', 'ಬಡವ ರಾಸ್ಕಲ್‌' ನಂತರ ಮತ್ತೊಮ್ಮೆ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ಒಟ್ಟಿಗೆ 'ಹೊಯ್ಸಳ' ಚಿತ್ರಕ್ಕಾಗಿ ತೆರೆಹಂಚಿಕೊಳ್ಳುತ್ತಿದ್ದಾರೆ. ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ. ರಾಜ್ ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕಾರ್ಯಕ್ರಮಕ್ಕೆ ನಿರ್ದೇಶಕರಾದ ಸಂತೋಷ್ ಆನಂದರಾಮ್, ಡಾ. ಸೂರಿ, ಡಾ. ರಮೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ವಿಜಯ್​ ಕಿರಗಂದೂರ್​ ಅರ್ಪಿಸುತ್ತಿರುವ ಸಿನಿಮಾ!

ಹೊಯ್ಸಳ ಚಿತ್ರಕ್ಕೆ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ಅರ್ಪಿಸುತ್ತಿದ್ದು, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.  ಪ್ರಮುಖವಾಗಿ ಮೈಸೂರು, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಒಟ್ಟು 75 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದು ತಂಡ ಹೇಳಿಕೊಂಡಿದೆ. ಚಿತ್ರಕ್ಕೆ ಕಾರ್ತಿಕ್ ಎಸ್ ಅವರು ಛಾಯಾಗ್ರಹಣ ನೀಡಿದರೆ, ದೀಪು ಎಸ್ ಕುಮಾರ್ ಅವರು ಸಂಕಲನ ಕೊಡಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆಯಲಿದ್ದಾರೆ.

ಇದನ್ನೂ ಓದಿ: ರಾಕಿ ಭಾಯ್​ಗೆ ಮುತ್ತು ಕೊಟ್ಟು ಇದು ಆರಂಭ ಎಂದ ಪ್ರಶಾಂತ್​, ದೊಡ್ಡದಾಗಿ ಸಿಗ್ನಲ್​ ಕೊಟ್ಟ ಕೆಜಿಎಫ್​ ಟೀಂ!

ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಶ್ರೀ ಮಂಜುನಾಥ್ “ಕ್ಲಾಪ್” ಮಾಡಿದರು. ನಿರ್ಮಾಪಕ ಕಾರ್ತಿಕ್ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮಿ “ಕ್ಯಾಮರಾ” ಚಾಲನೆ ಮಾಡಿದರು. ಚಂಪಕಧಾಮ ಬಾಬು ಹಾಗೂ ಕುಮಾರ್ ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಎಲ್ರೂ RRR, KGF 2 ಗಳಂತಹ ಸಿನಿಮಾ ಮಾಡಿದ್ರೆ ಈ ಟಾಪ್ 10 ಸಿನಿಮಾಗಳು ಬರ್ತಾನೇ ಇರ್ಲಿಲ್ಲ!

ಧನಂಜಯ್​ಗೆ ಮರುಜೀವ ಕೊಟ್ಟಿದ್ದ ಟಗರು!

'ಟಗರು' ಚಿತ್ರದಲ್ಲಿ ಡಾಲಿ ಪಾತ್ರ ಮಾಡಿದ್ದೇ ಮಾಡಿದ್ದು ನಟ ಧನಂಜಯ ಅವರ ವೃತ್ತಿ ಜೀವನಕ್ಕೆ ದೊಡ್ಡ ತಿರುವು ಸಿಕ್ಕಿಬಿಡ್ತು. ವಿಲನ್ ಪಾತ್ರದಿಂದ ಭಾರಿ ಮನ್ನಣೆ ಪಡೆದುಕೊಂಡರು.

Published by:Vasudeva M
First published: