Badava Rascal: ಅರ್ಧಶತಕ ಬಾರಿಸಿದ `ಬಡವ ರಾಸ್ಕಲ್​’.. 9 ವರ್ಷಗಳ ನಂತ್ರ ನಾಯಕನಾಗಿ ಡಾಲಿಗೆ ಗೆಲುವಿನ ಹೂಮಾಲೆ!

‘ಬಡವ ರಾಸ್ಕಲ್’ ಚಿತ್ರ ಯಶಸ್ವಿ(Success)ಯಾಗಿ 50ದಿನಗಳನ್ನು ಪೂರೈಸಿದೆ. ಡಾಲಿ ಧನಂಜಯ  ಚಿತ್ರರಂಗಕ್ಕೆ ಬಂದು ಬರೋಬರಿ  9 ವರ್ಷಗಳ ನಂತರ ನಾಯಕನಾಗಿ ಗೆಲುವಿನ ಹೂಮಾಲೆ ದಕ್ಕಿದೆ.

ನಟ ಡಾಲಿ ಧನಂಜಯ್

ನಟ ಡಾಲಿ ಧನಂಜಯ್

  • Share this:
    ನಟ ರಾಕ್ಷಸ ಡಾಲಿ ಧನಂಜಯ (Dhananjaya) ಅಭಿನಯದ ’ಬಡವ ರಾಸ್ಕಲ್’(Badava Rascal) ಚಿತ್ರವನ್ನು ಶ್ರೀಮಂತ ಪ್ರೇಕ್ಷಕ ಪ್ರಭುಗಳು ಗೆಲ್ಲಿಸಿದ್ದಾರೆ. ಸ್ನೇಹಿತ(Friends)ರಿಂದ ಸ್ನೇಹಿತರಿಗಾಗಿ ಬಂದ ಬಡವ ರಾಸ್ಕಲ್ ಕಳೆದ ವರ್ಷದ ಅಂತ್ಯದಲ್ಲಿ ಗೆಲವಿನ ಬಾವುಟ ನೆಟ್ಟು, ಗಲ್ಲಾ ಪೆಟ್ಟಿಗೆ(Box Office)ಯಲ್ಲಿ ಗೆಲುವಿನ ಕೇಕೆಹಾಕಿದ್ದಾನೆ. ಕಳೆದ ಡಿಸೆಂಬರ್ 24 ಕ್ಕೆ ಡಾಲಿಯ ‘ಬಡವ ರಾಸ್ಕಲ್’ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗಿತ್ತು‌.‌ ಆದರೆ, ಈ ಸಿನಿಮಾ ರಿಲೀಸ್ ಆದ ಒಂದೇ ವಾರಕ್ಕೆ ಕೊರೋನಾ (Corona) ಮೂರನೇ ಅಲೆ ರಾಜ್ಯಕ್ಕೆ ಅಪ್ಪಳಿಸಿತ್ತು‌. ಆದರೂ, ಈ ಬಡವನ್ನು ಪ್ರೇಕ್ಷಕ ಪ್ರಭುಗಳು ಕೈ ಬಿಡದೆ ಐವತ್ತು ದಿನಗಳು ಹೊತ್ತು ಮೆರವಣಿಗೆ ಮಾಡಿದ್ದಾರೆ. ಹೌದು,  ‘ಬಡವ ರಾಸ್ಕಲ್’ ಚಿತ್ರ ಯಶಸ್ವಿ(Success)ಯಾಗಿ 50ದಿನಗಳನ್ನು ಪೂರೈಸಿದೆ. ಡಾಲಿ ಧನಂಜಯ  ಚಿತ್ರರಂಗಕ್ಕೆ ಬಂದು ಬರೋಬರಿ  9 ವರ್ಷಗಳ ನಂತರ ನಾಯಕನಾಗಿ ಗೆಲುವಿನ ಹೂಮಾಲೆ ದಕ್ಕಿದೆ.

    ಗೆಲುವನ್ನು ಸಂಭ್ರಮಿಸಿದ ಡಾಳಿ ಧನಂಜಯ್!

    ಈ ಸಂಭ್ರಮದ ಕ್ಷಣವನ್ನು ಡಾಲಿ ನಿಜವಾಗಿಯೂ ಸಂಭ್ರಮಿಸಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಮರೆಯಾಗಿದ್ದ ಸಂಭ್ರಮ ದಿನಗಳನ್ನು ಮತ್ತೆ ಕಣ್ಮುಂದೆ ತಂದಿದ್ದಾರೆ. ಡಾಲಿ ಧನಂಜಯ ಖಳನಟನಾಗಿ ದುಡಿದ ಎಲ್ಲಾ ಹಣವನ್ನು  ತನ್ನ ಸುತ್ತ ಇದ್ದಂತಹ ಪ್ರತಿಭೆಗಳ ಮೇಲೆ ಇನ್ವೆಷ್ಟ್ ಮಾಡಿದರು. ಸಾಲ ಸೋಲ ಮಾಡಿ ಡಾಲಿ ‘ಬಡವ ರಾಸ್ಕಲ್’ ಸಿನಿಮಾ ಮಾಡಿದ್ದರು. ಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೆ ಇರುತ್ತೆ ಅನ್ನೋ ಮಾತಿನಂತೆ ಡಾಲಿಗೆ ‘ಬಡವ ರಾಸ್ಕಲ್’ ಚಿತ್ರ ಕೈ ಬಿಡಲಿಲ್ಲ.  ಜೊತೆಗೆ ತಾನು ನಂಬಿದ ಸ್ನೇಹತರ ಪ್ರತಿಭೆಗಳು ಡಾಲಿಗೆ ನಾಯಕನಾಗಿ ಗೆಲುವು ತಂದು ಕೊಟ್ಟಿದ್ದು, ಈ ಗೆಲುವನ್ನು ಡಾಲಿ ಸಂಭ್ರಮಿಸಿದ್ದಾರೆ.

    ಇದನ್ನೂ ಓದಿ: ಈ ವಾರ ಥಿಯೇಟರ್​ನಲ್ಲೇ 6 ಕನ್ನಡ ಸಿನಿಮಾ ರಿಲೀಸ್​.. ಒಟಿಟಿಯಲ್ಲಿ `ಫ್ಯಾಮಿಲಿ ಪ್ಯಾಕ್​’ ಮನರಂಜನೆ!

    ಅರ್ಧ ಶತಕ ಬಾರಿಸಿದ ಬಡವ ರಾಸ್ಕಲ್​!

    ಬಡವ ರಾಸ್ಕಲ್ ಚಿತ್ರ ಅರ್ಧ ಶತಕ ಬಾರಿಸ್ತಿದಂತೆ ಬಡವನ ಗೆಲುವಿಗೆ ತೆರೆಹಿಂದೆ ತೆರೆ ಮುಂದೆ ಶ್ರಮಿಸಿದ ಎಲ್ಲರನ್ನೂ ಒಂದುಗೂಡಿಸಿ ನೆನಪಿನ ಕಾಣಿಕೆ ಕೊಟ್ಟು ಆತ್ಮೀಯವಾಗಿ ಗೌರವಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಕಣ್ಮರೆಯಾಗ್ತಿದ್ದ ಹಳೆಯ ಸುಂದರ ದಿನಗಳನ್ನು ಕಣ್ಮುಂದೆ ತಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ರಿಲೀಸ್ ಆದ ಮೂರೇ ದಿನಕ್ಕೆ ಗೆದ್ದರು ಸರಿ ಸೋತರು ಸರಿ ಸಕ್ಸಸ್ ಮೀಟ್ ಅಂತ ಮಾಡಿ ಮಾಧ್ಯಮಗಳ ಮೂಲಕ ಚಿತ್ರದಲ್ಲಿ ಕೆಲಸ ಮಾಡಿದವರಿಗೆ ಧನ್ಯವಾದ ಸಲ್ಲಿಸುವ ಸಂಸ್ಕೃತಿ ಟ್ರೆಂಡ್ ಆಗಿದೆ. ಆದರೆ, ಡಾಲಿ  ಈ ಟ್ರೆಂಡ್ ಗೆ ಶರಣಾಗದೆ  ಬಡವನ ಬಳಗವನ್ನು ಒಂದು ಕಡೆ ಸೇರಿಸಿ ಅದ್ದೂರಿ ಕಾರ್ಯಕ್ರಮ ಮಾಡುವ ಮೂಲಕ ಸಿನಿಮಾ ತಂಡವನ್ನು ಗೌರವಿಸಿದ್ದಾರೆ.

    ಹಳೆಯ ಸುಂದರ ದಿನಗಳನ್ನು ಕಣ್ಮುಂದೆ ತಂದ ಡಾಲಿ!

    ಜೊತೆಗೆ  ಭರ್ಜರಿ ಔತಣಕೂಟವನ್ನು ಏರ್ಪಡಿಸಿದ್ದರು. ನಿರ್ಮಾಪಕಿ  ಪಾರ್ವತಮ್ಮ ರಾಜ್ ಕುಮಾರ್, ಹಾಗೂ ನಿರ್ಮಾಪಕ ವೀರಸ್ವಾಮಿ ಅವರಂತ ದಿಗ್ಗಜರು ಈ ಸಂಪ್ರದಾಯ ವನ್ನು ಹುಟ್ಟುಹಾಕಿದ್ದರು. ಅಲ್ಲದೆ ಅವರು ಬದುಕಿರುವ ತನಕ ಪಾಲಿಸಿಕೊಂಡು ಬಂದಿದ್ದರು. ಇತ್ತೀಚಿನ ದಿನಗಳಲ್ಲಿ ಇಂತಹ ಸಂಭ್ರಮ ಕಣ್ಮರೆಯಾಗಿತ್ತು.

    ಇದನ್ನೂ ಓದಿ: KGF 2 ಸಿನಿಮಾದಲ್ಲಿ `ಕರ್ಪೂರದ ಗೊಂಬೆ’-`ಮನ ಮೆಚ್ಚಿದ ಹುಡುಗಿ’, ಅರೇ.. ಶಾಕ್ ಆಯ್ತಾ? ಆಗಲೇಬೇಕು!

    ಆರ್​. ಚಂದ್ರು ಅವರು ಈ ಸಂಪ್ರದಾಯವನ್ನು ಅಗಾಗ ನೆನಪಿಸ್ತಿದ್ದರು.. ಈಗ ಬಡವರಾಸ್ಕಲ್ ಚಿತ್ರದ ಮೂಲಕ ಡಾಲಿ ಧನಂಜಯ ಕಳೆದು ಹೋಗ್ತಿದ್ದ ಸುಂದರ ಕ್ಷಣಗಳನ್ನು ಕಣ್ಮುಂದೆ ತರುವ ಮೂಲಕ ಡಾಲಿ ಧನಂಜಯ ಪಾರ್ವತಮ್ಮ ರಾಜ್‍ಕುಮಾರ್ ಹಾಗೂ ವೀರಸ್ವಾಮಿ ಅವರ ಹಾದಿಯಲ್ಲಿ ಸಾಗುವ ಸೂಚನೆ ಕೊಟ್ಟಿದ್ದಾರೆ ಅಂತಿದ್ದಾರೆ ಗಾಂಧಿನಗರ ಸಿನಿ ಪಂಡಿತರು.

    (ವರದಿ - ಸತೀಶ್​ ಎಂ.ಬಿ)
    Published by:Vasudeva M
    First published: