ತಾಯಿಯಾದ ಬಳಿಕ ಸದ್ದಿಲ್ಲದೆ ಬೆಳ್ಳಿಪರದೆಗೆ ರಿ ಎಂಟ್ರಿ ಕೊಟ್ರು ಸ್ಯಾಂಡಲ್​​ವುಡ್​​ನ ಈ ಖ್ಯಾತ ನಟಿ!

‘ಮನೆ ಮಾರಾಟಕ್ಕಿದೆ‘ ಸಿನಿಮಾವು ಹಾರರ್​ ಮತ್ತು ಕಾಮಿಡಿ ಮಿಶ್ರಿತ ಸಿನಿಮಾವಾಗಿದ್ದು, ಚಿತ್ರದಲ್ಲಿ ಸಾಧು ಕೋಕಿಲ, ಚಿಕ್ಕಣ್ಣ, ರವಿಶಂಕರ್​ ಗೌಡ, ಕುರಿ ಪ್ರತಾಪ್​ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ.

news18-kannada
Updated:November 8, 2019, 7:58 PM IST
ತಾಯಿಯಾದ ಬಳಿಕ ಸದ್ದಿಲ್ಲದೆ ಬೆಳ್ಳಿಪರದೆಗೆ ರಿ ಎಂಟ್ರಿ ಕೊಟ್ರು ಸ್ಯಾಂಡಲ್​​ವುಡ್​​ನ ಈ ಖ್ಯಾತ ನಟಿ!
@google
news18-kannada
Updated: November 8, 2019, 7:58 PM IST
ನಿರ್ದೇಶಕ ಮಂಜು ಸ್ವರಾಜ್​ ನಿರ್ದೇಶನಲ್ಲಿ ಸಿದ್ಧವಾದ ‘ಮನೆ ಮಾರಾಟಕ್ಕಿದೆ‘ ಸಿನಿಮಾವು ಬಿಡುಗಡೆಗೆ ಸಿದ್ದವಾಗಿದೆ. ಸದ್ಯ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.

‘ಮನೆ ಮಾರಾಟಕ್ಕಿದೆ‘ ಸಿನಿಮಾವು ಹಾರರ್​ ಮತ್ತು ಕಾಮಿಡಿ ಮಿಶ್ರಿತ ಸಿನಿಮಾವಾಗಿದ್ದು, ಚಿತ್ರದಲ್ಲಿ ಸಾಧು ಕೋಕಿಲ, ಚಿಕ್ಕಣ್ಣ, ರವಿಶಂಕರ್​ ಗೌಡ, ಕುರಿ ಪ್ರತಾಪ್​ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಅಂತೆಯೇ ನಾಯಕಿಯಾಗಿ ಶೃತಿ ಹರಿಹರನ್​ ಮತ್ತು ಕಾರುಣ್ಯ ರಾಮ್​​​ ಅಭಿನಯಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೆ ಚಿತ್ರ ಹಾಡೊಂದು ರಿಲೀಸ್​ ಆಗಿದ್ದು, ವೀಕ್ಷಕರಿಂದ ಉತ್ತಮ ಪತಿಕ್ರಿಯೆ ಬಂದಿದೆ. ಇದೀಗ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ.

ಮನೆ ಮಾರಾಟಕ್ಕಿದೆ


ಒಂದು ಸಿನಮಾದಲ್ಲಿ ಇಬ್ಬರು ಅಥಬಾ ಒಬ್ಬರು ಹಾಸ್ಯ ನಟರು ಅಭಿನಯಿಸುತ್ತಾರೆ. ಆದರೆ ‘ಮನೆ ಮಾರಾಟಕ್ಕಿದೆ‘ ಸಿನಿಮಾದಲ್ಲಿ ಕನ್ನಡ ಪ್ರಮುಖ ಹಾಸ್ಯ ನಟರನ್ನು ಸೇರಿಸಿಕೊಂಡು ಮಂಜು ಸ್ವರಾಜ್​ ಸಿನಿಮಾ ಮಾಡಿದ್ದಾರೆ.ಈ ಸಿನಿಮಾವು ನ.15 ರಂದು ಬಿಡುಗಡೆಯಾಗುತ್ತಿದ್ದು, ಚಿತ್ರಕ್ಕೆ ಎಸ್​.ವಿ ಬಾಬು ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ತಾಣದಲ್ಲಿ ವೈರಲ್ ಆಯ್ತು ಸ್ಯಾಂಡಲ್​ವುಡ್​ ನಟಿ ಅನಿತಾ ಹಸ್ಸನಂದನಿಯ ಹಸಿ ಬಿಸಿ ದೃಶ್ಯಗಳು!

ಇದನ್ನೂ ಓದಿ: ಸುಮ್ಮನಿರದಿದ್ದರೆ ನಿಮ್ಮ ಕತ್ತನ್ನೇ ಕತ್ತರಿಸುತ್ತೇನೆ; ಅಭಿಮಾನಿಗಳತ್ತ ಖಡ್ಗ ಝಳಪಿಸಿದ ಡಿಕೆ ಶಿವಕುಮಾರ್
Loading...



 
First published:November 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...