• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Tennis Krishna: ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರೆ ಸ್ಯಾಂಡಲ್​ವುಡ್​ನ ಖ್ಯಾತ ಹಾಸ್ಯ ನಟ, ನಾಳೆಯೇ ಹೊಸ ಪಕ್ಷ ಸೇರ್ಪಡೆ

Tennis Krishna: ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರೆ ಸ್ಯಾಂಡಲ್​ವುಡ್​ನ ಖ್ಯಾತ ಹಾಸ್ಯ ನಟ, ನಾಳೆಯೇ ಹೊಸ ಪಕ್ಷ ಸೇರ್ಪಡೆ

 ಟೆನ್ನಿಸ್ ಕೃಷ್ಣ

ಟೆನ್ನಿಸ್ ಕೃಷ್ಣ

ಸ್ಯಾಂಡಲ್​ವುಡ್​ನ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ಇದೀಗ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರು ನಾಳೆ ಹೊಸ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

  • Share this:

ಕನ್ನಡ ಚಿತ್ರರಂಗದ (Sandalwood) ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ (Tennis Krishna) ಅವರು ಯಾರಿಗೆ ಗೊತ್ತಿಲ್ಲಾ ಹೇಳಿ. ಅವರ ಕಾಮಿಡಿ, ಅವರ ತರಲೆ ಎಲ್ಲವೂ ಅದೆಷ್ಟೋ ಕನ್ನಡಿಗರ ಮನಸ್ಸನ್ನು ತಣಿಸಿತ್ತು. ಅವರ ಹಾಸ್ಯವು ಸಿನಿಮಾಗಳಲ್ಲಿ (Movie) ಬಹಳ ಪ್ರಮುಖ ಪಾತ್ರವಹಿಸುತ್ತಿದ್ದವು. ಹೀಗಾಗಿ ಅವರು ಕನ್ನಡದ ಸ್ಟಾರ್​ ನಟರುಗಲ ಸಿನಿಮಾಗಳಲ್ಲಿ ಹಾಸ್ಯ ಪಾತ್ರಧಾರಿಯಾಗಿ ಮಿಂಚಿದ್ದಾರೆ. ಆದರೆ ಇದೀಗ ಅವರು ಕೊಂಚ ಸಿನಿಮಾದಿಂದ ದೂರ ಉಳಿದಿದ್ದು, ಆಗ್ಗಾಗ್ಗೆ ಒಂದೊಂದು ಸಿನಿಮಾಗಳಲ್ಲಿ ನಟಿಸುತ್ತಿರುತ್ತಾರೆ. ಆದರೆ ಇದೀಗ ಅವರು ರಾಜಕೀಯಕ್ಕೆ (Politics) ಎಂಟ್ರಿ ಕೊಡುತ್ತಿದ್ದಾರೆ. ಹೌದು, ಟೆನ್ನಿಸ್ ಕೃಷ್ಣ ಅವರು ಇದೀಗ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ನಾಲೆಯೇ ಹೊಸ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.


ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರೆ ಟೆನ್ನಿಸ್ ಕೃಷ್ಣ:


ಹೌದು, ಸ್ಯಾಂಡಲ್​ವುಡ್​ನ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ಇದೀಗ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರು ನಾಳೆ ಹೊಸ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಟೆನ್ನಿಸ್ ಕೃಷ್ಣ ಅವರು ನಾಳೆ ಆಮ್ ಆದ್ಮಿ ಪಾರ್ಟಿಗೆ ಸೇರಲಿದ್ದಾರೆ.  ನಾಳೆ ಬೆಳಗ್ಗೆ 10.30ಕ್ಕೆ ಬೆಂಗಳೂರಿನಲ್ಲಿ ಆಮ್​ ಆದ್ಮಿ ಪಾರ್ಟಿಯ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಅವರು ಅಧಿಕೃತವಾಗಿ ಆಪ್​ ಪಕ್ಷಕ್ಕೆ ಟೆನ್ನಿಸ್ ಕೃಷ್ಣ ಅವರು ಸೇರಿಕೊಳ್ಳಲಿದ್ದಾರೆ. ಈ ವೇಳೆ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಇನ್ನಿತರ ಹಿರಿಯ ಮುಖಂಡರು ಉಪಸ್ಥಿಯಲ್ಲಿರುತ್ತಾರೆ ಎನ್ನಲಾಗಿದೆ.


ಕರ್ನಾಟಕದಲ್ಲಿಯೂ ಪ್ರಭಲ ಪೈಪೋಟಿ ನೀಡಲು ಸಿದ್ಧವಾದ ಆಪ್​:


ಇನ್ನು, ಮುಂದಿನ ವರ್ಷ 2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಜರುಗಲಿದೆ. ಹೀಗಾಗಿ ಈಗಾಗಲೇ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಇದರ ಭಾಗವಾಗಿ ಆಮ್​ ಆದ್ಮಿ ಪಕ್ಷ ಸಹ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದು, ಸ್ಟಾರ್​ ನಟರುಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಈಗಾಗಲೇ ಪಂಜಾಬ್ ಚುನಾವಣೆಯಲ್ಲಿ ಆಪ್​ ಗೆದ್ದು, ಸರ್ಕಾರ ರಚಿಸಿದ್ದು, ಮುಂಬರುವ ಕರ್ನಾಟಕದ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಸರ್ಕಾರವನ್ನು ರಚಿಸುವ ಹುಮ್ಮಸ್ಸಿನಲ್ಲಿದೆ. ಈ ಕಾರಣಕ್ಕಾಗಿ ಪಕ್ಷಕ್ಕೆ ಅನೇಕರನ್ನು ಸೇರಿಸುತ್ತಿದೆ. ಆದರ ಭಾಗವಾಗಿ ಇದಿಗ ಸ್ಟಾಮಡಲ್​ವುಡ್​ ನ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ಪಕ್ಷಕ್ಕೆ ಸೇರ್ಪಟೆಯಾಗುತ್ತಿದ್ದು, ಪಕ್ಷಕ್ಕೆ ಮತ್ತಷ್ಟು ಬಲಬಂದಂತಾಗುತ್ತದೆ.


ಇದನ್ನೂ ಓದಿ: Pushpa 2: ಪುಷ್ಪ 2 ಚಿತ್ರದಲ್ಲಿ ಮತ್ತೋರ್ವ ಕನ್ನಡತಿ? ಇಲ್ಲಿದೆ ಹೊಸ ಅಪ್ಡೇಟ್


ಸ್ಯಾಂಡಲ್​ವುಡ್​ಲ್ಲಿ ಮಿಂಚು ಹರಿಸಿದ್ದ ಟೆನ್ನಿಸ್:


ಇನ್ನು, ಟೆನ್ನಿಸ್ ಕೃಷ್ಣ ಎಂದಾಕ್ಷಣ ಎಲ್ಲರ ಮುಖದಲ್ಲಿ ಒಮ್ಮೆ ನಗು ಬರುತ್ತಿತ್ತು. 90ರ ದಶಕದಲ್ಲಿ ಟೆನ್ನಿಸ್ ಕೃಷ್ಣ ಎಲ್ಲರ ಮನೆ ಮಾತಾಗಿದ್ದರು. ದೊಡ್ಡಣ್ಣ ಸೇರಿ ಸಾಕಷ್ಟು ಸ್ಟಾರ್​ ನಟರ ಜೊತೆ ಅವರು ನಟಿಸಿದ್ದಾರೆ. ಆದರೆ ಇದಿಗ ಕಳೆದ ಕೆಲ ವರ್ಷಗಳಿಂದ ಅವರು ಅಷ್ಟಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿಲ್ಲ. ಈ ಕಾರಣದಿಂದ ಅವರು ಸಿನಿಮಾರಂಗದಿಂದ ದೂರ ಉಳಿದಿದ್ದಾರೆ ಎಂದರೂ ತಪ್ಪಾಗಲಾರದು. ಆದರೆ ಇದಿಗ ಅವರ ರಾಜಕೀಯ ಪ್ರವೇಶ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಅಲ್ಲದೇ ಚಿತ್ರರಂಗದಂತೆಯೇ ರಾಜಕೀಯದಲ್ಲಿಯೂ ಅವರು ಯಶಸ್ಸನ್ನು ಪಡೆಯುತ್ತಾರೆಯೇ ಎಂದು ಕಾದು ನೋಡಬೇಕಿದೆ.


ಇದನ್ನೂ ಓದಿ: Ram Charan: RRR ಚಿತ್ರವನ್ನೂ ಮೀರಿಸಲಿದ್ಯಾ ರಾಮ್ ಚರಣ್ ಸಿನಿಮಾ? ಬಜೆಟ್ ಕೇಳಿ ಶಾಕ್ ಆದ ಟಾಲಿವುಡ್​!


ಟೆನ್ನಿಸ್ ಕೋಚ್​ ಆಗಿದ್ದ ನಟ:


ಹೌದು, ಟೆನ್ನಿಸ್ ಕೃಷ್ಣ ಅವರು ಚಿತ್ರರಂಗಕ್ಕೆ ಬರುವ ಮುನ್ನ ಟೆನ್ನಿಸ್ ಕೋಚ್ ಆಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರ ಕೃಷ್ನ ಎಂಬ ಹೆಸರಿನ ಹಿಂದುಗಡೆ ಟೆನ್ನಿಸ್ ಎನ್ನುವುದು ಸೇರ್ಪಡೆಯಾಯಿತು. ಇದಾದ ಬಳಿಕ ಅವರು ಚಿತ್ರರಂಗದಲ್ಲಿ ಟೆನ್ನಿಸ್ ಕೃಷ್ಣ ಎಂದೇ ಪ್ರಸಿದ್ಧರಾದರು.

top videos
    First published: