1 ಕೋಟಿ 60 ಲಕ್ಷ ವಂಚನೆ; ಸ್ಯಾಂಡಲ್​ವುಡ್​ ನಟ ಅರೆಸ್ಟ್!

.

.

ಆನಂದ್​​ ರೆಡ್ಡಿ​ ಲಾಗಿ ಕ್ಯಾಶ್​ ಕಂಪೆನಿಯಲ್ಲಿ ಎಟಿಎಂಗೆ ಹಣ ಡಿಸ್ಟ್ರಿಬ್ಯುಟರ್​ ಆಗಿ ಕೆಲಸ ಮಾಡುತ್ತಿದ್ದರು. ಕಂಪೆನಿ ಕಡೆಯಿಂದ ಎಟಿಂಎಂಗೆ ಹಣ ತುಂಬಿಸುವ ಕೆಲಸ ಮಾಡುತ್ತಿದ್ದರು.

 • Share this:

  ಬೆಂಗಳೂರು: ಹಣ ವಂಚನೆಯ ಆರೋಪದಡಿ ‘ಕಾಫಿ ಕಟ್ಟೆ‘ ಸಿನಿಮಾದ ನಾಯಕ ನಟ ಆನಂದ್​​ ರೆಡ್ಡಿ ಅವರನ್ನು ಪುಲಿಕೇಶಿನಗರದ ಪೊಲೀಸರು ಬಂಧಿಸಿದ್ದಾರೆ.


  ಆನಂದ್​​ ರೆಡ್ಡಿ​ ಲಾಗಿ ಕ್ಯಾಶ್​ ಕಂಪೆನಿಯಲ್ಲಿ ಎಟಿಎಂಗೆ ಹಣ ಡಿಸ್ಟ್ರಿಬ್ಯುಟರ್​ ಆಗಿ ಕೆಲಸ ಮಾಡುತ್ತಿದ್ದರು. ಕಂಪೆನಿ ಕಡೆಯಿಂದ ಎಟಿಂಎಂಗೆ ಹಣ ತುಂಬಿಸುವ ಕೆಲಸ ಮಾಡುತ್ತಿದ್ದರು. ಆದರೆ ಕಂಪೆನಿ ಎಟಿಎಂಗೆ ತುಂಬಿಸಲು ನೀಡುತ್ತಿದ್ದ ಹಣದಲ್ಲಿ ಅರ್ಧ ಹಣವನ್ನು ತನ್ನ ಕಿಸೆಗೆ ತುಂಬಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಹಾಗಾಗಿ ವಂಚನೆ ಆರೋಪ ಆನಂದ್​​ ರೆಡ್ಡಿ ಮೇಲೆ ಕೇಳಿ ಬಂದಿದೆ.


  ಈ ಸಂಬಂಧ ಕಂಪೆನಿಯು ಆನಂದ್​ ರಾವ್ ಮೇಲೆ ದೂರು ನೀಡಿತ್ತು.​ ಬರೋಬ್ಬರಿ 1 ಕೋಟಿ 60 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ.  ಈ ದೂರಿನ ಅನ್ವಯ ಪುಲಕೇಶಿ ನಗರದ ಪೋಲಿಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಆನಂದ್​ ರೆಡ್ಡಿ ಸಿನಿಮಾ ಮಾಡುವ ಗೀಳಿನಿಂದ ಹೀಗೆ ಮಾಡಿದ್ದರು ಎನ್ನಲಾಗಿದೆ. ಈತನಿಂದ ಮೂರು ಕಾರು, ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


  ಇದನ್ನೂ ಓದಿ: BSF ನೇಮಕಾತಿ: ಖಾಲಿ ಇರುವ 317 ಹುದ್ದೆಗಳಿಗೆ ಅರ್ಜಿ ಆಹ್ವಾನ


  ಇದನ್ನೂ ಓದಿ: ಬೇರ್​ಗ್ರಿಲ್ಸ್​-ರಜಿನಿಕಾಂತ್​ ಫಸ್ಟ್ ಮೋಷನ್​ ಪೋಸ್ಟರ್​ ಬಿಡುಗಡೆ​​; ಮ್ಯಾನ್​ ವರ್ಸಸ್​ ವೈಲ್ಡ್​​ನಲ್ಲಿ ತಲೈವಾ ಸ್ಟೈಲ್​ಗೆ ಅಭಿಮಾನಿಗಳು ಫಿದಾ


  ಇದನ್ನೂ ಓದಿ: ಶಿವಣ್ಣನ ಸಿನಿ ಪಯಣಕ್ಕೆ 34 ವರ್ಷ: ಇಲ್ಲಿದೆ ‘ಹ್ಯಾಟ್ರಿಕ್​ ಹೀರೋ‘ ಗೆಲುವಿನ ಓಟದ ಕಥೆ

  Published by:Harshith AS
  First published: