ಸ್ಯಾಂಡಲ್‌ವುಡ್‌ನ ಹೆಸರಾಂತ ಕೋರಿಯೋಗ್ರಾಫರ್ (Imran Sardhariya Cinema) ಇಮ್ರಾನ್ ಸರ್ದಾರಿಯಾ ಸದ್ಯ ಬಾಲಿವುಡ್‌ನ ಹೆಚ್ಚು ಬ್ಯುಸಿ ಆಗುತ್ತಿದೆ. ಬಂಗಾಳಿ ಇಂಡಸ್ಟ್ರಿಯಲ್ಲಿ ಒಂದಷ್ಟು ಪೋಜೆಕ್ಟ್ ಮಾಡಿರೋ ಇಮ್ರಾನ್ ಸರ್ದಾರಿಯಾ, ಇದೀಗ ಬಾಲಿವುಡ್ ಸಿಂಗರ್ ಹಿಮೇಶ್ (Choreographer Imran Sardhariya) ರೇಷಮಿಯಾ ಸ್ಪೆಷಲ್ ಆಲ್ಬಂ ಸಾಂಗ್ ವೊಂದಕ್ಕೆ ಇಮ್ರಾನ್ ಕೋರಿಯೋಗ್ರಾಫಿ ಮಾಡಿದ್ದಾರೆ. ಈ ಒಂದು ವಿಡಿಯೋಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ. 22 ಮಿಲಿಯನ್ ಜನ ಈ ವಿಡಿಯೋ ಸಾಂಗ್ ನೋಡಿ (Music Video Tere Alawa) ಖುಷಿ ಪಟ್ಟಿದ್ದಾರೆ. ಆ ಸಂತೋಷವನ್ನ ಕೋರಿಗ್ರಾಫರ್ ಇಮ್ರಾನ್ ಸರ್ದಾರಿಯಾ ಹಂಚಿಕೊಂಡಿದ್ದಾರೆ. ಜೊತೆಗೆ ಆಲ್ಬಂ ಸಾಂಗ್‌ನ ಮೇಕಿಂಗ್ (Himesh Reshammiya Music Video) ವಿಡಿಯೋ ಕೂಡ ಶೇರ್ ಮಾಡಿಕೊಂಡಿದ್ದಾರೆ.
ಕೋರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ ಬೇರೆ ಬೇರೆ ಭಾಷೆಯ ಸಿನಿಮಾರಂಗದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಬೆಂಗಾಲಿ ಸಿನಿರಂಗದಲ್ಲಿ ಈಗಾಗಲೇ ಎರಡು ಪ್ರೋಜೆಕ್ಟ್ ಮಾಡಿದ್ದಾರೆ. ಅಲ್ಲಿ ಸೂಪರ್ ಸ್ಟಾರ್‌ರಿಂದಲೂ ಭೇಷ್ ಎನಿಸಿಕೊಂಡಿದ್ದಾರೆ.
ಬಾಲಿವುಡ್ ಮ್ಯೂಸಿಕ್ ವಿಡಿಯೋಗೂ ಇಮ್ರಾನ್ ಕೋರಿಯೋಗ್ರಾಫಿ
ಇದೀಗ ಕೋರಿಯೋಗ್ರಾಫರ್ ಇಮ್ರಾನ್ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಇವರ ಕೋರಿಯೋಗ್ರಾಫಿಯ ಹಾಡೊಂದು ಈಗ ಭಾರೀ ಸೌಂಡ್ ಮಾಡುತ್ತಿದೆ. ಒಂದಲ್ಲ ಎರಡಲ್ಲ 22 ಮಿಲಿಯನ್ ವೀವರ್ಸ್ ಈ ಒಂದು ಹಾಡು ಪಡೆದಿದೆ. ಇದೇ ಖುಷಿಯಲ್ಲಯೇ ಇಮ್ರಾನ್ ತಮ್ಮ ಈ ಒಂದು ಹಾಡಿನ ಮೇಕಿಂಗ್ ವಿಡಿಯೋ ಶೇರ್ ಮಾಡಿದ್ದಾರೆ.
ಇಮ್ರಾನ್ ಸರ್ದಾರಿಯಾ ಮತ್ತು ಗಾಯಕ ಹಿಮೇಶ್ ರೇಷಮಿಯಾ ಒಟ್ಟಿಗೆ ಒಂದು ಪ್ರೋಜೆಕ್ಟ್ ಮಾಡಿದ್ದಾರೆ. "ತೇರೆ ಅಲಾವಾ" ಅನ್ನೋ ಈ ಮ್ಯೂಸಿಕಲ್ ವಿಡಿಯೋ ಸಖತ್ ಕಲರ್ ಫುಲ್ ಆಗಿಯೇ ಇದೆ.
ಹಿಮೇಶ್ ಮ್ಯೂಸಿಕ್ ವಿಡಿಯೋಗೆ ಇಮ್ರಾನ್ ಕೋರಿಯೋಗ್ರಾಫಿ
ಇದರ ಕೋರಿಯೋಗ್ರಾಫಿಯನ್ನ ಇಮ್ರಾನ್ ಸರ್ದಾರಿಯಾ ಮಾಡಿದ್ದಾರೆ. ಸಾಮಾನ್ಯವಾಗಿ ಮ್ಯೂಸಿಕ್ ವಿಡಿಯೋದಲ್ಲಿ ಸಖತ್ ಡ್ಯಾನ್ಸ್ ಕೂಡ ಇರುತ್ತವೆ. ಹಿಮೇಶ್ ರೇಷಮಿಯಾ ಅವರ ಈ ತೇರೆ ಅಲಾವಾ ಮೂಸಿಕ್ ವಿಡಿಯೋದಲ್ಲೂ ಆ ಎಲ್ಲ ಫ್ಲೆವರ್ ಇವೆ.
View this post on Instagram
ಹಿಮೇಶ್ ರೇಷಮಿಯಾ "ತೇರೆ ಅಲಾವಾ" ಹಾಡಿಗೆ 22 ಮಿಲಿಯನ್ ವೀವ್ಸ್
ಸ್ವತಃ ಹಿಮೇಶ್ ರೇಷಮಿಯಾ ಸಂಗೀತ-ಸಾಹಿತ್ಯ-ಗಾಯನದ ಈ ಮ್ಯೂಸಿಕ್ ವಿಡಿಯೋ ಈಗ ಧಮಾಕಾ ಮಾಡಿದೆ. ಯುಟ್ಯೂಬ್‌ನಲ್ಲಿ 22 ಮಿಲಿಯನ್ ಜನ ಈ ಒಂದು ಸಾಂಗ್ ಅನ್ನ ನೋಡಿದ್ದಾರೆ. ಕಳೆದ ತಿಂಗಳು 29 ರಂದು ಈ ವಿಡಿಯೋ ರಿಲೀಸ್ ಆಗಿತ್ತು.
ಇದರ ಖುಷಿಯನ್ನ ಇಡೀ ಟೀಮ್ ಸೆಲೆಬ್ರೇಟ್ ಮಾಡಿದೆ. ಕನ್ನಡದ ಕೋರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ ಕೂಡ ತಮ್ಮ ಕೋರಿಯೋಗ್ರಾಫಿಯ ಈ ಒಂದು ವಿಶೇಷ ಹಾಡಿನ ಮೇಕಿಂಗ್ ವಿಡಿಯೋವನ್ನ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡೋ ಮೂಲಕ ಖುಷಿಯನ್ನ ಹಂಚಿಕೊಂಡಿದ್ದಾರೆ.
ಬಾಲಿವುಡ್‌ನಲ್ಲೂ ಇಮ್ರಾನ್ ಸರ್ದಾರಿಯಾ ಹವಾ ಜೋರು
ಇನ್ನು ಇಮ್ರಾನ್ ಸರ್ದಾರಿಯಾ ಬಾಲಿವುಡ್ ಅಲ್ಲದೇ ಕನ್ನಡದ ಪ್ರೋಜೆಕ್ಟ್‌ಗಳನ್ನ ಕೂಡ ಮಾಡಿದ್ದಾರೆ. ಸಾಮಾನ್ಯವಾಗಿ ಪುನೀತ್ ರಾಜ್ ಕುಮಾರ್ ಸಿನಿಮಾಗಳಿಗೆ ಇಮ್ರಾನ್ ಕೋರಿಯೋಗ್ರಾಫಿ ಮಾಡಿದ್ದಾರೆ.
ಇದನ್ನೂ ಓದಿ: Kaddipudi Cinema: ದಶಕದ ಬಳಿಕ ಮತ್ತೆ ನೆನಪಾದ ಶಿವಣ್ಣನ ಕಡ್ಡಿಪುಡಿ ಸಿನಿಮಾ, ಈ ಚಿತ್ರದ ಹಿಂದಿದೆ ಒಂದು ಇಂಟ್ರಸ್ಟಿಂಗ್ ಸ್ಟೋರಿ
ಯೋಗರಾಜ್ ಭಟ್ ಚಿತ್ರಗಳಿಗೂ ಇಮ್ರಾನ್ ಕೋರಿಯೋಗ್ರಾಫಿ ಇರುತ್ತದೆ. ಅದರಂತೆ ಕನ್ನಡ, ಹಿಂದಿ, ಬೆಂಗಾಲಿ ಹೀಗೆ ಮೂರು ಕಡೆಗೂ ಇಮ್ರಾನ್ ಸರ್ದಾರಿಯಾ ಸದ್ಯ ಬ್ಯುಸಿ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ