ರಾಕಿಂಗ್​ ಜೋಡಿ ಯಶ್​-ರಾಧಿಕಾಗೆ ಶುಭ ಕೋರಿದ ಪ್ರಿಯಾ ಸುದೀಪ್​...!

Anitha E | news18
Updated:December 3, 2018, 2:20 PM IST
ರಾಕಿಂಗ್​ ಜೋಡಿ ಯಶ್​-ರಾಧಿಕಾಗೆ ಶುಭ ಕೋರಿದ ಪ್ರಿಯಾ ಸುದೀಪ್​...!
  • News18
  • Last Updated: December 3, 2018, 2:20 PM IST
  • Share this:
ರಾಕಿಂಗ್​ ಜೋಡಿ ಯಶ್​-ರಾಧಿಕಾ ದಂಪತಿ ಬಾಳಲಿ ಅದೃಷ್ಟ ಲಕ್ಷ್ಮಿಯ ಆಗಮ. ನಿನ್ನೆ (ಡಿ.2) ಜೂನಿಯರ್ ಸಿಂಡ್ರೆಲ್ಲಾಗೆ ಜನ್ಮ ನೀಡಿದ ರಾಧಿಕಾಗೆ ಆಪ್ತರು, ಕುಟುಂಬ ಸದಸ್ಯರು ಶುಭ ಕೋರಿದ್ದಾರೆ. ಅಷ್ಟೆ ಅಲ್ಲದೇ ಇಡೀ ಚಂದನವನ ಮಗುವಿಗೆ ಸ್ವಾಗತಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾಶಿಯಲ್ಲಿ ಗಂಗೆಯ ಮಡಿಲು ಸೇರಿದ ಕಾವೇರಿ ಪುತ್ರ ಅಂಬಿ

ಯಶ್ ಹಾಗೂ ರಾಧಿಕಾ ಪಂಡಿತ್, ಅಪ್ಪ-ಅಮ್ಮನಾಗಿರೋ ಖುಷಿಯಲ್ಲಿದ್ದಾರೆ. ಜೂನಿಯರ್ ರಾಧಿಕಾಗೆ ಜನ್ಮ ನೀಡಿರೋ ಅಮ್ಮ ರಾಧಿಕಾ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಯಶ್​-ರಾಧಿಕಾ ಕುಟುಂಬಕ್ಕೆ ಬಂದಿರುವ ಈ ಹೊಸ ಸದಸ್ಯೆಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಷಯಗಳ ಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ: ನೆನಪಿನ ಬುತ್ತಿಯಿಂದ: ಅಂಬಿ ಮಾಮನ ಅಗಲಿಕೆಯ ನೋವಿನಿಂದ ಇನ್ನೂ ಹೊರ ಬರದ ಕಿಚ್ಚ

ಕಿಚ್ಚ ಸುದೀಪ್ ಹೆಂಡತಿ ಪ್ರಿಯಾ ಟ್ವಿಟ್ಟರ್​ನನಲ್ಲಿ ಯಶ್ ರಾಧಿಕಾಗೆ ಶುಭ ಕೋರಿದ್ದಾರೆ. ಯಶ್​-ರಾದಿಕಾ ಜತೆ ಇರುವ ಚಿತ್ರದೊಂದಿಗೆ ನಿಮ್ಮ ಮಗಳು ಜೀವನ ಬೆಳಗಲಿ ಎಂದು ಹರಸಿದ್ದಾರೆ.ಇನ್ನು ನಟಿ ರಾಗಿಣಿ ದ್ವಿವೇದಿ, ನಿರ್ದೇಶಕ ಶಶಾಂಕ್​, ಪವನ್ ಒಡೆಯಾರ್ ಕೂಡ ಯಶ್ -ರಾಧಿಕಾಗೆ ಶುಭ ಕೋರಿದ್ದಾರೆ.

ಸಾಕಷ್ಟು ಅಭಿಮಾನಿಗಳು ಕೂಡ ಹರ್ಷ ವ್ಯಕ್ತಪಡಿಸುತ್ತಿದ್ದು, ಸಾಲು ಸಾಲು ಶುಭ ಹಾರೈಕೆಯ ಸಂದೇಶಗಳು ಬರುತ್ತಿವೆ. ಇನ್ನುಳಿದಂತೆ ತಾಯಿ ಮಗು ಇಬ್ಬರ ಆರೋಗ್ಯವೂ ಚನ್ನಾಗಿದ್ದು, ಮಗು ಮುರೂವರೆ ಕೆಜಿ ತೂಕ ಇದೆಯಂತೆ. ಮಂಗಳವಾರ ಅಥವಾ ಬುಧವಾರ ರಾಧಿಕಾ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಲಿದ್ದು, ಮಗುವಿನ ನಾಮಕರಣ ಶಾಸ್ತ್ರವನ್ನ ಒಂದೊಳ್ಳೆ ಶುಭ ಗಳಿಗೆಯಲ್ಲಿ ಇಡಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ. 
First published:December 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading