Deepavali: ಅಭಿಮಾನಿಗಳಿಗೆ ದೀಪಾವಳಿ ಹಬ್ಬಕ್ಕೆ ಶುಭ ಕೋರಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು..!

ಸ್ಯಾಂಡಲ್​ವುಡ್ ನಟ-ನಟಿಯರು ಅಭಿಮಾನಿಗಳಿಗೆ ದೀಪಗಳ ಹಬ್ಬಕ್ಕೆ ಶುಭ ಕೋರಿದ್ದಾರೆ. ಶಿವರಾಜ್​ಕುಮಾರ್​, ದರ್ಶನ್​, ಧನಂಜಯ್​, ಸುದೀಪ್​, ಪ್ರಣೀತಾ, ಸುಧಾರಾಣಿ, ತಾರಾ, ಶ್ರುತಿ ಸೇರಿದಂತೆ ಹಲವಾರು ಮಂದಿ ವಿಶ್​ ಮಾಡಿದ್ದಾರೆ.

ದೀಪಾವಳಿಗೆ ಶುಭ ಕೋರಿದ ಸ್ಯಾಂಡಲ್​ವುಡ್​ ಸ್ಟಾರ್ಸ್​

ದೀಪಾವಳಿಗೆ ಶುಭ ಕೋರಿದ ಸ್ಯಾಂಡಲ್​ವುಡ್​ ಸ್ಟಾರ್ಸ್​

  • Share this:
ಬೆಳಕಿನ ಹಬ್ಬ ದೀಪಾವಳಿಯನ್ನು ಈ ಸಲ ಕೊರೋನಾದಿಂದಾಗಿ ಅದ್ಧೂರಿಯಾಗಿ ಅಲ್ಲದಿದ್ದರೂ, ಸರಳವಾಗಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೀಪಗಳ ಹಬ್ಬ ದೀಪಾವಾಳಿ ಮೂರ್ನಾಲ್ಕು ದಿನಗಳ ಹಬ್ಬ. ದೀಪಾವಳಿ ಹಬ್ಬದಲ್ಲಿ ಗೋ ಪೂಜೆ, ಲಕ್ಷ್ಮಿ ಪೂಜೆ ಹಾಗೂ ಬಲಿ ಪಾಡ್ಯಮಿಯನ್ನು ಆಚರಿಸಲಾಗುತ್ತದೆ. ದೀಪಾವಳಿಯ ಮೂರನೇಯ ದಿನದಂದು ಬಲಿ ಪಾಡ್ಯಮಿ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬಕ್ಕಾಗಿ ಮನೆ ಹಾಗೂ ಕಚೇರಿಗಳನ್ನಜ ಸ್ವಚ್ಛಗೊಳಿಸಿ, ಅಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿಯಿಂದ ಅಲಂಕರಿಸಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಜೊತೆಗೆ ಪಟಾಕಿ ಸಿಡಿಸಲಾಗುತ್ತದೆ. ಆದರೆ ಈ ಸಲ ಕೊರೋನಾ ಕಾರಣದಿಂದ ಪಟಾಕಿಗಳ ಮೇಲೂ ನಿಷೇಧ ಹೇರಲಾಗಿದ್ದು, ಹಸಿರು ಪಟಾಕಿಗಳ ಖರೀದಿಗೆ ಮಾತ್ರ ಅನುಮತಿ ನೀಡಲಾಗಿದೆ. ಇನ್ನು ಎಲ್ಲರೂ ಹಬ್ಬದ ಸಂಭ್ರಮದಲ್ಲಿದ್ದಾರೆ. ಸೆಲೆಬ್ರಿಟಿಗಳೂ ಸಹ  ಅಭಿಮಾನಿಗಳಿಗೆ ಶುಭ  ಕೋರುವುದರೊಂದಿಗೆ  ತಮ್ಮ ಹೊಸ ಸಿನಿಮಾಗಳ ಪ್ರಕಟಣೆ ಮಾಡುತ್ತಿದ್ದಾರೆ.

ಸ್ಯಾಂಡಲ್​ವುಡ್ ನಟ-ನಟಿಯರು ಅಭಿಮಾನಿಗಳಿಗೆ ದೀಪಗಳ ಹಬ್ಬಕ್ಕೆ ಶುಭ ಕೋರಿದ್ದಾರೆ. ಶಿವರಾಜ್​ಕುಮಾರ್​, ದರ್ಶನ್​, ಧನಂಜಯ್​, ಸುದೀಪ್​, ಪ್ರಣೀತಾ, ಸುಧಾರಾಣಿ, ತಾರಾ, ಶ್ರುತಿ ಸೇರಿದಂತೆ ಹಲವಾರು ಮಂದಿ ವಿಶ್​ ಮಾಡಿದ್ದಾರೆ. ಅದರಲ್ಲೂ ಶಿವಣ್ಣ ತಮ್ಮ ತಂದೆ ಜೊತೆಗೆ ದೀಪಾವಳಿ ಆಚರಿಸಿದ್ದ ನೆನಪನ್ನು ಮೆಲುಕು ಹಾಕಿದ್ದಾರೆ.
ಬದುಕಿನ ಅಂಧಕಾರಗಳೆಲ್ಲವೂ ದೂರವಾಗಿ ಎಲ್ಲರ ಮನೆ ಮನಗಳಲ್ಲಿ ನೆಮ್ಮದಿ, ಖುಷಿ ಸಡಗರ ತುಂಬಿ ತುಳುಕಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ, ತೂಗುದೀಪ ಪರಿವಾರದಿಂದ ಸರ್ವರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು ಎಂದು ದರ್ಶನ್​ ಟ್ವೀಟ್​ ಮಾಡುವುದರೊಂದಿಗೆ ಇನ್​ಸ್ಟಾಗ್ರಾಂನಲ್ಲೂ ಪೋಸ್ಟ್ ​ಮಾಡಿದ್ದಾರೆ.
ಪ್ರಣೀತಾ ಸುಭಾಷ್​ , ಸುಧಾರಾಣಿ, ಶ್ರುತಿ ಹಾಗೂ ತಾರಾ ವಿಡಿಯೋ ಮಾಡುವ ಮೂಲಕ ವಿಶ್​ ಮಾಡಿದ್ದಾರೆ.View this post on Instagram


A post shared by Shruthi (@shruthi__krishnaa)
ಜ್ಞಾನವುಳ್ಳ ಮನುಷ್ಯರಂತೆ ಅನ್ಯರಿಗೆ ತೊಂದರೆ ಕೊಡದಂತೆ ಬೆಳಕಿನ ಹಬ್ಬ ಆಚರಿಸುವ ಎಂದು ಜಗ್ಗೇಶ್​ ಶುಭಕೋರಿದ್ದಾರೆ.
Published by:Anitha E
First published: