Dr. Rajkumar Birthday: ವರನಟ ರಾಜಣ್ಣನ 90ನೇ ಹುಟ್ಟುಹಬ್ಬಕ್ಕೆ ಶುಭಕೋರಿದ ಅಪ್ಪು, ದಚ್ಚು, ಕಿಚ್ಚ, ಜಗ್ಗೇಶ್​ ಹಾಗೂ ಗಣೇಶ್​

ಎಷ್ಟೇ ಹಿರಿಯ ಹಾಗೂ ಅದ್ಭುತ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ರಾಜಣ್ಣ ಅವರಿಗೆ ಬಣ್ಣ ಹಚ್ಚಿಕೊಂಡು, ಬಣ್ಣದ ಬಟ್ಟೆ ತೊಟ್ಟು ಕ್ಯಾಮೆರಾ ಮುಂದೆ ಹೋಗುವಾಗ ಸಹಾ ಭಯ ಇರುತ್ತಿತ್ತಂತೆ ಗೊತ್ತಾ. ಈ ವರದಿ ಓದಿ ಅದೇನು ಅಂತ ನಿಮಗೆ ತಿಳಿಯುತ್ತೆ.

Anitha E | news18
Updated:April 24, 2019, 6:46 PM IST
Dr. Rajkumar Birthday: ವರನಟ ರಾಜಣ್ಣನ 90ನೇ ಹುಟ್ಟುಹಬ್ಬಕ್ಕೆ ಶುಭಕೋರಿದ ಅಪ್ಪು, ದಚ್ಚು, ಕಿಚ್ಚ, ಜಗ್ಗೇಶ್​ ಹಾಗೂ ಗಣೇಶ್​
ರಾಜಣ್ಣನ ಹುಟ್ಟುಹಬ್ಬಕ್ಕೆ ಶುಭಕೋರಿದ ತಾರೆಯರು
Anitha E | news18
Updated: April 24, 2019, 6:46 PM IST
- ಅನಿತಾ ಈ, 

ಇಂದು ವರನಟ ರಾಜ್​ಕುಮಾರ್​ ಅವರ 90ನೇ ವರ್ಷದ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟನಿಗೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಶುಭಕೋರಿದ್ದಾರೆ. ಕೆಲವರು ರಾಜಣ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಬರೆದರೆ, ಮತ್ತೆ ಕೆಲವರು ಅವರೊಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: Dr. Rajkumar Memories: ಅಣ್ಣಾವ್ರು ಮೈಯೆಲ್ಲಾ ಕೆಸರು ಮಾಡಿಕೊಂಡಿದ್ದ ಘಟನೆ...

ರಾಜಣ್ಣ ಕೊನೆಯ ಹಾಗೂ ಮುದ್ದಿನ ಮಗ ಪುನೀತ್​ ರಾಜ್​ಕುಮಾರ್ ತನ್ನ ನೆಚ್ಚಿನ ನಟ ಹಾಗೂ ದಾರಿದೀಪವಾಗಿದ್ದ ಅಪ್ಪನಿಗೆ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ. ಅದರ ಜತೆಗೆ ಅವರ ಒಂದು ಆಡಿಯೋವನ್ನು ಅಪ್ಪನ ನೆನಪಿನಲ್ಲಿ ಪೋಸ್ಟ್ ಮಾಡಿದ್ದಾರೆ.

ಎಷ್ಟೇ ಹಿರಿಯ ಹಾಗೂ ಅದ್ಭುತ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ರಾಜಣ್ಣ ಅವರಿಗೆ ಬಣ್ಣ ಹಚ್ಚಿಕೊಂಡು, ಬಣ್ಣದ ಬಟ್ಟೆ ತೊಟ್ಟು ಕ್ಯಾಮೆರಾ ಮುಂದೆ ಹೋಗುವಾಗ ಸಹಾ ಭಯ ಇರುತ್ತಿತ್ತಂತೆ. ಆದರೆ ಪ್ರಯತ್ನ ಅನ್ನೋದು ಮಾತ್ರ ಇರಲೇಬೇಕು ಎಂದು ಅಣ್ಣಾವ್ರು ಹೇಳಿರುವ ಪ್ರೇರಣೆ ತುಂಬಿದ ಮಾತನ್ನು ಕೇಳಿ...ಸ್ಯಾಂಡಲ್​ವುಡ್​ನ ಡಿಬಾಸ್​ ದರ್ಶನ್​ ಸಹ ನಲ್ಮೆಯ ನಟ ರಾಜಣ್ಣನಿಗೆ ಹುಟ್ಟುಹಬ್ಬದ ದಿನ ನಮನ ಸಲ್ಲಿಸಿದ್ದಾರೆ. ಅಲ್ಲದೆ ರಾಜ್​ ನಡೆದು ಬಂದ ದಾರಿ ಹಾಗೂ ಅವರ ಆದರ್ಶಗಳ ಬಗ್ಗೆ ಟ್ವೀಟ್​ ಮಾಡಿದ್ದಾರೆ.
Loading...
ಚಂದನವನದ ನವರಸ ನಾಯಕ ಜಗ್ಗೇಶ್​ ಅವರು ಸಹ ರಾಜಣ್ಣನ ಜತೆಗಿನ ಸಂಬಂಧದ ಕುರಿತು ತುಂಬಾ ಸೊಗಸಾಗಿ ಬರೆದುಕೊಂಡಿದ್ದಾರೆ. ಅಲ್ಲದೆ ರಾಜಣ್ಣನ ನೆನಪು ಸದಾ ಇರಲೆಂದು ಜಗ್ಗೇಶ್​ ತಮ್ಮ ದೊಡ್ಡ ಮಗನ ಮದುವೆಯನ್ನು ರಾಜ್​ ಅವರ ಹುಟ್ಟುಹಬ್ಬದಂದೇ ಮಾಡಿಸಿದ್ದಾರಂತೆ. ಹೀಗೆಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.ರಾಜ್​ಕುಮಾರ್ ಅವರ ಹುಟ್ಟುಹಬ್ಬ ಅವರ ಅಭಿಮಾನಿಗಳು, ಕುಟುಂಬದವರಿಗೆ ಹಾಗೂ ಅವರನ್ನು ಇಷ್ಟ ಪಡುವವರಿಗೆ ಒಂದು ದೊಡ್ಡ ಹಬ್ಬ ಇದ್ದಂತೆ. ಸಿನಿ ರಂಗ ಇರುವವರೆಗೂ ರಾಜಣ್ಣನ ಹೆಸರು ಚಿರವಾಗುತ್ತದೆ ಎಂದು ಕಿಚ್ಚ ಸುದೀಪ್​ ಭಾವನಾತ್ಮಕವಾಗಿ ಟ್ವೀಟ್​ ಮಾಡಿದ್ದಾರೆ.ಗೋಲ್ಡನ್​ ಸ್ಟಾರ್ ಗಣೇಶ್​ ಸಹ ರಾಜ್​ಕುಮಾರ್​ ಅವರೊಂದಿಗೆ ತೆಗೆಸಿಕೊಂಡ ಚಿತ್ರದ ಜೊತೆಗೆ ರಾಜಣ್ಣನಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ್ದಾರೆ.Dr. Rajkumar Rare Photos: ವಿಭಿನ್ನ ಪಾತ್ರಗಳಲ್ಲಿ ಅಣ್ಣಾವ್ರು: ಹಿರಿಯ ಛಾಯಾಗ್ರಾಹಕ ಅಶ್ವತ್ಥನಾರಾಯಣ ಅವರ ಸಂಗ್ರಹದಿಂದ...!

First published:April 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...