• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಕನ್ನಡಕ್ಕಾಗಿ ಒಂದಾದ ಚಂದನವನ: ಶಿವಣ್ಣ ಬಳಿಕ ಧ್ವಜ ಸುಟ್ಟವರ ವಿರುದ್ಧ ಗಣೇಶ್​, ದುನಿಯಾ ವಿಜಯ್​ ಗರಂ!

ಕನ್ನಡಕ್ಕಾಗಿ ಒಂದಾದ ಚಂದನವನ: ಶಿವಣ್ಣ ಬಳಿಕ ಧ್ವಜ ಸುಟ್ಟವರ ವಿರುದ್ಧ ಗಣೇಶ್​, ದುನಿಯಾ ವಿಜಯ್​ ಗರಂ!

ಗಣೇಶ್​, ದುನಿಯಾ ವಿಜಯ್​, ವಿನೋದ್​ ಪ್ರಭಾಕರ್​

ಗಣೇಶ್​, ದುನಿಯಾ ವಿಜಯ್​, ವಿನೋದ್​ ಪ್ರಭಾಕರ್​

ಶಿವಣ್ಣ ಬಳಿಕ ಇದೀಗ ದುನಿಯಾ ವಿಜಿ(Duniya Vijay), ಗೋಲ್ಡನ್​ ಸ್ಟಾರ್​ ಗಣೇಶ್(Golden Star Ganesh)​, ಪ್ರಜ್ವಲ್​ ದೇವರಾಜ್(Prajwal Devaraj)​, ನಟಿ ಮೇಘನಾ ಗಾವ್ಕಂರ್(Meghan)​ ಹಾಗೂ ಮರಿ ಟೈಗರ್​ ವಿನೋದ್​ ಪ್ರಭಾಕರ್(Vinod Prabhakar)​ ಕಿಡಿಕಾರಿದ್ದಾರೆ. ಕನ್ನಡಕ್ಕಾಗಿ ಸ್ಯಾಂಡಲ್​ವುಡ್​ ಸ್ಟಾರ್ಸ್​ ಮತ್ತೊಮ್ಮೆ ಒಂದಾಗಿದ್ದಾರೆ.

ಮುಂದೆ ಓದಿ ...
  • Share this:

ಕನ್ನಡ ಧ್ವಜ ಸುಟ್ಟು ಎಂಇಎಸ್ (MES)​ ಕಾರ್ಯಕರ್ತರು ಉದ್ಧಟತನ ಮೆರೆದಿದ್ದಾರೆ. ಕನ್ನಡ ಧ್ವಜ ಸುಟ್ಟವರ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಧ್ವಜ ಸುಟ್ಟು ಆವಾಜ್​ ಹಾಕಿದ್ದ ಎಂಇಎಸ್​ ಕಾರ್ಯಕರ್ತರನ್ನು ಕನ್ನಡಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ  ಸ್ಯಾಂಡಲ್​ವುಡ್ (Sandalwood)​ ಸ್ಟಾರ್ಸ್​ ಕೂಡ ಸಾಥ್​ ನೀಡಿದ್ದಾರೆ. ಜಗ್ಗೇಶ್ (Jaggesh)​, ಹಾಗೂ ಶಿವಣ್ಣ (Shivanna) ಈ ಬಗ್ಗೆ ಪೋಸ್ಟ್​ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಎಂಇಎಸ್‌ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದಿದ್ದನ್ನು ಖಂಡಿಸಿ ಎಂಇಎಸ್‌ನ ಕೆಲವರು ಮಹಾರಾಷ್ಟ್ರ (Maharashtra) ದ ಕೊಲ್ಲಾಪುರದಲ್ಲಿ ಪ್ರತಿಭಟನೆ ಮಾಡಿದ್ದು, ಕನ್ನಡ ಧ್ವಜಕ್ಕೆ (Kannada Flag) ಬೆಂಕಿ ಇಟ್ಟಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೆಲವು ಎಂಇಎಸ್ ಬೆಂಬಲಿಗರು, ''ಈಗ ಕನ್ನಡ ಧ್ವಜಕ್ಕೆ ಬೆಂಕಿ ಇಡಲಾಗಿದೆ, ಮುಂದೆ ಕನ್ನಡಿಗರ ಮನೆಗೆ ಬೆಂಕಿ ಇಡುತ್ತೇವೆ'' ಎಂದು ಬರೆದು ಕೊಂಡಿದ್ದಾರೆ. ಇದಕ್ಕೆ ರಾಜ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಶಿವಣ್ಣ ಬಳಿಕ ಇದೀಗ ದುನಿಯಾ ವಿಜಿ (Duniya Vijay), ಗೋಲ್ಡನ್​ ಸ್ಟಾರ್​ ಗಣೇಶ್ (Golden Star Ganesh)​, ಪ್ರಜ್ವಲ್​ ದೇವರಾಜ್ (Prajwal Devaraj)​, ನಟಿ ಮೇಘನಾ ಗಾವ್ಕಂರ್ (Meghan)​ ಹಾಗೂ ಮರಿ ಟೈಗರ್​ ವಿನೋದ್​ ಪ್ರಭಾಕರ್ (Vinod Prabhakar)​ ಕಿಡಿಕಾರಿದ್ದಾರೆ. ಕನ್ನಡಕ್ಕಾಗಿ ಸ್ಯಾಂಡಲ್​ವುಡ್​ ಸ್ಟಾರ್ಸ್​ ಮತ್ತೊಮ್ಮೆ ಒಂದಾಗಿದ್ದಾರೆ. ಈ ವಿಚಾರ ಇದೀಗ ಭಾರಿ ಚರ್ಚೆ ಆಗುತ್ತಿದೆ. 


ಸ್ವಾಭಿಮಾನದ ಕಿಚ್ಚು ಸುಟ್ಟಿದ್ದಾರೆ ಎಂದ ಗಣೇಶ್​!


ಕನ್ನಡ ಧ್ವಜ ಸುಟ್ಟವರ ವಿರುದ್ಧ ಆಕ್ರೋಶ ಹೊರ ಹಾಕಿದ ನಟ ಗಣೇಶ್, "ಅವರು ಸುಟ್ಟಿದ್ದು ಧ್ವಜವಲ್ಲ, ಕನ್ನಡಿಗರ ಸ್ವಾಭಿಮಾನದ ಕಿಚ್ಚು. ಭುವನೇಶ್ವರಿಯ ಮುಕುಟ ಎಂದೂ ಮುಕ್ಕಾಗದು. ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು. ಜೈ ಕನ್ನಡಾಂಬೆ" ಎಂದು ನಟ ಗಣೇಶ್‌ ಟ್ವೀಟ್​ ಮಾಡಿದ್ದಾರೆ. ಈ ಟ್ವೀಟ್​ ಅನ್ನು ಸಾವಿರಾರು ಕನ್ನಡಿಗರು ಶೇರ್ ಮಾಡಿಕೊಂಡಿದ್ದಾರೆ.ಇದನ್ನು ಓದಿ : ಕನ್ನಡ ಧ್ವಜ ಸುಟ್ಟ ಕಿಡಿಗೇಡಿಗಳು: `ಆಳ್​ ಕನ್ನಡ ತಾಯ್​​, ಬಾಳ್​ ಕನ್ನಡ ತಾಯ್’ ಎಂದು ಶಿವಣ್ಣ ವಾರ್ನಿಂಗ್​!


ದ್ರೋಹಿಗಳನ್ನು ಬಂಧಿಸಿ ಎಂದ ದುನಿಯಾ ವಿಜಯ್​!


ಕನ್ನಡ ಬಾವುಟ ಸುಟ್ಟಿರುವ ವಿಚಾರವಾಗಿ ನಟ ದುನಿಯಾ ವಿಜಯ್‌ ಕೂಡ ಟ್ವೀಟ್‌ ಮಾಡಿದ್ದಾರೆ. "ನಾಡು, ನುಡಿ, ಭಾಷೆ ನಮ್ಮ ಉಸಿರಾಟದ ಒಂದು ಭಾಗ. ಕನ್ನಡಕ್ಕೆ ಮಾಡಿದ ಅವಮಾನವನ್ನು ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸೆವು. ನಾಡಧ್ವಜ ಸುಟ್ಟ ದ್ರೋಹಿಗಳನ್ನು ಬಂಧಿಸಿ ನಮ್ಮ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ". ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.ಇದನ್ನು ಓದಿ : ಅಪ್ಪು ಮುಂದೆ ಮಂಡಿಯೂರಿ ಭಾವುಕರಾದ ರವಿಚಂದ್ರನ್​: ಕಣ್ಣೀರು ತರಿಸುತ್ತೆ ಈ ಫೋಟೋ!


ಅವರು ಹೇಡಿಗಳು ಎಂದ ಪ್ರಜ್ವಲ್​ ದೇವರಾಜ್​!


ನಟ ಪ್ರಜ್ವಲ್‌ ದೇವರಾಜ್‌ ಕನ್ನಡ ಧ್ವಜವನ್ನು ಸುಟ್ಟವರನ್ನ ಹೇಡಿಗಳು ಎಂದು ಕರೆದಿದ್ದಾರೆ. " ಕನ್ನಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲಿ ಕನ್ನಡ ಹೋರಾಟಗಾರರನ್ನು ಬಿಡುಗಡೆ ಗೊಳಿಸಿ. ಜೈ ಕನ್ನಡ, ಜೈ ಕರ್ನಾಟಕ" ಎಂದು ಪೋಸ್ಟ್​ ಮಾಡಿದ್ದಾರೆ.
ಬಾವುಟ ಸುಟ್ಟವರಿಗೆ ಶಿಕ್ಷೆ ಆಗಬೇಕು ಎಂದ ವಿನೋದ್​


"ಜೈ ಕರ್ನಾಟಕ, ನಮ್ಮ ಕನ್ನಡದ ಬಾವುಟ ನಮ್ಮ ಘನತೆ, ಗೌರವ, ಅಸ್ಮಿತೆಯ ಸಂಕೇತ. ಕನ್ನಡ ಧ್ವಜಕ್ಕೆ ಮಾಡಿದ ಅವಮಾನ ಕನ್ನಡಿಗರಿಗೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಮಾಡುವ ಅವಮಾನ. ಕನ್ನಡ ಧ್ವಜವನ್ನು ಸುಟ್ಟು ಅವಮಾನಿಸಿದ ಕನ್ನಡ ದ್ರೋಹಿಗಳನ್ನು ತಕ್ಷಣ ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳಿ. ಅದೇ ರೀತಿ ಬಂಧಿಸಿರುವ ಕನ್ನಡ ಹೋರಾಟಗಾರರನ್ನು ಬಿಡುಗಡೆ ಗೊಳಿಸಿ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ". ಎಂದು ನಟ ವಿನೋದ್‌ ಪ್ರಭಾಕರ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಇನ್ನೂ ನಟಿ ಮೇಘನಾ ಗಾವ್ಕಂರ್​ ಕೂಡ ಕನ್ನಡಿಗರ ಪರ ನಿಂತಿದ್ದಾರೆ.

Published by:Vasudeva M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು