ಕೃಷಿ ಮಸೂದೆ ವಿರೋಧಿಸಿ ದೇಶದ ಹಲವೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲೂ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ವಿರುದ್ಧ ರೈತರು ಮತ್ತು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ನಡೆಸುತ್ತಿವೆ. ರೈತರು ನಡೆಸುತ್ತಿರುವ ಪ್ರತಿಭಟನೆಗಳು ಕೆಲವು ಕಡೆ ತೀವ್ರ ಸ್ವರೂಪ ಪಡೆದಿವೆ. ಪರಿಸ್ಥಿತಿ ಕೈ ಮೀರಿ ಹೋಗದಂತೆ ತಡೆಯಲು ಪೊಲೀಸರು ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಪ್ರತಿಭಟನಾಕಾರರನ್ನು ಅಲ್ಲಲ್ಲಿ ತಡೆದು ವಶಕ್ಕೆ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಪೊಲೀಸರು ರೈತ ಮುಖಂಡರು ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಅನ್ನದಾತನ ಪರವಾಗಿ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳೂ ನಿಂತಿದ್ದಾರೆ. ಅನ್ನ ನೀಡುವ ರೈತನಿಗೆ ತಮ್ಮ ಬೆಂಬಲ ಎನ್ನುತ್ತಾ ಸಾಮಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ ಸಿನಿ ತಾರೆಯರು.
ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳೂ ಬೆಂಬಲ ನೀಡಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮಾಡುವ ಮೂಲಕ ರೈತರ ಪರ ನಿಂತಿದ್ದಾರೆ. ಕೃಷಿ ಮಾಡಿ ರಾಜಕೀಯಕ್ಕೆ ಬಂದವರೆಂದು ಹೇಳುವವರೆ, ದಯವಿಟ್ಟು ಕೃಷಿಯಲ್ಲಿ ರಾಜಕೀಯ ಮಾಡಬೇಡಿ ಎಂದಿದ್ದಾರೆ.
ಕೃಷಿ ಮಾಡಿ ರಾಜಕೀಯಕ್ಕೆ ಬಂದವರೆಂದು ಹೇಳುವವರೆ,
ದಯವಿಟ್ಟು ಕೃಷಿಯಲ್ಲಿ ರಾಜಕೀಯ ಮಾಡಬೇಡಿ.
ರೈತರಿಗಾಗಿ ಮಸೂದೆ,ಅಂದರೆ
ಅವರ ಧಿಕ್ಕಾರ ಏತಕ್ಕೆ?
ಅವರನ್ನೇ ಕರೆತನ್ನಿ ..ಮಾರ್ಪಾಡಿಸಿ
ಒಬ್ಬ ರೈತನಿಗೆ ಕಾರ್ಪೋರೇಟ್ ಕಂಪನಿ ಒಳಗೆ ನೇರವಾಗಿ ಹೋಗಲು ಸಾಧ್ಯವಿಲ್ಲವಾದರೆ,
ಕಾರ್ಪೋರೇಟ್ ರವರಿಗೂ ಕೃಷಿಭೂಮಿಗೆ ಬರಲು ಮಾನದಂಡಗಳು ಬೇಕಲ್ಲವೆ..
— ಸುನಿ/SuNi (@SimpleSuni) September 28, 2020
ರೈತರು ಬೆಳೆದ ಬೆಳೆ ಸಂರಕ್ಷಿಸಲು ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿ, ಒಳ್ಳೆ ಬೆಲೆ ಬಂದಾಗ ಮಾರುವ ವ್ಯವಸ್ಥೆ ಮಾಡಿ ಸ್ವಾಲಂಬಿಗಳಾಗಿಸಿ. ಎಪಿಎಂಸಿ ಹಾಗು ಕಾರ್ಪೊರೇಟ್ ಕಂಪನಿಗಳ ಕಾಂಪಿಟೇಷನ್ ಇದ್ರೆ ರೈತನಿಗೆ ಒಳ್ಳೆ ಬೆಲೆ. ಕಾರ್ಪೊರೇಟ್ ದಬಳಿಕೆಗೆ ರೈತರನ್ನು ಬಲಿಕೊಡಬೇಡಿ,ಎಪಿಎಂಸಿ ಕಾಯ್ದೆ ಮತು ಭೂ ತಿದ್ದುಪಡೆ ಒಂದೆ ನಾಣ್ಯದ ಎರಡೂ ಮುಖಗಳು
— ಕೃಷ್ಣ / Krishna (@krisshdop) September 28, 2020
ಜನಾಭಿಪ್ರಾಯ ಕೇಳದೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದು ಹೋರಾಟ ! ಬಂದ್ !
“ಜನಾಭಿಪ್ರಾಯವೇ ಅಂತಿಮ” ಎನ್ನುವ ಪ್ರಣಾಳಿಕೆ ತನ್ನಿ ನನ್ನ ಮತ ನಿಮಗೆ ಎಂದು ಚುನಾವಣೆಯ ಸಮಯದಲ್ಲಿ ಜನ ಹೋರಾಡಿದರೆ ( ನಿರ್ಧಾರ ಮಾಡಿದರೆ ) ಎಲ್ಲ ಸಮಸ್ಯೆಗಳೂ ಬಂದ್ ಆಗುತ್ತದೆ, ಅಲ್ಲವೇ ?#upp #prajaakeeya
— Upendra (@nimmaupendra) September 23, 2020
ನಾಳೆಯ (ಸೆಪ್ಟೆಂಬರ್ 28 ರ) ಬಂದ್ಗೆ ನನ್ನ ಬೆಂಬಲ ಇಲ್ಲಿದೆ.
Here's my support for tomorrow's (September 28's) bandh in favour of our farmers.
Jai Karnataka#FarmersProtest #FarmersBill #BlackDayForFarmers #bandh #ScrapAntiFarmerActs pic.twitter.com/Gumk28CIrb
— Chetan Kumar / ಚೇತನ್ (@ChetanAhimsa) September 27, 2020
ಒಂದಲ್ಲೊಂದು ರೂಪದಲ್ಲಿ ನಾವೆಲ್ಲ ಕೃಷಿ ಹಿನ್ನೆಲೆಯಿಂದಲೇ ಬಂದವರು. ರಾಜಕಾರಣಿಯೋ, ಕಲಾವಿದರೋ ಅಥವಾ ಉದ್ಯಮಿಯೋ, ಅದು ಯಾರೇ ಆದರೂ ಸರಿ, ರೈತರು ತಮ್ಮ ಜಮೀನುಗಳಲ್ಲಿ ಕಷ್ಟಪಟ್ಟು ಬೆವರು ಹರಿಸಿ ಬೆಳೆ ಬೆಳೆದರೆ ಮಾತ್ರ ನಾವೆಲ್ಲ ಅಚ್ಚುಕಟ್ಟಾಗಿ ಕುಳಿತು ಭೋಜನ ಸವಿಯುವುದು. ಹಾಗಾಗಿ ಯಾರೇ ಆದರೂ ಸರಿ, ರೈತರ ಬಗ್ಗೆ ಅಗೌರವ ತೋರುವುದು ಸರಿಯಲ್ಲ.
— SRIIMURALI (@SRIMURALIII) September 23, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ