ಕೊರೋನಾ ಸೋಂಕಿನ ಭೀತಿಯಿಂದಾಗಿ ಲಾಕ್ಡೌನ್ ಮಾಡಿದಾಗಿನಿಂದ ಜಿಮ್ಗಳನ್ನು ತೆರೆದಿರಲಿಲ್ಲ. ಇದರಿಂದಾಗಿ ಮನೆಗಳಲ್ಲಿ ಲಭ್ಯವಿರುವ ಸೌಲಭ್ಯಗಳಿಂದಲೇ ಜನರು ಹಾಗೂ ಸೆಲೆಬ್ರಿಟಿಗಳು ಫಿಟ್ನೆಸ್ಗಾಗಿ ವರ್ಕೌಟ್ ಮಾಡುತ್ತಿದ್ದರು. ಆದರೆ ಹಂತ ಹಂತವಾಗಿ ಅನ್ಲಾಕ್ ಆಗುತ್ತಿದ್ದಂತೆಯೇ ಜಿಮ್ಗಳ ಬಾಗಿಲು ತೆರೆಯಲಾಯಿತು. ಅದೂ ಸಹ ಸ್ವಚ್ಛತೆಗೆ ಮಹತ್ವ ಕೊಟ್ಟು, ಕೆಲವು ಮಾರ್ಗಸೂಚಿಗಳನ್ನು ಸಹ ನೀಡಲಾಗಿದೆ. ಅದರಂತೆಯೇ ಜಿಮ್ಗಳ ಬಾಗಿಲು ತೆರೆದಿದ್ದು, ಜನರು ಕೊಂಚ ಭಯದಲ್ಲೇ ವ್ಯಾಯಾಮಕ್ಕಾಗಿ ಜಿಮ್ಗಳಿಗೆ ಹೋಗುತ್ತಿದ್ದಾರೆ. ಇನ್ನು, ಇದಕ್ಕೆ ಸೆಲೆಬ್ರಿಟಿಗಳೂ ಹೊರತಾಗಿಲ್ಲ. ಮೆಲ್ಲನೆ ಒಬ್ಬೊಬ್ಬರಾಗಿ ಜಿಮ್ಗಳಿಗೆ ಹೋಗಿ ವರ್ಕೌಟ್ ಆರಂಭಿಸಿದ್ದಾರೆ. ಆದರೆ, ಲಾಕ್ಡೌನ್ನಿಂದಾಗಿ ಸಾಕಷ್ಟು ಜಿಮ್ಗಳು ಬಾಡಿಗೆ ಕಟ್ಟಲಾರದೆ ಹಾಗೂ ಇರುವ ಉಪಕರಣಗಳ ನಿರ್ವಹಣೆ ಮಾಡಲಾಗದೆ ಬಾಗಿಲು ಮುಚ್ಚಿವೆ. ಇನ್ನು ಜಿಮ್ಗಳಿಗೆ ಹೋಗುತ್ತಿರುವ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫಿಟ್ನೆಸ್ ಕುರಿತಾಗಿ ಪೋಸ್ಟ್ ಮಾಡಲು ಆರಂಭಿಸಿದ್ದಾರೆ.
ನಟಿ ಪ್ರಿಯಾಂಕಾ ಉಪೇಂದ್ರ ಸಹ ಜಿಮ್ನಲ್ಲಿ ಬೆವರಿಳಿಸೋಕೆ ಆರಂಭಿಸಿದ್ದಾರೆ. ಜಿಮ್ಗೆ ಹಿಂತಿರುಗಿದ ಕುರಿತಾಗಿ ಪೋಸ್ಟ್ ಮಾಡಿರುವ ಪ್ರಿಯಾಂಕಾ, ಕೆಲವು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ನಟ ದಿಗಂತ್, ಐಂದ್ರಿತಾ ಹಾಗೂ ಅಮೂಲ್ಯಾ ಅವರ ಪತಿ ಜಗದೀಶ್ ಸಹ ಜಿಮ್ಗೆ ಮರಳಿದ್ದು, ತಮ್ಮ ನಿತ್ಯದ ವರ್ಕೌಟ್ ಆರಂಭಿಸಿದ್ದಾರೆ.
![Fitness, Gym Reopen, Sandalwood Diganth]()
ನಟ ದಿಗಂತ್
ಲಾಕ್ಡೌನ್ ಆಗಿ ಎರಡು ತಿಂಗಳ ನಂತರ ಜಿಮ್ ಮಾಲೀಕರು ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದ ಮಂಭಾಗದಲ್ಲಿ ಪ್ರತಿಭಟನೆ ಮಾಡಿದ್ದರು. ಸುಮಾರು 50ಕ್ಕೂ ಅಧಿಕ ಜಿಮ್ ಮಾಲೀಕರು ಪ್ರತಿಭಟನೆ ಮಾಡಿದ್ದರು. ಲಾಕ್ಡೌನ್ನಿಂದಾಗಿ ಜಿಮ್ಗಳ ಬಾಡಿಗೆ ಕಟ್ಟಲಾಗದೆ ಸಂಕಷ್ಟದಲ್ಲಿರುವುದಾಗಿ ತಮ್ಮ ಅಳಲು ತೋಡಿಕೊಂಡಿದ್ದರು. ಆದರೆ ಈಗ ಜಿಮ್ಗಳ ಬಾಗಿಲು ತೆರೆದರೂ ಜನರು ಭಯದಿಂದ ಮೊದಲಿನಂತೆ ಜಿಮ್ಗಳಿಗೆ ಹೋಗುತ್ತಿಲ್ಲ. ಇದರಿಂದಾಗಿ ಈಗಲೂ ಸಹ ಕಷ್ಟದಲ್ಲಿದ್ದಾರೆ ಜಿಮ್ಗಳ ಮಾಲೀಕರು ಹಾಗೂ ಫಿಟ್ನೆಸ್ ತರಬೇತಿದಾರರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ