North Karnataka Flood: ಕನ್ನಡಿಗರ ಸಂಕಷ್ಟಕ್ಕೆ ಮಿಡಿದ ಸಿನಿ ತಾರೆಯರು: ಸಹಾಯ ಮಾಡಲು ಮನವಿ ಮಾಡಿದ ರಶ್ಮಿಕಾ, ಜಗ್ಗೇಶ್​, ಗಣೇಶ್​...

North Karnataka Flood: ಪ್ರವಾಹದಿಂದ ಈಗಾಗಲೇ 15ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರೆ, ಸಾವಿರಾರು ಜನರು ಸಂಕಷ್ಟದಲ್ಲಿದ್ದಾರೆ. ಕರುನಾಡ ಜನರ ಸಂಕಷ್ಟದಲ್ಲಿರೋವಾಗ ಸ್ಯಾಂಡಲ್‍ವುಡ್ ನಟನಟಿಯರು ಬನ್ನಿ ಪ್ರವಾಹ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚೋಣ ಅಂತ ಕರೆಕೊಟ್ಟಿದ್ದಾರೆ. ಸಿನಿಮಾ ನಟರ ಜೊತೆಗೆ ಕಿರುತೆರೆಯ ನಟರೂ ಉತ್ತರ ಕರ್ನಾಟಕದ ಜನತೆ ಸಂಕಷ್ಟದಲ್ಲಿರೋದಕ್ಕೆ ಸಹಾಯ ಹಸ್ತ ಚಾಚಿದ್ದಾರೆ. 

Anitha E | news18
Updated:August 8, 2019, 5:58 PM IST
North Karnataka Flood: ಕನ್ನಡಿಗರ ಸಂಕಷ್ಟಕ್ಕೆ ಮಿಡಿದ ಸಿನಿ ತಾರೆಯರು: ಸಹಾಯ ಮಾಡಲು ಮನವಿ ಮಾಡಿದ ರಶ್ಮಿಕಾ, ಜಗ್ಗೇಶ್​, ಗಣೇಶ್​...
ನೆರೆ ಸಂತ್ರಸ್ತರಿಗಾಗಿ ಮಿಡಿದ ಸ್ಯಾಂಡಲ್​ವುಡ್​ ಮಂದಿ
Anitha E | news18
Updated: August 8, 2019, 5:58 PM IST
ಕನ್ನಡಿಗರಿಗೆ ಯಾವುದೇ ಸಮಸ್ಯೆ ಎದುರಾಗಲಿ ಸ್ಯಾಂಡಲ್‍ವುಡ್ ಮಂದಿ ಮೊದಲು  ಸಹಾಯಕ್ಕೆ ಮುಂದಾಗುತ್ತಾರೆ. ಪ್ರಾಕೃತಿಕ ವಿಕೋಪಗಳಾದಾಗ... ನೀರಿನ ಸಮಸ್ಯೆಯಾದಾಗ... ಹೀಗೆ ಯಾವುದೇ  ಸಂದರ್ಭದಲ್ಲಿ ಚಿತ್ರರಂಗದ ತಾರೆಯರು ಕನ್ನಡಿಗರ ಕಷ್ಟಕ್ಕೆ ಮಿಡಿದಿದ್ದಾರೆ.

ಈಗ ಉತ್ತರ ಕರ್ನಾಟಕದಲ್ಲಿ ಉಂಟಾಗಿರೋ ಪ್ರವಾಹಕ್ಕೂ ಸ್ಯಾಂಡಲ್​ವುಡ್​ ಮಂದಿ ಮಿಡಿದಿದ್ದಾರೆ.  ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ. ಚಾಲೆಂಜಿಂಗ್‍ಸ್ಟಾರ್ ದರ್ಶನ್, ಶಿವಣ್ಣ, ಸುದೀಪ್​, ಜಗ್ಗೇಶ್, ಗಣೇಶ್, ಪ್ರಜ್ವಲ್ ದೇವರಾಜ್, ರಶ್ಮಿಕಾ ಮಂದಣ್ಣ, ಅಕುಲ್ ಬಾಲಾಜಿ, ಶ್ರೀಮುರಳಿ ಸೇರಿದಂತೆ ಹಲವು ನಟರು ಟ್ವಿಟ್ಟರ್ ಮೂಲಕ ತಮ್ಮ ಕೈಲಾದಷ್ಟು ಸಹಾಯ ಮಾಡ್ತೀವಿ, ಎಲ್ಲರೂ ಕೈ ಜೋಡಿಸಿ ಅಂತ ಕರೆ ನೀಡಿದ್ದಾರೆ.

tunga river flood
ಅಪಾಯಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿ


ನಮ್ಮ ಕರ್ನಾಟಕದ ನೆಲವನ್ನು ಬಹುಪಾಲು ಜಲ‌ ಆವರಿಸಿಕೊಂಡಿದೆ‌. ಪ್ರವಾಹದ ಅಬ್ಬರಕ್ಕೆ ಉತ್ತರ ಕರ್ನಾಟಕ ತತ್ತರಿಸಿದೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮಿಂದ ಸಾಧ್ಯವಾದದ್ದನ್ನು ನೆರೆ ಸಂತ್ರಸ್ತರಿಗೆ ತಲುಪಿಸೋಣ. ಇದು ನನ್ನ ಹೃದಯಾಂತರಾಳದ ಕೋರಿಕೆ. pic.twitter.com/t9VVGCxai2ಉತ್ತರ ಕರ್ನಾಟದ ನೆರೆ ಸಂತ್ರಸ್ತರ ನೆರವಿಗಾಗಿ ಸ್ಯಾಂಡಲ್​ವುಡ್​ ನಟ ಉಪೇಂದ್ರ ಅವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ಐದು ಲಕ್ಷ ನೀಡುತ್ತಿರುವುದಾಗಿ ಟ್ವೀಟ್​ ಮಾಡಿದ್ದಾರೆ. ಜತೆಗೆ ಜನರು ಸಹ ಅವರ ಕಷ್ಟಕ್ಕೆ ಸ್ಪಂದಿಸಿ ಎಂದು ಮನವಿ ಮಾಡಿದ್ದಾರೆ.

ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ/-ರೂ ಗಳನ್ನು ದೇಣಿಗೆಯಾಗಿ ನೀಡುತ್ತಿದ್ದೇನೆ. ತಾವುಗಳೂ ಪ್ರವಾಹಕ್ಕೆ ಸಿಲುಕಿರುವ ನಮ್ಮವರಿಗೆ ನಿಮ್ಮ ಇಚ್ಛಾನುಸಾರ ನೆರವಾಗಬೇಕೆಂದು ಕೇಳಿಕೊಳ್ಳುತ್ತೇನೆ. 🙏🙏 #SAVENORTHKARNATAKA #KarnatakaFloods #saveuttarakannadaಸ್ಯಾಂಡಲ್‍ವುಡ್‍ನ ಸ್ಟಾರ್ ನಟರಿಂದ ಶುರುವಾಗಿ ಎಲ್ಲರೂ ಉತ್ತರ ಕರ್ನಾಟಕದ ಜನರ ಪರವಾಗಿ ನಿಂತಿದ್ದಾರೆ. ಹತ್ತಿರದ ಜಿಲ್ಲೆ ಮತ್ತು ಸುತ್ತಮುತ್ತಲಿರೋ ಜನರು ಆಹಾರ, ವಸತಿ ಕಳೆದುಕೊಂಡು ಪರದಾಡುತ್ತಿರೋ ಸಂತ್ರಸ್ಥರ ಸಹಾಯಕ್ಕೆ ಧಾವಿಸಬೇಕು, ಎಲ್ಲರೂ ಕೈಜೋಡಿಸಿ, ಕಷ್ಟದಲ್ಲಿರುವವರ ಕಂಬನಿ ಒರೆಸೋಣ ಅನ್ನೋದು ನಮ್ಮ ಕಾಳಜಿ ಕೂಡ.

 

Amy Jackson: ಅರೆನಗ್ನವಾಗಿ ಕ್ಯಾಮೆರಾಗೆ ಪೋಸ್​ ಕೊಟ್ಟ ಕಿಚ್ಚನ ನಾಯಕಿ..!

First published:August 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...