ಕ್ರೇಜಿಸ್ಟಾರ್ ಮನೆಯಲ್ಲಿ ಮೆಹೆಂದಿ ಶಾಸ್ತ್ರದ ಸಂಭ್ರಮ: ನವಜೀವನದ ಹೊಸ್ತಿಲಲ್ಲಿ ಗೀತಾಂಜಲಿ-ಅಜಯ್​

ಕ್ರೇಜಿಸ್ಟಾರ್ ರವಿಚಂದ್ರನ್ ಏನೇ ಮಾಡಿದರೂ ಅದು ವಿಶೇಷವಾಗಿರುತ್ತದೆ. ಅದು ಸಿನಿಮಾನೇ ಆಗಿರಬಹುದು ಅಥವಾ ತಮ್ಮ ಮನೆಯ ಕಾರ್ಯಕ್ರಮವೇ ಆಗಿರಬಹುದು. ಕಲಾವಿದನ ಕೈಚಳಕ ಹೊರಹೊಮ್ಮುತ್ತಾನೆ. ಈಗ ಕ್ರೇಜಿಸ್ಟಾರ್​ ಮಗಳು ಗೀತಾಂಜಲಿ ಮದುವೆಯ ಸಂಭ್ರಮದಲ್ಲಿದ್ದಾರೆ.

Anitha E | news18
Updated:May 28, 2019, 8:52 PM IST
ಕ್ರೇಜಿಸ್ಟಾರ್ ಮನೆಯಲ್ಲಿ ಮೆಹೆಂದಿ ಶಾಸ್ತ್ರದ ಸಂಭ್ರಮ: ನವಜೀವನದ ಹೊಸ್ತಿಲಲ್ಲಿ ಗೀತಾಂಜಲಿ-ಅಜಯ್​
ಮಗಳು ಗೀತಾಂಜಲಿ ಜತೆ ರವಿಚಂದ್ರನ್​
Anitha E | news18
Updated: May 28, 2019, 8:52 PM IST
ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಅವರ ಮಗಳು ಗೀತಾಂಜಲಿ, ಉದ್ಯಮಿ ಅಜಯ್ ಜತೆ ಸಪ್ತಪದಿ ತುಳಿಯುತ್ತಿದ್ದಾರೆ. ಹೀಗಾಗಿಯೇ ರವಿಚಂದ್ರನ್ ಮನೆಯಲ್ಲಿ ಸಂಭ್ರಮ, ಸಡಗರ ಮೇಳೈಸಿದೆ. ಚಪ್ಪರ ಶಾಸ್ತ್ರ, ಅರಿಶಿಣ ಶಾಸ್ತ್ರ, ಒನಕೆ ಶಾಸ್ತ್ರ, ಮೆಹೆಂದಿ ಶಾಸ್ತ್ರ, ಅಂತ ವಿವಿಧ ಶಾಸ್ತ್ರಗಳ ನಡುವೆ ಸಂಗೀತ ಕಾರ್ಯಕ್ರಮದಲ್ಲಿ ಕ್ರೇಜಿ ಕುಟುಂಬ ಕುಣಿದು ಕುಪ್ಪಳಿಸಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ಏನೇ ಮಾಡಿದರೂ ಅದು ವಿಶೇಷವಾಗಿರುತ್ತದೆ. ಅದು ಸಿನಿಮಾನೇ ಆಗಿರಬಹುದು ಅಥವಾ ತಮ್ಮ ಮನೆಯ ಕಾರ್ಯಕ್ರಮವೇ ಆಗಿರಬಹುದು. ಕಲಾವಿದನ ಕೈಚಳಕ ಹೊರಹೊಮ್ಮುತ್ತಾನೆ. ಈಗ ಕ್ರೇಜಿಸ್ಟಾರ್​ ಮಗಳು ಗೀತಾಂಜಲಿ ಮದುವೆಯ ಸಂಭ್ರಮದಲ್ಲಿದ್ದಾರೆ.

ಚಿತ್ರ ಕೃಪೆ: ದೀಪಕ್​ ವಿಜಯ್​


ಚಿತ್ರ ಕೃಪೆ: ದೀಪಕ್​ ವಿಜಯ್​


ಮಗಳ ಮದುವೆಯ ಪ್ರತಿಯೊಂದು ವಿಷಯದಲ್ಲೂ ತಾವೇ ತೊಡಗಿಸಿಕೊಂಡಿದ್ದು, ಮತ್ತಷ್ಟು  ವಿಶೇಷವಾಗಿಸಿದ್ದಾರೆ. ಅದು ಮದುವೆಯ ಮಮತೆಯ ಕರೆಯೋಲೆ ಆಗಿರಬಹುದು, ಅರಮನೆ ಮೈದಾನದಲ್ಲಿ ಹಾಕಿರುವ ಆರತಕ್ಷತೆ ಸೆಟ್ ಆಗಿರಬಹುದು. ಎಲ್ಲೆಡೆ ರವಿಚಂದ್ರನ್‍ರ ನೆರಳನ್ನು ಕಾಣಬಹುದು.

ಇದನ್ನೂ ಓದಿ: Jayeshbhai Jordaar Movie: ಹೊಸ ಸಿನಿಮಾ ಕೈಗೆತ್ತಿಕೊಂಡ ಸ್ಟೈಲಿಶ್​ ಕಿಂಗ್​ ರಣವೀರ್​ ಸಿಂಗ್​..!
Loading...

ಇನ್ನು ರಾಜಾಜಿನಗರದ ಕ್ರೇಜಿಸ್ಟಾರ್ ಮನೆ ಸಹ ಮದುವೆಗೆ ತಾನೇ ಸಿಂಗಾರಗೊಂಡಿದೆ. ಮನೆಮುಂದೆ ಅಲಂಕಾರಗೊಂಡ ಚಪ್ಪರ, ಒಳಗೆ ಕ್ರೇಜಿ ಕುಟುಂಬ ಮಾತ್ರವಲ್ಲ ದೂರದ ಊರುಗಳಿಂದ ಬಂದ ಸಂಬಂಧಿಗಳು ಹಾಗೂ ಚಿತ್ರರಂಗದ ಮಿತ್ರರು. ಎಲ್ಲರೂ ಸೇರಿ ಗೀತಾಂಜಲಿಯ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ಹಬ್ಬದಂತೆ ಆಚರಿಸುತ್ತಿದ್ದಾರೆ. ಅರಿಶಿಣ ಶಾಸ್ತ್ರ, ಚಪ್ಪರ ಶಾಸ್ತ್ರ, ಮೆಹೆಂದಿ ಶಾಸ್ತ್ರ, ಒನಕೆ ಶಾಸ್ತ್ರಗಳನ್ನು ನೆರವೇರಿಸಿದರು.

ಚಿತ್ರ ಕೃಪೆ: ದೀಪಕ್​ ವಿಜಯ್​


ಚಿತ್ರ ಕೃಪೆ: ದೀಪಕ್​ ವಿಜಯ್​


ಇನ್ನು ಶಾಸ್ತ್ರಗಳು ಮುಗಿದ ಬಳಿಕ ಸಂಗೀತ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ದಂಪತಿಯಂತೂ ಮಗಳ ಮದುವೆಯಲ್ಲಿ ತಾವೂ ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದ್ರು.

ಅಕ್ಕನ ಮದುವೆಯ ಸಡಗರದಲ್ಲಿ ಸಹೋದರರಾದ ಮನೋರಂಜನ್ ಮತ್ತು ವಿಕ್ರಮ್ ಕೂಡ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ರು. ಕುಟುಂಬದವರ ಜತೆ ಸಂಬಂಧಿಗಳು ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್, ನಟಿ ಅನು ಪ್ರಭಾಕರ್ ಮುಖರ್ಜಿ ಸಹ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷ.

ಅರಮನೆ ಮೈದಾನದಲ್ಲಿ ಖುದ್ದು ರವಿಚಂದ್ರನ್ ಅವರೇ ಆರತಕ್ಷತೆಗೆ ಒಂದು ಹಾಗೂ ಮುಹೂರ್ತಕ್ಕಾಗಿ ಎರಡು ಸೆಟ್‍ಗಳನ್ನು ಡಿಸೈನ್ ಮಾಡಿಸಿದ್ದಾರೆ. ಸಂಜೆ ಆರತಕ್ಷತೆ ನಡೆಯಲಿದ್ದು ಸ್ಯಾಂಡಲ್‍ವುಡ್ ಸ್ಟಾರ್‍ಗಳ ದಂಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನವದಂಪತಿಗೆ ಶುಭ ಹಾರೈಸಲಿದ್ದಾರೆ. ನಾಳೆ ಬೆಳಗ್ಗೆ ಮುಹೂರ್ತ ನಡೆಯಲಿದೆ.

 

PHOTOS: ಸಂಭಾವನೆ ವಿಷಯದಲ್ಲಿ ಒಂದು ಮೆಟ್ಟಿಲು ಮೇಲೇರಿದ ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ


First published:May 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...