ಸಿದ್ಧಾರ್ಥ ಅಗಲಿಕೆಗೆ ಕಂಬನಿ ಮಿಡಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು..!

ಸಿದ್ಧಾರ್ಥ್​ ಅವರ ಅಗಲಿಕೆಗೆ ಸಂತಾಪ ಸೂಚಿಸಿದ ಸ್ಯಾಂಡಲ್​ವುಡ್​ ತಾರೆಯರು

ಸಿದ್ಧಾರ್ಥ್​ ಅವರ ಅಗಲಿಕೆಗೆ ಸಂತಾಪ ಸೂಚಿಸಿದ ಸ್ಯಾಂಡಲ್​ವುಡ್​ ತಾರೆಯರು

ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದ ಸಿದ್ಧಾರ್ಥ್​ ಅವರು ಹೀಗೆ ಇದ್ದಕ್ಕಿದ್ದಂತೆ ಇಂತಹ ನಿರ್ಧಾರಕ್ಕೆ ಬಂದಿದ್ದು ನೋವಿನ ಸಂಗತಿ. ಅವರ ಅಗಲಿಕೆಗೆ ಸ್ಯಾಂಡಲ್​ವುಡ್​ ಮಂದಿ ಸಂತಾಪ ಸೂಚಿಸಿದ್ದಾರೆ.

 • News18
 • 5-MIN READ
 • Last Updated :
 • Share this:

  ಸಿದ್ಧಾರ್ಥ್​ ಅವರ ಅಗಲಿಕೆಯಿಂದ ಅವರ ಕುಟುಂಬಕ್ಕೆ ದೊಡ್ಡ ಆಘಾತವೇ ಆಗಿದೆ. ಸೋಮವಾರ ಸಂಜೆ 7ಕ್ಕೆ ನಾಪತ್ತೆಯಾಗಿದ್ದ ಅವರು, ಇಂದು ಬೆಳಿಗ್ಗೆ 7ಕ್ಕೆ ಶವವಾಗಿ ಸಿಕ್ಕಿದ್ದಾರೆ.

  ಮಂಗಳೂರಿನ ಹೊಂಗೈ ಬಜಾರ್​ ಸಮುದ್ರದ ಅಳಿವೆ ಬಾಗಿಲ ಬಳಿ ಸಿದ್ಧಾರ್ಥ್​ ಅವರ ಮೃತ ದೇಹ ನೀರಿನಲ್ಲಿ ತೇಲುತ್ತಿತ್ತು. ಇದನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.

  Siddarth's old photo with his family
  ಕುಟುಂಬದೊಂದಿಗೆ ಸಿದ್ಧಾರ್ಥ್


  ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದ ಸಿದ್ಧಾರ್ಥ್​ ಅವರು ಹೀಗೆ ಇದ್ದಕ್ಕಿದ್ದಂತೆ ಇಂತಹ ನಿರ್ಧಾರಕ್ಕೆ ಬಂದಿದ್ದು ನಿಜಕ್ಕೂ ನೋವಿನ ಸಂಗತಿ. ಅವರ ಅಗಲಿಕೆಗೆ ಸ್ಯಾಂಡಲ್​ವುಡ್​ ಮಂದಿ ಸಂತಾಪ ಸೂಚಿಸಿದ್ದಾರೆ.

  ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಟ್ವೀಟ್​ ಮಾಡಿದ್ದು, 'ನಮ್ಮ ಕಾಲದ ಡೈನಮಿಕ್​ ಉದ್ಯಮಿ, ಒಂದು ಕಾಫಿ ಹೇಗೆ ಸಾವಿರಾರು ಮಂದಿಗೆ ಉದ್ಯೋಗವನ್ನು ಸೃಷ್ಟಿಸಬಹುದು ಎಂದು ತೋರಿಸಿಕೊಟ್ಟವರು ಸಿದ್ಧಾರ್ಥ್​. ಅವರು ಮಾಡಿರುವ ಕೆಲಸಗಳು ಸದಾ ಹಸಿರಾಗಿ ಮನಸಿಲ್ಲಿ ಉಳಿಯುತ್ತದೆ' ಎಂದು ಬರೆದುಕೊಂಡಿದ್ದಾರೆ.


  'ಸಿದ್ಧಾರ್ಥ್​ ಅವರ ಅಗಲಿಕೆ ತೀವ್ರ ಆಘಾತ ತಂದಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ' ಎಂದು ನಟಿ ಹಾಗೂ ಸಂಸದೆ ಸುಮಲತಾ ಸುಮಲತಾ ಅವರು ಟ್ವೀಟ್​ ಮಾಡಿದ್ದಾರೆ.

  ಇದನ್ನೂ ಓದಿ: ಅಧೀರ... 'ಅವೆಂಜರ್ಸ್​: ಎಂಡ್​ ಗೇಮ್​'ನ ಥ್ಯಾನೋಸ್​ ಅಷ್ಟೇ ಪವರ್​ಫುಲ್​ ಪಾತ್ರವಂತೆ..!


  ಗೋಲ್ಡನ್​ ಸ್ಟಾರ್​ ಗಣೇಶ್​ ಸಹ ಸಿದ್ಧಾರ್ಥ್​ ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

   


  ನಟಿ ರಾಗಿಣಿ ದ್ವಿವೇದಿ ಸಹ ಸಿದ್ಧಾರ್ಥ್​ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.


  Topless Yoga Pose: ಸಂಚಲನ ಮೂಡಿಸಿದೆ ಕಿರುತೆರೆ ನಟಿಯ ಟಾಪ್​ಲೆಸ್​ ಯೋಗಾ ಪೋಸ್​..!

  top videos
   First published: