ರಾಯಚೂರಿನ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ನ್ಯಾಯಕ್ಕಾಗಿ ದನಿ ಎತ್ತಿದ ಸಿನಿ ತಾರೆಯರು

#JusticeForMadhu ರಾಯಚೂರು ಎಂಜಿನಿಯರಿಂಗ್​ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿಗೆ ನ್ಯಾಯ ಸಿಗಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತಿದೆ. ಇದಕ್ಕೆ ಈಗ ಕನ್ನಡದ ಸಿನಿ ತಾರೆಯರೂ ಕೈ ಜೋಡಿಸಿದ್ದಾರೆ.

Anitha E | news18
Updated:April 20, 2019, 8:51 PM IST
ರಾಯಚೂರಿನ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ನ್ಯಾಯಕ್ಕಾಗಿ ದನಿ ಎತ್ತಿದ ಸಿನಿ ತಾರೆಯರು
#JusticeForMadhu ರಾಯಚೂರು ಎಂಜಿನಿಯರಿಂಗ್​ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿಗೆ ನ್ಯಾಯ ಸಿಗಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತಿದೆ. ಇದಕ್ಕೆ ಈಗ ಕನ್ನಡದ ಸಿನಿ ತಾರೆಯರೂ ಕೈ ಜೋಡಿಸಿದ್ದಾರೆ.
  • News18
  • Last Updated: April 20, 2019, 8:51 PM IST
  • Share this:
ರಾಯಚೂರಿನ ಎಂಜಿನಿಯರಿಂಗ್​ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿಗೆ ನ್ಯಾಯ ಕೋರಿ ಎಲ್ಲಡೆ ಅಭಿಯಾನ ಆರಂಭವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಸಾಕಷ್ಟು ಮಂದಿ ಮಧು ಸಾವಿನ ಪ್ರಕರಣದ ತನಿಖೆ ನಡೆಸುವಂತೆ ಒತ್ತಡ ಹೇರುತ್ತಿದ್ದಾರೆ.

ಇದನ್ನೂ ಓದಿ: ಮತ ಹಾಕಿ ಟ್ರೆಂಡ್​ ಆದ ರಿಯಲ್​ ಸ್ಟಾರ್: ಉಪ್ಪಿ ಸ್ಟೈಲ್​ಗೆ ಫಿದಾ ಆದ ಅಭಿಮಾನಿಗಳು..!

23 ವರ್ಷದ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದ್ದು, ಇನ್ನೂ ಮರಣೋತ್ತರ ಪರೀಕ್ಷೆಯ ವರದಿ ಬರುವವರೆಗೂ ಯಾವುದೇ ನಿರ್ಧಾರಕ್ಕೂ ಬರುವಂತಿಲ್ಲ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು

ಇಂತಹ ಹೃದಯ ವಿದ್ರಾವಕ ಘಟನೆಯ ಕುರಿತಾಗಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ನ್ಯಾಯಕ್ಕಾಗಿ ಅಭಿನಯಾನ ಆರಂಭವಾಗಿದೆ. ಸದ್ಯ ಸಿನಿಮಾ ತಾರೆಯರೂ ನ್ಯಾಯಕ್ಕಾಗಿ ಒತ್ತಾಯಿಸುತ್ತಾ #JusticeForMadhu ಅಭಿನಯಾನಕ್ಕೆ ಕೈ ಜೋಡಿಸಿದ್ದಾರೆ. ಈ ಕುರಿತಾಗಿ ಜಗ್ಗೇಶ್​, ರಶ್ಮಿಕಾ ಮಂದಣ್ಣ, ಹರ್ಷಿಕಾ, ರಕ್ಷಿತಾ ಪ್ರೇಮ್​, ಸತೀಶ್​ ನೀನಾಸಂ, ವಷಿಷ್ಠ ಸಿಂಹ ಸೇರಿದಂತ ಹಲವರು ಸಾಮಾಜಿಕ ಜಾಲತಾಣದಲ್ಲಿ ದನಿ ಎತ್ತಿದ್ದಾರೆ.

ಕನ್ನಡದ ಸಿನಿ ಮಾ ತಾರೆಯರು ಮಾಡಿರುವ ಟ್ವೀಟ್​ಗಳು ಹೀಗಿವೆ.

'ಮನುಷತ್ವ ಎಲ್ಲಿದೆ. ಈ ಘಟನೆಯಿಂದ ಮನಸ್ಸು ಚೂರಾಗಿದೆ. ಇದಕ್ಕೆ ಅಂತ್ಯ ಕಾಣಿಸಲು ನ್ನೂ ಎಷ್ಟು ಘಟನೆಗಳು ಹೀಗೆ ನಡೆಯಬೇಕು. ನ್ಯಾಯ ಸಿಗುತ್ತೆ ಎನ್ನುವ ಆಶಯವಿದೆ ಹಾಗೂ ಇದು ಇಲ್ಲಿಗೆ ಕೊನೆಯಾಗಲಿ' ಎಂದು ಬರೆದುಕೊಂಡಿದ್ದಾರೆ ರಶ್ಮಿಕಾ ಮಂದಣ್ಣ.'ಈ ಬಾರಿಯಾದರೂ ನ್ಯಾಯ ಸಿಗಲಿ. ಘಟನೆ ಬಗ್ಗೆ ಕೇಳಿದಾಗ ಕೋಪ, ಬೇಸರ ಹಾಗೂ ನೋವಾಯಿತು. ನಿಮಗೂ ನನ್ನಂತೆಯೇ ಆಗಿರುತ್ತದೆ ಎಂದು ಭಾವಿಸಿದ್ದೇನೆ' ಎಂದು ರಕ್ಷಿತಾ ಪ್ರೇಮ್​ ಟ್ವೀಟ್​ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಟ ಸತೀಶ್​ ನೀನಾಸಂ ಸಹ ಟ್ವೀಟ್​ ಮಾಡಿದ್ದು, 'ನೀಚ ಕೃತ್ಯವೆಸಗಿದವರಿಗೆ ಶಿಕ್ಷೆಯಾಗಲಿ' ಎಂದಿದ್ದಾರೆ.ನಟಿ ಹರ್ಷಿಕಾ ಪೂಣಚ್ಚ ತಮ್ಮ ಟ್ವಿಟರ್​ನಲ್ಲಿ 'ಈ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು. ಕೃತ್ಯವೆಸಗಿದವರಿಗೆ ಶಿಕ್ಷೆಯಾಗಬೇಕು. ರಾಯಚೂರಿನ ಜನರೊಂದಿಗೆ ನಾನಿದ್ದೇನೆ' ಎಂದು ಟ್ವೀಟ್​ ಮೂಲಕ ದನಿ ಎತ್ತಿದ್ದಾರೆ.

ನಟ ಜಗ್ಗೇಶ್​ ಸಹ ನ್ಯಾಯಕ್ಕಾಗಿ ಅಭಿಮಾನಿಯೊಬ್ಬರು ಸಹಾಯ ಕೇಳಿದ್ದಕ್ಕೆ ಈ ಕುರಿತಾಗಿ ಮುಖ್ಯಮಂತ್ರಿ ಹಾಗೂ ರಾಯಚೂರಿನ ಪೊಲೀಸರಿಗೆ ಟ್ವೀಟ್​ ಮೂಲಕ ಮನವಿ ಮಾಡಿರುವುದಾಗಿ ಟ್ವೀಟ್​ ಮಾಡಿದ್ದಾರೆ.PHOTOS: ಹಾಟ್ ಫೋಟೋಶೂಟ್​ಗೆ ಪೋಸ್​ ನೀಡಿದ ಕರಾವಳಿ ಕನ್ನಡತಿ ಲಕ್ಷ್ಮಿ ರೈ
First published:April 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading