ಸುಮಲತಾರಿಗೆ ಶುಭ ಹಾರೈಸಿದ ರಿಯಲ್​ ಸ್ಟಾರ್ ಉಪೇಂದ್ರ

ಲೋಕಸಭಾ ಚುನಾವಣೆಯಲ್ಲಿ ಸುಮಲತಾರ ಈ ಜಯಕ್ಕೆ ಚಿತ್ರರಂಗದ ಸಾಕಷ್ಟು ಮಂದಿ ಶ್ರಮಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ಇಡೀ ಚಿತ್ರರಂಗವೇ ಸುಮಲತಾರ ಪರವಾಗಿತ್ತು. ಪಕ್ಷಬೇಧ ಮರೆತು ಎಲ್ಲರೂ ಅವರ ಪರವಾಗಿ ನಿಂತಿದ್ದರು. ಈಗ ಅವರ ಖುಷಿಯಲ್ಲೂ ಭಾಗಿಯಾಗುತ್ತಿದೆ ಇಡೀ ಸ್ಯಾಂಡಲ್​ವುಡ್​.

Anitha E | news18
Updated:May 24, 2019, 6:46 PM IST
ಸುಮಲತಾರಿಗೆ ಶುಭ ಹಾರೈಸಿದ ರಿಯಲ್​ ಸ್ಟಾರ್ ಉಪೇಂದ್ರ
ನಟಿ ಸುಮಲತಾ
Anitha E | news18
Updated: May 24, 2019, 6:46 PM IST
ದೇಶದಲ್ಲೇ ಮೊದಲ ಬಾರಿಗೆ ಮಹಿಳಾ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿ, ಸಂಸತ್ತಿನ ಮೆಟ್ಟಿಲು ಹತ್ತಲಿರುವ ಮಹಿಳೆ ಎಂಬ ಹೆಗ್ಗಳಿಕೆ ಸುಮಲತಾ ಅವರದು.

ಸುಮಲತಾರ ಈ ಜಯಕ್ಕೆ ಚಿತ್ರರಂಗದ ಸಾಕಷ್ಟು ಮಂದಿ ಶ್ರಮಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ಇಡೀ ಚಿತ್ರರಂಗವೇ ಸುಮಲತಾರ ಪರವಾಗಿತ್ತು. ಪಕ್ಷಬೇಧ ಮರೆತು ಎಲ್ಲರೂ ಅವರ ಪರವಾಗಿ ನಿಂತಿದ್ದರು.

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಚುನಾವಣೆಯಲ್ಲಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿರುವ ಸುಮಲತಾರಿಗೆ ಈಗ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಶುಭ ಹಾರೈಸುತ್ತಿದ್ದಾರೆ.

ಇದನ್ನೂ ಓದಿ: 26 ವರ್ಷಗಳ ಹಿಂದೆಯೇ ಸ್ಯಾಂಡಲ್​ವುಡ್​ನಲ್ಲಿ ರ‍್ಯಾಪ್​ ಹಾಡಿನ ಪ್ರಯೋಗ ಮಾಡಿದ್ದ ಜಗ್ಗೇಶ್​..!

ರಿಯಲ್‍ಸ್ಟಾರ್ ಉಪೇಂದ್ರ ಅಭಿನಯದ 'ಬುದ್ಧಿವಂತ 2' ಚಿತ್ರದ ಮುಹೂರ್ತ ನಡೀತು. ಮುಹೂರ್ತದಲ್ಲಿ ಭಾಗವಹಿಸಿದ್ದ ರಿಯಲ್‍ಸ್ಟಾರ್ ಉಪೇಂದ್ರ ಸುಮಲತಾರಿಗೂ ಶುಭಾಶಯ ಕೋರಿದ್ದಾರೆ.

ಉಪ್ಪಿ ಜತೆಗೆ ಸುಮಲತಾರ ದೊಡ್ಡ ಮಗನಂತಿರುವ ದರ್ಶನ್​ ಅವರೂ ಸಹ ಶುಭ ಹಾರೈಸಿದ್ದಾರೆ.
Loading...

ಸುಮಲತಾ ಅಂಬರೀಶ್ ಅಮ್ಮ ರವರ ಅಭೂತಪೂರ್ವ ಗೆಲುವಿಗೆ ಕಾರಣರಾದ ಮಂಡ್ಯದ ಆತ್ಮೀಯ ಮತದಾರ ಬಂಧುಗಳೆ ಮತ್ತು ನನ್ನೆಲ್ಲಾ ಪ್ರೀತಿಯ ಅಭಿಮಾನಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು.🙏🙏🙏🙏 @sumalathaA pic.twitter.com/qfM4dZPARzಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮತ ಎಣಿಕೆಯ ನಂತರ ಈಗ ರಿಯಲ್‍ಸ್ಟಾರ್ ಉಪೇಂದ್ರ ಹೊಸ ಸಿನಿಮಾದಲ್ಲಿ ಅಭಿಬಯಿಸೋಕೆ ಮುಂದಾಗಿದ್ದಾರೆ. ಇನ್ನು ಪಕ್ಷದ ಅಭ್ಯರ್ಥಿಗಳು ಒಂದು ಲಕ್ಷಕ್ಕೂ ಹೆಚ್ಚು ಮತ ಪಡೆದಿರೋ ಬಗ್ಗೆ ಖುಷಿಯಲ್ಲಿದ್ದಾರೆ. 'ಬುದ್ಧಿವಂತ-2' ಚಿತ್ರದಲ್ಲಿ ರಿಯಲ್‍ಸ್ಟಾರ್ ಜೊತೆ ಆದಿತ್ಯ ಕೂಡ ನಟಿಸುತ್ತಿದ್ದು, ಮೇಘನಾ ಮತ್ತು ಸೋನಲ್ ಮೊಂತೆರೋ

First published:May 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...