ಅಂಬಿ ಹುಟ್ಟುಹಬ್ಬಕ್ಕೆ ಮಿಡಿದ ದಚ್ಚು-ಕಿಚ್ಚ; ಗೆಳೆಯನ ಉದಾತ್ತ ಮನಸ್ಸು ಶ್ಲಾಘಿಸಿದ ಸಿಎಂ ಕುಮಾರಸ್ವಾಮಿ

ಯಾವುದೇ ಸಮಸ್ಯೆ ಬಂದರೂ ಸಹ ಅಂಬಿಯ ಮುಂದಾಳತ್ವದಲ್ಲೇ ಅದು ಪರಿಹಾರವಾಗಬೇಕಿತ್ತು. ಇಂತಹ ಹಿರಿಯಣ್ಣನ ಹುಟ್ಟುಹಬ್ಬದಂದು ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಅವರಿಲ್ಲದ ನೋವನ್ನು ಭಾವನಾತ್ಮಕವಾಗಿ ಹೊರ ಹಾಕಿದ್ದಾರೆ.

Anitha E | news18
Updated:May 29, 2019, 7:29 PM IST
ಅಂಬಿ ಹುಟ್ಟುಹಬ್ಬಕ್ಕೆ ಮಿಡಿದ ದಚ್ಚು-ಕಿಚ್ಚ; ಗೆಳೆಯನ ಉದಾತ್ತ ಮನಸ್ಸು ಶ್ಲಾಘಿಸಿದ ಸಿಎಂ ಕುಮಾರಸ್ವಾಮಿ
ಅಂಬಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸೆಲೆಬ್ರಿಟಿಗಳು
  • News18
  • Last Updated: May 29, 2019, 7:29 PM IST
  • Share this:
- ಅನಿತಾ ಈ, 

ರೆಬೆಲ್​ ಸ್ಟಾರ್​ ಅಂಬರೀಷ್ ಅವರಿಲ್ಲದ ಮೊದಲ​ ಹುಟ್ಟುಹಬ್ಬ. ರೆಬೆಲ್​ ಇಲ್ಲದ ನೋವಿನಲ್ಲಿ ಅಂಬಿ ಅಭಿಮಾನಿಗಳು ಅವರನ್ನು ನೆನೆಯುತ್ತಾ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಹಿರಿಯಣ್ಣನಂತೆ ಇದ್ದ ಅಂಬಿ ಇಲ್ಲವೆಂಬ ಸತ್ಯವನ್ನು ಇನ್ನೂ ನಂಬಲಾಗುತ್ತಿಲ್ಲ. ಚಿತ್ರರಂಗದಲ್ಲಿ ಅಂಬಿ ಎಲ್ಲರಿಗೂ ಬೇಕಾಗಿದ್ದ ವ್ಯಕ್ತಿಯಾಗಿದ್ದರು. ಅವರ ವ್ಯಕ್ತಿತ್ವದಿಂದಲೇ ಎಲ್ಲರೂ ಅವರನ್ನು ರೆಬೆಲ್​ ಎಂದು  ಕರೆಯುತ್ತಿದ್ದರು.

ಇದನ್ನೂ ಓದಿ: ಅಂಬಿ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬಂತು 4 ಕ್ವಿಂಟಾಲ್​ ಪೇಡಾ-ಕಡಲೆಪುರಿ ಹಾರ

ಯಾವುದೇ ಸಮಸ್ಯೆ ಬಂದರೂ ಸಹ ಅಂಬಿಯ ಮುಂದಾಳತ್ವದಲ್ಲೇ ಅದು ಪರಿಹಾರವಾಗಬೇಕಿತ್ತು. ಇಂತಹ ಹಿರಿಯಣ್ಣನ ಹುಟ್ಟುಹಬ್ಬದಂದು ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಅವರಿಲ್ಲದ ನೋವನ್ನು ಭಾವನಾತ್ಮಕವಾಗಿ ಹೊರ ಹಾಕಿದ್ದಾರೆ.ಅಂಬಿ ಮನೆಗೆ ದೊಡ್ಡ ಮಗನಂತಿರುವ ನಟ ದರ್ಶನ್​ ಟ್ವಿಟರ್​ನಲ್ಲಿ ಅಂಬಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಜತೆಗೆ ಮನಮುಟ್ಟುವಂತೆ ಪದಗಳಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.


ಇನ್ನು, ಕಿಚ್ಚ ಸುದೀಪ್ ಅವರು​ ಇನ್ನೂ ಅಂಬಿ ಮಾಮನ ಅಗಲಿಕೆಯ ನೋವಲ್ಲಿದ್ದಾರೆ ಎನ್ನುವುದು ಅವರ ಟ್ವೀಟ್​ನಿಂದ ತಿಳಿಯುತ್ತದೆ. 

ಮುಖ್ಯಮಂತ್ರಿ ಕುಮಾರಸ್ವಾಮಿ ಲೋಕಸಭಾ ಚುನಾವಣಾ ಕಣದಲ್ಲಿ ಸುಮಲತಾರಿಗೆ ಎದುರಾಳಿಯಾಗಿದ್ದರು. ಜೆಡಿಎಸ್​ನ ನಾಯಕರು ಸುಮಲತಾರ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಆದರೆ ವೈಯಕ್ತಿಯವಾಗಿ ಕುಮಾರಸ್ವಾಮಿ ಹಾಗೂ ಅಂಬಿ ನಡುವೆ ಉತ್ತಮ ಸ್ನೇಹ ಸಂಬಂಧವಿತ್ತು ಎಂದು ಅವರ ಟ್ವೀಟ್​ನಿಂದಲೇ ತಿಳಿಯುತ್ತದೆ.ಅಂಬಿ ಹುಟ್ಟುಹಬ್ಬದಂದು ಪಕ್ಷ ಭೇದ ಮರೆತು ಎಲ್ಲರೂ ಅವರಿಗೆ ಶುಭ ಹಾರೈಸುತ್ತಿದ್ದಾರೆ. ಮತ್ತೊಂದು ಕಡೆ ಸುಮಲತಾ ಅವರು ಚುನಾವಣೆಯಲ್ಲಿ ಗೆದ್ದ ನಂತರ ಮೊದಲ ಬಾರಿಗೆ ಅಂಬಿ ಹುಟ್ಟುಹಬ್ಬವನ್ನು ಮಂಡ್ಯದಲ್ಲಿ ಸ್ವಾಭಿಮಾನಿಗಳ ಸಮಾವೇಶದ ಹೆಸರಿನಲ್ಲಿ ಆಚರಿಸುತ್ತಿದ್ದಾರೆ.

PHOTOS: ಅಂಬಿಯ 67ನೇ ಹುಟ್ಟುಹಬ್ಬ: ಕಂಠೀರವ ಸ್ಟುಡಿಯೋಗೆ ಹರಿದು ಬಂತು ಜನ ಸಾಗರ
First published: May 29, 2019, 6:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading