• Home
  • »
  • News
  • »
  • entertainment
  • »
  • Happy Birthday Darshan: ದರ್ಶನ್​ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸೆಲೆಬ್ರಿಟಿಗಳು..!

Happy Birthday Darshan: ದರ್ಶನ್​ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸೆಲೆಬ್ರಿಟಿಗಳು..!

ನಟ ದರ್ಶನ್​

ನಟ ದರ್ಶನ್​

ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳೂ ದರ್ಶನ್​ ಅವರ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ರವಿಚಂದ್ರನ್​, ಸುಮಲತಾ, ಪುನೀತ್​ ರಾಜ್​ಕುಮಾರ್​, ನೆನಪಿರಲಿ ಪ್ರೇಮ್​,ಧ್ರುವ ಸರ್ಜಾ, ಪ್ರಣೀತಾ ಸುಭಾಷ್​ ಸೇರಿದಂತೆ ಸಾಕಷ್ಟು ಮಂದಿ ದರ್ಶನ್​ ಅವರಿಗೆ ವಿಶ್ ಮಾಡಿದ್ದಾರೆ.

  • Share this:

ದರ್ಶನ್​ ಅವರ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಹಬ್ಬ ದಂತೆ. ಪ್ರತಿ ವರ್ಷ ಡಿಬಾಸ್​ ಹುಟ್ಟುಹಬ್ಬದಂದು ಫ್ಯಾನ್ಸ್​ ಅವರ ಮನೆ ಬಳಿ ಹೋಗಿ ನೆಚ್ಚಿನ ನಟನನ್ನು ಭೇಟಿ ಮಾಡಿ, ತಂದಿರುವ ಹೂವಿನ ಹಾರ, ಕೇಕ್​ಗಳನ್ನು ಕೊಟ್ಟು ವಿಶ್​ ಮಾಡುತ್ತಾರೆ. ಅಂತೆಯೇ ದರ್ಶನ್​ ಸಹ ಮನೆ ಬಳಿ ಬರುವ ಅಭಿಮಾನಿಗಳಿಗಾಗಿ ಊಟದ ವ್ಯವಸ್ಥೆ ಮಾಡುವುದರೊಂದಿಗೆ  ಫ್ಯಾನ್ಸ್​ಗಳ ಕೈ ಕುಲುಕಿ ಸಂತೋಷದಿಂದ  ಮಾತನಾಡಿಸುತ್ತಾ ಸೆಲ್ಫಿಗೆ ಪೋಸ್​​ ಕೊಡುತ್ತಾರೆ ದರ್ಶನ್​. ಆದರೆ ಈ ವರ್ಷ ಕೊರೋನಾ ಕಾರಣದಿಂದಾಗಿ ಅಭಿಮಾನಿಗಳನ್ನು ಭೇಟಿಯಾಗಿಲ್ಲ ದಾಸ. ಅದರ ಬದಲಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ನಂತರ ತಾನೇ ಅಭಿಮಾನಿಗಳಿರುವ ಕಡೆಗೆ ಬರುತ್ತೇನೆ ಎಂದು ಮಾತು ಕೊಟ್ಟಿದ್ದಾರೆ ಈ ನಟ. ಅಲ್ಲದೆ  ಇಂದು ದರ್ಶನ್​ ತಾನು ಅಭಿಮಾನಿಗಳನ್ನುಭೇಟಿಯಾಗದಿದ್ದರೆ ಏನಂತೆ ತಮ್ಮ ಸಿನಿಮಾದ ಟ್ರೇಲರ್​ ರಿಲೀಸ್​ ಮಾಡುವ ಮೂಲಕ ಫ್ಯಾನ್ಸ್​ಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. 


ಇನ್ನು ಸಾಮಾಜಿಕ ಜಾಲತಾಣದಲ್ಲಿ ಬಾಸ್​ ಪರ್ವ ಎಂಬ ಹೆಸರಿನಲ್ಲಿ ದರ್ಶನ್​ ಅವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ದರ್ಶನ್​ ಅವರ ಹುಟ್ಟುಹಬ್ಬದ ವಿಷಯ ಸಹ ಟ್ವಿಟರ್​ನಲ್ಲಿ ಟ್ರೆಂಡ್​ ಆಗುತ್ತಿದೆ.ಇದರ ಜೊತೆಗೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳೂ ದರ್ಶನ್​ ಅವರ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ರವಿಚಂದ್ರನ್​, ಸುಮಲತಾ, ಪುನೀತ್​ ರಾಜ್​ಕುಮಾರ್​, ನೆನಪಿರಲಿ ಪ್ರೇಮ್​,ಧ್ರುವ ಸರ್ಜಾ, ಪ್ರಣೀತಾ ಸುಭಾಷ್​ ಸೇರಿದಂತೆ ಸಾಕಷ್ಟು ಮಂದಿ ದರ್ಶನ್​ ಅವರಿಗೆ ವಿಶ್ ಮಾಡಿದ್ದಾರೆ.

ನಿರ್ದೇಶಕ ಸಿಂಪಲ್​ ಸುನಿ ವಿಭಿನ್ನವಾಗಿ ದರ್ಶನ್ ಅವರಿಗೆ ವಿಶ್​ ಮಾಡಿದ್ದಾರೆ. ದಚ್ಚು ಅಭಿನಯದ ಸಿನಿಮಾಗಳ ಹೆಸರುಗಳನ್ನು ಬಳಸಿ ಅವರಿಗೆ ಶುಭ ಕೋರಿದ್ದಾರೆ.ಹೇಳಿದ ಸಮಯಕ್ಕೆ ಸರಿಯಾಗಿ ಇಂದು ರಾಬರ್ಟ್​ ಟ್ರೇಲರ್​ ರಿಲೀಸ್ ಆಗಿದೆ. ಟ್ರೇಲರ್​ ರಿಲೀಸ್ ಆದ ಒಂದು ಗಂಟೆಯೊಳಗೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿದೆ. ಇನ್ನು ಟ್ರೇಲರ್​ನಲ್ಲಿರುವ ಮಾಸ್​ ಡೈಲಾಗ್​ಗಳು ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿವೆ.

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು