'ಬಾಸ್' ಬೈಕ್ ಏರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

news18
Updated:June 23, 2018, 10:12 PM IST
'ಬಾಸ್' ಬೈಕ್ ಏರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
news18
Updated: June 23, 2018, 10:12 PM IST
ನ್ಯೂಸ್ 18 ಕನ್ನಡ

ಸ್ಯಾಂಡಲ್​ವುಡ್​ನಲ್ಲಿ 'ಬಾಸ್' ವಿವಾದ ತಾರಕ್ಕೇರಿರುವ ​ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಬಾಸ್'​ ಬೈಕ್​ಗೆ 'ಸಾರಥಿ' ಆಗಿದ್ದಾರೆ. ಅಭಿಮಾನಿಯೊಬ್ಬರು 'ಬಾಸ್' ನಂಬರಿನ ಬೈಕ್ ಓಡಿಸುವ ಮೂಲಕ ದರ್ಶನ್ ಡಿ ಫ್ಯಾನ್ಸ್​ನ 'ಬಾಸ್' ಎನಿಸಿಕೊಂಡಿದ್ದಾರೆ.

ದರ್ಶನ್​ ಅಭಿನಯದ 'ಯಜಮಾನ' ಸಿನಿಮಾವು ನೆಲಮಂಗಲದ ಬಳಿ ಚಿತ್ರೀಕರಣವಾಗುತ್ತಿತ್ತು. ಈ ವೇಳೆ kA-51 H D 8055 ನಂಬರಿನ ಬೈಕ್​ನೊಂದಿಗೆ ಸ್ಥಳಕ್ಕಾಗಮಿಸಿದ ಜಯಕಾಂತ್ ಎಂಬ ಅಭಿಮಾನಿ ತನ್ನ ನೆಚ್ಚಿನ ಬೈಕನ್ನು ಓಡಿಸಲು ದರ್ಶನ್​ ಅವರನ್ನು ಕೋರಿಕೊಂಡಿದ್ದಾರೆ. ಅಭಿಮಾನಿಯ ಇಚ್ಚೆಯಂತೆ ಚಾಲೆಂಜಿಂಗ್ ಸ್ಟಾರ್ ಬೈಕ್ ಸವಾರಿ ಮಾಡಿದ್ದಾರೆ.

ಜಯಕಾಂತ್ ತಮ್ಮ ಬೈಕ್​ಗಾಗಿ 8055(BOSS) ನಂಬರ್ ಪಡೆಯಲು 30 ಸಾವಿರ ರೂ. ಖರ್ಚು ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಸ್ಯಾಂಡಲ್​ವುಡ್​​ 'ಬಾಸ್' ಎಂಬ ಪಟ್ಟಕ್ಕಾಗಿ ಶಿವರಾಜ್ ಕುಮಾರ್ ಮತ್ತು ದರ್ಶನ್ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ಕಿತ್ತಾಡಿಕೊಂಡಿದ್ದರು. ಈ ಹೊಸ ವಿವಾದದ ನಡುವೆ ನಟ ಯಶ್ kA 05 – MY 8055 ನಂಬರನ್ನು ತಮ್ಮ ಕಾರಿಗೆ ರಿಜಿಸ್ಟರ್ ಮಾಡಿಸಿದ್ದರು.

ಪ್ರತಿಯೊಬ್ಬ ನಟರ ಅಭಿಮಾನಿಗಳಿಗೆ ಅವರ ನೆಚ್ಚಿನ ನಟ ಬಾಸ್ ಆಗಿರುತ್ತಾರೆ ಎಂದು ಶಿವಣ್ಣ ಹೇಳಿಕೆ ನೀಡಿ ಸೋಶಿಯಲ್ ಮೀಡಿಯಾದ ಈ ವಿವಾದವುಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.
First published:June 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ