Bairagi Review: ಬೆಂಗಳೂರಲ್ಲಿ ಕ್ಷಣಕ್ಕೆ ಚೇಂಜ್​​ ಆಗುತ್ತೆ ವೆದರ್​, ಆದ್ರೆ ಯಾವತ್ತೂ ಬದಲಾಗಲ್ಲ ಶಿವಣ್ಣನ ಖದರ್​!

ಸ್ಯಾಂಡಲ್​ವುಡ್​ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ (Shiva Rajkumar) ಅಭಿನಯದ ಬಹುನಿರೀಕ್ಷಿತ ‘ಭೈರಾಗಿ‘ (Bairagi) ಚಿತ್ರವು ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಎಲ್ಲಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಾಗಿದ್ರೆ ಸಿನಿಮಾ ಹೇಗಿದೆ ಎಂಬುದರ ವಿಮರ್ಶೆ ಇಲ್ಲಿದೆ ನೋಡಿ.

ಭೈರಾಗಿ

ಭೈರಾಗಿ

  • Share this:
ಸ್ಯಾಂಡಲ್​ವುಡ್​ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ (Shiva Rajkumar) ಅಭಿನಯದ ಬಹುನಿರೀಕ್ಷಿತ ‘ಭೈರಾಗಿ‘ (Bairagi) ಚಿತ್ರವು ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಎಲ್ಲಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಟಗರು ನಂತರ ಡಾಲಿ ಧನಂಜಯ್ (Dhananjay) ಮತ್ತು ಶಿವಣ್ಣ ಕಾಂಬಿನೇಷನ್​ ನೋಡಿದ ಪ್ರೇಕ್ಷಕರು ಸಖತ್ ಥ್ರಿಲ್ ಆಗಿದ್ದಾರೆ. ಇನ್ನು, ಚಿತ್ರ ನೋಡಿದ ಪ್ರೇಕ್ಷಕರು ಡಾಳಿ ಮತ್ತು ಶಿವಣ್ಣನ ಜೋಡಿಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ನಿರ್ದೇಶಕ ವಿಜಯ್ ಮಿಲ್ಟನ್ (Vijay Milton) ವಿಭಿನ್ನವಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದು, ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು, ತಮಿಳಿನ 'ಕಡುಗು' ಚಿತ್ರದ ರಿಮೇಕ್ ಚಿತ್ರವಾದ ಭರಾಗಿ ಚಿತ್ರವನ್ನೂ ಸಹ ಕಡುಗು ಚಿತ್ರದ ನಿರ್ದೇಶಕರೇ ಆದ ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದಾರೆ.

ಇಲ್ಲಿಗೆ ಬೇಕಾದಂತೆ ಬದಲಾವಣೆ ಮಾಡಿಕೊಂಡಿರುವ ಅವರು, ಮೇಕಿಂಗ್​ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ​. ಇನ್ನು, ಮಾಸ್ ನಡುವೆಯೇ ಸಮಾಜಕ್ಕೆ ಸಂದೇಶ ನೀಡುವ 'ಬೈರಾಗಿ' ಆಗಿ ಶಿವಣ್ಣ ನಟಿಸಿದ್ದಾರೆ. ಹಾಗಿದ್ರೆ ಸಿನಿಮಾ ಹೇಗಿದೆ ಎಂಬುದರ ವಿಮರ್ಶೆ ಇಲ್ಲಿದೆ ನೋಡಿ.

ಶಿವಪ್ಪನಾಗಿ ಘರ್ಜಿಸಿದ ಶಿವಣ್ಣ:

ಇನ್ನು, ಚಿತ್ರದಲ್ಲಿ ನಟ ಶಿವರಾಜ್​ ಕುಮಾರ್ ಹುಲಿ ಶಿವಪ್ಪನಾಗಿ ಕಾಣಿಸಿಕೊಂಡಿದ್ದಾರೆ. ಹುಲಿ ವೇಷಹಾಕಿ ಕೊಂಡು ಜೀವನ ನಡೆಸುತ್ತಿರುತ್ತಾರೆ. ಇದರ ನಡುವೆ ಹುಲಿಯಪ್ಪ ಜೈಲಿಗೆ ಹೋಗುವ ಸ್ಥಿತಿ ಬರುತ್ತಾರೆ. ಇನ್ನು, ಮತ್ತೊಂದೆಡೆ ಕರಾವಳಿಯ ಹಳ್ಳಿ ಕರ್ಣ (ಡಾಲಿ ಧನಂಜಯ್) ಊರಿಗೇ ಒಳಿತನ್ನು ಮಾಡುತ್ತಿರುತ್ತಾನೆ. ಇಂತಹ ವಿಭಿನ್ನ ವ್ಯಕ್ತಿತ್ವದ ಈ ಇಬ್ಬರು ಒಂದು ಸನ್ನಿವೇಷದಲ್ಲಿ ಮುಖಾಮುಖಿಯಾಗುತ್ತಾರೆ. ಹುಲಿ ಶಿವಪ್ಪ ಹಾಗೂ ಕರ್ಣನನ್ನು ಎತಕ್ಕಾಗಿ ಮುಆಖಮುಖಿಯಾಗುತ್ತಾರೆ? ಚಿತ್ರದಲ್ಲಿ ಅಸಲಿ ವಿಲನ್ ಯಾರು ಎಂಬುದನ್ನೇ ಸಸ್ಪೆನ್ಸ್​ ಆಗಿದೆ.

ಇದನ್ನೂ ಓದಿ: Pavitra Lokesh: ರಮ್ಯಾ ಯಾರಂತಾನೇ ಗೊತ್ತಿಲ್ಲಾ, ಅವ್ರು ಹೇಳ್ತಿರೋದೆಲ್ಲಾ ಬರಿ ಓಳು ಎಂದ ಪವಿತ್ರಾ ಲೋಕೇಶ್

ಚಿತ್ರದ ಫ್ಲಸ್​ ಪಾಯಿಂಟ್​:

ಇನ್ನು, ಚಿತ್ರದಲ್ಲಿ ಶಿವಣ್ಣನವರ ಎನರ್ಜಿಯೇ ಚಿತ್ರಕ್ಕೆ ದೊಡ್ಡ ಫ್ಲಸ್ ಪಾಯಿಂಟ್ ಎಂದು ಹೇಳಬಹುದು. ಅದರಲ್ಲಿಯೂ ಚಿತ್ರದಲ್ಲಿ ಶಿವಣ್ಣ 2 ಶೇಡ್​ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಕೆಲವೆಡೆ ಮುಗ್ಧನಾಗಿ ಕಾಣುವ ಶಿವಪ್ಪ ಮರುಕ್ಷಣವೇ ವ್ಯಾಘ್ರನಾಗಿ ಬದಲಾಗುತ್ತಾನೆ. ಅದರಲ್ಲಿಯೂ ಆ್ಯಕ್ಷನ್​ ದೃಶ್ಯಗಳಲ್ಲಿ ಶಿವನ್ಣನ ಫೈಟ್​ ನೋಡಿದ ಯುವಕರೂ ಸಹ ನಾಚುವಂತೆ ಮಾಡಿದ್ದಾರೆ. ಅವರ ಎನರ್ಜಿಯೇ ಸಂಪೂರ್ಣ ಚಿತ್ರವನ್ನು ಆವರಿಸಿಕೊಂಡಿದೆ.

ಉಳಿದಂತೆ ಕರ್ಣನಾಗಿ ಧನಂಜಯ ಅವರು ಗಮನ ಸೆಳೆದಿದ್ದಾರೆ. ಕರಾವಳಿ ಹುಡುಗನಾಗಿ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್ ಅವರು ನೋಡುಗರಲ್ಲಿ ನಗು ತರಿಸುತ್ತಾರೆ. ಉಳಿದಂತೆ ಯಶಾ ಶಿವಕುಮಾರ್, ಅಂಜಲಿ, ಶಶಿಕುಮಾರ್ ನಟನೆ ಸಿನಿಂಆದ ಮತ್ತೊಂದು ಫ್ಲಸ್ ಆಗಿದೆ.

ಇದನ್ನೂ ಓದಿ: Krithi Shetty: ಕನ್ನಡತಿಯ ಕ್ಯೂಟ್​ ಪೋಸ್​ಗೆ ನೆಟ್ಟಿಗರು ಕ್ಲೀನ್ ಬೋಲ್ಡ್, ಇಲ್ಲಿವೆ ಕೃತಿ ಶೆಟ್ಟಿ ಸೂಪರ್​​ ಫೋಟೋಸ್​

ಕನ್ನಡಕ್ಕೆ ತಕ್ಕಂತೆ ಬದಲಾಯಿಸಿರುವ ಕಥೆ:

ಇನ್ನು, ಚಿತ್ರವು ರಿಮೇಕ್ ಆಗಿದ್ದರೂ ಸಹ ಕ್ನನಡದ ನೆಟಿವಿಟಿಗೆ ತಕ್ಕಂತೆ ಮಾಡಲಾಗಿದೆ. ನಿರ್ದೇಶಕ ವಿಜಯ್ ಮಿಲ್ಟನ್ ಇಡೀ ಸಿನಿಮಾದ ಕಥೆ ಕರಾವಳಿ ಭಾಗದಲ್ಲಿ ನಡೆಯುತ್ತದೆ. ಆದರೆ ಪ್ರಥ್ವಿ ಒಬ್ಬರನ್ನು ಬಿಟ್ಟು, ಮತ್ಯಾರೂ ಸಹ ಸರಿಯಾಗಿ ಕರಾವಳಿ ಭಾಷೆಯನ್ನು ಮಾತನಾಡಲಿಲ್ಲ. ಇದರ ಬಗ್ಗೆ ನಿರ್ದೇಶಕರು ಕೊಂಚ ಗಮನಹರಿಸಬೇಕಿತ್ತು. ಮೊದಲಾರ್ಧದಲ್ಲಿ ಇನ್ನಷ್ಟು ಗಟ್ಟಿತನವನ್ನು ಕಾಯ್ದುಕೊಳ್ಳಬೇಕಿತ್ತು. ಆದರೆ ದ್ವಿತಿಯಾರ್ಧದಲ್ಲಿ ಇದನ್ನು ನಿಭಾಯಿಸಿಕೊಂಡಿದ್ದಾರೆ. ಇನ್ನು, ನಿರ್ದೇಶಕ ವಿಜಯ್ ಮಿಲ್ಟನ್ ಮೂಲತಹ ಕ್ಯಾಮರಾಮನ್ ಆಗಿದ್ದರಿಂದ ಭೈರಾಗಿ ಚಿತ್ರದ ದೃಶ್ಯಗಳು ಸಖತ್ ಆಗಿ ಮೂಡಿಬಂದಿದೆ. ಒಂದೇ ಟೇಕ್​ನಲ್ಲಿ ಮಾಡಿದ ಸಾಂಗ್ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.
Published by:shrikrishna bhat
First published: