ಸ್ಯಾಂಡಲ್‌ವುಡ್‌ನಲ್ಲಿ ಬ್ಯಾಡ್‌ಮ್ಯಾನರ್ಸ್ (Bad Manners Movie) ಸಿನಿಮಾ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಮೊನ್ನೆ ಮೊನ್ನೆ ಈ ಚಿತ್ರದ ಒಂದು ಹಾಡು ಬೇಜಾನ್ ಸೌಂಡ್ ಮಾಡಿದೆ. ಹಿರಿಯ ಹಾಸ್ಯ ನಟ ಉಮೇಶ್ ಅವರು ಈ ಚಿತ್ರದಲ್ಲಿ (Sandalwood Bad Manners Film) ಒಂದು ಎಣ್ಣೆ ಹಾಡನ್ನ ಹಾಡಿ ಹೊಸ ಕಿಕ್ ಕೊಟ್ಟಿದ್ದಾರೆ. ಅದಕ್ಕೂ ಮೊದಲು ಗಾಯಕಿ ಉಷಾ ಉತ್ತುಪ್ ತಮ್ಮದೇ ವಿಶೇಷ ಕಂಠಸಿರಿಯಲ್ಲಿ ಬ್ಯಾಡ್‌ಮ್ಯಾನರ್ಸ್ (Bad Manners Release Soon) ಅಭಿಯ ಗುಣಗಾನ ಮಾಡಿದ್ದಾರೆ. ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತದಲ್ಲಿ ಇಡೀ ಬ್ಯಾಡ್‌ಮ್ಯಾನರ್ಸ್ ಚಿತ್ರಕ್ಕೆ ಹೊಸ ಕಳೆ ಬಂದಿದೆ. ಅಭಿಷೇಕ್ ಅಂಬರೀಶ್ (Bad Manners Latest Update) ಲುಕ್ ಕೂಡ ಸಖತ್ ಆಗಿಯೇ ಇದೆ.
ಸೋಷಿಯಲ್ ಮೀಡಿಯಾದಲ್ಲಿ ಈಗೊಂದು ಫೋಟೋ ಹರಿದಾಡುತ್ತಿದೆ. ಈ ಫೋಟೋದಲ್ಲಿ ಅಭಿಷೇಕ್ ಲುಕ್ ಸಖತ್ ಆಗಿಯೇ ಬಂದಿದೆ.
ಬ್ಯಾಡ್‌ಮ್ಯಾನರ್ಸ್ ಸಿನಿಮಾ ಅಭಿ ಲುಕ್ ವೈರಲ್
ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್‌ಮ್ಯಾನರ್ಸ್ ಸಿನಿಮಾ ಏನೋ ಮಾಡೋ ಹಾಗೆ ಕಾಣುತ್ತಿದೆ. ಅಭಿಷೇಕ್ ಅಂಬರೀಶ್ ಚಿತ್ರ ಜೀವನದ ಈ ಎರಡನೇ ಸಿನಿಮಾದಲ್ಲಿ ಎಲ್ಲವೂ ವಿಶೇಷ ಅಂತಲೇ ಫೀಲ್ ಆಗುತ್ತದೆ.
ಹೀಗೆ ಫೀಲ್ ಆಗಲು ಕಾರಣ ಅಂತ ಬಂದ್ರೆ ಅದು ಚಿತ್ರದ ನಿರ್ದೇಶಕ ದುನಿಯಾ ಸೂರಿ ಅಂತಲೇ ಹೇಳಬಹುದು. ಸೂರಿ ಕಲ್ಪನೆಯ ಸಿನಿಮಾಗಳಲ್ಲಿ ಕಥೆ ತುಂಬಾ ಚೆನ್ನಾಗಿಯೇ ಇರುತ್ತದೆ. ಚಿತ್ರಕಥೆ ಕೂಡ ವಿಶೇಷವಾಗಿಯೇ ಹೆಣೆಯಲಾಗಿರುತ್ತದೆ.
ಬ್ಯಾಡ್‌ಮ್ಯಾನರ್ಸ್ ಚಿತ್ರದಲ್ಲಿ ಅಸಲಿಗೆ ಏನಿದೆ ?
ಅಂತಹ ಒಳ್ಳೆ ಕಥೆಗಳಿಗೆ ಸೂರಿ ತಮ್ಮದೇ ಶೈಲಿಯಲ್ಲಿ ಚಿತ್ರರೂಪ ಕೊಟ್ಟಿರುತ್ತಾರೆ. ಹಾಗೆ ಬ್ಯಾಡ್‌ಮ್ಯಾನರ್ಸ್ ಸಿನಿಮಾ ಕೂಡ ಒಂದು ಒಳ್ಳೆ ಸಿನಿಮಾ ಆಗುತ್ತದೆ ಅನ್ನುವ ನಂಬಿಕೆ ಹುಟ್ಟಿಸುತ್ತಿದೆ. ಅಭಿಷೇಕ್ ಅಂಬರೀಶ್ ಈ ಸಿನಿಮಾದಲ್ಲಿ ಒಬ್ಬ ಪೊಲೀಸ್ ಆಫೀಸರ್ ಆಗಿಯೇ ಕಂಗೊಳಿಸುತ್ತಿದ್ದಾರೆ.
ಅಭಿಷೇಕ್ ಅಂಬರೀಶ್ ಪೊಲೀಸ್ ಲುಕ್ ಅಲ್ಲಿರೋ ಒಂದು ಫೋಟೊ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ಬ್ಲಾಕ್ ಶರ್ಟ್ ಮತ್ತು ಖಾಕಿ ಪ್ಯಾಂಟ್ ತೊಟ್ಟ ಅಭಿಷೇಕ್, ಕಣ್ಣಿಗೆ ಕಪ್ಪು ಕನ್ನಡಕ ಕೂಡ ಧರಿಸಿದ್ದಾರೆ. ಕೈಯಲ್ಲಿ ಗನ್ ಕೂಡ ಇದೆ.
ಸೂರಿ ಕಲ್ಪನೆಯಲ್ಲಿ ಅಭಿಷೇಕ್ ಅಂಬಿ ಖಡಕ್ ಪೊಲೀಸ್
ಇದು ಸೂರಿಯ ಅವರ ಕಲ್ಪನೆಯ ಲುಕ್ ಅನ್ನೋದಕ್ಕೆ ಸಾಕ್ಷಿ ಆಗಿದೆ. ಇಲ್ಲಿ ಇನ್ನೂ ಒಂದು ವಿಶೇಷ ಇದೆ. ಈ ಒಂದು ಫೋಟೋದಲ್ಲಿ ಒಂದು ಕಡೆಗೆ ನಟ ಕುರಿ ಪ್ರತಾಪ್ ಅಭಿಯನ್ನ ನೋಡ್ತಿದ್ದಾರೆ. ಅಭಿಷೇಕ್ ಹಿಂದೆ ಒಬ್ಬ ಅಂಧ ವ್ಯಕ್ತಿ ಕೂಡ ನಿಂತಿದ್ದಾರೆ ನೋಡಿ.
ಇದಕ್ಕೂ ವಿಶೇಷವಾಗಿ ಈ ಒಂದು ಫೋಟೋದಲ್ಲಿ ಅಭಿಷೇಕ್ ಅಂಬರೀಶ್ ಖಡಕ್ ಪೊಲೀಸ್ ಅನ್ನೋದು ಕೂಡ ತಿಳಿಯುತ್ತದೆ. ಲುಕ್ ಅಲ್ಲೂ ಒಂದು ಗತ್ತಿದೆ ಅನ್ನೋದು ಇಲ್ಲಿ ಸ್ಪಷ್ಟವಾಗಿಯೇ ಅರ್ಥ ಆಗುತ್ತದೆ. ಈ ಫೋಟೋದಲ್ಲಿ ಅಭಿಷೇಕ್ ನಿಜಕ್ಕೂ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ.
ಹಾಸ್ಯ ಕಲಾವಿದನ ಎಣ್ಣೆ ಹಾಡು ಸೂಪರೋ ಸೂಪರ್
ಅಭಿಷೇಕ್ ಅಂಬರೀಶ್ ಅಭಿನಯದ ಈ ಚಿತ್ರದ ಕೆಲಸ ಬಹುತೇಕ ಪೂರ್ಣಗೊಂಡಿದೆ. ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತದ ಹಾಡುಗಳು ಒಂದೊಂದಾಗಿಯೆ ಈಗ ರಿಲೀಸ್ ಕೂಡ ಆಗುತ್ತಿವೆ. ಮೊನ್ನೆ ಮಸ್ತ್ ಆಗಿರೋ ಒಂದು ಹಾಡು ರಿಲೀಸ್ ಆಗಿತ್ತು.
ಇದನ್ನ ಹಿರಿಯ ಹಾಸ್ಯ ನಟ ಉಮೇಶ್ ಹಾಡಿದ್ದರು. ಅವರೇ ಇದನ್ನ ಬರೆದು ಕಂಪೋಜ್ ಮಾಡಿದ್ದರು. ಅಷ್ಟು ವಿಶೇಷ ಅನಿಸೋ ಈ ಗೀತೆ ಎಣ್ಣೆ ಮೇಲೆನೆ ಇತ್ತು. ಎಣ್ಣೆ ಹೊಡೆದರೆ ಏನಾಗುತ್ತದೆ ಅನ್ನುವುದನ್ನ ಉಮೇಶ್ ಇಲ್ಲಿ ತುಂಬಾ ಚೆನ್ನಾಗಿಯೆ ಹೇಳಿದ್ದರು.
ಬ್ಯಾಡ್‌ಮ್ಯಾರ್ಸ್ ಚಿತ್ರಕ್ಕೆ ಉಷಾ ಉತ್ತುಪ್ ಟಚ್
ಇದಕ್ಕೂ ಮೊದಲು ಗಾಯಕಿ ಉಷಾ ಉತ್ತುಪ್ ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿದ್ದರು. ಹಾಗೆ ಹಾಡಿರೋ ಹಾಡಿನಿಂದ ಅಭಿ ಪಾತ್ರದ ಗತ್ತು ವಿಶೇಷವಾಗಿಯೇ ಕಾಣಿಸಿತ್ತು. ಅದನ್ನ ಜನ ಕೂಡ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದರು.
ಇನ್ನು ಚಿತ್ರದ ರಿಲೀಸ್ ಬಗ್ಗೆ ಒಂದು ಕುತೂಹಲವಿದ್ದು, ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಅಂತಲೇ ಕೇಳುವಷ್ಟು ಕ್ರೇಜ್ ಈ ಚಿತ್ರದ ಕರಿತು ಈಗ ಹುಟ್ಟಿಕೊಂಡಿದೆ. ಹಾಗೇನೆ ಸಿನಿಮಾ ಪ್ರೇಮಿಗಳು ಬ್ಯಾಡ್‌ಮ್ಯಾನ್ಸ್ ಸಿನಿಮಾ ರಿಲೀಸ್ ಎದುರು ನೋಡ್ತಿದ್ದಾರೆ.
ಬ್ಯಾಡ್‌ಮ್ಯಾನರ್ಸ್ ಸಿನಿಮಾ ರಿಲೀಸ್ ಯಾವಾಗ?
ಬ್ಯಾಡ್‌ಮ್ಯಾನರ್ಸ್ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗುತ್ತದೆ. ಹಾಗಂತ ಸುದ್ದಿ ಸದ್ಯಕ್ಕೆ ಹರಿದಾಡುತ್ತಿದೆ. ಆದರೆ ಅಧಿಕೃತವಾಗಿ ಸಿನಿಮಾ ತಂಡ ಎಲ್ಲೂ ಇನ್ನೂ ಏನೂ ಹೇಳಿಕೊಂಡತೆ ಕಾಣೋದಿಲ್ಲ. ಇನ್ನುಳಿದಂತೆ ಸಿನಿಮಾದ ಬಗ್ಗೆ ಒಂದು ನಿರೀಕ್ಷೆ ಇದ್ದೇ ಇದೆ.
ಇದನ್ನೂ ಓದಿ: Pavitra-Naresh Story: ಇಂಥ ಜೋಡೀನಾ ಎಲ್ಲಾರ ಕಂಡಿರಾ! ಪವಿತ್ರಾ-ನರೇಶ್ ಬಂಧ
ಸಿನಿಮಾದ ಹಾಡುಗಳು, ಪ್ರಮೋಗಳು ಚಿತ್ರದ ಬಗೆಗಿನ ನಿರೀಕ್ಷೆಯನ್ನ ಹೆಚ್ಚಿಸುತ್ತಲೇ ಇವೆ. ಜೊತೆಗೆ ಬ್ಯಾಡ್‌ಮ್ಯಾನರ್ಸ್ ಚಿತ್ರದ ಅಸಲಿ ಮಜಾ ತೆಗೆದುಕೊಳ್ಳಲು ಸಿನಿಪ್ರೇಮಿಗಳೂ ಕಾಯುತ್ತಲೇ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ