ಅಪ್ಪು ಜರ್ನಿ ಸಂಭ್ರಮಿಸಲು ಒಂದಾಗುತ್ತಿದೆ ಕನ್ನಡ ಚಿತ್ರರಂಗ: ಒಂದೇ ವೇದಿಕೆಯಲ್ಲಿ ದಿಗ್ಗಜರ ಸಮಾಗಮ!

ಪವರ್​ ಸ್ಟಾರ್​ ಪುನೀತ್​ ರಾಜ್​​ಕುಮಾರ್ ಅವರ 46 ವರ್ಷದ ಜರ್ನಿಯನ್ನು ಸೆಲೆಬ್ರೆಟ್(Celebrate)​ ಮಾಡಲು  ಸದ್ದಿಲ್ಲದೇ ವೇದಿಕೆಯೊಂದು ರೆಡಿಯಾಗುತ್ತಿದೆ.  ಈ ವೇದಿಕೆಯಲ್ಲಿ ಇಡೀ ಕನ್ನಡ ಚಿತ್ರರಂಗದ ಕಲಾವಿದರೆಲ್ಲ ಒಟ್ಟಿಗೆ ಸೇರಲಿದ್ದಾರೆ.

ಪುನೀತ್ ರಾಜ್​ಕುಮಾರ್​

ಪುನೀತ್ ರಾಜ್​ಕುಮಾರ್​

  • Share this:
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್(Puneeth Rajkumar) ಅಗಲಿದ ಬಳಿಕ ಅವರ ಒಂದೊಂದೇ ಕನಸುಗಳು ಅನಾವರಣಗೊಳ್ಳುತ್ತಿವೆ. 'ಗಂಧದ ಗುಡಿ'(Gandhada Gudi)ಯಂತಹ ಅದ್ಭುತ ಕನಸಿನ ಒಂದು ಝಲಕ್ ನೋಡಿ ಕನ್ನಡ ಜನತೆ ಬೆರಗಾಗಿದೆ. ಅಪ್ಪು ದೂರವಾದ ನೋವಿನಲ್ಲಿರುವ ಅಭಿಮಾನಿಗಳಿಗೆ 'ಗಂಧದ ಗುಡಿ' ಟೀಸರ್(Teaser) ತಮ್ಮ ನೆಚ್ಚಿನ ನಟನ ಬಗ್ಗೆ ಹೆಮ್ಮೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ನಟ ಪುನೀತ್​ ರಾಜ್​ಕುಮಾರ್(Puneeth Rajkumar)​ ನಮ್ಮ ಜೊತೆ ಇಲ್ಲ ಎಂಬ ನೋವನ್ನು ಇನ್ನೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅವರ ಬಿಟ್ಟು ಹೋದಾಗಿನಿಂದಲೂ ಇಡೀ ಕರುನಾಡು ಮರುಕಪಡುತ್ತಿದೆ. ಇದರ ಜೊತೆ ಅಪ್ಪು ಜರ್ನಿ(Appu Journey) ಸಂಭ್ರಮಿಸಲು ಕನ್ನಡ ಚಿತ್ರರಂಗದವರೆಲ್ಲ ಒಟ್ಟಿಗೆ ಸೇರಲು ವೇದಿಕೆ ಸಿದ್ದವಾಗುತ್ತಿದೆ. ಕೇವಲ ನಟನಾಗಿ ಮಾತ್ರವಲ್ಲದೆ, ಸಮಾಜಕ್ಕೂ ತನ್ನ ಕೈಲಾದ ಸಹಾಯ ಮಾಡಿ ಹೋಗಿದ್ದಾರೆ. ಪವರ್​ ಸ್ಟಾರ್​ ಪುನೀತ್​ ರಾಜ್​​ಕುಮಾರ್​​. ಇದೀಗ ಅವರ 46 ವರ್ಷದ ಜರ್ನಿಯನ್ನು ಸೆಲೆಬ್ರೆಟ್(Celebrate)​ ಮಾಡಲು  ಸದ್ದಿಲ್ಲದೇ ವೇದಿಕೆಯೊಂದು ರೆಡಿಯಾಗುತ್ತಿದೆ.  ಈ ವೇದಿಕೆಯಲ್ಲಿ ಇಡೀ ಕನ್ನಡ ಚಿತ್ರರಂಗದ ಕಲಾವಿದರೆಲ್ಲ ಒಟ್ಟಿಗೆ ಸೇರಲಿದ್ದಾರೆ.

ಒಂದಾಗುತ್ತಿದೆ ಸ್ಯಾಂಡಲ್​ವುಡ್​! 

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಜರ್ನಿ ನಿಜಕ್ಕೂ ಅವರಷ್ಟೇ ಪವರ್‌ಫುಲ್. ಬದುಕಿದ 46 ವರ್ಷವೂ ಸರಳತೆಯನ್ನು ಅಳವಡಿಸಿಕೊಂಡು ಬದುಕಿದ್ದರು. ತನ್ನ ತಂದೆ ಆದರ್ಶಗಳನ್ನು ಅನುಸರಿಸಿ ಜೀವನ ನಡೆಸಿದ್ದರು. ಬಾಲ ನಟನಾಗಿಯೇ ರಾಷ್ಟ್ರ ಪ್ರಶಸ್ತಿ ಪಡೆದ ನಟ. ಅಲ್ಪ ಸಿನಿಮಾ ಯಾನದಲ್ಲೇ ಅಪ್ಪನಷ್ಟೇ ಹೆಸರು ಮಾಡಿದ ಪ್ರತಿಭೆ. ಸಹಾಯ ಅಂತ ಬಂದವರಿಗೆ ಹಿಂತಿರುಗಿಸಿ ಕಳಿಸಿದ್ದೇ ಇಲ್ಲ. ಒಳ್ಳೆ ಕೆಲಸಗಳಿಗೆ ಸದಾ ಕೈ ಚಾಚುತ್ತಿದ್ದ ಪವರ್‌ಸ್ಟಾರ್ ನಿಜಕ್ಕೂ ಕನ್ನಡ ಚಿತ್ರರಂಗದ ರಾಜರತ್ನ. ಅವರನ್ನು ಕಳೆದುಕೊಂಡು ಚಂದನವನ ಬಡವಾಗಿದೆ. ಪವರ್​ ಇಲ್ಲದೇ ಸ್ಯಾಂಡಲ್​ವುಡ್​ನಲ್ಲಿ ಕತ್ತಲು ಆವರಿಸಿದೆ.  ಅಪ್ಪುವಿನ ಅಮೋಘ ಜರ್ನಿಯನ್ನು ಸೆಲೆಬ್ರೆಟ್ ಮಾಡಲು ಇಡೀ ಚಿತ್ರರಂಗ ಶೀಘ್ರದಲ್ಲಿಯೇ ಒಂದೆಡೆ ಸೇರಲಿದೆ. ಈಗಾಗಲೇ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅವರ ಕುಟುಂಬಕ್ಕೆ ಆಹ್ವಾನ ನೀಡಲಾಗಿದೆ.

ಇದನ್ನು ಓದಿ : `ಗಂಧದ ಗುಡಿ’ಯಲ್ಲಿ ಅಪ್ಪು ಜೀವಂತ: ಚಿತ್ರಮಂದಿರದಲ್ಲೇ ರಿಲೀಸ್ ಆಗುತ್ತೆ ಪುನೀತ್​ ಡ್ರೀಮ್​​ ಪ್ರಾಜೆಕ್ಟ್​!

ಪವರ್​ ಫುಲ್​ ಲೈಫ್​ ಜರ್ನಿ ನೆನಪಿಸುವ ಕಾರ್ಯಕ್ರಮ

ಪ್ರತಿದಿನ ಅಪ್ಪು ನಮನ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಇದು ನಮನ ಕಾರ್ಯಕ್ರಮವಲ್ಲ. ಪವರ್​ ಸ್ಟಾರ್​ ಅವರ ಪವರ್​​ಫುಲ್​ ಲೈಫ್​ ಜರ್ನಿ ಸಂಭ್ರಮಿಸುವ ಕಾರ್ಯಕ್ರಮ. ಹೀಗಾಗಿ ಇದೂವರೆಗೂ ಅಪ್ಪು ಜೊತೆ ನಟಿಸಿದ ನಾಯಕಿಯರು ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಪುನೀತ್ ಸಿನಿಮಾಗೆ ಸಂಗೀತ ನೀಡಿದ ಸಂಗೀತ ನಿರ್ದೇಶಕರು, ಡೈರೆಕ್ಟರ್‌ಗಳು ಈ ವೇದಿಕೆ ಮೇಲೆ ಅಪ್ಪು ಜೊತೆಗಿನ ಸಿನಿಮಾ ಜರ್ನಿಯನ್ನು ಸೆಲೆಬ್ರೆಟ್ ಮಾಡಲಿದ್ದಾರೆ.

ಇದನ್ನು ಓದಿ : ಪುನೀತ್​ ಇಲ್ಲದೇ ‘ಜೇಮ್ಸ್​’ ಶೂಟಿಂಗ್​ ರಿಸ್ಟಾರ್ಟ್​: ಕಣ್ಣೀರಿಡುತ್ತಲೇ ಕೆಲ್ಸ ಮಾಡ್ತಿರೋ ಚಿತ್ರತಂಡ!

ಜೀ ಕನ್ನಡದಲ್ಲಿ ಕಾರ್ಯಕ್ರಮ ಪ್ರಸಾರ!


ಅಪ್ಪು ಲೈಫ್ ಜರ್ನಿ ಕಾರ್ಯಕ್ರಮ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ. ಕ್ರಿಸ್‌ಮಸ್ ಹಬ್ಬದ ವೇಳೆ ಕಾರ್ಯಕ್ರಮವನ್ನು ಅಭಿಮಾನಿಗಳಿಗೆ ಅರ್ಪಿಸಲು ಸಿದ್ಧತೆ ನಡೆಯುತ್ತಿದೆ. ಆದರೆ, ಈ ಕಾರ್ಯಕ್ರಮ ಯಾವಾಗ ನಡೆಯುತ್ತೆ? ಎಲ್ಲಿ ನಡೆಯುತ್ತೆ? ಅನ್ನುವ ಬಗ್ಗೆ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.ಆದರೆ ಈ ಕಾರ್ಯಕ್ರಮವನ್ನು ಬಹಳ ಅದ್ಧೂರಿಯಿಂದ ಮಾಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ಅಪ್ಪು ಅವರನ್ನು ಕಳೆದಕೊಂಡು ನೋವಿನಲ್ಲಿರುವ ಅವರ ಅಭಿಮಾನಿಗಳಿಗೋಸ್ಕರ, ಈ ಅಪ್ಪು ಲೈಫ್​ ಜರ್ನಿ ಕಾರ್ಯಕ್ರಮವನ್ನು ಮಾಡಲಾಗುತ್ತಿದೆಯಂತೆ. ಈ ಬಗ್ಗೆ ಇನ್ನೂ ಈ ಬಗ್ಗೆ ಯಾವುದೇ  ಅಧಿಕೃತ ಮಾಹಿತಿ ಹೊರಬಂದಿಲ್ಲ.

Published by:Vasudeva M
First published: